Thursday 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 31/10/2017

1) ರಸ್ತೆಬದಿಯ ಮೈಲು ಕಲ್ಲು ಈ ಬಣ್ಣದಲ್ಲಿದ್ದರೆ ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತದೆ .
a) ಬಿಳಿ ಮತ್ತು ಹಳದಿ ಬಣ್ಣದ ಕಲ್ಲು✔✔
b) ಬಿಳಿ-ಹಸಿರು ಬಣ್ಣದ ಕಲ್ಲು
c) ಬಿಳಿ-ನೀಲಿ-ಕಪ್ಪುಬಣ್ಣದ ಕಲ್ಲು
d) ಕಿತ್ತಳೆ- ಬಿಳಿ ಬಣ್ಣದ ಕಲ್ಲುಗಳು
📗📗📗📗📗📗📗📗📗📗📗📗📗📗📗
2) ಬರೊಬ್ಬರಿ 10 ವರ್ಷಗಳ ಬಳಿಕ ಇಟಲಿ ದೇಶದ ಪ್ರಧಾನಿ ಪಾವೊಲೊ ಗೆಂಟಿಲೋನಿ ಭಾರತಕ್ಕೆ ಭೇಟಿ  ನೀಡಿದ್ದು, ಇವರಿಗೂ ಮೊದಲು ಭಾರತಕ್ಕೆ ಭೇಟಿ ನೀಡಿದ ಪ್ರಧಾನಿ ಯಾರು?
a) ಮಟ್ಟೆಯೊ ರೆಂಜಿ
b) ರೊಮಾನೊ ಪ್ರೊಡಿ✔✔
c) ಸಿಲ್ವಿಯೊ ಬೆರ್ಲುಸ್ಕೋನಿ
d) ಮಾರಿಯೊ ಮೊಂಟಿ
📗📗📗📗📗📗📗📗📗📗📗📗📗📗📗
3) ಸಿಂಗಾಪುರದಲ್ಲಿ ನಡೆದ 38ನೇ ವಿಶ್ವ ಹಿರಿಯರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದವರು?
a) ಕಿಡಂಬಿ ಶ್ರೀಕಾಂತ್
b) ಎನ್. ದೊರೆಸ್ವಾಮಿ
c)  ಟಿ.ಕೆ.ಅಭಿಜಿತ್
d) ಟಿ.ಕೆ.ಆನಂದ್✔✔
📗📗📗📗📗📗📗📗📗📗📗📗📗📗📗
4) ಅಮೆರಿಕದ ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ 2016ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಭಯೋತ್ಪಾದಕ ದಾಳಿ ನಡೆದಿರುವ ದೇಶ ಯಾವುದು? 
a) ಇರಾಕ್✔✔
b) ಅಪ್ಘಾನಿಸ್ತಾನ
c) ಭಾರತ
d) ಪಾಕಿಸ್ತಾನ
📗📗📗📗📗📗📗📗📗📗📗📗📗📗
5) ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ಗ್ರೀನ್ ಇಂಡಿಯಾ ಮಿಷನ್’ ಯೋಜನೆಯನ್ನು ಯಾವ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ?
a) ಕಲಬುರ್ಗಿ
b) ಉತ್ತರ ಕನ್ನಡ
c) ಹಾಸನ
d) ಎಲ್ಲವೂ✔✔
📗📗📗📗📗📗📗📗📗📗📗📗📗📗
6) ಲಂಡನ್ ಮಹಾನಗರ ಥೇಮ್ಸ್ ನದಿಯ ತಟದಲ್ಲಿದೆ; ಪ್ಯಾರಿಸ್ ಮಹಾನಗರ ಯಾವ ನದಿಯ ದಂಡೆಯ ಮೇಲಿದೆ ?
a) ಡಾಶುಸ್ ನದಿ
b) ರೈನ್ ನದಿ
c) ಸೀನ್ ನದಿ✔✔
d) ಏವಾನ್ ನದಿ
📗📗📗📗📗📗📗📗📗📗📗📗📗📗📗
7) ಭಾರತದಲ್ಲಿನ ಮುಂಗಾರು ಮುನ್ಸೂಚನೆಯನ್ನು ನಿಖರವಾಗಿ ತಿಳಿದುಕೊಳ್ಳವ ವಿಧಾನಗಳನ್ನು ಅಮೆರಿಕಾದ ಯಾವ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಹಿಡಿದಿದ್ದಾರೆ?
a) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ
b) ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯ
c) ಫ್ಲಾರಿಡಾ ವಿಶ್ವವಿದ್ಯಾಲಯ✔✔
d) ಕೋಲಂಬಿಯಾ ವಿಶ್ವವಿದ್ಯಾಲಯ
📗📗📗📗📗📗📗📗📗📗📗📗📗📗
8) ಮಾದಕದ್ರವ್ಯ ಮತ್ತು ಹಾನಿಕಾರಕ ನೋವುನಿವಾರಕಗಳ ಹಾವಳಿ ನಿಯಂತ್ರಿಸುವ ಸಲುವಾಗಿ ಯಾವ ದೇಶ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ?
a) ರಷ್ಯಾ
b) ಕೆನಡಾ
c) ಅಮೇರಿಕ ✔✔
d) ಚೀನಾ
📗📗📗📗📗📗📗📗📗📗📗📗📗📗
9) ಎಷ್ಟನೇಯ  'ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್ ಷಿಪ್' ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಅಕ್ಟೋಬರ್ 28 ರಿಂದ 31 ರ ವರೆಗೆ ನಡೆಯಲಿದೆ?(ಪ್ರವೀಣ ಹೆಳವರ)
a) 20
b) 21
c) 22✔✔
d) 23
📗📗📗📗📗📗📗📗📗📗📗📗📗📗📗
10) ಆವರ್ತ ಮಳೆಯು ಅಧಿಕವಾಗಿ ಈ ಕೆಳಕಂಡ ಯಾವ ದೇಶದಲ್ಲಿ ಸುರಿಯುತ್ತದೆ?
a) ಜಪಾನ್
b) ಭಾರತ✔✔
c) ಮೆಕ್ಸಿಕೊ
d) ಅಮೆರಿಕ
📗📗📗📗📗📗📗📗📗📗📗📗📗📗📗

No comments:

Post a Comment

Note: only a member of this blog may post a comment.