ನೇತಾಜಿ ನಾಪತ್ತೆ ನಿಗೂಢತೆಯ ಬಗ್ಗೆ ವಾಟ್ ಹ್ಯಾಪನ್ಡ್ ಟು ನೇತಾಜಿ? ಪುಸ್ತಕದಲ್ಲಿದೆ ಉತ್ತರ
1950 ರಿಂದ 1980ರ ವರೆಗೆ ಉತ್ತರ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅಜ್ಞಾತವಾಸ ಮಾಡಿದ್ದರು ಎಂಬುದಕ್ಕೆ ಸಾಕ್ಷಿಗಳನ್ನೊದಗಿಸಿ ಮಾಜಿ ಪತ್ರಕರ್ತ ಅನುಜ್ ಧಾರ್ ವಾಟ್ ಹ್ಯಾಪನ್ಡ್ ಟು ನೇತಾಜಿ? ಎಂಬ ಪುಸ್ತಕವನ್ನು ರಚಿಸಿದ್ದಾರೆ.

1950-80ರ ಕಾಲಾವಧಿಯಲ್ಲಿ ಭಗವಾನ್‌ಜಿ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದ ಫೈಸಾಬಾದ್‌ನಲ್ಲಿ ವಾಸವಿದ್ದ ಸನ್ಯಾಸಿ ಸುಭಾಷ್ ಚಂದ್ರ ಬೋಸ್ ಅವರೇ ಆಗಿದ್ದರು ಎಂದು ಧಾರ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಬೋಸ್ ಜತೆ ನಿರಂತರ ಸಂಪರ್ಕವನ್ನೂ ಕಲ್ಪಿಸಿಕೊಂಡಿದ್ದರು ಎಂಬ ವಿಷಯವನ್ನೂ ಧಾರ್ ಇಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರಗಳ ಕೆಲವು ಯೋಜನೆಗಳ ಬಗ್ಗೆ ಸರ್ಕಾರ ಅವರಲ್ಲಿ ಸಲಹೆಗಳನ್ನೂ ಪಡೆಯುತ್ತಿತ್ತು ಎನ್ನಲಾಗುತ್ತಿದೆ.
ನೇತಾಜಿ ನಾಪತ್ತೆ ಬಗ್ಗೆ ತನಿಖೆ ನಡೆಸುವಾಗ ಕೇಂದ್ರ ಸರ್ಕಾರ ಕಿತಾಪತಿ ಮಾಡಿದ ಕಾರಣ ಭಗವಾನ್‌ಜಿ ಎಂಬ ಸನ್ಯಾಸಿಯ ಡಿಎನ್‌ಎ ಪರೀಕ್ಷೆಯ ಫಲಿತಾಂಶ ಮೇಲೆ ಕೆಳಗಾಗಿದ್ದು ಎಂದು ಈ ಪುಸ್ತಕದಲ್ಲಿ ಹೇಳಲಾಗಿದೆ. ಸೋವಿಯತ್ ಯೂನಿಯನ್ ನೇತಾಜಿಗೆ ಅಭಯ ನೀಡಿದ್ದರು ಎಂಬ ವಾದವನ್ನು ಧಾರ್ ಇಲ್ಲಿ ಒಪ್ಪಿಕೊಂಡಿದ್ದಾರೆ. ನೇತಾಜಿಯ ಸಾವು ಮತ್ತು ನಿಗೂಢತೆಯ ಬಗ್ಗೆಯಿರುವ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕಾಗಿ ಸತತ 15 ವರ್ಷಗಳ ಕಾಲ ಅನ್ವೇಷಣೆಗಳನ್ನು ಮಾಡಿ ಧಾರ್ ಈ ಪುಸ್ತಕವನ್ನು ಬರೆದಿದ್ದಾರೆ.
No comments:
Post a Comment
Note: only a member of this blog may post a comment.