Friday, 6 November 2015

3 ಬಾರಿ ಕರೆ ಕಡಿತಗೊಂಡರೆ ₹3 ಪರಿಹಾರ!



GK4KPSC
JNANASELE
ನವದೆಹಲಿ (ಪಿಟಿಐ):  ಇನ್ನು ಮುಂದೆ ಮಾತನಾಡುತ್ತಿರುವಾಗಲೇ ದಿನವೊಂದರಲ್ಲಿ ಮೂರು ಬಾರಿ ಕರೆ ಕಡಿತಗೊಂಡರೆ, ಅದಕ್ಕೆ ದೂರವಾಣಿ ಸೇವಾ ಸಂಸ್ಥೆಗಳು ಗ್ರಾಹಕರಿಗೆ ಕಡ್ಡಾಯವಾಗಿ ₹3 ಪರಿಹಾರ  ನೀಡಬೇಕು. ನಿಯಮವನ್ನು ತೆಗೆದುಹಾಕಬೇಕು ಎಂದು ಸೇವಾ ಸಂಸ್ಥೆಗಳು ಸಲ್ಲಿಸಿದ್ದ ಬೇಡಿಕೆಯನ್ನು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಳ್ಳಿಹಾಕಿದೆ.

ಮೊಬೈಲ್‌ ಸೇವಾ ಸಂಸ್ಥೆಗಳ ಒಕ್ಕೂಟವಾದ  ಸಿಒಎಐ’ ಮತ್ತು ಎಯುಎಸ್‌ಪಿಐ’ ಕುರಿತು ಅಕ್ಟೋಬರ್‌ 27ರಂದು ಟ್ರಾಯ್‌ಗೆ ಪತ್ರ ಬರೆದು,  ಕರೆ ಕಡಿತವಾಗದಂತೆ ತಡೆಯಲು ಮುಕ್ತ ನೆಟ್‌ವರ್ಕ್‌ ಸೌಲಭ್ಯ  ಕಲ್ಪಿಸಲು ಸಾಧ್ಯವೇ ಇಲ್ಲ. ಒಂದು ವೇಳೆ  ಕರೆ ಕಡಿತಕ್ಕೆ ಪರಿಹಾರ ನೀಡುವುದನ್ನು ಕಡ್ಡಾಯಗೊಳಿಸಿದರೆ, ನಾವು ಅನಿವಾರ್ಯವಾಗಿ ದೂರವಾಣಿ ಕರೆ ದರವನ್ನು ಹೆಚ್ಚಿಸಬೇಕಾಗುತ್ತದೆ.   ಇದರಿಂದ ಪ್ರತಿ ದಿನ ಸೇವಾ ಸಂಸ್ಥೆಗಳಿಗೆ  ₹150 ಕೋಟಿ ನಷ್ಟವಾಗುತ್ತದೆ. ಆದ್ದರಿಂದ ದೂರವಾಣಿ ಗ್ರಾಹಕರ ರಕ್ಷಣೆ  ನಿಯಮಗಳಿಗೆ’ ತಿದ್ದುಪಡಿ (9ನೇ ತಿದ್ದುಪಡಿ) ತರುವುದನ್ನು ಕೈಬಿಡಬೇಕು ಎಂದು ಎಂದು ಮನವಿ ಮಾಡಿಕೊಂಡಿದ್ದವು.

ಆದರೆ, ಟ್ರಾಯ್‌ ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಪ್ರತಿ ಕರೆ ಕಡಿತಕ್ಕೆ ₹ 1ರಂತೆ  ರಂತೆ, ದಿನಕ್ಕೆ ಮೂರು ಬಾರಿ ಆದರೆ ₹3 ಗ್ರಾಹಕರಿಗೆ ಪರಿಹಾರ ನೀಡಬೇಕು. ಜನವರಿ 1 ರಿಂದ ಇದು ಜಾರಿಗೆ ಬರಲಿದೆ ಎಂದು ಹೇಳಿದೆ.

No comments:

Post a Comment

Note: only a member of this blog may post a comment.