Wednesday 4 November 2015

ಮುಂದಿನ ಸಿಜೆಐ ಜಸ್ಟೀಸ್ ಥಾಕೂರ್

GK4KPSC
JNANASELE

 

ನವದೆಹಲಿ: ಹಿರಿಯ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

ಸುಪ್ರೀಂಕೋರ್ಟ್​ನ ಹಾಲಿ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರ ಅಧಿಕಾರಾವಧಿ ಡಿಸೆಂಬರ್ 2ರಂದು ಮುಗಿಯಲಿದ್ದು, ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ಅವರ ಹೆಸರನ್ನು ನ್ಯಾಯಮೂರ್ತಿ ದತ್ತು ಶಿಫಾರಸು ಮಾಡಿದ್ದಾರೆ.

ನಿವೃತ್ತರಾಗುವ ಮುಖ್ಯ ನ್ಯಾಯಮೂರ್ತಿಯವರು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವುದು ಸಂಪ್ರದಾಯವಾಗಿದ್ದು, ನೇಮಕಾತಿ ಪ್ರಕ್ರಿಯೆಗಳ ಬಳಿಕ ಕೇಂದ್ರ ಸರ್ಕಾರವು ಕುರಿತು ಪ್ರಕಟಣೆ ಹೊರಡಿಸುವುದು. ನ್ಯಾಯಮೂರ್ತಿ ಥಾಕೂರ್ ಅವರು ಒಂದು ವರ್ಷ ಒಂದು ತಿಂಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದು, 2017 ಜನವರಿ 3ರಂದು ನಿವೃತ್ತರಾಗುವರು.

ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ನ್ಯಾಯಮೂರ್ತಿ ಥಾಕೂರ್ ಅವರು 2009ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

No comments:

Post a Comment

Note: only a member of this blog may post a comment.