Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 31/10/2017

1) ರಸ್ತೆಬದಿಯ ಮೈಲು ಕಲ್ಲು ಈ ಬಣ್ಣದಲ್ಲಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತದೆ .
a) ಬಿಳಿ ಮತ್ತು ಹಳದಿ ಬಣ್ಣದ ಕಲ್ಲು✔✔
b) ಬಿಳಿ-ಹಸಿರು ಬಣ್ಣದ ಕಲ್ಲು
c) ಬಿಳಿ-ನೀಲಿ-ಕಪ್ಪುಬಣ್ಣದ ಕಲ್ಲು
d) ಕಿತ್ತಳೆ- ಬಿಳಿ ಬಣ್ಣದ ಕಲ್ಲುಗಳು
📗📗📗📗📗📗📗📗📗📗📗📗📗📗📗
2) ಬರೊಬ್ಬರಿ 10 ವರ್ಷಗಳ ಬಳಿಕ ಇಟಲಿ ದೇಶದ ಪ್ರಧಾನಿ ಪಾವೊಲೊ ಗೆಂಟಿಲೋನಿ ಭಾರತಕ್ಕೆ ಭೇಟಿ  ನೀಡಿದ್ದು, ಇವರಿಗೂ ಮೊದಲು ಭಾರತಕ್ಕೆ ಭೇಟಿ ನೀಡಿದ ಪ್ರಧಾನಿ ಯಾರು?
a) ಮಟ್ಟೆಯೊ ರೆಂಜಿ
b) ರೊಮಾನೊ ಪ್ರೊಡಿ✔✔
c) ಸಿಲ್ವಿಯೊ ಬೆರ್ಲುಸ್ಕೋನಿ
d) ಮಾರಿಯೊ ಮೊಂಟಿ
📗📗📗📗📗📗📗📗📗📗📗📗📗📗📗
3) ಸಿಂಗಾಪುರದಲ್ಲಿ ನಡೆದ 38ನೇ ವಿಶ್ವ ಹಿರಿಯರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದವರು?
a) ಕಿಡಂಬಿ ಶ್ರೀಕಾಂತ್
b) ಎನ್. ದೊರೆಸ್ವಾಮಿ
c)  ಟಿ.ಕೆ.ಅಭಿಜಿತ್
d) ಟಿ.ಕೆ.ಆನಂದ್✔✔
📗📗📗📗📗📗📗📗📗📗📗📗📗📗📗
4) ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2016ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದಕ ದಾಳಿ ನಡೆದಿರುವ ದೇಶ ಯಾವುದು? 
a) ಇರಾಕ್✔✔
b) ಅಪ್ಘಾನಿಸ್ತಾನ
c) ಭಾರತ
d) ಪಾಕಿಸ್ತಾನ
📗📗📗📗📗📗📗📗📗📗📗📗📗📗
5) ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ಗ್ರೀನ್ ಇಂಡಿಯಾ ಮಿಷನ್’ ಯೋಜನೆಯನ್ನು ಯಾವ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ?
a) ಕಲಬುರ್ಗಿ
b) ಉತ್ತರ ಕನ್ನಡ
c) ಹಾಸನ
d) ಎಲ್ಲವೂ✔✔
📗📗📗📗📗📗📗📗📗📗📗📗📗📗
6) ಲಂಡನ್ ಮಹಾನಗರ ಥೇಮ್ಸ್ ನದಿಯ ತಟದಲ್ಲಿದೆ; ಪ್ಯಾರಿಸ್ ಮಹಾನಗರ ಯಾವ ನದಿಯ ದಂಡೆಯ ಮೇಲಿದೆ ?
a) ಡಾಶುಸ್ ನದಿ
b) ರೈನ್ ನದಿ
c) ಸೀನ್ ನದಿ✔✔
d) ಏವಾನ್ ನದಿ
📗📗📗📗📗📗📗📗📗📗📗📗📗📗📗
7) ಭಾರತದಲ್ಲಿನ ಮುಂಗಾರು ಮುನ್ಸೂಚನೆಯನ್ನು ನಿಖರವಾಗಿ ತಿಳಿದುಕೊಳ್ಳವ ವಿಧಾನಗಳನ್ನು ಅಮೆರಿಕಾದ ಯಾವ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ?
a) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
b) ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ
c) ಫ್ಲಾರಿಡಾ ವಿಶ್ವವಿದ್ಯಾಲಯ✔✔
d) ಕೋಲಂಬಿಯಾ ವಿಶ್ವವಿದ್ಯಾಲಯ
📗📗📗📗📗📗📗📗📗📗📗📗📗📗
8) ಮಾದಕದ್ರವ್ಯ ಮತ್ತು ಹಾನಿಕಾರಕ ನೋವುನಿವಾರಕಗಳ ಹಾವಳಿ ನಿಯಂತ್ರಿಸುವ ಸಲುವಾಗಿ ಯಾವ ದೇಶ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ?
a) ರಷ್ಯಾ
b) ಕೆನಡಾ
c) ಅಮೇರಿಕ ✔✔
d) ಚೀನಾ
📗📗📗📗📗📗📗📗📗📗📗📗📗📗
9) ಎಷ್ಟನೇಯ  'ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ ಷಿಪ್' ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅಕ್ಟೋಬರ್ 28 ರಿಂದ 31 ರ ವರೆಗೆ ನಡೆಯಲಿದೆ?(ಪ್ರವೀಣ ಹೆಳವರ)
a) 20
b) 21
c) 22✔✔
d) 23
📗📗📗📗📗📗📗📗📗📗📗📗📗📗📗
10) ಆವರ್ತ ಮಳೆಯು ಅಧಿಕವಾಗಿ ಈ ಕೆಳಕಂಡ ಯಾವ ದೇಶದಲ್ಲಿ ಸುರಿಯುತ್ತದೆ?
a) ಜಪಾನ್
b) ಭಾರತ✔✔
c) ಮೆಕ್ಸಿಕೊ
d) ಅಮೆರಿಕ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 30/10/2017

1) ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ 2017 ನ್ನು  ಭಾರತದ ಕಿಡಂಬಿ ಶ್ರೀಕಾಂತ್ ಯಾರನ್ನು ಸೋಲಿಸಿ ತಮ್ಮದಾಗಿಸಿಕೊಂಡರು ?
a)  ಚೆನ್​ ಲಾಂಗ್
b) ಕರೋಲಿನಾ ಮರಿನ್‌
c) ಲೂಯೊ ಯಿಂಗ್
d) ಕೆಂಟ ನಿಶಿಮೊಟೊ ✔✔
📗📗📗📗📗📗📗📗📗📗📗📗📗📗📗
2) ಕರ್ನಾಟಕ ಹೈಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶೆ ಯಾರು?
a) ಮಂಜುಳ ಚೆಲ್ಲೂರ್✔✔
b) ವಿ.ಎಸ್. ರಮಾದೇವಿ
c) ಫಾತೀಮಾ ಬೀವಿ
d) ಲೈಲಾ ಸೇಠ್
📗📗📗📗📗📗📗📗📗📗📗📗📗📗📗
3) ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಎಷ್ಟು ಕ್ಷೇತ್ರಗಳಲ್ಲಿ ನೀಡುವರು?(ಪ್ರವೀಣ ಹೆಳವರ)
a) 4
b) 2
c) 6✔✔
d) 8
📗📗📗📗📗📗📗📗📗📗📗📗📗📗📗
4) ಭಾರತದ ಕಲ್ಲಿದ್ದಲಿನ ರಾಜಧಾನಿ ಎಂದು ಯಾವುದನ್ನು ಕರೆಯುತ್ತಾರೆ ?
a) ಭಿಲಾಯಿ
b) ಧನಾಬಾದ್✔✔
c) ನಾಸಿಕ್
d) ಜಬಲ್ಪುರ
📗📗📗📗📗📗📗📗📗📗📗📗📗📗📗
5) ಕಬಡ್ಡಿ ಇದು ಯಾವ ದೇಶದ ರಾಷ್ಟ್ರೀಯ ಕ್ರೀಡೆ ಆಗಿದೆ?
a) ಬಾಂಗ್ಲಾದೇಶ ✔✔
b) ಭೂತಾನ್
c) ಅಮೆರಿಕಾ
d) ಕೊರಿಯಾ
📗📗📗📗📗📗📗📗📗📗📗📗📗📗📗
6) ಭಾರತದಲ್ಲಿ ಆಯೋಜನೆಗೊಂಡ ಫಿಫಾ ಅಂಡರ್ 17 ವಿಶ್ವಕಪ್ ಗೆದ್ದವರು ಯಾರು?
a) ಇಂಗ್ಲೆಂಡ್ ✔✔
b) ಬ್ರೆಜಿಲ್
c) ಸ್ಪೇನ್
d) ಜರ್ಮನಿ
📗📗📗📗📗📗📗📗📗📗📗📗📗📗
7) ಡಿಸೆಂಬರ್ 9 ಮತ್ತು 14 ರಂದು ಕೇಂದ್ರ ಚುನಾವಣಾ ಆಯೊಗವು ಯಾವ ರಾಜ್ಯದ ವಿಧಾನಸಭೆ ಚುನಾವಣೆಯನ್ನು ನಡೆಸಲಿದೆ?
a) ಮಧ್ಯ ಪ್ರದೇಶ
b) ಹರ್ಯಾಣಾ
c) ಗುಜರಾತ್ ✔✔
d) ಪಶ್ಚಿಮ ಬಂಗಾಳ
📗📗📗📗📗📗📗📗📗📗📗📗📗📗
8)  "ಪಾರಂಪರಿಕ ತಾಣಗಳನ್ನು ದತ್ತು ಪಡೆಯಿರಿ" ಅಭಿಯಾನದ ಅಂಗವಾಗಿ ಯಾತ್ರಾ ಡಾಟ್ ಕಾಂ ಯಾವ ಸ್ಥಳವನ್ನು ದತ್ತು ಪಡೆದಿದೆ?
a)ಫಟ್ಟದಕಲ್ಲು
b) ಹಂಪೆ ✔✔
c) ಬೇಲೂರು
d) ಐಹೊಳೆ
📗📗📗📗📗📗📗📗📗📗📗📗📗📗📗
9) ಇತ್ತೀಚೆಗೆ ಭಾರತ ಸರ್ಕಾರವು ಎಚ್-1ಬಿ ಮತ್ತು ಎಲ್-1 ವೀಸಾ ನೀತಿಗಳಲ್ಲಿ ಬದಲಾವಣೆ ತರಬಾರದು ಎಂದು ಯಾವ ರಾಷ್ಟ್ರಕ್ಕೆ ಮನವಿ ಮಾಡಿಕೊಂಡಿದೆ?
a) ಬ್ರಿಟನ್
b) ಆಸ್ಟ್ರೇಲಿಯಾ
c) ಅಮೆರಿಕ✔✔
d) ಮೇಲಿನ ಎಲ್ಲವೂ.
📗📗📗📗📗📗📗📗📗📗📗📗📗📗📗
10) ಅಮೆರಿಕದ ಕೆಂಟುಕಿ ರಾಜ್ಯದ ಲೂಯಿಸ್ ವಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರೀಡಾಂಗಣಕ್ಕೆ ಭಾರತದ ಯಾವ ಕ್ರಿಕೆಟ್ ಆಟಗಾರನ ಹೆಸರನ್ನು ಇಡಲಾಗಿದೆ?
a) ರಾಹುಲ್ ದ್ರಾವಿಡ್
b) ಸಚಿನ್ ತೆಂಡೂಲ್ಕರ್
c) ಸುನೀಲ್ ಗವಾಸ್ಕರ್ ✔✔
d) ಕಪೀಲ್ ದೇವ್.
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 29/10/2017

1) ವಿಶ್ವದ ಪ್ರಥಮ ಹೈಬ್ರಿಡ್‌ ಎಲೆಕ್ಟ್ರಿಕ್ ಟ್ರಾಮ್‌ ಕಾರ್ಯಾಚರಣೆಯನ್ನು ಇಲ್ಲಿ ಶುಕ್ರವಾರ ಆರಂಭಿಸಲಾಯಿತು.
a) ನ್ಯೂಯಾರ್ಕ್
b) ಬೀಜಿಂಗ್ ✔✔
c) ಅಬುದಾಬಿ
d) ಲಂಡನ್
📗📗📗📗📗📗📗📗📗📗📗📗📗📗
2) ಇತ್ತೀಚೆಗೆ ಖಾಂಡೇರಿ ಜಲಾಂತರ್ಗಾಮಿ ನೌಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ನೌಕೆಯನ್ನು ಯಾವ ದೇಶದ ಸಹಯೋಗದಲ್ಲಿ ನಿರ್ಮಾಣ ಮಾಡಲಾಗಿದೆ?
a) ಫ್ರಾನ್ಸ್ ✔✔
b) ಅಮೆರಿಕ
c) ರಷ್ಯಾ
d) ಜಪಾನ್
📗📗📗📗📗📗📗📗📗📗📗📗📗📗
3) ಇತ್ತೀಚೆಗೆ ಕೇಂದ್ರದ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಉದ್ದವಾದ ಮಹಾಗೋಡೆಯ ಕುರುಹು ಪತ್ತೆಯಾಗಿರುವುದು ಯಾವ ರಾಜ್ಯದಲ್ಲಿ ?
a) ಅಸ್ಸಾಂ 
b) ಮಧ್ಯಪ್ರದೇಶ✔✔
c)  ತಮಿಳುನಾಡು
d) ರಾಜಸ್ತಾನ
📗📗📗📗📗📗📗📗📗📗📗📗📗📗
4) ಪ್ರತಿಷ್ಠಿತ ಫ್ರೆಂಚ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ 2017 ನಲ್ಲಿ ಭಾರತದ ಪಿವಿ ಸಿಂಧೂ ಸೆಮಿಫೈನಲ್‌ನಲ್ಲಿ ಯಾರ ವಿರುದ್ಧ ಪರಾಭವಗೊಂಡರು ?
a) ನೊಜೊಮಿ ಓಕುಹಾರ
b)  ತೈ ತ್ಸು ಯಿಂಗ್
c) ಅಕೇನ್ ಯಮಗುಚಿ✔✔
d) ಚೆನ್ ಯೂಫಿ
📗📗📗📗📗📗📗📗📗📗📗📗📗📗
5) ಮಲೇಷ್ಯಾದಲ್ಲಿ ಸಾಗುತ್ತಿರುವ 7ನೇ ಸುಲ್ತಾನ್ ಆಫ್ ಜೊಹರ್ ಕಪ್‌ ಹಾಕಿ ಟೂರ್ನಮೆಂಟ್‌ನಲ್ಲಿ ಭಾರತ ಯಾವ ದೇಶದ ವಿರುದ್ಧ ಪರಾಭವಗೊಂಡಿತು?
a) ಗ್ರೇಟ್ ಬ್ರಿಟನ್‌✔✔
b) ಮಲೇಷಿಯಾ
c) ಪಾಕಿಸ್ತಾನ
d) ಬೆಲ್ಜಿಯಂ
📗📗📗📗📗📗📗📗📗📗📗📗📗📗
6) ಈಗ ನಡೆಯುತ್ತಿರುವ ಏಷ್ಯಾ ಕಪ್ ಹಾಕಿಯಲ್ಲಿ  ಭಾರತ ಮಹಿಳಾ ತಂಡವು ಯಾವ ದೇಶದ ವಿರುದ್ಧ 10-0 ಅಂತರದ ಭರ್ಜರಿ ಜಯ ದಾಖಲಿಸಿದೆ?
a) ಮಲೇಷಿಯಾ
b) ಬೆಲ್ಜಿಯಂ
c) ಜಪಾನ್
d) ಸಿಂಗಾಪುರ್✔✔
📗📗📗📗📗📗📗📗📗📗📗📗📗📗📗
7) ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಇವರು ನೇಮಕಗೊಂಡಿದ್ದಾರೆ.
a) ಕೆನ್ ಜೆಸ್ಟರ್ ✔✔
b) ರಿಚರ್ಡ್ ವರ್ಮ
c) ಟಿಮ್ ರೋಯಿಮರ್
d)  ಆ್ಯಶ್ಲೆ ಟೆಲ್ಲಿಸ್
📗📗📗📗📗📗📗📗📗📗📗📗📗📗
8) ಅಂತರರಾಷ್ಟ್ರೀಯ ಆರ್ಥಿಕ ಸಂಘದ (ಐಇಎ)ಅಧ್ಯಕ್ಷರಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಾಬರ್ಟ್ ಸೊಲೋವ್
b) ಅಮರ್ತ್ಯ ಸೇನ್
c) ಕೌಶಿಕ್ ಬಸು ✔✔
d) ಜೋಸೆಫ್ ಸ್ಟಿಗ್ಲಿಝ್
📗📗📗📗📗📗📗📗📗📗📗📗📗📗📗
9) 2017ರ ನವೆಂಬರ್ ತಿಂಗಳಲ್ಲಿ ಜಾಗತಿಕ ಸೈಬರ್‌ ಸ್ಪೆಸ್‌ (ಜಿಸಿಸಿಎಸ್) ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ. ಹಾಗೆ ಈ  ಸಮ್ಮೇಳನ ಯಾವ ನಗರದಲ್ಲಿ ನಡೆಯಲಿದೆ? 
a) ಭಾರತ– ನವದೆಹಲಿ ✔✔
b) ಅಮೆರಿಕ– ನ್ಯೂಯಾರ್ಕ್
c) ಜಪಾನ್–ಟೋಕಿಯಾ
d) ಫ್ರಾನ್ಸ್‌– ಪ್ಯಾರಿಸ್‌
📗📗📗📗📗📗📗📗📗📗📗📗📗📗📗
10) ಗ್ರಾಮೀಣ ಪ್ರದೇಶಗಳ ರಸ್ತೆ ನಿರ್ವಹಣೆಗಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಯಾವ ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ?
a) ರಸ್ತೆ ಆ್ಯಪ್
b) ಆರಂಭ್ ಆ್ಯಪ್✔✔
c) ಗ್ರಾಮೀಣ ಆ್ಯಪ್‌
d) ವಾಹನ್‌ ಆ್ಯಪ್
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 28/10/2017

1) ಗ್ರಾಹಕರ ಹಕ್ಕು ರಕ್ಷಣಾ ಸಂಬಂಧಿ ಕಾನೂನು ಜಾರಿಗೊಳಿಸಿದ ಮೊದಲ ರಾಷ್ಟ್ರ  ಯಾವುದು?
a) ನ್ಯೂಜಿಲೆಂಡ್‌
b) ಭಾರತ ✔✔
c) ಅಮೇರಿಕ
d) ರಷ್ಯಾ
📗📗📗📗📗📗📗📗📗📗📗📗📗📗📗
2) ಈ ಕೆಳಕಂಡ ಯಾವ ರಾಜ್ಯ ಅತಿ ಹೆಚ್ಚು ಕೊಳವೆ ಬಾವಿಗಳ ಮೂಲಕ ನೀರಾವರಿಯನ್ನು ಅವಲಂಭಿಸಿದೆ?
a) ಹರಿಯಾಣ      
b) ಆಂಧ್ರಪ್ರದೇಶ
c)  ಉತ್ತರಪ್ರದೇಶ ✔✔
d) ಮಧ್ಯಪ್ರದೇಶ
📗📗📗📗📗📗📗📗📗📗📗📗📗📗📗
3) ಭಾರತದಲ್ಲಿರುವ ಯಾವ ರಾಷ್ಟ್ರದ ರಾಯಭಾರಿಯಾಗಿರುವ ದೀಪು ಕುಮಾರ್ ಉಪಾಧ್ಯಾಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ?
a) ಶ್ರೀಲಂಕಾ.
b) ನೇಪಾಳ.✔✔
c) ಮಯನ್ಮಾರ್.
d) ಬಾಂಗ್ಲಾದೇಶ.
📗📗📗📗📗📗📗📗📗📗📗📗📗📗📗
4) ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಮ್ಯಾನ್ಮಾರ್ ಗೆ ನೀಡುತ್ತಿರುವ ಸೇನಾ ನೆರವನ್ನು ನಿಲ್ಲಿಸುವುದಾಗಿ ಯಾವ ರಾಷ್ಟ್ರ ಘೋಷಿಸಿದೆ?
a) ಚೀನಾ
b) ರಷ್ಯಾ
c) ಅಮೇರಿಕ ✔✔
d) ಭಾರತ
📗📗📗📗📗📗📗📗📗📗📗📗📗📗
5) ಅಮೆರಿಕಾದ ಟೆನಿಸ್ ಕಣಿವೆ ನೀರಾವರಿ ಯೋಜನೆಯ ಮಾದರಿಯಲ್ಲೇ ಭಾರತದಲ್ಲಿ ಯಾವ ನೀರಾವರಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ?
a) ಹಿರಾಕುಡ್ ಯೋಜನೆ        
b) ದಾಮೋದರ್ ಕಣಿವೆ ಯೋಜನೆ ✔✔
c) ಭಾಕ್ರಾ ನಂಗಲ್ ಯೋಜನೆ 
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗📗
6) ರಾಜ್ಯಸಭೆಗೆ ಕೇಂದ್ರಾಡಳಿತ ಪ್ರದೇಶದಿಂದ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
a) 3
b) 2
c) 4✔✔
d) 6
📗📗📗📗📗📗📗📗📗📗📗📗📗📗📗
7) ಈ ಕೆಳಗಿನ ವ್ಯಕ್ತಿಗಳಲ್ಲಿ ಯಾರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸಿಲ್ಲ?
a)  ನಾಗೇಂದ್ರ ಸಿಂಗ್.
b) ಬೆನೆಗಲ್ ರಾಮರಾವ.
c)  R.S. ಪಂಂಡಿತ.
d)  ಡಾ. ರಾಧಾಸಿಂಗ್.✔✔
📗📗📗📗📗📗📗📗📗📗📗📗📗📗📗
8)  ಮಹಾತ್ಮ ಗಾಂಧೀಜಿ ಅವರನ್ನು ಸೆರೆ ಮನೆಯಲ್ಲಿ ಇಟ್ಟಾಗ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ನಾಯಕತ್ವ ವಹಿಸಿದ್ದವರು ಯಾರು?
a) ಅರುಣಾ ಅಸಫ್ ಆಲಿ ✔✔
b) ಗುರು ಅರ್ಜುನ್ ದೇವ    
c) ಬಾಬಾ ಆಮ್ಟೆ
d) ದಯಾನಂದ ಸರಸ್ವತಿ
📗📗📗📗📗📗📗📗📗📗📗📗📗📗
9) ಸುಣ್ಣದಕಲ್ಲು, ಮರಳು ಮತ್ತು ಸೋಡಾ ಎಂಬ ರಸಾಯನಿಕವನ್ನು ಬೆರೆಸಿ ಯಾವ ವಸ್ತುವನ್ನು ತಯಾರಿಸುತ್ತಾರೆ?
a) ಸೀಸದ ಕಡ್ಡಿ      
b) ಗಾಜು✔✔
c) ಕಾಗದ             
d) ಫ್ಲೇವುಡ್
📗📗📗📗📗📗📗📗📗📗📗📗📗📗📗
10) ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಲೇಸರ್ ಚೆಕ್ ಪೊಸ್ಟ್ ಅನ್ನು ನಿರ್ಮಾಣ ಮಾಡಲಾಗಿದೆ? 
a) ಜಮ್ಮು ಮತ್ತು ಕಾಶ್ಮೀರ
b)  ಪಂಜಾಬ್
c) ಅರುಣಾಚಲ ಪ್ರದೇಶ
d) ಗುಜರಾತ್‌✔✔
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 27/10/2017

1) ಮೊದಲ ಬಾರಿಗೆ ಡಯಾನೋಸಾರ್ಸ್‌ ಜೊತೆಗೆ ಜೀವಿಸಿದ್ದ ಸಮುದ್ರದ ಅತೀ ದೊಡ್ಡ ಸರೀಸೃಪ ಇಚ್‌ತ್ಯೋಸಾರ್ಸ್‌ (ಹಲ್ಲಿ ಮೀನು)ನ ಪಳೆಯುಳಿಕೆ  ಭಾರತದಲ್ಲಿ ಎಲ್ಲಿ ಪತ್ತೆಯಾಗಿದೆ?
a) ತಿರುವನಂತಪುರಂ
b) ನಾಸಿಕ್
c) ಕಚ್ಛ್✔✔
d) ಅಂಡಮಾನ್
📗📗📗📗📗📗📗📗📗📗📗📗📗📗
2) ಯಾವ ರಾಜ್ಯ  ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ಮನೆಗಳನ್ನು ಒದಗಿಸಲು “ಶಹೀದ್
ಗ್ರಾಮ ವಿಕಾಸಯೋಜನೆ” ಪ್ರಾರಂಭಿಸಿದೆ?
a) ಝಾರ್ಖಂಡ್ ✔✔
b)  ಉತ್ತರಪ್ರದೇಶ
c) ಹರಿಯಾಣ
d) ಕೇರಳ
📗📗📗📗📗📗📗📗📗📗📗📗📗📗
3) “The Wrong Turn: Love and Betrayal in the Time of Netaji” ಪುಸ್ತಕದ ಲೇಖಕರು  ಯಾರು?
a) ಪೂನಂ ಸಿಂಗ್
b) ನಮಿತ್ ರಾಯ್ ಘೋಷ್✔✔
c) ಅರವಿಂದ್ ಬೋಸ್
d) ನರೇಶಂದೆ ಜ್ಯೋದ್
📗📗📗📗📗📗📗📗📗📗📗📗📗📗
4) ಯಾವ ರಾಜ್ಯ ಇತ್ತೀಚಿಗೆ  ಅಳಿವಿನಂಚಿನಲ್ಲಿರುವ  “ಕುರುಖ್” ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವನ್ನು ನೀಡಿದೆ?(ಪ್ರವೀಣ ಹೆಳವರ)
ಅ) ಪಶ್ಚಿಮ  ಬಂಗಾಳ✔✔
ಆ) ಆಂಧ್ರ ಪ್ರದೇಶ
ಇ) ತೆಲಂಗಾಣ
ಈ) ಓಡಿಶಾ
📗📗📗📗📗📗📗📗📗📗📗📗📗📗📗
5) ಗ್ರಾಮೀಣ ಬಡ ಜನರಿಗಾಗಿ “ಆದರ್ಶ ಗ್ರಾಮ ಯೋಜನೆ" ಯನ್ನು ಯಾವ ರಾಜ್ಯ   ಸರ್ಕಾರ ಜಾರಿಗೊಳಿಸಿದೆ?
a) ಮಹಾರಾಷ್ಟ್ರ
b)  ಅರುಣಾಚಲ ಪ್ರದೇಶ✔✔
c) ಉತ್ತರ ಪ್ರದೇಶ
d) ಒಡಿಸಾ
📗📗📗📗📗📗📗📗📗📗📗📗📗📗
6) ವಿಶ್ವದ ಮೊಟ್ಟ ಮೊದಲ ಸ್ತನ ಆರೋಗ್ಯದ ಬಗ್ಗೆ
ಮಾಹಿತ ನೀಡುವ ಆ್ಯಪ್ “ABC ಆಫ್ ಬ್ರೇಸ್ಟ್ ಹೆಲ್ತ” ನ್ನು ಯಾರು ಲೋಕಾರ್ಪಣೆ ಮಾಡಿದರು?
a) ಪ್ರಿಯಾಂಕಾ ಚೊಪ್ರಾ
b) ಅಮಿತಾಬ್ ಬಚ್ಚನ್ ✔✔
c) ಸ್ಮೃತಿ ಇರಾನಿ
d) ಸುಷ್ಮಾ ಸ್ವರಾಜ್
📗📗📗📗📗📗📗📗📗📗📗📗📗📗📗
7) “ವಿಶ್ವ  ಸಂತೋಷ ಸೂಚ್ಯಂಕ (World Happiness Index) 2017” ರಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
a) 118 ನೇ ಸ್ಥಾನ
b) 122 ನೇ ಸ್ಥಾನ✔✔
c) 140 ನೇ ಸ್ಥಾನ
d) 151 ನೇ ಸ್ಥಾನ
📗📗📗📗📗📗📗📗📗📗📗📗📗📗
8) ರೊಬೊಟ್ (‘ಸೋಫಿಯಾ ದ ಹ್ಯೂಮನಾಯಿಡ್’ ಎಂಬ ಹೆಸರಿನ) ಗೆ ನಾಗರಿಕತ್ವ ನೀಡಿದ ಪ್ರಪ್ರಥಮ ದೇಶ ಯಾವುದು?
a) ಜಪಾನ್
b) ಚೀನಾ
c) ಸೌದಿಅರೇಬಿಯಾ✔✔
d) ಅಮೇರಿಕ
📗📗📗📗📗📗📗📗📗📗📗📗📗📗📗
9) ಈ ಸಾಲಿನ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಯಾರಿಗೆ ಲಭಿಸಿದೆ ?
a) ರಾಮ್ ಗೋಪಾಲ್ ಬಜಾಜ್ ✔✔
b) ಕೆ.ಆರ್.ಸುಬ್ಬರಾವ್
c) ಚಿದಾನಂದ ಕಾಮತ್
d) ಧರ್ಮವೀರ ಭಾರತಿ
📗📗📗📗📗📗📗📗📗📗📗📗📗📗📗
10) ಇತ್ತೀಚೆಗೆ ಯಾವ ರಾಜ್ಯ ಕೃತಕ ಒಳನಾಡು ಬಂದರನ್ನು ಉದ್ದ ಕಾಲುವೆ ಮೂಲಕ ಸಮುದ್ರಕ್ಕೆ ಸಂಪರ್ಕಿಸಿದೆ?
a) ಆಂಧ್ರಪ್ರದೇಶ
b) ಛತ್ತೀಸ್‍ಗಢ
c) ಕರ್ನಾಟಕ
d) ರಾಜಸ್ಥಾನ✔✔
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 26/10/2017ರ ಪ್ರಶ್ನೋತ್ತರಗಳು


1) 'ಇನ್ಮುಂದೆ ಬದುಕಿರುವ ವ್ಯಕ್ತಿಗಳ ಪೊಟೊಗಳನ್ನ ಬ್ಯಾನರ್ ನಲ್ಲಿ ಹಾಕುವಂತಿಲ್ಲ' ಎಂದು  ಇತ್ತೀಚಿಗೆ ಮಹತ್ವದ ಆದೇಶ ಹೊರಡಿಸಿದ ಹೈಕೊರ್ಟ ಯಾವುದು?
a) ಮದ್ರಾಸ್ ಹೈಕೊರ್ಟ✔✔
b) ಕೊಲ್ಕತ್ತ ಹೈಕೊರ್ಟ
c) ಬಾಂಬೆ ಹೈಕೊರ್ಟ
d) ಅಲಹಾಬಾದ್ ಹೈಕೊರ್ಟ
📗📗📗📗📗📗📗📗📗📗📗📗📗
2) "ಇತಿಹಾಸನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು" ಎಂದವರು ಯಾರು?
a) ಗೋಪಾಲಕೃಷ್ಣ ಗೋಖಲೆ.
b) ಜವಾಹರಲಾಲ್ ನೆಹರೂ.
c) ಡಾ.ಬಿ.ಆರ್.ಅಂಬೇಡ್ಕರ್.✔✔
d) ಮಹಾತ್ಮಾ ಗಾಂಧೀಜಿ.
📗📗📗📗📗📗📗📗📗📗📗📗📗📗
3) ನೋಟು ಅಮಾನೀಕರಣ ಜಾರಿಗೆ ತಂದ ನವೆಂಬರ್‌ 8 ಅನ್ನು ಸ್ಮರಣೀಯವಾಗಿಸಲು ಕೇಂದ್ರ ಸರಕಾರ ಈ ಕೆಳಗಿನ ಆಚರಣೆಗೆ ನಿರ್ಧರಿಸಿದೆ.
a) ಕ್ಯಾಶಲೆಸ್ ಡೇ
b) ಕಪ್ಪು ಹಣ ವಿರೋಧಿ ದಿನ✔✔
c) ಕಪ್ಪು ಹಣ ಸ್ವಯಂ ಘೋಷಣಾ ದಿನ
d) ಪಾಯಿಂಟ್ ಆನ್ ಸೇಲ್ ಡೇ
📗📗📗📗📗📗📗📗📗📗📗📗📗📗📗
4) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ ಯಾವುದು?
 a) ಮಾಲ್ಡೀವ್ಸ್.✔✔
b) ಶ್ರೀಲಂಕಾ
c) ಬಾಂಗ್ಲಾದೇಶ
d) ಭೂತಾನ್
📗📗📗📗📗📗📗📗📗📗📗📗📗📗
5) ) ಭಾರತದ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ‘ಸಾ ಫಿಶ್‌’ ಅಳಿವಿನ ಹಂಚಿನಲ್ಲಿದೆ ಎಂದು ಮತ್ಸ್ಯತಜ್ಞರು ಗುರುತಿಸಿದ್ದಾರೆ. ಈ ಸಾ ಫಿಶ್‌ ಒಂದು.......?
a) ಸಮುದ್ರಜೀವಿ ✔✔
b) ಉಭಯವಾಸಿ
c) ಅರಣ್ಯವಾಸಿ
d) ದೊಡ್ಡ ಪಕ್ಷಿ
📗📗📗📗📗📗📗📗📗📗📗📗📗📗📗
6) ಅಮೆರಿಕ ಲೇಖಕ ಜಾರ್ಜ್‌ ಸೌಂಡರ್ಸ್‌ ಅವರಿಗೆ 2017ನೇ ಸಾಲಿನ ಮ್ಯಾನ್ ಆಫ್ ಬೂಕರ್ ಪ್ರಶಸ್ತಿ ಪ್ರಕಟಿಸಲಾಗಿದೆ. ಅವರ ಯಾವ ಕೃತಿಗೆ ಈ ಪ್ರಶಸ್ತಿ ಸಂದಿದೆ?(ಪ್ರವೀಣ ಹೆಳವರ)
a) ಟೆಂಥ್ ಆಫ್ ಡಿಸೆಂಬರ್
b) ಸಿವಿಲ್‌ವಾರ್‌ ಲ್ಯಾಂಡ್‌ ಇನ್‌ ಬ್ಯಾಡ್‌ ಡೆಕ್‌ಲೈನ್‌
c) ಲಿಂಕೋಲ್ನ್ ಇನ್ ದ ಬಾರ್ಡೊ✔✔
d) ಕಾಮ್‌ಕಾಮ್‌
📗📗📗📗📗📗📗📗📗📗📗📗📗📗📗
7)  ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೊದ ನೂತನ ಮಹಾನಿರ್ದೇಶಕಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಹಮದ್ ಅಲ್ ಕವಾರಿ
b) ಇರಿನಾ ಬೊಕೊವೊ
c) ಜಾನ್ ಥಾಪರ್‌
d) ಆಡ್ರಿ ಅಸೋಲೆ✔✔
📗📗📗📗📗📗📗📗📗📗📗📗📗📗📗
8) ಅಕ್ಟೋಬರ್ 15 ಅಂತರರಾಷ್ಟ್ರೀಯ ಗ್ರಾಮೀಣ ಮಹಿಳೆಯರ ದಿನವಾದರೆ, ಅಕ್ಟೋಬರ್‌ 16 ಅನ್ನು ಯಾವ ದಿನವನ್ನಾಗಿ ಅಚರಣೆ ಮಾಡಲಾಗುತ್ತದೆ ಎಂಬುದನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ? 
a) ವಿಶ್ವ ನೀರಿನ ದಿನ
b) ವಿಶ್ವ ಅರಣ್ಯ ದಿನ
c) ವಿಶ್ವ ಭೂಮಿ ದಿನ
d) ವಿಶ್ವ ಆಹಾರ ದಿನ✔✔
📗📗📗📗📗📗📗📗📗📗📗📗📗📗📗
9) ಅಂತರರಾಷ್ಟ್ರೀಯ ಉತ್ಸವವಾಗಿ ಆಚರಿಸಲಾಗುತ್ತಿರುವ ಭಾರತ ಸರ್ಕಾರದ ’ಜಲ ಸಪ್ತಾಹ’ ಕಾರ್ಯಕ್ರಮವನ್ನು ಯಾವ ವರ್ಷದಿಂದ ಆಚರಿಸಲಾಗುತ್ತಿದೆ?
a) 2012 ✔✔
b) 2013
c) 2014
d) 2015
📗📗📗📗📗📗📗📗📗📗📗📗📗📗📗
10) ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ ಈ ಕೆಳಕಂಡ ಯಾವ ಮಹಾನಗರದಲ್ಲಿದೆ ?
a) ಬೆಂಗಳೂರು
b) ಪುಣೆ✔✔
c) ನವದೆಹಲಿ  
d) ಲೂಧಿಯಾನ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
25/10/2017ರ ಪ್ರಶ್ನೋತ್ತರಗಳು
1) ಇತ್ತೀಚಿಗೆ ಹಾರ್ಲೆ ಡೇವಿಡ್ಸನ್ ಮೋಟಾರ್ ಬೈಕ್ ಕಂಪನಿ"ಯು ಸ್ಟ್ರೀಟ್ ಬಾಬ್, ಫ್ಯಾಟ್ ಬಾಬ್, ಫ್ಯಾಟ್ ಬಾಯ್, ಮತ್ತು ಹೆರಿಟೇಜ್ ಕ್ಲಾಸ್ ಎಂಬ ನಾಲ್ಕು ಹೊಸ ಮಾದರಿ ಬೈಕ್ ಗಳನ್ನು ಪರಿಚಯಿಸಿದ್ದು ಇದು ಯಾವ ದೇಶದ ಕಂಪನಿ ?
a) ರಷ್ಯಾ
b) ಅಮೇರಿಕ ✔✔
c) ಜಪಾನ್
d) ಇಂಗ್ಲೆಂಡ್
📗📗📗📗📗📗📗📗📗📗📗📗📗📗
2) "ಭಾರತ್‌ಮಾಲಾ" ಯೋಜನೆಯಡಿ ಎಷ್ಟು  ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ?
a) 36,500ಕಿಲೋ ಮೀಟರ್‌
b) 38,400ಕಿಲೋ ಮೀಟರ್‌
c) 34,800ಕಿಲೋ ಮೀಟರ್‌ ✔✔
d) 40,000ಕಿಲೋ ಮೀಟರ್‌
📗📗📗📗📗📗📗📗📗📗📗📗
3)  ನಗದು ವಹಿವಾಟಿಗೆ ಗುಡ್ ಬೈ ಹೇಳಿ ದಕ್ಷಿಣ ಭಾರತದ ಪ್ರಪ್ರಥಮ ಕ್ಯಾಶ್‌ಲೆಸ್ ಗ್ರಾಮ ಎಂಬ ಖ್ಯಾತಿಗೆ ಭಾಜನವಾಗಿದ್ದ ಗ್ರಾಮ ಯಾವುದು?
a) ಇಬ್ರಾಹಿಂಪುರ್✔✔
b) ಕೊಟ್ಟಾಯಮ್
c) ಪೊತನಿಕ್ಕಡ
d) ಬಾಡಗಂಡಿ
📗📗📗📗📗📗📗📗📗📗📗📗📗📗
4)  ವಿಶ್ವದ ಅತೀ ದೊಡ್ಡ ಕಡಲು ದಂಡೆ ಹೊಂದಿರುವ ದೇಶ ಯಾವುದು?(ಪ್ರವೀಣ ಹೆಳವರ)
a) ಜಪಾನ್✔✔
b) ಚೀನಾ
c) ಭಾರತ
d) ಜರ್ಮನಿ
📗📗📗📗📗📗📗📗📗📗📗📗📗📗📗
5) ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಯಾರು?
ಜವಾಹರಲಾಲ್ ನೆಹರೂ
a) ಜೆ.ಬಿ. ಕೃಪಲಾನಿ✔✔
b) ಡಬ್ಲ್ಯು.ಸಿ.ಬ್ಯಾನರ್ಜಿ
c) ಚಿತ್ತರಂಜನ್ ದಾಸ್
d) ಗಾಂಧೀಜಿ
📗📗📗📗📗📗📗📗📗📗📗📗📗📗
6) ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ  ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿರುವ ದೇಶ ಯಾವುದು?
a) ಚೀನಾ
b) ಭಾರತ ✔✔
c) ಕೆನಡಾ
d) ಅಮೇರಿಕ
📗📗📗📗📗📗📗📗📗📗📗📗📗📗
7) ಕರ್ನಾಟಕದಲ್ಲಿ ಮೊಟ್ಟಮೊದಲ ಕಾಗದ ಕಾರ್ಖಾನೆ ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು?
a) ನಂಜನಗೂಡು
b) ಭದ್ರಾವತಿ✔✔
c) ದಾಂಡೇಲಿ
d) ಕುಶಾಲನಗರ
📗📗📗📗📗📗📗📗📗📗📗📗📗📗
8) ದಕ್ಷಿಣ ಭಾರತದ ಪಶ್ಚಿಮ ತೀರ ಪ್ರದೇಶಗಳು ಸೇರಿದಂತೆ ಕೇರಳದಲ್ಲಿ ಆಳ್ವಿಕೆ ನಡೆಸಿದ್ದ ರಾಜಮನೆತನ ‘ಚೇರರ’ ರಾಜಧಾನಿ ಯಾವುದು?
a) ವಾಂಜಿ ✔✔
b) ನೆರಿವಾಯಲ್
c) ತಿರುವನಂತಪುರಂ
d) ಕೊಟ್ಟಾಯಂ
📗📗📗📗📗📗📗📗📗📗📗📗📗📗📗
9) ಉದ್ದೇಶಿತ ಎತ್ತಿನಹೊಳೆ ಯೋಜನೆ ಈ ಕೆಳಕಂಡ ಯಾವ ಜಿಲ್ಲೆಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸುವುದಿಲ್ಲ?
a) ಚಿಕ್ಕಬಳ್ಳಾಪುರ
b) ಕೋಲಾರ
c) ರಾಮನಗರ
d) ಚಿತ್ರದುರ್ಗ✔✔
📗📗📗📗📗📗📗📗📗📗📗📗📗📗📗
10) ರಂಗಾಯಣ ನಾಟಕ ಸಂಸ್ಥೆಯು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ?
a) ಮೈಸೂರು
b) ಶಿವಮೊಗ್ಗ
c) ಧಾರವಾಡ
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗


ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
24/10/2017ರ ಪ್ರಶ್ನೋತ್ತರಗಳು
1) ಇಂದು ವಿಶ್ವ ಅಭಿವೃದ್ಧಿ ಮಾಹಿತಿ ದಿನ.
ಇದನ್ನು  ಪ್ರಥಮ ಬಾರಿಗೆ ಯಾವಾಗ ಆಚರಿಸಲಾಯಿತು?
a) ಅಕ್ಟೋಬರ್ 24, 1971
b) ಅಕ್ಟೋಬರ್‌ 24, 1972
c) ಅಕ್ಟೋಬರ್‌ 24, 1973✔✔
d) ಅಕ್ಟೋಬರ್‌ 24, 1974
📗📗📗📗📗📗📗📗📗📗📗📗📗
2) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?
a) ಪೆರಿಸ್ಕೋಪ್ ✔✔
b) ಟೆಲಿಡೊಸ್ಕೊಪ್
c) ಸೊನಾರ್
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗
3) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
a) ಧ್ಯಾನ್ ಚಂದ್
b) ಸಚಿನ್ ತೆಂಡೂಲ್ಕರ್✔✔
c) ವಿಶ್ವನಾಥನ್ ಆನಂದ
d) a) ಮಾತ್ರ
📗📗📗📗📗📗📗📗📗📗📗📗📗📗
4) ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ(ಎನ್.ಬಿ.ಎಫ್.ಸಿ)ಟ್ಯಾಬ್ ಕ್ಯಾಪಿಟಲ್ ನ ಬ್ರ್ಯಾಂಡ್ ರಾಯಭಾರಿಯಾಗಿ ಯಾರು ನೇಮಕವಾಗಿದ್ದಾರೆ?
a) ರಣಬೀರ್ ಕಪೂರ್.
b) ಅಮಿತಾಭ್ ಬಚ್ಚನ್
c) ಪ್ರಿಯಾಂಕಾ ಚೊಪ್ರ
d) ರಿತೇಶ್ ದೇಶ್ ಮುಖ್.✔✔
📗📗📗📗📗📗📗📗📗📗📗📗📗
5) ಭಾರತದ ಮೊಟ್ಟಮೊದಲನೇ ಜೈವಿಕ ಶುದ್ಧೀಕರಣ ಘಟಕವನ್ನು ಮಹಾರಾಷ್ಟ್ರದ ಯಾವ ನಗರದಲ್ಲಿ ನಿರ್ಮಾಣ ಮಾಡಲಾಗಿದೆ? 
a) ಪುಣೆ✔✔           
b) ಸೊಲ್ಲಪುರ
c) ನಾಗಪುರ      
d) ಮುಂಬೈ
📗📗📗📗📗📗📗📗📗📗📗📗📗📗📗
6) ನೀತಿ ಆಯೋಗದ ಕಾಯಂ ಸದಸ್ಯರಾದ, ವಿಜ್ಞಾನಿ ವಿಜಯ್ ಕುಮಾರ್ ಸಾರಸ್ವತ್ ಅವರನ್ನು ಯಾವ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಲಾಗಿದೆ? 
a) ಹಿಂದೂ ಬನಾರಸ ವಿಶ್ವವಿದ್ಯಾಲಯ
b) ಕೇಂದ್ರಿಯ ತಂತ್ರಜ್ಞಾನ ವಿಶ್ವವಿದ್ಯಾಲಯ
c) ಕೇಂದ್ರಿಯ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ(ಪ್ರವೀಣ ಹೆಳವರ)
d)  ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ✔✔
📗📗📗📗📗📗📗📗📗📗📗📗📗📗
7) ಹಣಕಾಸು ನೆರವು ನೀಡುವ ಕೇಂದ್ರ ಸರ್ಕಾರದ ‘ಇಂದಿರಾಗಾಂಧಿ ಮಾತೃತ್ವ ಸಹ­ಯೋಗ ಯೋಜನೆ’(ಐ.ಜಿ.ಎಂ.­ಎಸ್.ವೈ.) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?  
a) ಗರ್ಭಿಣಿಯರು ಮತ್ತು ಬಾಣಂತಿಯರು✔✔
b) ನವ ವಿವಾಹಿತೆಯರು
c) ಮೂರು ಮಕ್ಕಳಿರುವ ತಾಯಂದಿರು
d) 50 ವರ್ಷ ಮೇಲ್ಪಟ್ಟ ತಾಯಂದಿರು
📗📗📗📗📗📗📗📗📗📗📗📗📗📗
8) ಪ್ರತಿಷ್ಠಿತ  ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲಿ ಪ್ರಶಸ್ತಿ ಯನ್ನು ಈ ಸಲ ಯಾರಿಗೆ ನೀಡಲಾಗಿದೆ? 
a) ಡಬ್ಲ್ಯೂಎಪ್‌ಎನ್‌ ಪ್ಯಾರ್ಟನ್‌
b) ಡೇವಿಡ್ ಅಟೆನ್‌ಬರೋ
c) ಸಂಜಯ್ ಗುಬ್ಬಿ✔✔
d) ಮೊಹಮ್ಮದ್ ಆಲಿ ನವಾಜ್‌
📗📗📗📗📗📗📗📗📗📗📗📗📗📗
9) ವಿದೇಶಗಳಿಗೆ ಹೆಚ್ಚು ರಫ್ತಾಗುವ ‘ಬೈಗಂಪಲ್ಲಿ ಮಾವಿನ ಹಣ್ಣ’ನ್ನು ಯಾವ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ?
a) ಆಂಧ್ರಪ್ರದೇಶ-ತೆಲಂಗಾಣ✔✔
b) ಕೇರಳ-ತಮಿಳುನಾಡು
c) ತಮಿಳುನಾಡು-ಕರ್ನಾಟಕ
d) ಗೋವಾ-ಕರ್ನಾಟಕ
📗📗📗📗📗📗📗📗📗📗📗📗📗📗
10) ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕರ್ನಾಟಕದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
a) ಬೈಸಾಕಿ
b) ಅಂದೀಸ್
c) ಕಾಫಿಯ ಹೂಮಳೆ✔✔
d) ಮುಂಗಾರು
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
23/10/2017ರ ಪ್ರಶ್ನೋತ್ತರಗಳು
1) ಏಷ್ಯಾ ಕಪ್‌ ಹಾಕಿ 2017 ಫೈನಲ್‌ ಪಂದ್ಯದಲ್ಲಿ ಭಾರತ ಯಾವ ದೇಶದ ವಿರುದ್ಧ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ?
a) ಪಾಕಿಸ್ತಾನ
b) ಬಾಂಗ್ಲಾದೇಶ
c) ಮಲೇಷಿಯಾ ✔✔
d) ಶ್ರೀಲಂಕಾ
📗📗📗📗📗📗📗📗📗📗📗📗📗📗📗
2) ಏಷ್ಯಾ ಕಪ್‌ ಹಾಕಿ 2017ನ್ನು ಗೆದ್ದಿರುವ ಭಾರತ ಎಷ್ಟು ವರ್ಷಗಳ ನಂತರ ಮತ್ತೆ ಏಷ್ಯಾ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸಿದೆ?
a) 8
b) 10✔✔
c) 12
d) 14
📗📗📗📗📗📗📗📗📗📗📗📗📗📗📗
3) ಭಾರತ ಸಂವಿಧಾನ ತಿದ್ದುಪಡಿಯನ್ನು ಈ ಕೆಳಗಿನಂತೆ ಮಾಡಲಾಗುವುದು________.
a) ಸಾಮಾನ್ಯ ಬಹುಮತದ ಮೂಲಕ.
b) ಎರಡು ಮೂರಾಂಶ ಬಹುಮತ ಮತ್ತು ಅರ್ಧದಷ್ಟು             ರಾಜ್ಯ ವಿಧಾನ ಮಂಡಳಗಳ ಮೂಲಕ.
c) ಎರಡು ಮೂರಾಂಶದ ಬಹುಮತದ ಮೂಲಕ.
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗📗
4) ಮಕರ ಸಂಕ್ರಾಂತಿ ವೃತ್ತ ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವೆ ಇರುವ ವಲಯಕ್ಕೆ ಏನೆಂದು ಕರೆಯಲಾಗುತ್ತದೆ ?
a) ಉಷ್ಣವಲಯ✔✔
b) ಸಮಶೀತೋಷ್ಣವಲಯ
c)  ಶೀತವಲಯ
d) ಟಂಡ್ರಾ
📗📗📗📗📗📗📗📗📗📗📗📗📗📗📗
5) ವಿವಾದಗಳಿಂದ ಸುದ್ದಿಯಲ್ಲಿದ್ದ 'ಎತ್ತಿನ ಹೊಳೆ' ಇದು ಯಾವ ನದಿಯ ಉಪನದಿಯಾಗಿದೆ?
a) ನೇತ್ರಾವತಿ✔✔
b) ಶರಾವತಿ
c) ಶಿಂಷಾ
d) ಕಾವೇರಿ
📗📗📗📗📗📗📗📗📗📗📗📗📗📗📗
6) 370ನೇ ವಿಧಿಯ ಅನುಸಾರ ವಿಶೇಷ ಸ್ಥಾನ ಹೊಂದಿರುವ ರಾಜ್ಯ ಯಾವುದು?
a) ಗೋವಾ                        
b) ಪುದುಚೇರಿ
c) ಜಮ್ಮು ಮತ್ತು ಕಾಶ್ಮೀರ✔✔        
d) ಯಾವುದು ಅಲ್ಲ
📗📗📗📗📗📗📗📗📗📗📗📗📗📗📗
7) ಅವಿರೋಧವಾಗಿ ಆಯ್ಕೆಯಾದ ಭಾರತದ ಮೊಟ್ಟಮೊದಲ ರಾಷ್ಟ್ರಪತಿ ಯಾರು?
a) ರಾಜೇಂದ್ರ ಪ್ರಸಾದ್
b) ಗ್ಯಾನಿ ಜೈಲ್ ಸಿಂಗ್
c) ನೀಲಂ ಸಂಜೀವ ರೆಡ್ಡಿ ✔✔
d) ಪ್ರತಿಭಾ ಪಾಟೀಲ್
📗📗📗📗📗📗📗📗📗📗📗📗📗📗📗
8)  ಅಕ್ಟೋಬರ್ 16, 2017 ರಂದು  ಬಿಡುಗಡೆಯಾದ ನೂತನ ಫಿಫಾ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತ ಪುಟಬಾಲ್ ತಂಡ ಯಾವ ಸ್ಥಾನದಲ್ಲಿದೆ?
A. 127 ನೇ
B. 105 ನೇ.✔✔
C. 116 ನೇ.
D. 156 ನೇ.
📗📗📗📗📗📗📗📗📗📗📗📗📗📗
9) ವಾಹನ ಚಾಲಕರ ಜಾಗದಲ್ಲಿ ಹೆಚ್ಚೆಚ್ಚು ಮಹಿಳೆಯರು ಇರಬೇಕು ಎಂಬ ಉದ್ದೇಶದಿಂದ ಯಾವ ರಾಜ್ಯ ಸರ್ಕಾರವು "ಆವೋ ಭಯ್ಯಾ ತುಮೆ ಸೈರ್ ಕರೊ" ಹೆಸರಿನ ಅಭಿಯಾನಕ್ಕೆ ಚಾಲನೆ ನೀಡಲಿದೆ?(ಪ್ರವೀಣ ಹೆಳವರ)
a)ಉತ್ತರ ಪ್ರದೇಶ
b) ಗುಜರಾತ್
c) ಮಧ್ಯಪ್ರದೇಶ ✔✔
d) ಮಹಾರಾಷ್ಟ್ರ
📗📗📗📗📗📗📗📗📗📗📗📗📗📗📗
10)ಈ ಕೆಳಗಿನ ಯಾವ ರಾಜ್ಯವು ಮಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಅಂತರಾಷ್ಟ್ರೀಯ  ಗಡಿರೇಖೆಯನ್ನು ಹೊಂದಿದೆ?
a) ತ್ರಿಪುರ
b) ಮಿಜೋರಾಂ ✔✔
c) ಓಡಿಸ್ಸಾ
d) ಮಣಿಪುರ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
22/10/2017ರ ಪ್ರಶ್ನೋತ್ತರಗಳು
1) ಉತ್ತರ ಅಮೇರಿಕಾದ ವೆನೆಜುವೆಲಾದಲ್ಲಿ ನಡೆಯುವ ಫೈವ್‌ ಕಾಂಟಿನೆಂಟ್ಸ್‌ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ಗೆ ಅಧಿಕೃತವಾಗಿ ಆಯ್ಕೆಯಾದ ಏಕೈಕ ಕನ್ನಡ ಚಿತ್ರ ಯಾವುದು?
a) ವೈರ
b) ಕಾಫಿ ತೋಟ
c) ಸರ್ವಸ್ವ ✔✔
d) ದಯವಿಟ್ಟು ಗಮನಿಸಿ
📗📗📗📗📗📗📗📗📗📗📗📗📗📗📗
2) ಇತ್ತೀಚಿಗೆ ಬ್ರಿಟನ್ ಕನ್ನಡಿಗರಿಂದ ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಪಡೆದ ನಟ ಯಾರು?
a) ಪುನೀತ ರಾಜಕುಮಾರ
b) ದರ್ಶನ್ ತೂಗುದೀಪ್ ✔✔
c) ಅಮೀರ್ ಖಾನ್
d) ಅಕ್ಷಯ ಕುಮಾರ್
📗📗📗📗📗📗📗📗📗📗📗📗📗📗📗
3) ಜೀವಿಗಳ ಕುರಿತಂತೆ 'ಉಳಿವಿಗಾಗಿ ಹೋರಾಟ' (struggle for existence) ಇದು ಯಾರ ಪ್ರಸಿದ್ದ ಹೇಳಿಕೆಯಾಗಿದೆ.
a) ಜಗದೀಶ ಚಂದ್ರ ಬೋಸ್.
b) ವಿಕ್ಟರ್ ಹ್ಯೂಗೋ ಡಿವ್ರಿಸ್.
c) ಚಾರ್ಲ್ಸ ಡಾರ್ವಿನ್.✔✔
d) ಬ್ಯಾಪಿಸ್ಟ್ ಲಾಮಾರ್ಕ್.
📗📗📗📗📗📗📗📗📗📗📗📗📗📗📗
4) ಕರ್ನಾಟಕ ಸರ್ಕಾರವು ಎಷ್ಟನೇ ತರಗತಿ ವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ?
a) 1 ರಿಂದ 5 ನೇ ತರಗತಿವರೆಗೆ.
b) 1 ರಿಂದ 7 ನೇ ತರಗತಿವರೆಗೆ.
c) 2 ರಿಂದ 7 ನೇ ತರಗತಿವರೆಗೆ.
d) 1 ರಿಂದ 10 ನೇ ತರಗತಿವರೆಗೆ.✔✔
📗📗📗📗📗📗📗📗📗📗📗📗📗📗📗
5)  ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂದಿಸಿದ್ದು?
ಎ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕೆ ಕಾರ್ಯಕ್ರಮ✔✔
ಬಿ. ದೇಶಾದ್ಯಂತ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಸಿ. ಬಾಹ್ಯಾಕಾಶದಲ್ಲಿ ಭೂಮಾದರಿಯ ಗ್ರಹಗಳ ಅನ್ವೇಷಣೆ(ಪ್ರವೀಣ ಹೆಳವರ)
ಡಿ. ಹೊಸ ಶಿಕ್ಷಣ ನೀತಿ
📗📗📗📗📗📗📗📗📗📗📗📗📗📗
6) ದೇಶದಲ್ಲೇ ಅತೀ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ ಯಾವುದು?
a) ಉತ್ತರ ಪ್ರದೇಶ ✔✔
b) ಮಧ್ಯ ಪ್ರದೇಶ
c) ಮಹಾರಾಷ್ಟ್ರ
d) ಆಂಧ್ರಪ್ರದೇಶ
📗📗📗📗📗📗📗📗📗📗📗📗📗📗📗
7) ಅತಿ ಹೆಚ್ಚು ಬಾರಿ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟ ರಾಜ್ಯ ಯಾವುದು?
a) ಪಂಜಾಬ
b) ಉತ್ತರಪ್ರದೇಶ ✔✔
c) ಮಹಾರಾಷ್ಟ್ರ
d) ಆಂಧ್ರಪ್ರದೇಶ
📗📗📗📗📗📗📗📗📗📗📗📗📗📗
8) ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?
a) 42 ನೇ ತಿದ್ದುಪಡಿ
b) 69 ನೇ ತಿದ್ದುಪಡಿ
c) 44 ನೇ ತಿದ್ದುಪಡಿ✔✔
d) 61 ನೇ ತಿದ್ದುಪಡಿ
📗📗📗📗📗📗📗📗📗📗📗📗📗📗📗
9)  ಮಣ್ಣಿನ ಮಡಿಕೆ ತಯಾರಿಕೆ ಪ್ರಾರಂಭವಾದದ್ದು ಯಾವ ಯುಗದಲ್ಲಿ?
a) ನವ ಶಿಲಾಯುಗ✔✔
b) ಮಧ್ಯ ಶಿಲಾಯುಗ
c) ಹಳೆಶಿಲಾಯುಗ
d) ಕಂಚಿನ ಯುಗ
📗📗📗📗📗📗📗📗📗📗📗📗📗📗📗
10) ನೀಲಿ ಬೆಳೆಗಾರರ ದಂಗೆ ಯಾವ ರಾಜ್ಯದಲ್ಲಿ ನೆಡೆಯಿತು?
a) ಬಂಗಾಳ✔✔
b) ತಮಿಳುನಾಡು
c) ಉತ್ತರ ಪ್ರದೇಶ
d) ಪಂಜಾಬ್
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
21/1/2017ರ ಪ್ರಶ್ನೋತ್ತರಗಳು
1) ಬಹುಮನಿ ಸುಲ್ತಾನರ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ಮಹಮ್ಮದ್ ಗವಾನ್‌ ಯಾವ ದೇಶದಿಂದ ಭಾರತಕ್ಕೆ ವಲಸೆ ಬಂದದ್ದು ?
a) ಇರಾನ್ 
b) ಆರೇಬಿಯಾ
c) ಪರ್ಷಿಯಾ✔✔
d) ಈಜಿಪ್ಟ್
📗📗📗📗📗📗📗📗📗📗📗📗📗📗
2) ವೈದ್ಯರು  ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರೋಗಿಗಳಿಗೆ ಯಾವ ವಿಟಮಿನ್ ನೀಡುತ್ತಾರೆ?
a) ವಿಟಮಿನ್ ಎ
b) ವಿಟಮಿನ್ ಕೆ ✔✔
c) ವಿಟಮಿನ್ ಸಿ  
d) ವಿಟಮಿನ್ ಇ
📗📗📗📗📗📗📗📗📗📗📗📗📗📗
3) 'ದೋಹೆ' ಎಂಬ ದ್ವಿಪದಿಗಳನ್ನು ರಚಿಸಿದವರು ಯಾರು?(ಪ್ರವೀಣ ಹೆಳವರ)
a) ಕಬೀರದಾಸ್.✔✔
b) ತುಳಸೀದಾಸ್.
c) ರಾಮದಾಸ್.
d) ಸುರ್ ದಾಸ್.
📗📗📗📗📗📗📗📗📗📗📗📗📗📗
4) ಛತ್ತೀಸ್‌ಗಡ ರಾಜ್ಯದ ಯಾವ ಪ್ರದೇಶದಲ್ಲಿ ಭಾರತ ಸರ್ಕಾರಕ್ಕೆ ಒಳಪಟ್ಟಿರುವ  ‘ಭಾರತ್ ಅಲ್ಯೂಮಿನಿಯಂ ಕೈಗಾರಿಕೆ’ ಇದೆ?
a) ಕೂರ್ಬ✔✔
b) ರೇನುಕೂಟ
c) ಶಾಹದೋಲ್
d) ಕೋರಾಪುಟ್
📗📗📗📗📗📗📗📗📗📗📗📗📗📗📗
5) ಮೀರಬಾಯಿಯ ಕೀರ್ತನೆಗಳ ಅಂಕಿತ ಯಾವುದು?
a) ದ್ವಾರಕಾಪತಿ.
b) ಗಿರಿಧರ ಗೋಪಾಲ.✔✔
c) ಗೋಪಾಲ ಪ್ರಿಯ.
d) ಮನಮೋಹನ ಮುರಳಿ.
📗📗📗📗📗📗📗📗📗📗📗📗📗📗📗
6) ಈ ಕೆಳಗಿನ ಯಾವ ಭಾರತೀಯ ಮೂಲದ 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ?
a) ಅಕ್ಷಯ್ ರಾಠೋಡ.
b) ಅಕ್ಷಯ್ ರುಪರೇಲಿಯಾ.✔✔
c) ಮಹೇಶ್ ರುಪರೇಲಿಯಾ.
d) ಆಕಾಶ್ ರುಪರೇಲಿಯಾ.
📗📗📗📗📗📗📗📗📗📗📗📗📗📗📗
7) ವಿಶ್ವದ ಅತ್ಯಂತ ದುಬಾರಿ ನಗರ ಯಾವುದು?
a) ಲುವಾಂಡಾ.✔✔
b) ಲಂಡನ್.
c) ಪ್ಯಾರಿಸ್.
d) ಲಾಸ್ ಏಂಜಲೀಸ್.
📗📗📗📗📗📗📗📗📗📗📗📗📗📗📗
8) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?
a) ವಯೂರವರ್ಮ
b) ಕಾಕುತ್ಸವರ್ಮ✔✔
c) ತಿರುಮಲವರ್ಮ
d) ವಯೂರಶರ್ಮ
📗📗📗📗📗📗📗📗📗📗📗📗📗📗
9) ಈ ಕೆಳಗಿನ ಯಾವ ವ್ಯಕ್ತಿ ಮಾಳವೀಯರವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಸ್ಥಾಪಿಸಲು ಸಹಾಯ ಮಾಡಿದ್ದರು?
a) ಬಾಲ್ ಗಂಗಾಧರ್ ತಿಲಕ್.
b) ಗೋಪಾಲ ಕೃಷ್ಣ ಗೋಖಲೆ.
c) ಆ್ಯನಿಬೆಸೆಂಟ್.✔✔
d) ಮದರ್ ಥೆರೆಸಾ.
📗📗📗📗📗📗📗📗📗📗📗📗📗📗📗
10)  ಈ ಕೆಳಕಂಡ ಯಾವ ಋತುವಿನಲ್ಲಿ ಮಾನವನಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನ ಅಂಶ ಬೇಕಾಗುತ್ತದೆ?
a) ಬೇಸಿಗೆ ಕಾಲ
b) ಮಳೆಗಾಲ
c) ಚಳಿಗಾಲ ✔✔
d) ಮೇಲಿನ ಎಲ್ಲವೂ
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
19/10/2017ರ ಪ್ರಶ್ನೋತ್ತರಗಳು
1) ವಿಶ್ವದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶ ಹಾಗೂ ಅತಿ ಕಡಿಮೆ ಜನಸಾಂದ್ರತೆ ಇರುವ ದೇಶಗಳನ್ನು ಗುರುತಿಸಿ?
a) ಚೀನಾ-ಫಿನ್‌ಲ್ಯಾಂಡ್‌
b) ಭಾರತ-ಸಿರಿಯಾ
c) ಮೊನ್ಯಾಕೊ-ಮಂಗೋಲಿಯಾ✔✔
d) ಬ್ರೆಜಿಲ್-ಇಂಡೋನೇಷ್ಯಾ
📗📗📗📗📗📗📗📗📗📗📗📗📗📗
2) ಓಜೋನಲ್ಲಿರುವ ಆಮ್ಲಜನಕದ ಪರಮಾಣುಗಳ ಸಂಖ್ಯೆ ಎಷ್ಟು ?
a) ನಾಲ್ಕು
b) ಒಂದು
c) ಎರಡು
d) ಮೂರು✔✔
📗📗📗📗📗📗📗📗📗📗📗📗📗📗📗
3) ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ 'ಪೆನ್ಸಿಲ್’(PENCIL) ಎಂಬ ವಿಶೇಷ ವೆಬ್‌ಸೈಟ್‌ (ಪೋರ್ಟಲ್) ಈ ಕೆಳಕಂಡ ಯಾರಿಗೆ ಸಂಬಂಧಿಸಿದೆ?(ಪ್ರವೀಣ ಹೆಳವರ)
a) ಬಾಲಕಾರ್ಮಿಕರು✔✔
b) ಹಿರಿಯ ನಾಗರಿಕರು
c) ಮಹಿಳೆಯರು
d) ಕೃಷಿ ಕಾರ್ಮಿಕರು
📗📗📗📗📗📗📗📗📗📗📗📗📗📗📗
4)  “ಸಲೀಮ್ ಅಲಿ ರಾಷ್ಟ್ರೀಯ ಉದ್ಯಾನವನ” ಎಲ್ಲಿದೆ?
a) ಶ್ರೀನಗರ✔✔
b) ಭುವನೇಶ್ವರ
c) ಇಂದೋರ್
d) ಜೈಪುರ
📗📗📗📗📗📗📗📗📗📗📗📗📗📗📗
5) ಗ್ರಾ.ಪಂ., ತಾ.ಪಂ. ಮತ್ತು ಜಿಲ್ಲಾ ಪಂಚಾಯ್ತಿ ಸಭೆಗೆ ಅಧ್ಯಕ್ಷರು ಗೈರು ಹಾಜರಾದಾಗ ಸಭೆಯನ್ನು ಯಾರ ಅಧ್ಯಕ್ಷತೆಯಲ್ಲಿ ನಡೆಸುತ್ತಾರೆ?
a) ಉಪಾಧ್ಯಕ್ಷರು✔✔
b) ಹಿರಿಯ ಸದಸ್ಯ
c) ಸರ್ಕಾರಿ ಅಧಿಕಾರಿಗಳು
d) ಶಾಸಕರು
📗📗📗📗📗📗📗📗📗📗📗📗📗📗📗
6) ಉಸ್ತಾದ್ ಆಲಿ ಅಹಮ್ಮದ್ ಹುಸೇನ್ ಅವರು ಯಾವ ವಾದ್ಯವನ್ನು ನುಡಿಸುವುದರಲ್ಲಿ ಖ್ಯಾತರಾಗಿದ್ದರು?
a) ತಬಲ
b) ಘಟ
c) ಶಹನಾಯ್✔✔
d) ಹಾರ್ಮೋನಿಯಂ
📗📗📗📗📗📗📗📗📗📗📗📗📗📗📗
7) ಈ ಕೆಳಕಂಡ ಯಾವ ದೇಶಗಳ ಮೂಲಕ ಭೂಮಧ್ಯರೇಖೆ ಹಾದು ಹೋಗಿದೆ?
a) ಇಂಡೋನೇಷ್ಯಾ
b) ಕೊಲಂಬಿಯಾ
c) ಕೀನ್ಯಾ
d) ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗📗
8) ಅರಿಶಿಣ ಸಸ್ಯದ ಯಾವ ಭಾಗದಿಂದ 'ಅರಿಶಿಣ'ವನ್ನು ಪಡೆಯಲಾಗುತ್ತದೆ?
a) ಕಾಂಡ✔✔
b) ಬೇರು
c) ಎಲೆ
d) ಹೂವು
📗📗📗📗📗📗📗📗📗📗📗📗📗📗📗
9) ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಆಧರಿಸಿ ರಚನೆ ಮಾಡಿದ ಮೊಟ್ಟಮೊದಲ ರಾಜ್ಯ ಯಾವುದು?
a) ಆಂಧ್ರಪ್ರದೇಶ ✔✔
b) ತಮಿಳುನಾಡು
c) ಉತ್ತರಪ್ರದೇಶ
d) ಮಧ್ಯ ಪ್ರದೇಶ
📗📗📗📗📗📗📗📗📗📗📗📗📗📗
10) 2017ರ ಮ್ಯಾನ್ ಬೂಕರ್ ಪ್ರಶಸ್ತಿ ಜಾರ್ಜ್ ಸೌಂಡರ್ಸ್ ಇವರ 'ಲಿಂಕನ್ ಇನ್ ಬಾರ್ಡೊ' ಕಾದಂಬರಿಗೆ ಲಭಿಸಿದೆ. ಇವರು ಯಾವ ದೇಶದವರಾಗಿದ್ದಾರೆ?
a) ರಷ್ಯಾ
b) ಜರ್ಮನಿ
c) ಸ್ವಿಟ್ಜರ್ಲ್ಯಾಂಡ್
d) ಅಮೇರಿಕ ✔✔
📗📗📗📗📗📗📗📗📗📗📗📗📗📗📗



ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
20/10/2017ರ ಪ್ರಶ್ನೋತ್ತರಗಳು
1) ಯಾವ ರಾಷ್ಟ್ರದಿಂದ "ಕ್ಯಾಟಲೋನಿಯಾ" ಎಂಬುದು ಸ್ವತಂತ್ರ ದೇಶವಾಗಿ ಹೊರಬರಲು ಬಯಸುತ್ತಿದೆ?
A. ಚೀನಾ.
B. ಆಸ್ಟ್ರೇಲಿಯಾ.
C. ಫ್ರಾನ್ಸ್.
D. ಸ್ಪೇನ್.✔✔
📗📗📗📗📗📗📗📗📗📗📗📗📗📗
2) ಮುಳ್ಳಯ್ಯನಗಿರಿ ಶಿಖರ ಕರ್ನಾಟಕ ರಾಜ್ಯದಲ್ಲಿದ್ದರೆ, ನಂದಾದೇವಿ ಶಿಖರ ಯಾವ ರಾಜ್ಯದಲ್ಲಿದೆ?
a) ತಮಿಳುನಾಡು
b) ತೆಲಂಗಾಣ 
c) ಉತ್ತರಾಖಂಡ✔✔
d) ಕೇರಳ
📗📗📗📗📗📗📗📗📗📗📗📗📗📗📗
3)  ವಿದ್ಯುತ್‌ ಪರಿವರ್ತಕಗಳಲ್ಲಿ ಬಳಸುವ ಫ್ಯೂಸ್‌ ತಂತಿಯನ್ನು ಯಾವ ಎರಡು ಲೋಹಗಳಿಂದ ತಯಾರಿಸಲಾಗಿರುತ್ತದೆ?
a) ತಾಮ್ರ ಮತ್ತು ಸತು
b) ಅಭ್ರಕ ಮತ್ತು ಅಲ್ಯೂಮಿನಿಯಂ 
c) ಸೀಸ ಮತ್ತ ತವರ✔✔
d) ಸತು ಮತ್ತು ಹಿತ್ತಾಳೆ
📗📗📗📗📗📗📗📗📗📗📗📗📗📗
4) 2016 ನೇ ಸಾಲಿನ ಬಸವಶ್ರೀ ಪ್ರಶಸ್ತಿ ಗೆ ಆಯ್ಕೆಯಾದವರು ಯಾರು?
A. ಪಿ.ಸಾಯಿನಾಥ್.✔✔
B. ಪಿ.ವಿಜಯನ್.
C. ಸಿ ರಂಗನಾಥ್.
D. ಮಹೇಶ್ ಗೌಡ.
📗📗📗📗📗📗📗📗📗📗📗📗📗📗📗
5) ಯಾವ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವಿಫಲರಾಗಿರುವ 4,548 ವೈದ್ಯರ ನೋಂದಣಿಯನ್ನು ಇತ್ತೀಚಿಗೆ ರದ್ದುಗೊಳಿಸಿದೆ?
A. ಮಹಾರಾಷ್ಟ್ರ ✔✔
B. ಆಂಧ್ರಪ್ರದೇಶ
C. ತೆಲಂಗಾಣ
D. ಕೇರಳ
📗📗📗📗📗📗📗📗📗📗📗📗📗📗
6) ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಬಿಂದುಸಾರನನ್ನು ’ಅಮಿತ್ರೋಖೇಟ್ಸ್‌’ ಎಂದು ಕರೆದಿದ್ದ ದೇಶ ಯಾವುದು? 
a) ಪರ್ಷಿಯನ್‌
b) ಗ್ರೀಕ್‌✔✔
c) ಮೆಸಪಟೋಮಿಯಾ
d) ಇಂಗ್ಲೆಂಡ್‌
📗📗📗📗📗📗📗📗📗📗📗📗📗📗
7) ವೇಸರ ಶೈಲಿಯ ವಾಸ್ತುಶಿಲ್ಪವನ್ನು ದಕ್ಷಿಣ ಭಾರತಕ್ಕೆ ಪರಿಚಯಿಸಿದ ರಾಜವಂಶ ಯಾವುದು?
a) ಕದಂಬರು
b) ಬಾದಾಮಿ ಚಾಲುಕ್ಯರು✔✔
c) ರಾಷ್ಟ್ರಕೂಟರು
d) ವಿಜಯನಗರದ ಅರಸರು
📗📗📗📗📗📗📗📗📗📗📗📗📗📗📗
8) "ದಿ ಕೊಯಲಿಷನ್ ಇಯರ್ಸ್:1996-2012" ಆತ್ಮಕತೆಯ 3ನೇ ಭಾಗವಾದ ಇದು ಯಾವ ಮಾಜಿ ರಾಷ್ಟ್ರಪತಿಯವರಿಗೆ ಸಂಬಂಧಿಸಿದೆ?
A. ಎ.ಪಿ.ಜೆ ಅಬ್ದುಲ್ ಕಲಾಂ.
B. ಪ್ರತಿಭಾ ಪಾಟೀಲ್.
C. ಪ್ರಣವ್ ಮುಖರ್ಜಿ.✔✔
D. ಕೆ.ಆರ್.ನಾರಾಯಣ್.
📗📗📗📗📗📗📗📗📗📗📗📗📗📗📗
9) "ಡಾ.ಬಾಬು ಜಗಜೀವನ್ ರಾಂ" ಅವರ ಕುರಿತ ಅಧ್ಯಯನ ಕೇಂದ್ರ ಆರಂಭಿಸಿದ  ವಿಶ್ವ ವಿದ್ಯಾಲಯ ಯಾವುದು?(ಪ್ರವೀಣ ಹೆಳವರ)
A. ಕುವೆಂಪು ವಿಶ್ವವಿದ್ಯಾಲಯ.
B. ಮೈಸೂರು ವಿಶ್ವವಿದ್ಯಾಲಯ.
C. ಕರ್ನಾಟಕ ವಿಶ್ವವಿದ್ಯಾಲಯ.✔✔
D. ಹಂಪಿ ವಿಶ್ವವಿದ್ಯಾಲಯ.
📗📗📗📗📗📗📗📗📗📗📗📗📗📗
10) " ಬಾಂಗ್ಡಾ " ಇದು ಯಾವ ರಾಜ್ಯದ ಜಾನಪದ ನೃತ್ಯ
ಶೈಲಿಯಾಗಿದೆ?
A. ಪಂಜಾಬ್ ✔✔
B. ತಮಿಳುನಾಡು
C. ಉತ್ತರ ಪ್ರದೇಶ
D. ಮಹಾರಾಷ್ಟ್ರ
📗📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

18/10/2017ರ ಪ್ರಶ್ನೋತ್ತರಗಳು

1) ಕಾರ್ಲಾಪತ್ ವನ್ಯಜೀವಿ ಧಾಮ (Karlapat Wildlife Sanctuary) ಯಾವ ರಾಜ್ಯದಲ್ಲಿದೆ?

a) ಬಿಹಾರ(ಪ್ರವೀಣ ಹೆಳವರ)

b) ಪಶ್ಚಿಮ ಬಂಗಾಳ

c) ಒಡಿಶಾ ✔✔

d) ಮಣಿಪುರ

📗📗📗📗📗📗📗📗📗📗📗📗📗📗📗

2) ಬನಾರಸ್ ಹಿಂದೂ ವಿಶ್ವವಿದ್ಯಾಲಯದ (BHU) ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿ ಯಾರು?

a) ವೇದಾ ಕೃಷ್ಣಮೂರ್ತಿ

b) ರಾಯ್ನ ಸಿಂಗ್✔✔

c) ನಿವೇದಿತಾ

d) ಕಿಶೋರಿ ಜೈನ್

📗📗📗📗📗📗📗📗📗📗📗📗📗📗

3) ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?

a) ಎಸ್.ರಾಧಾಕೃಷ್ಣನ್.✔✔

b) ವಿಜಯಲಕ್ಷ್ಮೀ ಪಂಡಿತ್

c) ಲಿಲ್ಲಿ ಸಿಂಗ್‌

d) ಬಾಲಚಂದ್ರ ಕೊಮನ್

📗📗📗📗📗📗📗📗📗📗📗📗📗📗📗

4) ಅಂತರರಾಷ್ಟ್ರೀಯ ಓಲಂಪಿಕ್ ಸಮಿತಿ (IOC) ಕೇಂದ್ರ ಕಚೇರಿ ಎಲ್ಲಿದೆ?

a) ಅಮೇರಿಕ

b) ಸ್ವಿಟ್ಜರ್ಲ್ಯಾಂಡ್ ✔✔

c) ಫ್ರಾನ್ಸ್

d) ಇಂಗ್ಲೆಂಡ್

📗📗📗📗📗📗📗📗📗📗📗📗📗📗📗

5) ಸತತ 3 ನೇ ಬಾರಿಗೆ ಅತ್ಯುತ್ತಮ ಪ್ರವಾಸೋದ್ಯಮ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡ ರಾಜ್ಯ ಯಾವುದು?

a) ಗುಜರಾತ್

b) ಕೇರಳ

c) ಕರ್ನಾಟಕ

d) ಮಧ್ಯ ಪ್ರದೇಶ ✔✔

📗📗📗📗📗📗📗📗📗📗📗📗📗📗📗

6) ವಿಶ್ವ ಆರ್ಥಿಕ ವೇದಿಕೆ (WEF) ಪ್ರಕಟಿಸಿರುವ 2017ರ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

a) 40✔✔

b) 36

c) 46

d) 30

📗📗📗📗📗📗📗📗📗📗📗📗📗📗📗

7)     ಆರ್ಥಿಕ ಕಾರ್ಯಕ್ಷಮತೆಯನ್ನು ಸುಧಾರಿಸುವ ಸಲುವಾಗಿ ಯಾವ ಬ್ಯಾಂಕ್ 'ಪ್ರಾಜೆಕ್ಟ್ ನಿಶ್ಚಯ್' ಅನ್ನು ಪ್ರಾರಂಭಿಸಿದೆ?

a) ICICI

b) CANARA BANK

c) SBI

d) IDBI✔✔

📗📗📗📗📗📗📗📗📗📗📗📗📗📗📗

8) ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

a) 60 ದಿನಗಳು

b) 30 ದಿನಗಳು

c) 80 ದಿನಗಳು

d) 120 ದಿನಗಳು✔✔

📗📗📗📗📗📗📗📗📗📗📗📗📗📗📗

9) "ಜೊವೊ ಮ್ಯಾನುಯೆಲ್ ಗೊನ್ಕಾಲ್ವ್ಸ್ ಲೌರೆಂಕೊ" ಅವರು ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

a) ಅಂಗೋಲ ✔✔

b) ಇಜಿಪ್ಟ್

c) ನಮೀಬಿಯಾ

d) ಕ್ಯೂಬಾ

📗📗📗📗📗📗📗📗📗📗📗📗📗📗📗

10) ಈ ಕೆಳಗಿನ ಯಾವ ರಾಜ್ಯ 2017ನೇ ವರ್ಷವನ್ನು ಇ-ಪ್ರಗತಿ ವರ್ಷವೆಂದು ಘೋಷಿಸಿದೆ?

a) ಕೇರಳ

b) ಆಂಧ್ರ ಪ್ರದೇಶ✔✔

c) ಕರ್ನಾಟಕ

d) ಗುಜರಾತ್

📗📗📗📗📗📗📗📗📗📗📗📗📗📗📗


ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
17/10/2017ರ ಪ್ರಶ್ನೋತ್ತರಗಳು
1) 2017 ರ ಅಕ್ಟೋಬರ್ 6 ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು(ಎನ್.ಜಿ.ಟಿ) ಯಾವ ನದಿಗೆ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ಎತ್ತಿನಹೊಳೆ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ?
a) ನೇತ್ರಾವತಿ ನದಿ✔✔
b) ತಪತಿ
c) ಕಾಳಿ
d) ಶರಾವತಿ
📗📗📗📗📗📗📗📗📗📗📗📗📗📗📗
2) 2017 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ ಐಕ್ಯಾನ್ (International Campaign to Abolish Nuclear Weapons)ಸಂಘಟನೆಯು ಯಾವ ವರ್ಷ  ವಿಯೆನ್ನಾದಲ್ಲಿ    ಸ್ಥಾಪನೆಯಾಯಿತು ?
a) 2004
b) 2000
c) 2006
d) 2007✔✔
📗📗📗📗📗📗📗📗📗📗📗📗📗📗📗
3) "ಚೀನಾ ಓಪನ್ ಟೆನಿಸ್ 2017" ರ ಮಹಿಳಾ ಸಿಂಗಲ್ಸ್ ನಲ್ಲಿ ಜಯಶಾಲಿಯಾದವರು ಯಾರು?
a) ಮಾರ್ಟಿನಾ ಹಿಂಗೀಸ್
b) ಕರೊಲಿನಾ ಗ್ರೇಸಿಯಾ✔✔
c) ಸಿಮೊನ್ ಹೆಲಿಪ್
d) ಏಂಜಲಿಕಾ ಕೆರ್ಬರ್
📗📗📗📗📗📗📗📗📗📗📗📗📗📗📗
4) "ನಮಾಮಿ ಬ್ರಹ್ಮಪುತ್ರ" ಎಂಬ ಭಾರತದ ಅತಿದೊಡ್ಡ ನದಿ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸಲಾಯಿತು?
a) ಸಿಕ್ಕಿಂ
b) ಮಣಿಪುರ
c) ಅಸ್ಸಾಂ✔✔
d) ಮಿಜೋರಾಮ್‌
📗📗📗📗📗📗📗📗📗📗📗📗📗📗📗
5) ಭಾರತೀಯ ಫುಟ್‌ಬಾಲ್‌ ತಂಡ ಅಂತರರಾಷ್ಟ್ರೀಯ ಫುಟ್‌ಬಾಲ್‌ ಒಕ್ಕೂಟ(ಫಿಫಾ) ಸೋಮವಾರ ಬಿಡುಗಡೆ ಮಾಡಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
a) 104
b) 105✔✔
c) 106
d) 107
📗📗📗📗📗📗📗📗📗📗📗📗📗📗📗
6) ಶಾತವಾಹನರು ಆರಂಭದಲ್ಲಿ ಇವರ ಸಾಮಂತರಾಗಿದ್ದರು.
a) ಗುಪ್ತರು
b) ಮೌರ್ಯರು✔✔
c) ಶುಂಗರು
d) ರಾಷ್ಟ್ರಕೂಟರು
📗📗📗📗📗📗📗📗📗📗📗📗📗📗
7) 'ಭಾರತ ರತ್ನ' ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಯಾರು?
A. ಜಯಪ್ರಕಾಶ್ ನಾರಾಯಣ್
B. ಗೋಪಿನಾಥ್ ಬಾರ್ಡೋಲಿ.
C. ಮೊರಾರ್ಜಿ ದೇಸಾಯ
D. ಗುಲ್ಜಾರಿಲಾಲ್ ನಂದ✔✔
📗📗📗📗📗📗📗📗📗📗📗📗📗📗📗
8) ಭಾರತದ ರಾಷ್ಟ್ರೀಯ ಧ್ವಜದಲ್ಲಿ ಯಾವ ಲಾಂಛನದ ಬದಲಾಗಿ 1947ರಲ್ಲಿ ಅಶೋಕ ಚಕ್ರವನ್ನು ಅಳವಡಿಸಲಾಯಿತು?
A. ಚರಕ ✔✔
B. ಕಮಲ
C. ಸಿಂಹ
D. ಗುಲಾಬಿ
📗📗📗📗📗📗📗📗📗📗📗📗📗
9) ಚೀನಾದಲ್ಲಿ ಭಾರತದ ಹೊಸ ರಾಯಭಾರಿಯನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?(ಪ್ರವೀಣ ಹೆಳವರ)
A. ಗೌತಮ್‌ ಎಚ್‌. ಬಂಬಾವಾಲೆ✔✔
B. ಹರೀಶ್ ರಾವತ್.
C. ಹನೀಶ್ ಸಿಂಗ್.
D. ಮಹೇಶ್ ಗೌಡ ಚಿಟ್ನಿ.
📗📗📗📗📗📗📗📗📗📗📗📗📗📗
10) ಗಂಗಾ ಪ್ರಸಾದ್" ಈ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದಾರೆ.
A. ಪಶ್ಚಿಮ ಬಂಗಾಳ.
B. ಮಿಜೋರಾಮ್
C. ಉತ್ತರಾಖಂಡ್.
D. ಮೇಘಾಲಯ.✔✔
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
16/10/2017ರ ಪ್ರಶ್ನೋತ್ತರಗಳು
1) ಈ ಕೆಳಗಿನ ಯಾವ ನದಿಗಳ ಸಮೀಪ "ಮ್ಯಾಗ್ರೋವ್ ಅರಣ್ಯಗಳು" ಕಂಡು ಬರುತ್ತವೆ?
a) ಗೋದಾವರಿ ನದಿ
b) ಗಂಗಾ ನದಿ
c) ಮಹಾನದಿ
d)ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗
2) ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು?
a) ರಾಜಸ್ಥಾನ
b) ತ್ರಿಪುರಾ
c) ಸಿಕ್ಕಿಂ
d) ಹರಿಯಾಣ✔✔
📗📗📗📗📗📗📗📗📗📗📗📗📗📗📗
3) ಕೆಳಗಿನ ಯಾವ ಗ್ರಂಥಿಗಳಲ್ಲಿ 'ಹೈಡ್ರೊಕ್ಲೋರಿಕ್ ಆಮ್ಲ' ಕಂಡು ಬರುತ್ತದೆ?
a) ಪಿತ್ತಜನಕಾಂಗ
b) ಜಠರ ರಸ ಗ್ರಂಥಿ✔✔
c) ಲಾಲಾರಸ ಗ್ರಂಥಿ
d) ಅಶ್ರು ಗ್ರಂಥಿ
📗📗📗📗📗📗📗📗📗📗📗📗📗📗
4) ' ಸಾಂಬಾರ್ ಸರೋವರ ' ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
a) ಜಮ್ಮು & ಕಾಶ್ಮೀರ
b) ರಾಜಸ್ಥಾನ✔✔
c) ಒರಿಸ್ಸಾ
d) ತಮಿಳುನಾಡು
📗📗📗📗📗📗📗📗📗📗📗📗📗📗
5) 2017 ರ ಜೂನ್‌ 30 ರಂದು ಯಾವ ದೇಶದ ಸಂಸತ್ತು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ?
a) ಜಪಾನ್
b) ಚೀನಾ
c) ಇಟಲಿ
d) ಜರ್ಮನಿ✔✔
📗📗📗📗📗📗📗📗📗📗📗📗📗📗
6) ಡಬ್ಲ್ಯುಡಬ್ಲ್ಯುಇ(WWE) ನಲ್ಲಿ ಸ್ಪರ್ಧಿಸಲಿರುವ ಮೊದಲ ಭಾರತೀಯ ಮಹಿಳಾ ರೆಸ್ಲರ್ ??
a) ಬಬಿತಾ ಕುಮಾರಿ
b) ಕವಿತಾ ದೇವಿ✔✔
c) ಗೀತಾ ಪೋಗಟ್
d) ಸಾಕ್ಷಿ ಮಲಿಕ್
📗📗📗📗📗📗📗📗📗📗📗📗📗📗
7) 2011ರಲ್ಲಿ ಉಡಾವಣೆಗೊಂಡ 800 ಟನ್ ಭಾರವಿರುವ ಟಿಯೆನ್‌ಗಾಂಗ್ 1 ಬಾಹ್ಯಾಕಾಶ ಪ್ರಯೋಗಾಲಯವು ಈಗ ನಿಯಂತ್ರಣ ಕಳೆದುಕೊಂಡು ಭೂಮಿಯತ್ತ ಧಾವಿಸಿ ಬರುತ್ತಿದೆ. ಇದು ಯಾವ ದೇಶದ್ದು?(ಪ್ರವೀಣ ಹೆಳವರ)
a) ಅಮೇರಿಕ
b) ಚೀನಾ ✔✔
c) ರಷ್ಯಾ
d) ಫ್ರಾನ್ಸ್
📗📗📗📗📗📗📗📗📗📗📗📗📗📗📗
8)  ರಾಷ್ಟ್ರೀಯ ಭಾವೈಕ್ಯತೆಗೆ 2015-16ನೇ ಸಾಲಿನ ಇಂದಿರಾ ಗಾಂಧಿ ಪ್ರಶಸ್ತಿ ಯಾರಿಗೆ ಲಭಿಸಿದೆ?
a) ಜಿ.ಕೆ. ಹರಿಹರನ್
b) ಎಸ್ .ಕೆ. ವೇಣುಗೋಪಾಲ್
c)  ಟಿ.ಎಮ್.ವೆಂಕಟೇಶಮೂರ್ತಿ
d) ಟಿ.ಎಮ್.ಕೃಷ್ಣ ✔✔
📗📗📗📗📗📗📗📗📗📗📗📗📗📗
9) ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ಪಿಆರ್‌ಐ) ವರದಿ ಆಧಾರದಲ್ಲಿ ರೂಪಿಸಿರುವ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
a) 106✔✔
b) 100
c) 102
d) 97
📗📗📗📗📗📗📗📗📗📗📗📗📗📗📗
10) ವಿಶ್ವದಲ್ಲಿ ಅತೀ ಹೆಚ್ಚು ಐಸ್‌ಕ್ರೀಂ ಉತ್ಪಾದನೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
a) ಕೆನಡಾ
b) ಬ್ರೆಜಿಲ್
c) ಫ್ರಾನ್ಸ್
d) ಚೀನಾ ✔✔
📗📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
14/10/2017ರ ಪ್ರಶ್ನೋತ್ತರಗಳು
1) ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಪ್ರದರ್ಶನಕ್ಕಾಗಿ ‘ದೀನದಯಾಳ್ ಹಸ್ತಕಲಾ ಸಂಕುಲ ಮ್ಯೂಸಿಯಂ’ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ? 
a) ವಾರಣಾಸಿ ✔✔
b) ಜೈಪುರ
c) ಅಹಮದಾಬಾದ್
d) ಬೆಂಗಳೂರು
📔📔📔📔📔📔📔📔📔📔📔📔📔📔
2) ರಾಜೀವ್ ಮಹರ್ಷಿ ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕಗೊಂಡಿದ್ದಾರೆ. ಇವರ ಹಿಂದಿನ ಸಿಎಜಿ ಯಾರು?(ಪ್ರವೀಣ ಹೆಳವರ)
a) ರಮಾಕಾಂತ್ ವರ್ಮಾ
b) ವಿನೋದ್ ರಾಯ್
c) ವಿ. ಎನ್‌. ಕೌಲ್
d) ಶಶಿಕಾಂತ್ ಶರ್ಮಾ✔✔
📔📔📔📔📔📔📔📔📔📔📔📔📔📔📔
3) ಭಾರತದಲ್ಲಿ ಮೊದಲ ಬುಲೆಟ್ ರೈಲು ಯೋಜನೆಯ ಕಾಮಗಾರಿಗೆ ಈ ಕೆಳಕಂಡ ಯಾವ ರೈಲು ನಿಲ್ದಾಣದಲ್ಲಿ ಅಡಿಗಲ್ಲನ್ನು ಹಾಕಲಾಯಿತು?
a) ಮುಂಬೈ ರೈಲು ನಿಲ್ದಾಣ
b) ಸೂರತ್ ರೈಲು ನಿಲ್ದಾಣ 
c) ಸಾಬರಮತಿ ರೈಲು ನಿಲ್ದಾಣ ✔✔
d) ವಡೋದರ ರೈಲು ನಿಲ್ದಾಣ
📔📔📔📔📔📔📔📔📔📔📔📔📔📔
4)  ‘ಶೃಂಗಾರಕವಿ’ ಎಂದು ರತ್ನಾಕರವರ್ಣಿಯನ್ನು ಕರೆದರೆ, ‘ನಾದಲೋಲ’ ಮತ್ತು ‘ಉಪಮಾಲೋಲ’ ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು?
a) ಲಕ್ಮೀಶ✔✔
b) ಕುಮಾರವ್ಯಾಸ
c) ಪೊನ್ನ
d) ಪುರಂದರದಾಸ
📔📔📔📔📔📔📔📔📔📔📔📔📔📔📔
5) ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಚರ್ಮ ಬ್ಯಾಂಕ್‍’ ಅನ್ನು ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಥಾಪನೆ ಮಾಡಲಾಗಿದೆ?
a) ಮೆಗ್ಗಾನ್ ಆಸ್ಪತ್ರೆ-ಶಿವಮೊಗ್ಗ
b) ಕಿಮ್ಸ್ ಆಸ್ಪತ್ರೆ-ಹುಬ್ಬಳ್ಳಿ
c) ನಿಮಾನ್ಸ್- ಬೆಂಗಳೂರು
d) ವಿಕ್ಟೋರಿಯಾ ಆಸ್ಪತ್ರೆ-ಬೆಂಗಳೂರು✔✔
📔📔📔📔📔📔📔📔📔📔📔📔📔📔
6) ಸ್ವತಂತ್ರ ಭಾರತದ ಮೊಟ್ಟಮೊದಲ ರಾಷ್ಟ್ರೀಯ ಸುದ್ದಿ ಸಂಸ್ಥೆ ಯಾವುದು?
a) ಆಲ್ ಇಂಡಿಯಾ ನ್ಯೂಸ್ ಏಜೆನ್ಸಿ
b) ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ✔✔
c) ದಿ ಅಸೋಶಿಯೇಟೆಡ್ ಪ್ರೆಸ್ ಇಂಡಿಯಾ
d) ಆಲ್ ನ್ಯೂಸ್ ಇಂಡಿಯಾ
📔📔📔📔📔📔📔📔📔📔📔📔📔📔📔
7) ಜಾಗತಿಕವಾಗಿ ಅತಿ ಹೆಚ್ಚು ಅಲ್ಯೂಮಿನಿಯಂ ಲೋಹವನ್ನು ಉತ್ಪಾದನೆ ಮಾಡುವ ದೇಶ ಯಾವುದು?(ಪ್ರವೀಣ ಹೆಳವರ)
a) ಚೀನಾ✔✔
b) ಭಾರತ
c) ಅಮೆರಿಕ
d) ಜರ್ಮನಿ
📔📔📔📔📔📔📔📔📔📔📔📔📔📔
8) ದೊಡ್ಡಹುಲ್ಲೋಜಿ ರುಕ್ಕೋಜಿರಾವ್ ಅವರು ಬರೆದ ಯಾರ ಕುರಿತಾದ ಸಮಗ್ರ ಜೀವನಚರಿತ್ರೆ ಪುಸ್ತಕಕ್ಕೆ ‘ಸ್ವರ್ಣಕಮಲ’ ಪ್ರಶಸ್ತಿ ಬಂದಿದೆ?
a) ಡಾ. ರಾ‌ಜ್‌ಕುಮಾರ್✔✔
b) ಡಾ. ವಿಷ್ಣುವರ್ದನ್
c) ಸರೋಜಾ ದೇವಿ
d) ಕಲ್ಪನಾ
📔📔📔📔📔📔📔📔📔📔📔📔📔📔📔
9) ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧಧರ್ಮವನ್ನು ಯಾವ ವರ್ಷ ಸ್ವೀಕಾರ ಮಾಡಿದರು?
a) 1956 ಆಕ್ಟೋಬರ್✔✔
b) 1956 ನವೆಂಬರ್
c) 1956 ಡಿಸೆಂಬರ್
d) 1957 ಜನವರಿ
📔📔📔📔📔📔📔📔📔📔📔📔📔📔📔
10) ಕಾಂಗ್ರೆಸ್ ಪಕ್ಷದ ನೀತಿ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಂಡ ಶಾಸಕ ಯಾರು?
a) ಸಿ. ಎಸ್‌. ನಾಡಗೌಡ
b) ಎ. ಎಸ್. ಪಾಟೀಲ್ ✔✔
c) ವಿಜಯಾನಂದ್ ಕಾಶಪ್ಪನವರ
d) ಎಚ್. ವೈ. ಮೇಟಿ
📔📔📔📔📔📔📔📔📔📔📔📔📔📔📔

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
13/10/2017ರ ಪ್ರಶ್ನೋತ್ತರಗಳು
1) ಈ ಕೆಳಗಿನ ಯಾವ ದೇಶವು ತಮ್ಮ ಸರಕಾರಿ ಶಾಲೆಗಳಲ್ಲಿ ಕನ್ನಡ ಕಲಿಸುವ ನಿರ್ಣಯ ಕೈಗೊಂಡಿದೆ?
A. ಬಾಂಗ್ಲಾದೇಶ
B. ಚೀನಾ
C. ಆಸ್ಟ್ರೇಲಿಯಾ ✔✔
D. ನೇಪಾಳ
📒📒📒📒📒📒📒📒📒📒📒📒📒📒
2) ಇದು ಒಂದು ಪೂರ್ವ ದಿಕ್ಕಿಗೆ ಹರಿಯುವ ಕರ್ನಾಟಕದ ನದಿಯಾಗಿದೆ.
A. ಅಘನಾಶಿನಿ ನದಿ
B. ತುಂಗಾ ನದಿ✔✔
C. ವರಾಹಿ ನದಿ
D. ಗುರುಪುರ ನದಿ
📒📒📒📒📒📒📒📒📒📒📒📒📒📒
3) ಭಾರತ ಸಂವಿಧಾನವನ್ನು ಹೀಗೆನ್ನಲಾಗಿದೆ.
A. ಎರವಲು ವಿಷಯಗಳ ಗಂಟು✔✔
B. ಮೂಲ ಸಂವಿಧಾನ
C. ಇತರೆ ಸಂವಿಧಾನ ಕಾಯ್ದೆಯ ಪಡೆಯತಕ್ಕದ್ದು
D. ಮೇಲಿನ ಯಾವುದು ಅಲ್ಲ
📒📒📒📒📒📒📒📒📒📒📒📒📒
4) ಭಾರತ ಸಂವಿಧಾನವು._________?
A. ಎಲ್ಲಾ ರಾಜ್ಯಗಳಿಗೂ ಏಕಸದನದ ಶಾಸಕಾಂಗವನ್ನು ಕಲ್ಪಿಸಿದೆ
B. ಎಲ್ಲಾ ರಾಜ್ಯಗಳಿಗೂ ದ್ವಿ ಸದನ ಶಾಸಕಾಂಗವನ್ನು ಕಲ್ಪಿಸಿದೆ(ಪ್ರವೀಣ ಹೆಳವರ)
C. ಕೆಲ ರಾಜ್ಯಗಳಲ್ಲಿ ಏಕಸದನ ಇತರೆ ರಾಜ್ಯಗಳಲ್ಲಿ ದ್ವಿಸದನ ಶಾಸಕಾಂಗಕ್ಕೂ ಅವಕಾಶ ನೀಡಿದೆ✔✔
D. ಮೇಲಿನ ಯಾವುದು ಅಲ್ಲ
📒📒📒📒📒📒📒📒📒📒📒📒📒
5) ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ
ಹೆಸರಾಗಿದೆ?
A. ಹುಲಿ
B. ಆನೆ✔✔
C. ಕರಡಿ
D. ಚಿಂಕಾರ
📒📒📒📒📒📒📒📒📒📒📒📒📒📒
6) ಗೋವಾ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಸಂವಿಧಾನದ ವಿಧಿ ಯಾವುದು?
A. 371 ಐ ✔✔
B. 371 ಜಿ
C. 371 ಡಿ
D. 371 ಎಚ್
📒📒📒📒📒📒📒📒📒📒📒📒📒📒
7) ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
A. ಹಾವೇರಿ
B. ಕೊಡಗು
C. ದಕ್ಷಿಣ ಕನ್ನಡ
D. ಉತ್ತರ ಕನ್ನಡ ✔✔
📒📒📒📒📒📒📒📒📒📒📒📒📒📒
8) ಸಂತ ಚೈತನ್ಯರ ಮೊದಲ ಹೆಸರೇನು?
A. ಮಹೇಶ್ವರ.
B. ವಿಶ್ವಂಬರ.✔✔
C. ದಿಗಂಬರ.
D. ಮಾದ್ವ ಸಿದ್ದಾಂತಿ ಈಶ್ವರ.
📒📒📒📒📒📒📒📒📒📒📒📒📒📒
9)  ಪ್ರಾಣಿ ಜೀವಕೋಶಗಳಲ್ಲಿ ಈ ಕೆಳಗಿನ ಯಾವುದು ಇರುವುದಿಲ್ಲ?(ಪ್ರವೀಣ ಹೆಳವರ)
A. ಕೋಶಪೋರೆ.
B. ಕೋಶಕೇಂದ್ರ.
C. ಕೋಶದ್ರವ್ಯ.
D. ಕೋಶಭಿತ್ತಿ.✔✔
📒📒📒📒📒📒📒📒📒📒📒📒📒📒📒
10) 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ವಾಜಪೇಯಿಯವರನ್ನು ಯಾವ ಜೈಲಿನಲ್ಲಿ ಬಂಧಿಸಲಾಗಿತ್ತು?
A. ಪುಣೆ.
B. ತಿಹಾರ.
C. ಬೆಂಗಳೂರು.✔✔
D. ಚೆನ್ನೈ.
📒📒📒📒📒📒📒📒📒📒📒📒📒📒

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
12/10/2017ರ ಪ್ರಶ್ನೋತ್ತರಗಳು
1) ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯ 'ಕಡಿಮೆ ತೂಕ'ದ ಮಕ್ಕಳು ಹಾಗೂ ತರುಣರನ್ನು ಹೊಂದಿರುವ ದೆಶ ಯಾವುದು?
A. ಚೀನಾ
B. ಅಮೇರಿಕ
C. ಭಾರತ ✔✔
D. ಕೆನಡ
📕📕📕📕📕📕📕📕📕📕📕📕📕📕
2) ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಭಾರತದ 3 ಲಕ್ಷ ಯುವಕರಿಗೆ ತರಬೇತಿ ಕೊಡಿಸಲು ಈ ಕೆಳಗಿನ ಯಾವ ದೇಶಕ್ಕೆ ಕಳುಹಿಸಲು ತಯಾರಿ ನಡೆಸಿದೆ?(ಪ್ರವೀಣ ಹೆಳವರ)
A. ಚೀನಾ
B. ಶ್ರೀಲಂಕಾ
C. ಜಪಾನ್ ✔✔
D. ಭೂತಾನ್
📕📕📕📕📕📕📕📕📕📕📕📕📕📕📕
3) ಫಿಫಾ (Federation International de Football Association") ಯಾವ ದೇಶದ ಮೇಲೆ ಅಂತರರಾಷ್ಟ್ರೀಯ ಫುಟ್‌ಬಾಲ್‌ ನಿಂದ ನಿಷೇಧ ಹೇರಿದೆ?
A. ಬಾಂಗ್ಲಾದೇಶ
B. ಶ್ರೀಲಂಕಾ
C. ಪಾಕಿಸ್ತಾನ ✔✔
D. ನೇಪಾಳ
 📕📕📕📕📕📕📕📕📕📕📕📕📕📕
4) ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್ ಟಿಐಐ)ಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A. ಅಮಿತಾಭ್ ಬಚ್ಚನ್
B. ಅನುಪಮ್ ಖೇರ್ ✔✔
C. ಶಬಾನಾ ಆಜ್ಮಿ
D. ವಿದ್ಯಾ ಬಾಲನ್
📕📕📕📕📕📕📕📕📕📕📕📕📕📕📕
5) ಗರೀಭಿ ಭಾರತ್ ಛೋಡೋ ಅಭಿಯಾನವು ಯಾವ ವರ್ಷದೊಳಗೆ ಭಾರತದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿದೆ?
A. 2018
B. 2020
C. 2022 ✔✔
D. 2024
📕📕📕📕📕📕📕📕📕📕📕📕📕📕📕
6) ಕ್ರೀಡಾ ಕ್ಷೇತ್ರದಲ್ಲಿ ತೋರಿದ ಉತ್ತಮ ಸಾಧನೆಗಾಗಿ ಭಾರತ ಸರ್ಕಾರ ನೀಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಗುರುತಿಸಿ ?
A. ರಾಜೀವ್ ಗಾಂಧಿ ಖೇಲ್ ರತ್ನ
B. ಅರ್ಜುನ ಪ್ರಶಸ್ತಿ
C. ಧ್ಯಾನ್‌ಚಂದ್ ಪ್ರಶಸ್ತಿ
D. ಮೇಲಿನ ಎಲ್ಲವೂ✔✔
📕📕📕📕📕📕📕📕📕📕📕📕📕📕📕
7) ಅರಿಶಿನ ಪುಡಿಯಲ್ಲಿ ಕಂಡುಬರುವ ಕಲಬೆರಕೆ ವಸ್ತುವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
A. ಟಾಲ್ಕಮ್ ಪುಡಿ
B. ಮರದ ತೊಗಟೆಯ ಪುಡಿ
C. ಮೆಟಾನಿಲ್ ಹಳದಿ✔✔
D. ಹಳದಿ ಬಣ್ಣದ ಅಡುಗೆ ಸೋಡಾ
📕📕📕📕📕📕📕📕📕📕📕📕📕📕📕
8) ಸಸ್ಯಶಾಸ್ತ್ರದ ಪ್ರಕಾರ ಆಲದ ಮರದ ಜೀವಿತಾವಧಿ 400 ವರ್ಷಗಳಾದರೆ, ದೈತ್ಯ ಸಿಕ್ಟೋಯಾ ಮರದ ಜೀವಿತಾವಧಿ ಎಷ್ಟು?
A. 2000 ವರ್ಷ 
B. 3500 ವರ್ಷ ✔✔
C. 4000 ವರ್ಷ 
D. 4500 ವರ್ಷ
📕📕📕📕📕📕📕📕📕📕📕📕📕📕
9) ಆನೆಗಳಿಗೆ ಪ್ರಸಿದ್ಧವಾಗಿರುವ ಹಾಗೂ ಸರೋವರದ ಮಧ್ಯಭಾಗದಲ್ಲಿರುವ ಮಧುಪುರ ರಾಷ್ಟ್ರೀಯ ಉದ್ಯಾನವನ ಯಾವ ದೇಶದಲ್ಲಿದೆ?
A. ಭಾರತ(ಪ್ರವೀಣ ಹೆಳವರ)
B. ಭೂತಾನ್
C. ಬಾಂಗ್ಲಾದೇಶ ✔✔
D. ನೇಪಾಳ
📕📕📕📕📕📕📕📕📕📕📕📕📕📕
10) ಈ ಕೆಳಕಂಡ ಯಾವ ಅಪರೂಪದ ಖನಿಜವನ್ನು ‘ಬಿಳಿ ಇದ್ದಿಲು’ ಎಂದು ಕರೆಯಲಾಗುತ್ತದೆ?
A. ಯುರೇನಿಯಂ ✔✔
B. ಥೋರಿಯಂ
C. ಲಿಥಿಯಮ್
D. ಲಿಗ್ನೈಟ್
📕📕📕📕📕📕📕📕📕📕📕📕📕📕📕

ಸಾಮಾನ್ಯ ಕನ್ನಡ ಎಸ್‌.ಡಿ.ಎ. ಮತ್ತು ಎಫ್.ಡಿ.ಎ. ಗೆ ಉಪಯುಕ್ತ

ಸಾಮಾನ್ಯ ಕನ್ನಡ ಎಸ್‌.ಡಿ.ಎ. ಮತ್ತು ಎಫ್.ಡಿ.ಎ. ಗೆ ಉಪಯುಕ್ತ 15/10/2017                             
1) "ವಿಜ್ಞಾನ " ಈ ಪದದ ತದ್ಭವ ರೂಪವೇನು?
a) ಬಿಜ್ಜಣ
b) ಬಿನ್ನಣ✔✔
c) ಬಿಜ್ಞಾನ
d) ವಿನ್ನಣ

2) ಈ ಕೆಳಗಿನವುಗಳಲ್ಲಿ  ಅನ್ಯದೇಶೀಯ ಪದ ಯಾವುದು ?
a) ಕದ
b) ಮೂಡಣ
c) ಕಾಗದ✔✔
d) ಅಂಗಳ

3) " ಮನ್ವಂತರ " ಇದು ಈ ಸಂಧಿಗೆ ಉದಾಹರಣೆ ಆಗಿದೆ.
a) ವೃದ್ಧಿ ಸಂಧಿ
b) ಯಣ್ ಸಂಧಿ ✔✔
c) ಜಶ್ತ್ವ ಸಂಧಿ
d) ಗುಣ ಸಂಧಿ

4) ಇಲ್ಲಿ ಯಾವುದು 'ದ್ವಿರುಕ್ತಿ' ಅಲ್ಲ .
a) ಮತ್ತೆ ಮತ್ತೆ
b) ಬೇಗ ಬೇಗ
c) ಪಟ ಪಟ✔✔
d) ದೊಡ್ಡ ದೊಡ್ಡ

5) "ನಾಯಿ"ಯು ಒಂದು ____________ಕ್ಕೆ  ಉದಾಹರಣೆ .
a) ಪುಲ್ಲಿಂಗ
b) ಸ್ತ್ರೀಲಿಂಗ
c) ನಪುಂಸಕ ಲಿಂಗ✔✔
d) ಯಾವುದು ಅಲ್ಲ

6) "ಆಡುಂಬೊಲ" ಪದದ ಅರ್ಥವೇನು?
a) ಆಡು ತಿನ್ನುವ ಪದಾರ್ಥ
b) ಆಡು ಕಟ್ಟುವ ಸ್ಥಳ
c) ಆಟದ ಬಯಲು✔✔
d) ಆಡುವ ಚೆಂಡು

7) ಈ ಕೆಳಗಿನವುಗಳಲ್ಲಿ  ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ ಯಾವುದು ?
a) ತನಗೆ✔✔
b) ನನಗೆ
c) ಅವನಿಗೆ
d) ಯಾರಿಗೆ

8) " ಜೋಗಿ " ಎಂಬುದು ಯಾರ ಕಾವ್ಯನಾಮ ?
a) ಕೃಷ್ನಾನಂದ ಕಾಮತ್
b) ಗಿರೀಶರಾವ್ ಹತ್ವಾರ್✔✔
c) ಎಚ್. ಎಸ್. ವೆಂಕಟೇಶಮೂರ್ತಿ
d) ಡಾ. ಎಲ್. ಬಸವರಾಜು

9) " ಕಡೆಗೋಲು " ಇದು ಯಾವ ಸಮಾಸವಾಗಿದೆ?
a) ಕರ್ಮಧಾರಯ ಸಮಾಸ
b) ತತ್ಪುರುಷ ಸಮಾಸ
c) ಕ್ರಿಯಾ ಸಮಾಸ
d) ಗಮಕ ಸಮಾಸ ✔✔

10) " ಸುರಗಿ" ಇದು __________________ರ ಆತ್ಮಕಥನವಾಗಿದೆ.
a) ಎ.ಕೆ. ರಾಮಾನುಜನ್
b) ಯು.ಆರ್. ಅನಂತಮೂರ್ತಿ ✔✔
c) ಬಾಗಲೋಡಿ ದೇವರಾಯ
d) ಕೆ.ಎಸ್. ನರಸಿಂಹಸ್ವಾಮಿ





ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
11/10/2017 ರ ಪ್ರಶ್ನೋತ್ತರಗಳು          
1) ಕೇರಳದ ಇತಿಹಾಸದಲ್ಲೆ ಮೊದಲ ಬಾರಿಗೆ ದಲಿತ ಯುವಕನೊಬ್ಬ ದೇವಾಲಯದ ಅರ್ಚಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಹೆಸರೇನು?
A. ಕನನ್
B. ಕನ್ವಾಲ್
C. ಕೃಷ್ಣನ್✔✔
D. ಖೇತನ್
⚙⚙⚙⚙⚙⚙⚙⚙⚙⚙⚙⚙

2) ಸಿಯಾಚಿನ್ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಯಾರು?
A. ಮನಮೋಹನಸಿಂಗ್✔✔
B. ಅಬ್ದುಲ್ ಕಲಾಂ
C. ಅಟಲ್ ಬಿಹಾರಿ ವಾಜಪೇಯಿ
D. ನರೇಂದ್ರ ಮೋದಿ
⚙⚙⚙⚙⚙⚙⚙⚙⚙⚙⚙⚙

3) ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ 'ನಿಶಾನ್-ಇ-ಪಾಕಿಸ್ತಾನಿ­ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?(ಪ್ರವೀಣ ಹೆಳವರ)
A. ಜವಾಹರ್ ಲಾಲ್ ನೆಹರೂ.
B. ಪಿ.ವಿ.ನರಸಿಂಹರಾವ್.
C. ಮುರಾರ್ಜಿ ದೇಸಾಯಿ.✔✔
D. ರಾಜೀವ್ ಗಾಂಧಿ.
⚙⚙⚙⚙⚙⚙⚙⚙⚙⚙⚙⚙

4) ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು?
A. ಕೃಷ್ಣಾ ಮೆನನ್.✔✔
B. ಯಶವಂತರಾವ್ ಸಿನ್ಹಾ.
C. ಸರ್ದಾರ್ ಸ್ವರ್ಣ ಸಿಂಗ್.
D. ಇಂದಿರಾ ಗಾಂಧಿ.
⚙⚙⚙⚙⚙⚙⚙⚙⚙⚙⚙⚙

5) ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ?
A. ಪ್ರೀತಿಕಾ ಯಾಶಿನಿ✔✔
B. ತುಳಸಿಯಪ್ಪನ್
C. ದೇವಿಕಾ ಸಬರರ್
D. ರಾಕುಲ್ ಬಿಬಿ
⚙⚙⚙⚙⚙⚙⚙⚙⚙⚙⚙⚙

6) ಬ್ರೆಸ್ಟ್ ಮಿಲ್ಕ್ ಫೌಂಡೇಶನ್ ಸ್ಥಾಪಿಸಿರುವ ದೇಶದ ಮೊದಲ ಎದೆ ಹಾಲು ಬ್ಯಾಂಕ್ ಎಲ್ಲಿದೆ?
A. ಕೊಲ್ಕತ್ತ
B. ಚೆನ್ನೈ
C. ಬೆಂಗಳೂರು
D. ದೆಹಲಿ ✔✔
⚙⚙⚙⚙⚙⚙⚙⚙⚙⚙⚙

7) ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
A. ಮಹಾರಾಷ್ಟ್ರ
B. ಕೇರಳ ✔✔
C. ಪಾಂಡಿಚೇರಿ
D. ದೆಹಲಿ
⚙⚙⚙⚙⚙⚙⚙⚙⚙⚙⚙

8)  'ವಿಶ್ವಸಂಸ್ಥೆ' ಎಂಬ ಪದವನ್ನು ನೀಡಿದವರು ಯಾರು?
A. ಜಾನ್ ಡಿ ರಾಕಫೆಲ್ಲರ್.
B. ಡಿ.ರೂಸವೆಲ್ಟ್.✔✔
C. ವಿನ್ಸಟನ್ ಚರ್ಚಿಲ್.
D.  ವುಡ್ರೋ ವಿಲ್ಸನ್.
⚙⚙⚙⚙⚙⚙⚙⚙⚙⚙⚙⚙⚙

9) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
A. 2009
B. 2007✔✔
C. 2005
D. 2011
⚙⚙⚙⚙⚙⚙⚙⚙⚙⚙⚙

10) ಗ್ರಾಮೀಣಾಭಿವೃದ್ಧಿಯ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ 'ಯಲವಗಿ ಗ್ರಾಮ ಪಂಚಾಯಿತಿ' ಯಾವ ಜಿಲ್ಲೆಯಲ್ಲಿದೆ?
1)  ಗದಗ.
2) ದಕ್ಷಿಣಕನ್ನಡ.
3)  ಬೀದರ.
4)  ಹಾವೇರಿ.✔✔
⚙⚙⚙⚙⚙⚙⚙⚙⚙⚙

https://m.facebook.com/groups/224252954432390

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
10/10/2017 ರ ಪ್ರಶ್ನೋತ್ತರಗಳು
1) ಸುಪ್ರೀಂ ಕೋರ್ಟ್ ಈ ಬಾರಿಯ ದೀಪಾವಳಿಗೆ ಯಾವ ನಗರದಲ್ಲಿ ಸಿಡಿಮದ್ದು ಮತ್ತು ಪಟಾಕಿಗಳನ್ನು ಮಾರಾಟ ಮಾಡದಂತೆ ನಿಷೇಧ ಹೇರಿದೆ?
A. ಬೆಂಗಳೂರು
B. ದೆಹಲಿ✔✔
C. ಕೊಲ್ಕತ್ತ
D. ಚೆನ್ನೈ
📗📗📗📗📗📗📗📗📗📗📗📗📗📗📗
2) ಮಿಸ್ ಹಿಮಾಲಯ 2017 ಸ್ಪರ್ಧೆಯ ವಿನ್ನರ್ ಯಾರು?(ಪ್ರವೀಣ ಹೆಳವರ)
A. ಪ್ರೆಕ್ಷಾ ರಾಣಾ ✔✔
B. ರಮ್ಯಾ ಸರಣ್
C. ಆಯುಶಿ ಸೇಠಿ
D. ವಮಿಕಾ ನಿಧಿ
📗📗📗📗📗📗📗📗📗📗📗📗📗📗
3) ರಾಜ್ಯ ಸರಕಾರವು  ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಯಾವಾಗಿನಿಂದ  ಜಾರಿಗೊಳಿಸಲು ಉದ್ದೇಶಿಸಿದೆ?
A. ನವೆಂಬರ್ ೧
B. ನವೆಂಬರ್ ೧೦
C. ಡಿಸೆಂಬರ್ ೧✔✔
D. ಡಿಸೆಂಬರ್ ‍೧೦
📗📗📗📗📗📗📗📗📗📗📗📗📗📗
4) ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ(ಸಿ.ಜೆ) ಯಾರನ್ನು ನೇಮಕ ಮಾಡಲಾಗಿದೆ.?
A. ಸುಬ್ರೊ ಕಮಲ್‌ ಮುಖರ್ಜಿ
B. ಎಸ್.ಕೆ.ಮೆಹ್ರಾ
C. ರಂಜಿತ್ ಕುಮಾರ್
D. ಎಚ್.ಜಿ.ರಮೇಶ್‌✔✔
📗📗📗📗📗📗📗📗📗📗📗📗📗📗📗
5) ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳ ಅನುಷ್ಠಾನ ವಿಭಾಗದ ಉಪ ಮಹಾ ಪ್ರಧಾನ ನಿರ್ದೇಶಕಿಯಾಗಿ ಆಯ್ಕೆಯಾದ ಭಾರತೀಯ ಮಹಿಳೆ ಯಾರು? 
A. ಡಾ. ಗೀತಾ ಸಾವರೀಕರ್
B. ಡಾ. ಸೌಮ್ಯಾ ಸ್ವಾಮಿನಾಥನ್ ✔✔
C. ಡಾ. ಲೀನಾ ನಾಯರ್
D. ಡಾ. ಅಲ್ಕಾ ಬ್ಯಾನರ್ಜಿ
📗📗📗📗📗📗📗📗📗📗📗📗📗📗📗
6) 2017ರ ನವೆಂಬರ್ ತಿಂಗಳಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ ಚಂಪಾ ಆಯ್ಕೆಯಾಗಿದ್ದಾರೆ. ಈ ಕೆಳಕಂಡವುಗಳಲ್ಲಿ ಅವರ ಕೃತಿಯನ್ನು ಗುರುತಿಸಿ?
A. ಟಿಂಗರ ಬುಡ್ಡಣ್ಣ
B. ಗೋಕರ್ಣದ ಗೌಡಸಾನಿ 
C. ಕುಂಟ ಕುಂಟ ಕುರುವತ್ತಿ
D.  ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗📗
7) ಇತ್ತೀಚೆಗೆ ರೋಹಿಂಗ್ಯಾ ಮುಸ್ಲಿಮರ ವಲಸೆ ಬಿಕ್ಕಟ್ಟು ಅಂತರರಾಷ್ಟ್ರೀಯ ಗಮನ ಸೆಳೆದಿದೆ. ರೋಹಿಂಗ್ಯಾಗಳು ಯಾವ ದೇಶದವರು?
A. ಭಾರತ
B. ಥೈಲ್ಯಾಂಡ್
C. ಮ್ಯಾನ್ಮಾರ್‌✔✔
D. ಬಾಂಗ್ಲಾದೇಶ
📗📗📗📗📗📗📗📗📗📗📗📗📗📗
8) ಸಿಂಗಾಪುರದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಹಲೀಮತ್ ಯಾಕೂಬ್ ಅವರು ಮೂಲತಃ ಯಾವ ದೇಶದವರು? 
A. ಭಾರತ✔✔
B. ಪಾಕಿಸ್ತಾನ
C. ಬಾಂಗ್ಲಾದೇಶ
D. ಈಜಿಪ್ಟ್‌
📗📗📗📗📗📗📗📗📗📗📗📗📗📗📗
9) ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇ–ಬಸ್‌ ಸೇವೆಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ? 
A. ಅರುಣಾಚಲ ಪ್ರದೇಶ
B. ಉತ್ತರಪ್ರದೇಶ
C. ಮಧ್ಯಪ್ರದೇಶ
D. ಹಿಮಾಚಲ ಪ್ರದೇಶ✔✔
📗📗📗📗📗📗📗📗📗📗📗📗📗📗📗
10) ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಯಾವಾಗ ಆಚರಿಸುತ್ತಾರೆ ?(ಪ್ರವೀಣ ಹೆಳವರ)
A. ಸೆಪ್ಟೆಂಬರ್ ೧೦
B. ಅಕ್ಟೋಬರ್ ೧೦✔✔
C. ಆಗಸ್ಟ್ ೧೦
D. ನವೆಂಬರ್ ೧೦
📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
08/10/2017ರ ಪ್ರಶ್ನೋತ್ತರಗಳು
1) ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?
A. 20
B. 22
C. 30
D. 24✔✔
📗📗📗📗📗📗📗📗📗📗📗📗📗📗
2) ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
A. ಶಿವಾಜಿ.
B. ಕೃಷ್ಣದೇವರಾಯ.✔✔
C. ಅಕ್ಬರ್.
D. ಚಂದ್ರಗುಪ್ತ.
📗📗📗📗📗📗📗📗📗📗📗📗📗📗
3) ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
A.  1976
B.  1985
C.  1986
D.  1989✔✔
📗📗📗📗📗📗📗📗📗📗📗📗📗📗
4) ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?(ಪ್ರವೀಣ ಹೆಳವರ)
A.  29+1.
B.  30+1.✔✔
C.  31+1.
D.  39+1.
📗📗📗📗📗📗📗📗📗📗📗📗📗
5) ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?
A. ಹೈಟಿ.
B. ಕೋಸ್ಟರಿಕಾ.
C. ಬ್ರಿಟನ್.
D. ಆಸ್ಟ್ರೇಲಿಯಾ.✔✔
📗📗📗📗📗📗📗📗📗📗📗📗📗📗📗
6)  ಪ್ರಖ್ಯಾತ ದೇಶಭಕ್ತಿ ಗೀತೆಯಾದ 'ಏ ಮೇರೆ ವತನ್ ಕೀ ಲೋಗೊ' ಅನ್ನು ಬರೆದವರು ಯಾರು?
A. ಲತಾ ಮಂಗೇಶ್ಕರ್.
B. ಸಿ. ರಾಮಚಂದ್ರನ್.
C. ಕವಿ ಪ್ರದೀಪ್.✔✔
D. ಮೇಲಿನವರೂ ಯಾರು ಅಲ್ಲ.
📗📗📗📗📗📗📗📗📗📗📗📗📗📗
7) ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
A. ಋಗ್ವೇದ.
B. ಸಾಮವೇದ.✔✔
C. ಯಜುರ್ವೇದ.
D. ಅಥರ್ವಣವೇದ.
📗📗📗📗📗📗📗📗📗📗📗📗📗📗
8) ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು?
A. ಚೆನ್ನೈನ ಎನ್ನೋರ್ ಬಂದರು.✔✔
B. ಮಲ್ಪೆ ಬಂದರು.
C. ಗೋವಾ ಬಂದರು.
D. ಕೊಚ್ಚಿ ಬಂದರು.
📗📗📗📗📗📗📗📗📗📗📗📗📗
9) ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?
A. 25
B. 26
C. 27
D. 28✔✔
📗📗📗📗📗📗📗📗📗📗📗📗📗📗📗
10) 2011 ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಲಿಂಗಾನುಪಾತವೆಷ್ಟು?(ಪ್ರವೀಣ ಹೆಳವರ)
A.960
B. 962
C. 964
D. 968✔✔
📗📗📗📗📗📗📗📗📗📗📗📗📗📗

ಸರ್ದಾರ್ ಸರೋವರ ಅಣೆಕಟ್ಟು


ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಸರ್ದಾರ್ ಸರೋವರ ಅಣೆಕಟ್ಟಿನ ಕುರಿತ ಒಂದಷ್ಟು ಕುತೂಹಲಕಾರಿ ಮಾಹಿತಿ

 1961ರಲ್ಲೇ ಶಿಲ್ಯಾನ್ಯಾಸಗೊಂಡಿದ್ದ ಡ್ಯಾಮ್ ಯೋಜನೆ ಆರಂಭವಾಗಿದ್ದು ಮಾತ್ರ 1987ರಲ್ಲಿ!ಡ್ಯಾಂ ಉದ್ಘಾಟನೆ ಮಾಡಿದ ಪ್ರಧಾನಿ

ಗಾಂಧಿನಗರ: ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ಸರೋವರ ಡ್ಯಾಮ್ ಭಾನುವಾರ ಉದ್ಘಾಟನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಣೆಕಟ್ಟನ್ನು ಲೋಕಾರ್ಪಣೆ ಮಾಡಿದ್ದಾರೆ.ಕಾಂಕ್ರೀಟ್ ಬಳಕೆಯಲ್ಲಿ ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಸರ್ದಾರ್ ಸರೋವ ಡ್ಯಾಮ್ ಪಾತ್ರವಾಗಿದ್ದು, ಈ ಬೃಹತ್ ಡ್ಯಾಮ್ ನ ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ..

1.ಕಾಂಕ್ರೀಟ್ ಬಳಕೆಯಲ್ಲಿ ದೇಶದ ಅತೀ ದೊಡ್ಡ ಡ್ಯಾಮ್ ಆಗಿದ್ದು, ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಆಗಿದೆ. ಕಾಂಕ್ರೀಟ್ ಬಳಕೆಯಲ್ಲಿ ಅಮೆರಿಕದ ಗ್ರಾಂಡ್ ಕೌಲಿ ಡ್ಯಾಮ್ ವಿಶ್ವದ ಮೊದಲ ಅತೀ ದೊಡ್ಡ ಡ್ಯಾಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

.2. ಡ್ಯಾಮ್ 1.2 ಕಿ.ಮೀ ಉದ್ದವಿದ್ದು, 163 ಅಡಿ ಎತ್ತರ ಹೊಂದಿದೆ. ತನ್ನ ಎತ್ತರ ಹಾಗೂ ನೀರಿನ ಶೇಖರಣೆಯಲ್ಲೂ ಸರ್ದಾರ್ ಸರೋವರ ಡ್ಯಾಮ್ ಬೃಹತ್ ಅಣೆಕಟ್ಟು ಎಂಬ ಕೀರ್ತಿಗೆ ಭಾಜನವಾಗಿದೆ.

3. ಸರ್ದಾರ್ ಸರೋವರ ಡ್ಯಾಂ ನಲ್ಲಿ ಎರಡು ಪವರ್ ಹೌಸ್ (ವಿದ್ಯುತ್ ಉತ್ಪಾದನಾ ಘಟಕ)ಗಳಿದ್ದು, ಒಂದು 1,200 ಮೆಗಾ ವ್ಯಾಟ್ ಸಾಮರ್ಥ್ಯ ಹಾಗೂ ಮತ್ತೊಂದು 250 ಮೆಗಾ ವ್ಯಾಟ್ ವಿದ್ಯುತ್ ಉತ್ಬಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಉದ್ಧಾಟನೆಗೂ ಮುನ್ನವೇ ಅಂದರೆ ಇಲ್ಲಿಯವರೆದೂ ಈ ಡ್ಯಾಮ್ ನ ಮೂಲಕ ಸುಮಾರು 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

4.ಡ್ಯಾಂ ನಿರ್ಮಾಣಕ್ಕೆ ಸುಮಾರು 8 ಸಾವಿರ ಕೋಟಿ ವೆಚ್ವಾಗಿದ್ದು, ಈಗಾಗಲೇ ಈ ಡ್ಯಾಮ್ ನ ತನ್ನ ವಿದ್ಯುತ್ ಉತ್ಪಾದನೆ ಮೂಲಕ 16 ಸಾವಿರ ಕೋಟಿ ಹಣವನ್ನು ಸಂಪಾದನೆ ಮಾಡಿದೆ. ಅಂದರೆ ತನ್ನ ನಿರ್ಮಾಣಕ್ಕಿಂತಲೂ ದುಪ್ಪಟ್ಟು ಹಣ ಈ ಡ್ಯಾಮ್ ನಿಂದ ಉತ್ಪಾದನೆಯಾದ ವಿದ್ಯುತ್ ಮಾರಾಟದಿಂದ ಬಂದ ಹಣ ಸರ್ಕಾರದ ಬೊಕ್ಕಸ ಸೇರಿದೆ

5.ಇನ್ನು ಈ ಡ್ಯಾಮ್ ನಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳ ಹಂಚಿಕೊಳ್ಳಲಿದ್ದು, ಈ ಪೈಕಿ ಮಹಾರಾಷ್ಟ್ರಕ್ಕೆಶೇ.57ರಷ್ಟು, ಮಧ್ಯ ಪ್ರದೇಶಕ್ಕೆ ಶೇ.27ರಷ್ಟು ಮತ್ತು ಗುಜರಾತ್ ಗೆ ಶೇ.16ರಷ್ಟು ವಿದ್ಯುತ್ ಹಂಚಿಕೆ ಮಾಡಲಾಗುತ್ತದೆ.

6. ಈ ಡ್ಯಾಂನಲ್ಲಿ ಒಟ್ಟು 30 ಗೇಟ್ ಗಳಿದ್ದು, ಒಂದೊಂದು ಗೇಟ್ ಗಳು ಬೃಹತ್ ಪ್ರಮಾಣದ ಉಕ್ಕಿನಿಂದ ಮಾಡಲಾಗಿದೆ. ಪ್ರತೀಯೊಂದು ಗೇಟ್ ಕೂಡ 450 ಟನ್ ತೂಕವಿದ್ದು, ಈ ಗೇಟ್ ಗಳನ್ನು ತೆರೆಯಲು ಮತ್ತು ಸ್ಥಗಿತಗೊಳಿಸುವ ಪ್ರಕ್ರಿಯೆಯೇ ಸುಮಾರು 1 ಗಂಟೆ ತಗುಲುತ್ತದೆ.

7.ನರ್ಮದಾ ಬಚಾವೋ ಆಂದೋಲನವೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ವರೆಗೂ ಈ ಡ್ಯಾಮ್ ನಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹವಾಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದ ನೀರು ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು, ಇದರಿಂದ 18 ಲಕ್ಷ ಹೆಕ್ಟೇರ್ ಕೃಷಿ ಭೂಮಿಗಿ ನೀರುಣಿಸಲು ನೆರವಾಗುತ್ತದೆ. ಈ ಡ್ಯಾಮ್ ನಿಂದ 9 ಸಾವಿರ ಹಳ್ಳಿಗಳು ಪ್ರಯೋಜನ ಪಡೆಯಲಿದೆ.

Tuesday 7 November 2017

ಲಿಟಲ್ ಮಿಸ್ ವರ್ಲ್ಡ್ 2017: ಕರ್ನಾಟಕದ ಬಾಲಕಿ ಕೊರಳಿಗೆ ವಿಜಯ ಮಾಲೆ

 Gkforkpsc Praveen
ಪೂರ್ವಿ ಜಿ.ಬಿ.

Gkforkpsc Praveen 
ಬೆಂಗಳೂರು: ಗ್ರೀಸ್‌ನ ಥೆಸಲೊಂಕಿಯಲ್ಲಿ ನಡೆದ ’ಲಿಟಲ್‌ ಮಿಸ್‌ ವರ್ಲ್ಡ್‌ –2017’ ಅಂತರಾಷ್ಟ್ರೀಯ ಸೌಂದರ್ಯ ಮತ್ತು ಪ್ರತಿಭಾ ಸ್ಪರ್ಧೆಯಲ್ಲಿ ಕರ್ನಾಟಕದ ಪೂರ್ವಿ ಜಿ.ಬಿ. ‘ಬೆಸ್ಟ್‌ ಟ್ಯಾಲೆಂಟ್‌ ಪರ್‌ಫಾರ್ಮನ್ಸ್‌’ಆಗಿ ಹೊರಹೊಮ್ಮಿದ್ದಾಳೆ.

ಏಳು ದಿನ ನಡೆದ ಈ ಸ್ಪರ್ಧೆಯಲ್ಲಿ 30 ದೇಶಗಳ 65ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಆಯ್ಕೆ ಆದವರಲ್ಲಿ ಭಾರತದ ಐದು ಮಕ್ಕಳೂ ಇದ್ದರು. ಆ ಪೈಕಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಭಾಗದಲ್ಲಿ ಪೂರ್ವಿ ಈ ವಿಶೇಷ ಸಾಧನೆ ಮಾಡಿದ್ದಾಳೆ. ಬೆಂಗಳೂರಿನ ಸೋಫಿಯಾ ಪ್ರೌಢ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಈಕೆ ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಕುಕನೂರು ಗ್ರಾಮದವಳಾಗಿದ್ದಾಳೆ.

ಬೇರೆ ಬೇರೆ ರಾಷ್ಟ್ರಗಳ 10ಕ್ಕೂ ಹೆಚ್ಚು ತೀರ್ಪುಗಾರರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮಕ್ಕಳ ಆತ್ಮವಿಶ್ವಾಸ, ಪ್ರತಿಭೆ, ಬುದ್ಧಿಮತ್ತೆ, ವಾಕ್‌ ಚಾತುರ್ಯ, ಸೌಂದರ್ಯದ ಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಉಕ್ರೇನ್‌ನ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ ನೇತೃತ್ವದಲ್ಲಿ ದೀವಾ ಫ್ಯಾಷನ್‌ ಗ್ರುಪ್‌ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಕಳೆದ 17 ವರ್ಷಗಳಿಂದ ಸ್ಪರ್ಧೆ ನಡೆಸುತ್ತಿದ್ದು,ಜಗತ್ತಿನ ನಾನಾ ಭಾಗದ ಮಕ್ಕಳು ಭಾಗವಹಿಸುತ್ತಾರೆ.

ಈ ಸ್ಪರ್ಧೆಗೆ ವಿದೇಶಕ್ಕೆ ತೆರಳುವ ಮುನ್ನ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದಿದ್ದ ಆಡಿಷನ್‌ನಲ್ಲಿ 10 ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಆಗಸ್ಟ್ ನಲ್ಲಿ ಚೆನ್ನೈ ನಲ್ಲಿ ನಡೆದಿದ್ದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂರ್ವಿ ಗ್ರೀಸ್ ನಲ್ಲಿ ನಡೆಯುವ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ್ದಳು. ಅಂತಿಮ ಸುತ್ತಿನಲ್ಲಿ ಪೂರ್ವಿ ಹೊಯ್ಸಳ ಶಿಲ್ಪಕಲೆಯಲ್ಲಿ ಮೂಡಿದ್ದ ಬೇಲೂರು ಶಿಲಾ ಬಾಲಿಕೆಯ ವೇಷ ಧರಿಸಿದ್ದಳು.

2017ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

ಅಮೆರಿಕಾ ಲೇಖಕ ಜಾರ್ಜ್ ಸೌಂಡರ್ ಗೆ 2017ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ
Gkforkpsc Praveen
ಜಾರ್ಜ್ ಸೌಂಡರ್ಸ್

Gkforkpsc Praveen


ಲಂಡನ್: ಇಂಗ್ಲೆಂಡ್ ನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಈ ವರ್ಷ ಅಮೆರಿಕಾದ ಲೇಖಕ ಜಾರ್ಜ್ ಸೌಂಡರ್ಸ್ ಅವರಿಗೆ ಸಂದಿದೆ. ಇವರ ಲಿಂಕನ್ ಇನ್ ಬಾರ್ಡೊ ಕಾದಂಬರಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಎರಡನೇ ಅಮೆರಿಕಾದ ಲೇಖಕರು ಜಾರ್ಜ್ ಸೌಂಡರ್ ಆಗಿದ್ದಾರೆ.
ಅಬ್ರಹಾಂ ಲಿಂಕನ್ ನ 11 ವರ್ಷದ ಮಗ ವಿಲ್ಲೈಯ ಸಾವಿನ ಕುರಿತ ಚರಿತ್ರೆಯನ್ನು ಪುಸ್ತಕ ಹೊಂದಿದ್ದು ಸಂಪೂರ್ಣ ಮೂಲ ರೂಪದಲ್ಲಿದೆ ಎಂದು ಪ್ರಶಸ್ತಿಯ ತೀರ್ಪುಗಾರರು ಹೇಳಿದ್ದಾರೆ.
ಈ ಮೂಲ ಕಾದಂಬರಿಯ ರಚನೆ ಮತ್ತು ಶೈಲಿ ಲೇಖಕನ ಬುದ್ಧಿವಂತಿಕೆಯ ಆಳ ನಿರೂಪಣೆಯನ್ನು ಹೊಂದಿದೆ ಎಂದು ತೀರ್ಪುಗಾರರ ತಂಡದ ಮುಖ್ಯಸ್ಥ ಲೋಲಾ ಯಂಗ್ ಹೇಳಿದ್ದಾರೆ. 
ಈ ಪ್ರಶಸ್ತಿ ನನಗೆ ಸಂದ ಅತಿದೊಡ್ಡ ಗೌರವವಾಗಿದೆ ಎಂದು 58 ವರ್ಷದ ಜಾರ್ಜ್ ಸೌಂಡರ್ಸ್ ಹೇಳಿದ್ದಾರೆ.

ಮಾರುತಗಳು - ಸಾಮಾನ್ಯ ಜ್ಞಾನ

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ #ಮಾರುತ' ವೆಂದು ಕರೆಯಲಾಗುವುದು.

🔗 
ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.


🔗 
ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.


🔗 
ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.


🔗 
ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:

('ಪವನ ದಿಕ್ಸೂಚಿ' (Wind Vane))

🔗 
ಗಾಳಿಯ ವೇಗವನ್ನು ಅಳೆಯುವ ಮಾನ:

('ನಾಟ್' (Knot) ಅಥವ ಕಿ.ಮೀ )

🔗 
ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)


🔗 
ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.


 
ಒಂದು ನಾಟಿಕಲ್ ಮೈಲ್ಸ್ ಎಂದರೆ - 6080ಅಡಿಗಳು \ 1.85 km.


🔗
 ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು. ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.


🔗
ಭೂ ಮೇಲ್ಮೈಗೆ ಸಮಾಂತರವಾಗಿ ಚಲಿಸುವ ವಾಯುವಿಗೆ ಹೀಗೆನ್ನುವರು - ಗಾಳಿ \ ಮಾರುತ.


️ 🔗 
ಊಧ್ವ೯ಮುಖವಾಗಿ ಚಲಿಸುವ ವಾಯುವಿಗಿರುವ ಹೆಸರು - ವಾಯುಪ್ರವಾಹ.


🔗️ 
ಮಾರುತಗಳ ದಿಕ್ಕು ಮತ್ತು ವೇಗವನ್ನು ಅಳೆಯುವ ಮಾಪಕ - ಎನಿಮೋಮೀಟರ್ \ ಪವನ ಮಾಪಕ.


🔗"️ ಮಾರುತಗಳು ದೈನಂದಿನ ಚಲನೆಯ ಪ್ರಭಾವದಿಂದ ತಮ್ಮ ಪಥವನ್ನು ಬದಲಾಯಿಸುತ್ತವೆ" ಎಂದು ತಿಳಿಸಿದ ವಿಜ್ಞಾನಿ - ಕೋರಿಯಾಲಿಸ್ (1835).

🔗️ 
"ಉತ್ತರ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಬಲಕ್ಕೆ ದಕ್ಷಿಣ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಎಡ ದಿಕ್ಕಿಗೆ ಬಾಗಿ ಚಲಿಸುತ್ತದೆ" ಎಂದು ಸೂಚಿಸಿದ ವಿಜ್ಞಾನಿ - ಡಬ್ಲ್ಯು. ಫೆರಲ್ಸ್.


🔗️ 
ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುವ ಗಾಳಿಗಳು - ನಿರಂತರ ಮಾರುತಗಳು.


🔗 
ಉತ್ತರ ಗೋಳಾಧ೯ದಲ್ಲಿ ಈಶಾನ್ಯ ನೈರುತ್ಯ ಕಡೆಗೆ , ದಕ್ಷಿಣ ಗೋಳಾಧ೯ದಲ್ಲಿ ಆಗ್ನೇಯ - ವಾಯುವ್ಯ ಕಡೆಗೆ ಬೀಸುವ ಮಾರುತಗಳು - ವಾಣಿಜ್ಯ ಮಾರುತಗಳು.


🔗 
40°-60° ಅಕ್ಷಾಂಶಗಳ ನಡುವೆ ವೇಗವಾಗಿ ಬೀಸುವ ಮಾರುತಗಳು - ಪ್ರತಿವಾಣಿಜ್ಯ ಮಾರುತ.


🔗️ 
ಪ್ರತಿವಾಣಿಜ್ಯ ಮಾರುತಗಳು ಬೀಸುವ ಪ್ರದೇಶದಲ್ಲಿ ಕಂಡುಬರುವ ಇತರೆ ಮಾರುತಗಳು - ಆವತ೯ ಮತ್ತು ಪ್ರತ್ಯಾವತ೯ ಮಾರುತಗಳು.


🔗️ 
ಒಂದು ಪ್ರದೇಶದಲ್ಲಿ ಸದಾಕಾಲ ಒಂದೇ ದಿಕ್ಕಿನಿಂದ ಬೀಸುವ ಮಾರುತ - ಪ್ರಚಲಿತ ಮಾರುತ.



🔗️ ನಿಯತಕಾಲಿಕ ಮಾರುತಗಳಿಗೆ ಉದಾ - ಮಾನ್ಸೂನ್ ಮಾರುತಗಳು.

🔗
ಹೆಚ್ಚು ಒತ್ತಡವಿರುವ ಕಣಿವೆಗಳಿಂದ ಪವ೯ತಗಳ ತುದಿಯ ಕಡೆಗೆ ಬೀಸುವ ಗಾಳಿಗೆಳು - ಕಣಿವೆ ಮಾರುತಗಳು.


️ 🔗
ತಂಪಾದ ಉತ್ತಮ ಹವಮಾನವನ್ನು ನಿಮಿ೯ಸಬಲ್ಲ ಮಾರುತಗಳು - ಪ್ರತ್ಯಾವತ೯ ಮಾರುತ.


🔗 
ಪ್ರಮುಖ ಸ್ಥಳಿಯ ಮಾರುತಗಳೆಂದರೆ - ನೆಲ ,ಜಲ , ಪವ೯ತ ಮತ್ತು ಕಣಿವೆ ಮಾರುತಗಳು.


🔗 
ಶಾಶ್ವತ ಮಾರುತಗಳಿಗೆ ಉದಾ - ವ್ಯಾಪಾರಿ ಮಾರುತಗಳು , ಧೃವೀಯ ಮಾರುತಗಳು.