Friday 6 November 2015

ಮಂಗಳ ಗ್ರಹದಲ್ಲಿ ವಾತಾವರಣ ನಾಶವಾಗಲು ಸೌರಗಾಳಿ ಕಾರಣ: ನಾಸಾ


GK4KPSC
JNANASELE
ವಾಷಿಂಗ್ಟನ್ : ಮಂಗಳ ಗ್ರಹದಲ್ಲಿ ವಾಸಯೋಗ್ಯವಾದ ವಾತಾವರಣ ನಾಶವಾಗಲು ಹಲವಾರು ವರ್ಷಗಳಿಂದ ಸೂರ್ಯನಿಂದ ಬರುತ್ತಿರುವ ಪ್ರಬಲವಾದ ಸೌರ ಗಾಳಿಯೇ ಕಾರಣ ಎಂದು ನಾಸಾ ಹೇಳಿದೆ. ಒಂದು ಕಾಲದಲ್ಲಿ ಮಂಗಳ ಗ್ರಹ ಕೂಡಾ ಭೂಮಿಯಂತೆಯೇ ಜೀವಿಸಲು ಯೋಗ್ಯ  ವಾತಾವರಣವನ್ನು ಹೊಂದಿತ್ತು. ಆದರೆ ಪ್ರಬಲವಾದ ಸೌರಗಾಳಿಯಿಂದಾಗಿ ಕ್ರಮೇಣ ಅಲ್ಲಿನ ಪರಿಸರ ನಾಶವಾಯಿತು.

ಸುಮಾರು 4.4 ಬಿಲಿಯನ್ ವರ್ಷಗಳ ಹಿಂದೆ ರೀತಿಯ ಬದಲಾವಣೆ ಆಗಿತ್ತು ಎಂದಿದೆ ನಾಸಾ.
ನಾಸಾದ ಸ್ಪೇಸ್ ಕ್ರಾಫ್ಟ್  'ಮಾವೇನ್‌' ಮಂಗಳದಲ್ಲಿ ನಡೆಸಿದ ಸಂಶೋಧನೆಯನ್ನಾಧರಿಸಿ ನಾಸಾ ವರದಿಯನ್ನು ಬಹಿರಂಗಪಡಿಸಿದೆ. ಸೂರ್ಯನಿಂದ ಬರುವ ಪ್ರಬಲವಾದ ಸೌರಗಾಳಿ ಮತ್ತು ಕಾಂತೀಯ ಪ್ರವಾಹವು ಮಂಗಳನ ವಾತಾವರಣವನ್ನೇ ನಾಶ ಮಾಡಿತು. ಇದೀಗ ಭೂಮಿಯ ವಾತಾವರಣದ ಶೇ. 1 ರಷ್ಟು ವಾತಾವರಣವಷ್ಟೇ ಈಗ ಮಂಗಳನಲ್ಲಿದೆ.  ಸೌರಗಾಳಿಯ ಬಗ್ಗೆ ಹೇಳುವುದಾದರೆ ಭೂಮಿಯ ಮೇಲೂ ಇದರ ಕರಿಛಾಯೆ ಇದ್ದೇ ಇದೆ.  ಸೌರಗಾಳಿಯ ಪ್ರಮಾಣ ಭೂಮಿಯನ್ನು ಹೆಚ್ಚಾಗಿ ಸೋಕಿದರೆ ಭೂಮಿಯಲ್ಲಿನ ವಾತಾವರಣಕ್ಕೂ ಇದೇ ಅವಸ್ಥೆ ಬರುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆಯನ್ನೂ ನಾಸಾ ನೀಡಿದೆ.

ವರುಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿತ್ತು. ಭೂಮಿಯಂತೆ ವಾಸಯೋಗ್ಯವಾದ ಗ್ರಹವಾಗಿತ್ತು ಅದು. ಆದರೆ ಸೌರವ್ಯೂಹದಲ್ಲಿನ ಕೆಲವು ಬದಲಾವಣೆಗಳಿಂದಾಗಿ ಇಲ್ಲಿನ ವಾತಾವರಣವೆಲ್ಲವೂ ಉಲ್ಟಾ ಪಲ್ಟಾ ಆಗಿ ಬಿಟ್ಟಿತು. ಮಂಗಳನ ಅಂಗಳದಲ್ಲಿ ಸೌರ ಸ್ಫೋಟದ ಕುರುಹುಗಳನ್ನು ಮಾವೇನ್‌ ಪತ್ತೆ ಹಚ್ಚಿತ್ತು. 

No comments:

Post a Comment

Note: only a member of this blog may post a comment.