Friday 6 November 2015

1,300 ವರ್ಷದ ಅಪರೂಪದ ಮರ ಪತ್ತೆ


JNANASELE
ಬೀಜಿಂಗ್: ಅಳಿವಿನಂಚಿನಲ್ಲಿರುವ ಅಪರೂಪ ಜಾತಿಯ ಸುಮಾರು 1,300 ವರ್ಷ ಹಳೆಯ ಮರವೊಂದು ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಹಳೆಯ ಮರಗಳ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅಪರೂಪದ ಮರವನ್ನು ಪತ್ತೆ ಹಚ್ಚಲಾಗಿದೆ.

ಟಕ್ಸಾಸ್ ಚೈನೆನ್ಸಿಸ್ ಟ್ರೀ ಎಂದು ಗುರುತಿಸಲ್ಪಡುವ ಮರ ಶುನ್​ಹುವಾಂಗ್​ಶನ್ ರಾಷ್ಟ್ರೀಯ ಅರಣ್ಯದಲ್ಲಿ ಕಾಣಸಿಕ್ಕಿದೆ. 35 ಮೀಟರ್ ಎತ್ತರ, 2.2 ಮೀಟರ್ ಸುತ್ತಳತೆ ಹೊಂದಿದೆ. ಮರದ ಪಕ್ಕದಲ್ಲೇ ಎರಡು ಉಪಮರಗಳಿವೆ. ಮೂರು ಮರಗಳನ್ನು ಸ್ಥಳೀಯರು ರಕ್ಷಿಸಿ ಪೋಷಿಸುತ್ತಿದ್ದಾರೆ.

ಅಳಿವಿನಂಚಿನಲ್ಲಿರುವ ಪ್ರಭೇದದ ಮರಗಳು 25 ಲಕ್ಷ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದವು. ಕೆಲವೇ ಬೀಜಗಳನ್ನು ಉತ್ಪಾದಿಸುವ ಮರಗಳು ಒಣ ಮತ್ತು ತೇವ ಪ್ರದೇಶಗಳಲ್ಲಷ್ಟೇ ಬದುಕುತ್ತವೆ. ಔಷಧೀಯ ಗುಣಗಳನ್ನು ಹೊಂದಿರುವ ಮರಗಳನ್ನು ಟ್ಯಾಕ್ಸೋಲ್​ನ್ನು ಸಂಗ್ರಹಿಸಲು ಅಧಿಕ ಪ್ರಮಾಣದಲ್ಲಿ ನಾಶ ಮಾಡಲಾಗಿದೆ. ಟ್ಯಾಕ್ಸೋಲ್​ನ್ನು ಕ್ಯಾನ್ಸರ್ ಚಿಕಿತ್ಸೆಗೂ ಬಳಸಲಾಗುತ್ತದೆ.

No comments:

Post a Comment

Note: only a member of this blog may post a comment.