jnanasele |
ಬೆಂಗಳೂರು: ಶಿಕ್ಷಣದಲ್ಲಿ ಪಾರದರ್ಶಕತೆ ಹಾಗೂ
ಆಡಳಿತ ವ್ಯವಸ್ಥೆಯ ವೇಗ ಹೆಚ್ಚಿಸಲು ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ
‘ಡಿಜಿಟಲೀಕರಣ’ಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಡಿಜಿಟಲೀಕರಣ ಅನುಷ್ಠಾನಗೊಂಡ ನಂತರ
ವಿದ್ಯಾರ್ಥಿಗಳು ಕಾಲೇಜು ಪ್ರವೇಶಾತಿಗಾಗಿ
ಸರದಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವ
ಅವಶ್ಯಕತೆ ಇರುವುದಿಲ್ಲ. ಪರೀಕ್ಷೆ ಬರೆದು
ಫಲಿತಾಂಶಕ್ಕಾಗಿ ತಿಂಗಳು ಗಟ್ಟಲೇ
ವಿಶ್ವವಿದ್ಯಾಲಯದತ್ತ ಮುಖ ಮಾಡುವ
ಗೊಡವೆ ಇರುವುದಿಲ್ಲ. ಎಲ್ಲವೂ ಆನ್ಲೈನ್
ನಲ್ಲೇ ನಡೆಯಲಿದೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ
ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರ,
ವಿಶ್ವವಿದ್ಯಾಲಯಗಳು, ಸ್ವಾಯತ್ತ
ವಿಶ್ವವಿದ್ಯಾಲಯಗಳು, ಪಾಲಿಟೆಕ್ನಿಕ್
ಕಾಲೇಜುಗಳನ್ನು ಡಿಜಿಟಲೀಕರಣ
ಮಾಡಲಾಗುತ್ತದೆ. ಮುಖ್ಯವಾಗಿ ಎಜುಕೇಷನ್
ಮ್ಯಾನೇಜ್ವೆುಂಟ್ ಇನ್ಫಾರ್ವೆುೕಷನ್ ಸಿಸ್ಟಂ
(ಇಐಎಂಎಸ್) ಹಾಗೂ ಎಲೆಕ್ಟ್ರಾನಿಕ್ ಆನ್ಸರ್
ಸ್ಕ್ರಿಪ್ಟ್ ಇವ್ಯಾಲ್ಯುಷನ್ ಸಿಸ್ಟಂ(ಇಎಎಸ್ಇ)
ಎಂಬ ಪದ್ಧತಿ ಅನುಷ್ಠಾನಗೊಳಿಸಲು
ತೀರ್ವನಿಸಿದೆ. ಇದು ಉನ್ನತ ಶಿಕ್ಷಣ ಇಲಾಖೆಯ
ಕನಸಿನ ಯೋಜನೆಯಾಗಿದ್ದು, ಈ ಸಂಬಂಧ
ಟೆಂಡರ್ ಕೂಡ ಕರೆಯಲಾಗಿದೆ. ಭಾರತದಲ್ಲಿ ಈ
ರೀತಿ ವ್ಯವಸ್ಥೆ ಹೊಂದಿರುವ 13 ಶಿಕ್ಷಣ
ಸಂಸ್ಥೆಗಳಿವೆ.
ಇಐಎಂಎಸ್: ಈ ವ್ಯವಸ್ಥೆ ಮೂಲಕ ಆನ್ಲೈನ್
ಪ್ರವೇಶ ಹಾಗೂ ಆನ್ಲೈನ್ನಲ್ಲೇ ಮಾನ್ಯತೆ
ನೀಡಬಹುದಾಗಿದೆ. ವಿದ್ಯಾರ್ಥಿಗಳು ತರಗತಿಗೆ
ಹಾಜರಾಗಿದ್ದಾರೆಯೇ, ಇಲ್ಲವೇ ಎಂದು
ಪರಿಶೀಲಿಸಿ ಪಾಲಕರಿಗೆ ಸೂಚಿಸಲು
ಹಾಜರಾತಿಯನ್ನೂ ಆನ್ಲೈನ್ ಮಾಡಲಿದೆ. ಇ
ಕನೆಕ್ಟ್ ಕೇಂದ್ರ ತೆರೆಯುವ ಮೂಲಕ
ವಿದ್ಯಾರ್ಥಿಗಳು ಪರಸ್ಪರ ರ್ಚಚಿಸಲು
ಅನುಕೂಲಕಲ್ಪಿಸಿಕೊಡಲಿದೆ.
ಇಎಎಸ್ಇ: ಇದು ಪರೀಕ್ಷಾ ವ್ಯವಸ್ಥೆಯನ್ನು
ಸಂಪೂರ್ಣ ಬದಲಿಸಲಿದೆ. ಹಾಲಿ ಪರೀಕ್ಷಾ
ಪದ್ಧತಿ ಪ್ರಕಾರ ಪರೀಕ್ಷೆ ನಂತರ ಉತ್ತರ
ಪತ್ರಿಕೆಗಳು ಸಂಬಂಧಪಟ್ಟ ವಿವಿಗಳಿಗೆ
ತಲುಪುತ್ತವೆ. ನೂತನ ವ್ಯವಸ್ಥೆಯಲ್ಲಿ ಪ್ರತಿ
ಜಿಲ್ಲೆಯಲ್ಲೊಂದು ಮೌಲ್ಯಮಾಪನ ಕೇಂದ್ರ
ತೆರೆಯಲಿದ್ದು, ಪರೀಕ್ಷೆ ನಂತರ ಉತ್ತರ
ಪತ್ರಿಕೆಗಳು ನೇರವಾಗಿ ಮೌಲ್ಯಮಾಪನ ಕೇಂದ್ರ
ತಲುಪಲಿವೆ. ಅತ್ಯಾಧುನಿಕ ಸ್ಕ್ಯಾನಿಂಗ್
ಯಂತ್ರದಿಂದ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್
ಮಾಡಿ ಮೌಲ್ಯಮಾಪಕರಿಗೆ ಪ್ರತ್ಯೇಕವಾದ
ಪಾಸ್ವರ್ಡ್ ನೀಡಲಿದೆ. ಪಾಸ್ವರ್ಡ್ ಬಳಕೆ ಮಾಡಿ
ಕಂಪ್ಯೂಟರ್ ಪರದೆ ಮೇಲೆ ಮೂಡುವ ಉತ್ತರ
ಪತ್ರಿಕೆಗಳನ್ನು ಮೌಲ್ಯಮಾಪನ
ಮಾಡಬೇಕಾಗುತ್ತದೆ.
ಮಧ್ಯವರ್ತಿಗಳ ಕಾಟವಿಲ್ಲ
ವಿದ್ಯಾರ್ಥಿಗಳಿಂದ ಹಣ ಪಡೆದು ವಿವಿಗಳಿಂದ
ಹೆಚ್ಚಿನ ಅಂಕ ಕೊಡಿಸುವ ಮಧ್ಯವರ್ತಿಗಳ ಕಾಟ
ಹೆಚ್ಚಾಗಿದೆ. ಡಿಜಿಟಲ್ ಮೌಲ್ಯಮಾಪನವನ್ನು
ಎಲ್ಲ ಕಾಲೇಜುಗಳಲ್ಲಿ ಜಾರಿಗೆ ತರುವುದರಿಂದ
ಮಧ್ಯವರ್ತಿಗಳ ಕಾಟ ತಪ್ಪಲಿದೆ.
ಮೌಲ್ಯಮಾಪಕರಿಗೆ ನೀಡುವ ಉತ್ತರ
ಪತ್ರಿಕೆಗಳಲ್ಲಿ ನೋಂದಣಿ ಸಂಖ್ಯೆ
ಇರುವುದಿಲ್ಲ. ಹಾಗಾಗಿ ಮೌಲ್ಯಮಾಪಕರು
ಯಾವುದೇ ಅಪೇಕ್ಷೆಗಳಿಲ್ಲದೆಯೇ
ಮೌಲ್ಯಮಾಪನ ಮಾಡಬೇಕಾಗುತ್ತದೆ.
ಉಪಯೋಗಗಳೇನು?
ಸಂಪೂರ್ಣ ಪಾರದರ್ಶಕತೆ
ಆಡಳಿತದ ವೇಗ ಹೆಚ್ಚಳ
ಶೀಘ್ರ ಫಲಿತಾಂಶ
No comments:
Post a Comment
Note: only a member of this blog may post a comment.