JNANASELE |
ಬೆಂಗಳೂರು: ಗರ್ಭಿಣಿಯರಿಗೆ ಉಚಿತವಾಗಿ ನಂದಿನಿ ಹಾಲು ಮತ್ತು ತುಪ್ಪ ನೀಡುವ ಚಿಂತನೆ ಇದೀಗ ರಾಜ್ಯ ಸರ್ಕಾರಕ್ಕೆ ಬಂದಿದೆ. ವಾರದಲ್ಲಿ ಮೂರು ದಿನ ನಂದಿನಿ ಹಾಲು ಹಾಗೂ ತಿಂಗಳಿಗೆ 2 ಕೆ.ಜಿ. ತುಪ್ಪ ನೀಡುವುದು ಈ ಯೋಜನೆಯ ಉದ್ದೇಶ. ಯಾವ ವರ್ಗದ ಮಹಿಳೆಯರಿಗೆ ಈ ಉಚಿತ ಹಾಲು-ತುಪ್ಪ ಭಾಗ್ಯ ನೀಡಬೇಕು ಎಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ.
ಪಶುಸಂಗೋಪನಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿ
ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟಗಳು ಮತ್ತು ಹಿರಿಯ
ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎ. ಮಂಜು ಈ ವಿಷಯ ತಿಳಿಸಿದರು.
ಪೌಷ್ಟಿಕಾಂಶದ ಕೊರತೆಯಿಂದಾಗಿ ಗರ್ಭಿಣಿಯರು ಇಂದು ಹಲವು ಸಮಸ್ಯೆಗಳನ್ನು
ಎದುರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಈಹಿನ್ನೆಲೆಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಗರ್ಭ ಧರಿಸಿದ ಯಾವ ತಿಂಗಳಿಂದ ತುಪ್ಪ ಕೊಡಬೇಕು ಮತ್ತು ವಾರದ ಯಾವ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ಹಾಲು ಕೊಡಬೇಕು ಇತ್ಯಾದಿ ವಿಚಾರಗಳ
ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಿ ಅನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶಾಲಾ ಮಕ್ಕಳಿಗೆ ಈಗ ನೀಡಲಾಗುತ್ತಿರುವ ಪುಡಿಯಿಂದ ತಯಾರಿಸಿದ ಹಾಲಿನ ಬದಲಾಗಿ,
ಸಿದಟಛಿಪಡಿಸಿದ ಶುದಟಛಿ ಹಾಲು ನೀಡಬೇಕು ಎಂಬ ಪ್ರಸ್ತಾವನೆ ಕೆಎಂಎಫ್ ಮುಂದಿದೆ. ಈ ಪ್ರಸ್ತಾವನೆಯನ್ನು ಪರಿಗಣಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ
ಮಾಡಲಾಗುವುದು. ಹಾಲಿನ ಪುಡಿ ಶೇಖರಣೆ ಸುಲಭ ಎನಿಸಿದರೂ, ಹೆಚ್ಚು ದಿನ ಇಟ್ಟರೆ
ಪೌಷ್ಟಿಕಾಂಶಗಳ ಬಗ್ಗೆ ಸ್ವಲ್ಪಮಟ್ಟಿಗೆ ಅನುಮಾನ ಬರಬಹುದು. ಹಾಗಾಗಿ ಸಿದಟಛಿಪಡಿಸಿದ
ಶುದಟಛಿ ಹಾಲು ಕೊಟ್ಟರೆ ಉತ್ತಮ ಎಂಬ ಅಭಿಪ್ರಾಯವಿದೆ ಎಂದರು.
ಪಶು ಆಹಾರ ಉತ್ಪಾದನೆಗೆ ಒತ್ತು: ಶುಕ್ರವಾರ ನಡೆದ ಸಭೆಯಲ್ಲಿ ಎಲ್ಲ ಒಕ್ಕೂಟಗಳ ಅಧ್ಯಕ್ಷರು ಪಶು ಆಹಾರದ ಕೊರತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಉತ್ಪಾದನೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ರಾಜ್ಯದಲ್ಲಿ 3 ಸಾವಿರ ಟನ್ ಪಶು ಆಹಾರದ ಬೇಡಿಕೆ ಇದ್ದು, ಉತ್ಪಾದನೆ ಕೇವಲ 1,400 ಟನ್ ಇದೆ. ಆ ಹಿನ್ನೆಲೆಯಲ್ಲಿ ಪಶು ಆಹಾರ ಉತ್ಪಾದನೆಗೆ ಹೆಚ್ಚು ಒತ್ತು ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚು ಬೇಡಿಕೆ ಇರುವ ಕಡೆ ಪಶು ಆಹಾರ ಉತ್ಪಾದನಾ ಘಟಕಗಳನ್ನು
ಸ್ಥಾಪಿಸಲು ಒತ್ತು ಕೊಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೆಚ್ಚಾಗಿ ಜೋಳ ಬೆಳೆಯುವ ಪ್ರದೇಶಗಳಲ್ಲಿ ಆದ್ಯತೆ ನೀಡಿದರೆ, ಕಚ್ಚಾ ವಸ್ತು ಸುಲಭವಾಗಿ ಲಭಿಸುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಉತ್ಪಾದನೆಯಾಗುವ ಹಾಲು ಹೊರ ರಾಜ್ಯಗಳಲ್ಲೂ ಮಾರಾಟವಾಗಬೇಕು
ಎನ್ನುವುದು ಕೆಎಂಎಫ್ ಬೇಡಿಕೆ. ಇದೇ ವೇಳೆ ಹೊರ ರಾಜ್ಯಗಳಿಂದ ಬರುವ ಕಳಪೆ
ಗುಣಮಟ್ಟದ ಹಾಲಿಗೆ ಕಡಿವಾಣ ಹಾಕುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಂದಿನಿ ಮಾರಾಟ ಮಳಿಗೆಗಳಲ್ಲಿ ಬೇರೆ ತಿಂಡಿ-ತಿನಿಸು ಅಥವಾ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದರ ಪತ್ತೆಗೆ ಬೆಂಗಳೂರಿನಲ್ಲಿ 100 ವಿಚಕ್ಷಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಳಿದ ಜಿಲ್ಲೆಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದು ಸಚಿವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು, ವ್ಯವಸ್ಥಾಪಕ
ನಿರ್ದೇಶಕ ರಾಕೇಶ್‌ಸಿಂಗ್ ಇದ್ದರು.
UDAYAVANI NEWS
No comments:
Post a Comment
Note: only a member of this blog may post a comment.