JNANASELE |
ಬೀಜಿಂಗ್: ಅಳಿವಿನಂಚಿನಲ್ಲಿರುವ ಅಪರೂಪ ಜಾತಿಯ ಸುಮಾರು 1,300 ವರ್ಷ ಹಳೆಯ ಮರವೊಂದು ಮಧ್ಯ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿದೆ. ಹಳೆಯ ಮರಗಳ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಈ ಅಪರೂಪದ ಮರವನ್ನು ಪತ್ತೆ ಹಚ್ಚಲಾಗಿದೆ.
ಟಕ್ಸಾಸ್ ಚೈನೆನ್ಸಿಸ್ ಟ್ರೀ ಎಂದು ಗುರುತಿಸಲ್ಪಡುವ ಈ ಮರ ಶುನ್ಹುವಾಂಗ್ಶನ್ ರಾಷ್ಟ್ರೀಯ ಅರಣ್ಯದಲ್ಲಿ ಕಾಣಸಿಕ್ಕಿದೆ. 35 ಮೀಟರ್ ಎತ್ತರ, 2.2 ಮೀಟರ್ ಸುತ್ತಳತೆ ಹೊಂದಿದೆ. ಈ ಮರದ ಪಕ್ಕದಲ್ಲೇ ಎರಡು ಉಪಮರಗಳಿವೆ. ಮೂರು ಮರಗಳನ್ನು ಸ್ಥಳೀಯರು ರಕ್ಷಿಸಿ ಪೋಷಿಸುತ್ತಿದ್ದಾರೆ.
ಅಳಿವಿನಂಚಿನಲ್ಲಿರುವ ಈ ಪ್ರಭೇದದ ಮರಗಳು 25 ಲಕ್ಷ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದವು. ಕೆಲವೇ ಬೀಜಗಳನ್ನು ಉತ್ಪಾದಿಸುವ ಈ ಮರಗಳು ಒಣ ಮತ್ತು ತೇವ ಪ್ರದೇಶಗಳಲ್ಲಷ್ಟೇ ಬದುಕುತ್ತವೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಮರಗಳನ್ನು ಟ್ಯಾಕ್ಸೋಲ್ನ್ನು ಸಂಗ್ರಹಿಸಲು ಅಧಿಕ ಪ್ರಮಾಣದಲ್ಲಿ ನಾಶ ಮಾಡಲಾಗಿದೆ. ಟ್ಯಾಕ್ಸೋಲ್ನ್ನು ಕ್ಯಾನ್ಸರ್ ಚಿಕಿತ್ಸೆಗೂ ಬಳಸಲಾಗುತ್ತದೆ.
No comments:
Post a Comment
Note: only a member of this blog may post a comment.