JNANASELE |
ಥೇಮ್ಸ್ ದಂಡೆ ಮೇಲೆ ಕಲ್ಯಾಣ ಜ್ಯೋತಿ
ಥೇಮ್ಸ್ ನದಿ ತೀರದಲ್ಲಿ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ಮೋದಿ.
ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವಣ್ಣನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು.
ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡಿದ ಮೋದಿ ಅವರು, ಜಗಜ್ಯೋತಿ ಬಸವೇಶ್ವರರ ಕರ್ಮಯೋಗದ ಕುರಿತು ಮಾತನಾಡಿದರು. ಲಂಡನ್ ನಲ್ಲಿ ಪ್ರತಿಮೆಗೆ ಜಾಗ ಸಿಕ್ಕಿದ್ದು, ಬಸವೇಶ್ವರರ ಪ್ರತಿಮೆಯನ್ನು ನಾನು ಅನಾವರಣಗೊಳಿಸಿದ್ದು ನನ್ನ ಸೌಭಾಗ್ಯ. ಇದು ನನ್ನ ಜೀವನದ ಅಪೂರ್ವ ಕ್ಷಣ ಎಂದು ಬರ್ಣಿಸಿದರು.
ಅಬ್ರಾಹಂ ಲಿಂಕನ್ ಅವರಿಗೂ ಮುಂಚಿತವಾಗಿಯೇ ಬಸವಣ್ಣನವರು ಪ್ರಜಾಪ್ರಭುತ್ವದ ಕಲ್ಪನೆ ನೀಡಿದ್ದರು. ಬಸವಣ್ಣನವರು 12ನೇ ಶತಮಾನದಲ್ಲೇ ಸಮಾಜ ಸುಧಾರಕರಾಗಿದ್ದರು. ಅಸ್ಪೃಶ್ಯತೆ ನಿವಾರಣೆ, ಜಾತಿ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದರು ಎಂದು ಮೋದಿ ಹೇಳಿದ್ದಾರೆ.
ಲ್ಯಾಂಬೆತ್‌ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಸೇರಿದಂತೆ ಹಲವು ಮಂದಿ ಭಾರತೀಯರು ಹಾಗೂ ಕನ್ನಡಿಗರು ಈ ಕ್ಷಣಕ್ಕೆ ಸಾಕ್ಷಿಯಾದರು.
No comments:
Post a Comment
Note: only a member of this blog may post a comment.