Tuesday 17 November 2015

ಅಂಗವಿಕಲರಿಗೆ ಮೀಸಲು ನಿಗದಿ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಜ್ಞಾನಸೆಲೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ-ಕೆಪಿಎಸ್ಸಿ ವತಿಯಿಂದ ನಡೆಯುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ದೃಷ್ಟಿಮಾಂದ್ಯ, ಶ್ರವಣದೋಷ ಹಾಗೂ ಅಂಗವೈಕಲ್ಯ ಹೊಂದಿದವರಿಗೆ ಮೀಸಲು ಹುದ್ದೆಗಳನ್ನು ಗುರುತಿಸಿ ರಾಜ್ಯ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಿದೆ.
 
ಸರ್ಕಾರ ಈ ಅಧಿಸೂಚನೆ ಪ್ರತಿಯನ್ನು ಸೋಮವಾರ ಹೈಕೋರ್ಟ್ಗೆ ಸಲ್ಲಿಸಿತು. ಇದನ್ನು ಪರಿಗಣಿಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ಇತ್ಯರ್ಥಗೊಳಿಸಿತು. ಜತೆಗೆ, ಈ ಅಧಿಸೂಚನೆಯನ್ನು ಮುಂಬರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಳವಡಿಸಿಕೊಳ್ಳುವಂತೆ ಸೂಚಿಸಿತು.
 
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಾದ ಕೆಎಎಸ್ ಮತ್ತಿತರರ ಎ ಹಾಗೂ ಬಿ ವರ್ಗದ ಹುದ್ದೆಗಳಲ್ಲಿ ದೃಷ್ಟಿಮಾಂದ್ಯರು, ಮಂದ ದೃಷ್ಟಿಯುಳ್ಳವರಿಗೆ ಮೀಸಲು ಕಲ್ಪಿಸುವಂತೆ ಕೋರಿ ರಾಷ್ಟ್ರೀಯ ಅಂಧರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂಗವಿಕಲರಿಗೆ ಮೀಸಲು ಕಲ್ಪಿಸಿ ಅ.10ರಂದು ನೂತನ ಅಧಿಸೂಚನೆ ಹೊರಡಿಸಿತ್ತು.
 
ಪ್ರಸಕ್ತ ಸಾಲಿಗೆ ಅನ್ವಯವಿಲ್ಲ: ಈ ಅಧಿಸೂಚನೆಯನ್ನು ಪ್ರಸ್ತುತ ನಡೆಯುತ್ತಿರುವ ಕೆಎಎಸ್ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಕೂಡ ಅಳವಡಿಸಬೇಕು ಎಂದು ಅರ್ಜಿದಾರರ ಪರವಾಗಿ ವಕೀಲೆ ಜೈನಾ ಕೊಠಾರಿ ಮನವಿ ಮಾಡಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಹಾಗೂ ಕೆಪಿಎಸ್ಸಿ ಪರ ವಕೀಲರು, ಈಗಾಗಲೇ ಕೆಎಎಸ್ನ ಅಂತಿಮ ಪರೀಕ್ಷೆ ಪೂರ್ಣಗೊಂಡಿದ್ದು, ವ್ಯಕ್ತಿತ್ವ ಪರೀಕ್ಷೆಯ ತಯಾರಿಯಲ್ಲಿದೆ. ಈ ಹಂತದಲ್ಲಿ ಹೊಸದಾಗಿ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿವರಿಸಿದರು.
 
ಇದನ್ನು ಪರಿಗಣಿಸಿದ ಪೀಠ, ಪ್ರಸ್ತುತ ನೇಮಕ ಪ್ರಕ್ರಿಯೆಗೆ ಹೊಸ ಮೀಸಲು ಅಧಿಸೂಚನೆ ಅನ್ವಯವಾಗುವಂತೆ ಆದೇಶ ನೀಡಲು ನಿರಾಕರಿಸಿತು

No comments:

Post a Comment

Note: only a member of this blog may post a comment.