ದೇಶಕಂಡ ಅತ್ಯದ್ಬುತ ಮನುಷ್ಯ, ವಿಜ್ಞಾನಿ, ಯಶಸ್ವಿ ಮಾಜಿ ರಾಷ್ಟ್ರಪತಿ, ಸರಳ ಜೀವಿಯಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರು ಇಂದು ನಮ್ಮ ಜೊತೆಗೆ ಇಲ್ಲದಿರಬಹುದು. ಆದರೆ ಅವರು ಎಂದೆಂದಿಗೂ ಭಾರತೀಯರ ಮನಸ್ಸಿನಲ್ಲಿ, ಹೃದಯದಲ್ಲಿ ಎಂದೆಂದಿಗೂ ಅಜರಾಮರವಾಗಿರುತ್ತಾರೆ. ಅಂತಹ ಮತ್ತೊಬ್ಬ ಕಲಾಂ ರನ್ನು ನಾವು ಕಾಣಲಾರೆವು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮತ್ತೊಮ್ಮೆ ಅವರು ನಮ್ಮ ದೇಶದಲ್ಲಿ ಜನಿಸಲಿ ಎಂದು ಹಾರೈಸೋಣ. ಅವರ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
*ಜೀವನಪಥ :-
1931ಅಕ್ಟೋಬರ್ 15: ತಮಿಳು ನಾಡಿನ ರಾಮೇಶ್ವರಂನಲ್ಲಿ ಜನನ.
1954: ತಿರುಚಿನಾಪಳ್ಳಿ ಸೇಂಟ್ ಜೋಸೆಫ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಪದವಿ.
1960: ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ.
1960: ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಗೆ ವಿಜ್ಞಾನಿಯಾಗಿ ಸೇರ್ಪಡೆ.
1969: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ವರ್ಗಾವಣೆ.
1980: ರೋಹಿಣಿ ಉಪಗ್ರಹವನ್ನು ಭಾರತದ ಪ್ರಪ್ರಥಮ ಸ್ವದೇಶಿ ನಿರ್ವಿುತ ಎಸ್ಎಲ್ವಿ ಉಡಾವಣಾ ವಾಹನ ಮೂಲಕ ಕಕ್ಷೆಗೆ ಸೇರಿಸಿದ ಕೀರ್ತಿ.
1992 ಜುಲೈ: ಪ್ರಧಾನಮಂತ್ರಿ ಅವರಿಗೆ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ನೇಮಕ.
1998: ಹೃದಯತಜ್ಞ ಸೋಮರಾಜು ಅವರೊಂದಿಗೆ ಸೇರಿ ‘ಕೊರೊನರಿ ಸ್ಟೆಂಟ್’ ಎಂಬ ಉಪಕರಣದ ಅಭಿವೃದ್ಧಿ.
25 ಜುಲೈ 2002: ಭಾರತದ 11ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ.
2012: ಹೃದಯತಜ್ಞ ಸೋಮ ರಾಜು ಅವರೊಂದಿಗೆ ಸೇರಿ ಗ್ರಾಮೀಣ ಆರೋಗ್ಯ ಸೇವೆಗಾಗಿ ವಿಶೇಷ ಟ್ಯಾಬ್ಲೆಟ್ ನಿರ್ವಣ.
2015 ಜುಲೈ 27: ಶಿಲ್ಲಾಂಗ್ನಲ್ಲಿ ನಿಧನ.
*ಪ್ರಮುಖ ಕೃತಿಗಳು ವರ್ಷ:-
ಇಂಡಿಯಾ 2020- 1998
ವಿಂಗ್ಸ್ ಆಫ್ ಫೈರ್ 1999
ಇಗ್ನೈಟೆಟ್ ಮೈಂಡ್ 2002
ಗೈಡಿಂಗ್ ಸೋಲ್ 2005
ಟಾರ್ಗೆಟ್ 3 ಬಿಲಿಯನ್ 2011
ಟರ್ನಿಂಗ್ ಪಾಯಿಂಟ್ಸ್ 2012
ಮೈ ಜರ್ನಿ 2013
*ಪ್ರಶಸ್ತಿಗಳು :-
1.ಪದ್ಮಭೂಷಣ - 1981
2.ಪದ್ಮವಿಭೂಷಣ - 1990
3.ಭಾರತ ರತ್ನ -1997
4.ಇಂದಿರಾ ಗಾಂಧಿ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ - 1998
No comments:
Post a Comment
Note: only a member of this blog may post a comment.