Showing posts with label ಸಾಮಾನ್ಯ ಜ್ಞಾನ. Show all posts
Showing posts with label ಸಾಮಾನ್ಯ ಜ್ಞಾನ. Show all posts

Thursday, 5 March 2020

ಕರ್ನಾಟಕ ರಾಜ್ಯ ಬಜೆಟ್‌ - 2020 ಪ್ರಮುಖಾಂಶಗಳು

ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020-2021ನೇ ಸಾಲಿನ ಬಜೆಟ್‌ ಅನ್ನು ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿರುವ ಪ್ರಮುಖ ಅಂಶಗಳು:




                    ಕರ್ನಾಟಕ ರಾಜ್ಯ ಬಜೆಟ್‌ - 2020 ಪ್ರಮುಖಾಂಶಗಳು
ಕೃಷಿ:
  • ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನ.
  • ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ
  • ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 FPO ರಚನೆ, FPO ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು.
  • ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ.
  • ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ.
  • ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.
  • ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆʼ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ.ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.
  • ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ.
  • ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು ʼಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ʼ ಪ್ರಾರಂಭ.
  • ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ.
  • ಹಾಪ್‍ಕಾಮ್ಸ್ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು
  • ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ನೀಡಲು ಹೊಸ ನೀತಿ ರಚನೆ.
  • ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಕುರಿತು ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ.
  • ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಾಕಿ ಕಾಮಗಾರಿ ಪೂರ್ಣಗೊಳಿಸುವುದು
  • ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಶೀತಲ ಗೃಹಗಳ ನಿರ್ಮಾಣ.
  • ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ. ನೆರವು.
  • ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ʼಕೃಷಿ ರೈಲ್ʼ ಯೋಜನೆಯ ಸೌಲಭ್ಯದ ಬಳಕೆ.
ನೀರಾವರಿ
  • ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂ. ಅನುದಾನ.
  • ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ.
  • ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ʼಕಿಂಡಿ ಅಣೆಕಟ್ಟು ಯೋಜನೆ”ಗಳ (Vented Dams) ವ್ಯಾಪಕ ಅನುಷ್ಠಾನ
  • ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ.
  • ಅಟಲ್ ಭೂ-ಜಲ ಯೋಜನೆಯಡಿ 1202 ಕೋಟಿ ರೂ.ಗಳನ್ನು ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸುವುದು
  • ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸುವುದು
  • ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ
  • ‘ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಅನುದಾನ; ಮೊದಲನೆಯ ಹಂತದ Lift component ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸುವುದು
  • ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ
  • ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ
ಮೀನುಗಾರಿಕೆ
  • ʼಮಹಿಳಾ ಮೀನುಗಾರರ ಸಬಲೀಕರಣʼ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.
  • ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.
  • ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.
  • ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.
  • ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.
  • ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ.
  • ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ.
  • ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ.
  • ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ.
ಶಿಕ್ಷಣ
  • ನೆರೆಯಿಂದ ಹಾನಿಗೊಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6569 ಕೊಠಡಿಗಳ ಕಾಮಗಾರಿಗೆ 758 ಕೋಟಿ
  • ತಿಂಗಳಿನ ಶನಿವಾರಗಳು ಬ್ಯಾಗ್‌ ರಹಿತ ʼಸಂಭ್ರಮ ಶನಿವಾರʼಗಳೆಂದು ಘೋಷಣೆ
  • 400 ಉರ್ದು ಮಾಧ್ಯಮ ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಇಂಗ್ಲೀಷ್‌ ಮಾಧ್ಯಮ ಆರಂಭಿಸಲು ಒಂದು ಕೋಟಿ ಅನುದಾನ
  • ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿ ಸ್ವಾಯತ್ತಗೊಳಿಸಲು ಹತ್ತು ಕೋಟಿ ಅನುದಾನ
ಆರೋಗ್ಯ
  • ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್‌ ಸೇವರ ವಿಸ್ತರಿಸಲು 19 ಕೋಟಿ ರೂ.
  • ಶಿರಸಿಯ ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರಯಾಗಿ ಮೇಲ್ದರ್ಜೆಗೇರಿಸಲು ಕ್ರಮ
  • ʼಶ್ರವಣ ದೋಷ ಮುಕ್ತʼ ರಾಜ್ಯವಾಗಿಸಲು 28 ಕೋಟಿ ರೂ. ಅನುದಾನ
  • ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಸ್ಥಾಪನೆ ಉದ್ದೇಶ. ಪ್ರಸಕ್ತ ಸಾಲಿನಲ್ಲಿ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭ
  • ಹಾವೇರಿಯಲ್ಲಿ 20 ಹಾಸಿಗೆಗಳ ಆಯುಷ್‌ ಆಸ್ಪತ್ರೆ 20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ. ಪ್ರಸಕ್ತ ಸಾಲಿನಲ್ಲಿ ಐದು ಕೋಟಿ ರೂ ಬಿಡುಗಡೆ.
  • ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ಸಿಮ್ಯುಲೇಷನ್‌ ಲ್ಯಾಬ್‌ ಹಾಗೂ 30 ಲಕ್ಷ ವೆಚ್ಚದಲ್ಲಿ ಮಾಲಿಕ್ಯುಲಾರ್‌ ಬಯಾಲಜಿ ಲ್ಯಾಬ್‌ ನಿರ್ಮಾಣ

ಕರ್ನಾಟಕ ಬಜೆಟ್ 2020:

ಕರ್ನಾಟಕ ಬಜೆಟ್ 2020:
2 ಲಕ್ಷದ 37 ಸಾವಿರ ಕೋಟಿ ರುಪಾಯಿಯ ಬಜೆಟ್
#ಬಜೆಟ್ #karnatakabudget2020
ಬಜೆಟ್ ನ ಜಿಲ್ಲಾವಾರು ಅನುದಾನದ ಮಾಹಿತಿ:

ರಾಮನಗರ
* ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆ
* ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕಲ್‌ ವೆಹಿಕಲ್ಸ್‌ ಮತ್ತು ಎನರ್ಜಿ ಸ್ಟೋರೇಜ್‌ ಮ್ಯಾನುಫ್ಯಾಕ್ಚರಿಂಗ್‌ ಕ್ಲಸ್ಟರ್‌– ₹10 ಕೋಟಿ
* ರಣಹದ್ದು ಧಾಮದಲ್ಲಿ ಸಂತಾನೋತ್ಪತ್ತಿ ಕೇಂದ್ರ– ₹2 ಕೋಟಿ
ಬೆಂಗಳೂರು ಗ್ರಾಮಾಂತರ
* ಹರಳೂರು–ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಡಿಫೆನ್ಸ್‌ ಮತ್ತು ಏರೋಸ್ಪೇಸ್ ಎಕ್ಯುಪ್‌ಮೆಂಟ್‌ ಮ್ಯಾನುಫ್ಯಾಕ್ಚರಿಂಗ್‌ ಕ್ಲಸ್ಟರ್‌
ದಕ್ಷಿಣಕನ್ನಡ
* ಮೂಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ– ₹2 ಕೋಟಿ
* ಕುಳಾಯಿಯಲ್ಲಿ ಮೀನು ರಫ್ತು ಸ್ಥಾವರ ನಿರ್ಮಾಣ– ₹12.50 ಕೋಟಿ
ಉಡುಪಿ
* ಹೆಜಮಾಡಿಯಲ್ಲಿ ಮೀನುಗಾರಿಕಾ ಬಂದರು– ₹181 ಕೋಟಿ
* ಹಂಗಾರಕಟ್ಟೆ ಬಂದರು ಅಭಿವೃದ್ಧಿ– ₹130 ಕೋಟಿ
* ಕಾರ್ಕಳದಲ್ಲಿ ಜವಳಿ ಪಾರ್ಕ್‌
ಉತ್ತರ ಕನ್ನಡ ಜಿಲ್ಲೆ
* ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತಲು– ₹85 ಕೋಟಿ
* ಕೊಡೇರಿ ಬಂದರು ಅಭಿವೃದ್ಧಿ– ₹2 ಕೋಟಿ
* ಶಿರಸಿ ಸರ್ಕಾರಿ ಆಸ್ಪತ್ರೆ 200 ಹಾಸಿಗೆಗೆ ಹೆಚ್ಚಿಸಿ ಮೇಲ್ದರ್ಜೆಗೆ
* ಸಿದ್ಧಾಪುರದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ
* ಖಾಸಗಿ ಸಹಭಾಗಿತ್ವದಲ್ಲಿ ₹2,500 ಕೋಟಿ ವೆಚ್ಚದಲ್ಲಿ ಪಾವಿನಕುರ್ವೆ/ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್‌ ಆಹ್ವಾನ
* ಕಡಲಧಾಮ ಸ್ಥಾಪನೆ– ₹1 ಕೋಟಿ
* ಕಾರವಾರ ಬಂದರಿಗೆ ಶಾಶ್ವತ ಅಗ್ನಿಶಾಮಕ ಉಪಕರಣ– ₹19 ಕೋಟಿ
ಹಾವೇರಿ
* 20 ಹಾಸಿಗೆಗೆಳ ಆಯುಷ್‌ ಸಂಯುಕ್ತ ಆಸ್ಪತ್ರೆ ₹20 ಕೋಟಿಯಲ್ಲಿ ಆರಂಭ. ಪ್ರಸಕ್ತ ವರ್ಷ ₹5 ಕೋಟಿ
* ಶಿಗ್ಗಾವಿಯಲ್ಲಿ ಜವಳಿ ಪಾರ್ಕ್‌
* ಸಂತ ಶಿಶುನಾಳ ಶರೀಫರ ಗ್ರಾಮ ಅಭಿವೃದ್ಧಿ– ₹5 ಕೋಟಿ
* ಹಿರೇಕೆರೂರಿನಲ್ಲಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗೆ ಪ್ರೋತ್ಸಾಹ
ಕಲಬುರ್ಗಿ
ಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ
ಮೈಸೂರು
* ಸರ್ಕಾರಿ ಬ್ರೈಲ್‌ ಮುದ್ರಣಾಲಯ–₹80 ಲಕ್ಷ
 ವಿಜಯಪುರ
* ‘ಜಲಧಾರೆ’ ಯೋಜನೆಯ ಮೊದಲ ಹಂತ
ಮಂಡ್ಯ
‘ಜಲಧಾರೆ’ ಯೋಜನೆಯ ಮೊದಲ ಹಂತ
ಬೆಂಗಳೂರು
* ಸೆಂಟರ್ ಫಾರ್‌ ಸ್ಮಾರ್ಟ್‌ ಮ್ಯಾನುಫ್ಯಾಕ್ಚರಿಂಗ್‌ ಸಂಸ್ಥೆ ಸ್ಥಾಪನೆ– ₹5 ಕೋಟಿ
* ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ರಿಸರ್ಚ್‌ ಟ್ರಾನ್ಸ್‌ಲೇಷನ್‌ ಪಾರ್ಕ್‌ – 3 ವರ್ಷಗಳಲ್ಲಿ ₹60 ಕೋಟಿ ಅನುದಾನ
* ಕೃಷಿ ನಾವೀನ್ಯತಾ ಕೇಂದ್ರ – ₹20 ಕೋಟಿ
* ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸೇವಾ ಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ– ₹20 ಕೋಟಿ
* ವಿವೇಕಾನಂದ ಯುವ ಕೇಂದ್ರ ಸ್ಥಾಪನೆ– ₹2 ಕೋಟಿ
* ನಾಲ್ಕೂ ದಿಕ್ಕಿನಲ್ಲಿ ಕಲಾಕ್ಷೇತ್ರ– ₹60 ಕೋಟಿ
* ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂಪೇಗೌಡರ ಕಂಚಿನ ಪ್ರತಿಮೆ– ₹60 ಕೋಟಿ
* ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ– ₹1 ಕೋಟಿ
* ಖಾಸಗಿ ಸಹಭಾಗಿತ್ವದಲ್ಲಿ ‘ಫಿಲಂ ಸಿಟಿ’ ಸ್ಥಾಪನೆ– ₹500 ಕೋಟಿ
* ಐಐಟಿ ಮಾದರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಅಭಿವೃದ್ಧಿಗೆ ₹10 ಕೋಟಿ
ತುಮಕೂರು
* ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್‌
ಬಾಗಲಕೋಟೆ
* ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ’ಕ್ಕೆ ₹100 ಕೋಟಿ
* ಬಾದಾಮಿ ಅಭಿವೃದ್ಧಿ – ₹25 ಕೋಟಿ
ಚಿತ್ರದುರ್ಗ
* ಮುರುಘಾ ಮಠದ ಆವರಣದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ– ₹20 ಕೋಟಿ
*  ಎಸ್‌. ನಿಜಲಿಂಗಪ್ಪ ವಾಸವಿದ್ದ ಮನೆ ಸಂರಕ್ಷಣೆ– ₹5 ಕೋಟಿ
* ವೀರಮದಕರಿ ನಾಯಕ, ಒನಕೆ ಓಬವ್ವ ತಾಣ ಅಭಿವೃದ್ಧಿ
ಧಾರವಾಡ
* ಕಾನೂನು ವಿವಿಯಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ– ₹1 ಕೋಟಿ
ಹಾಸನ
* ಎಸ್‌.ಎಲ್‌. ಭೈರಪ್ಪ ಹುಟ್ಟೂರು ಸಂತೆಶಿವರ ಗ್ರಾಮ ಅಭಿವೃದ್ಧಿ– ₹5 ಕೋಟಿ
ರಾಯಚೂರು
* ಮಂತ್ರಾಲಯದಲ್ಲಿ ಅತಿಥಿಗೃಹ
ಕೊಪ್ಪಳ
* ಗಂಗಾವತಿಯಲ್ಲಿ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನ ಅಭಿವೃದ್ಧಿ– ₹20 ಕೋಟಿ
ಶಿವಮೊಗ್ಗ
* ಸಾಗರ ತಾಲ್ಲೂಕಿನ ಜೋಗ ಜಲಪಾತ ಅಭಿವೃದ್ಧಿ
* ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಮಿನಿ ಮೃಗಾಲಯ ಉನ್ನತೀಕರಣ– ₹5 ಕೋಟಿ
ರಾಜ್ಯಬಜೆಟ್ 2020: ಇದೇ ಮೊದಲ ಸಲ ಮಕ್ಕಳಿಗಾಗಿಯೇ ಮುಂಗಡಪತ್ರ ಮಂಡಿಸಿದ ಸಿಎಂ ಬಿಎಸ್​ವೈ.


 ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಇಂದು ಮಂಡಿಸಿದ ಬಜೆಟ್ ನ ಸಂಪೂರ್ಣ ಮಾಹಿತಿ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ
https://drive.google.com/file/d/153qREmhV84KuB0DY67Ab4c9lkVy_ntaG/view?usp=sharing

Thursday, 27 February 2020

ಸಾಮಾನ್ಯ ಜ್ಞಾನ

1. ಸಮಾಜ ಸುಧಾರಣೆಗೆ ಹೆಸರಾದ ಶಾಹು ಮಹರಾಜರು ಯಾವ ಸಂಸ್ಥಾನದ ಅಧಿಪತಿಗಳಾಗಿದ್ದರು?
A) ಸಾಂಗ್ಲಿ
B) ಜತ್
C) ಕೊಲ್ಲಾಪುರ ✔✔
D) ಔಧ್
📗📙📗📙📗📙📗📙📗📙
2. ವಾಹನಗಳ ಎಂಜಿನ್ ಅನ್ನು ತಂಪುಗೊಳಿಸುವ ಭಾಗ ಯಾವುದು?
A)ರೇಡಿಯೇಟರ್ ✔✔
B) ಕ್ಲಚ್
C) ಬ್ಯಾಟರಿ
D) ಸ್ಪಾರ್ಕ್ ಪ್ಲಗ್
📗📙📗📙📗📙📗📙📗📙
3. ಸಂತೋಷಕುಮಾರ್‌ ಗುಲ್ವಾಡಿ ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದರು?
A) ಕ್ರೀಡೆ
B) ಪತ್ರಿಕೋದ್ಯಮ✔✔
C) ರಂಗಭೂಮಿ
D) ಚಲನಚಿತ್ರ
📗📙📗📙📗📙📗📙📗📙
4. ಅರ್ಥೈಟ್ರಿಸ್‌ ಎಂಬ ಸಮಸ್ಯೆ ದೇಹದ ಯಾವ ಭಾಗಕ್ಕೆ ಸಂಬಂಧಿಸಿದ್ದು?
A) ಗಂಟಲು
B) ಹೃದಯ
C) ಕೀಲುಗಳು ✔✔
D) ಮೂತ್ರಪಿಂಡ
📗📙📗📙📗📙📗📙📗📙
5. ವೇಗನ್ ಆಹಾರ ಪದ್ಧತಿಯನ್ನು ಆಚರಿಸುವವರು ಯಾವ ವಸ್ತುಗಳನ್ನು ಬಳಸುವುದಿಲ್ಲ?
A) ಗೆಡ್ಡೆಗೆಣಸು
B) ಪ್ರಾಣಿಜನ್ಯ ವಸ್ತುಗಳು✔✔
C) ಕರಿದ ತಿಂಡಿ
D) ಮಸಾಲೆ ಪದಾರ್ಥ
📗📙📗📙📗📙📗📙📗📙
6. ‘ನಂ 221ಬಿ, ಬೇಕರ್ ಸ್ಟ್ರೀಟ್, ಲಂಡನ್’-ಇದು ಯಾವ ಪ್ರಸಿದ್ಧ ಕಾಲ್ಪನಿಕ ಪತ್ತೇದಾರನ ವಿಳಾಸ?
A) ಜೇಮ್ಸ್ ಬಾಂಡ್
B) ಡಾ. ವಾಟ್ಸನ್
C) ಹರ್ಕುಲೆ ಪೊಯ್ರಾಟ್
D) ಷರ್ಲಾಕ್‌ ಹೋಮ್ಸ್‌✔✔
📗📙📗📙📗📙📗📙📗📙
7. ಮಹಾಭಾರತದಲ್ಲಿ ಯಾರನ್ನು ಸೂತಪುತ್ರ ಎಂದು ಕರೆಯಲಾಗುತ್ತಿತ್ತು?
A) ಶಕುನಿ
B) ಕರ್ಣ✔✔
C)ಭೀಷ್ಮ
D)ವಿರಾಟ
📗📙📗📙📗📙📗📙📗📙
8.‘ಇನ್ಸ್ಟಾಗ್ರಾಮ್’ ಎಂಬ ಸಾಮಾಜಿಕ ಜಾಲತಾಣದ ಮಾಲಿಕ ಸಂಸ್ಥೆಯ ಹೆಸರೇನು?
A) ಫೇಸ್ ಬುಕ್ ✔✔
B) ಆಪಲ್
C) ಇನ್ಫೋಸಿಸ್
D) ಮೈಂಡ್‌ ಟ್ರೀ
📗📙📗📙📗📙📗📙📗📙
9. ಬ್ರಹ್ಮಪುತ್ರಾ ನದಿ ಏನೆಂದು ಪ್ರಸಿದ್ಧವಾಗಿದೆ?
A)ಹೆಣ್ಣು ನದಿ
B) ಗಂಡು ನದಿ✔✔
C) ಮಾಯದ ನದಿ
D) ದುಃಖದ ನದಿ
📗📙📗📙📗📙📗📙📗📙
10. ದೀಪಕ್ ಪುನಿಯಾ ಯಾವ ಕ್ರೀಡೆಯ ಕ್ರೀಡಾ ಪಟು?
A) ಕುಸ್ತಿ ✔✔
B) ಕತ್ತಿವರಸೆ
C) ಭಾರ ಎತ್ತುವಿಕೆ
D) ಈಜು
📗📙📗📙📗📙📗📙📗📙

ಸಾಮಾನ್ಯ ಜ್ಞಾನ

1. ಚರ್ಮಕ್ಕೆ ಸಂಬಂಧಿಸಿದ ವೈದ್ಯಕೀಯ ಅಧ್ಯಯನದ ಶಾಸ್ತ್ರವನ್ನು ಏನೆಂದು ಕರೆಯುತ್ತಾರೆ?
A) ಟ್ಯಾಕ್ಸಿಡರ್ಮಿ
B) ಡರ್ಮೆಟಾಲಜಿ✔✔
C) ಎಕೋಡರ್ಮಿ
D) ಆರ್ಣಿತೋಲಜಿ
📗📙📗📙📗📙📗📙📗📙📗📙📗
2. ವಿಶ್ವ ವಿಖ್ಯಾತ ‘ಕ್ಯೂ ಗಾರ್ಡನ್’ 
ಯಾವ ನಗರದ ಬಳಿ ಇದೆ?
A) ನ್ಯೂಯಾರ್ಕ್‌
B) ಡೆವೊನ್
C) ಲಂಡನ್✔✔
D) ಪ್ಯಾರಿಸ್
📗📙📗📙📗📙📗📙📗📙📗📙📗
3. ‘ತಾಂಡವಾಳ’ ಎಂಬ ಶಬ್ದ ಯಾವ ಲೋಹಕ್ಕೆ ಸಂಬಂಧಿಸಿದೆ?
A) ತಾಮ್ರ
B) ಬೆಳ್ಳಿ
C) ಚಿನ್ನ
D) ಕಬ್ಬಿಣ✔✔
📗📙📗📙📗📙📗📙📗📙📗📙📗
4. ಅಕ್ಕಮಹಾದೇವಿಯು ಮೂಲತಃ ಯಾವ ಊರಿನವಳು?
A) ಉಡುತಡಿ✔✔
B) ಬಳ್ಳಿಗಾವೆ
C) ಕಲ್ಯಾಣ
D) ಉಳವಿ
📗📙📗📙📗📙📗📙📗📙📗📙📗
5. ಚಿಕೂನ್‌ಗುನ್ಯಾ ಜ್ವರವು ವಿಶೇಷವಾಗಿ ದೇಹದ ಯಾವ ಭಾಗಗಳಲ್ಲಿ ಅತಿಯಾದ ನೋವನ್ನು ಉಂಟುಮಾಡುತ್ತದೆ?
A) ಗಂಟಲು
B) ಕೀಲುಗಳು✔✔
C) ಹೊಟ್ಟೆ
D) ಕಣ್ಣು
📗📙📗📙📗📙📗📙📗📙📗📙📗
6. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಪಂದ್ಯಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತಿವೆ?
A) ಎರಡು✔✔
B) ಮೂರು
C) ಒಂದು
D) ನಾಲ್ಕು
📗📙📗📙📗📙📗📙📗📙📗📙📗
7. ಥಿಯಡೊಲೈಟ್ ಎಂಬ ಉಪಕರಣವನ್ನು ಯಾವ ಕಾರ್ಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ?
A) ಮುದ್ರಣ
B) ಸರ್ವೆ✔✔
C) ವೈದ್ಯಕೀಯ
D) ನೇಯ್ಗೆ
📗📙📗📙📗📙📗📙📗📙📗📙📗
8. ವಿ.ಸ.ಖಾಂಡೇಕರ್ ಅವರು ಯಾವ ಭಾಷೆಯ ಪ್ರಮುಖ ಸಾಹಿತಿ?
A) ಗುಜರಾತಿ
B) ರಾಜಸ್ಥಾನಿ
C) ಒರಿಯಾ
D) ಮರಾಠಿ✔✔
📗📙📗📙📗📙📗📙📗📙📗📙📗
9. ಇವುಗಳಲ್ಲಿ ಯಾವುದು ಯೋಗದ ಎಂಟು ಅಂಗಗಳಲ್ಲಿ ಒಂದಲ್ಲ?
A) ಅನುಸಂಧಾನ✔✔
B) ಆಸನ
C) ನಿಯಮ
D) ಪ್ರಾಣಾಯಾಮ
📗📙📗📙📗📙📗📙📗📙📗📙📗
10. ಬೂರುಗದ ಮರದ ಬೀಜ ಪ್ರಸರಣವು ಯಾವುದರಿಂದ ಆಗುತ್ತದೆ?
A) ನೀರು
B) ಪಕ್ಷಿಗಳು
C) ಗಾಳಿ✔✔
D) ಬೆಂಕಿ
📗📙📗📙📗📙📗📙📗📙📗📙📗

Sunday, 16 September 2018

ವಿಶ್ವ ಓಜೋನ್ ದಿನ – ಸಪ್ಟೆಂಬರ್ 16

ಏನಿದು ಓಜೋನ್ ಪದರ?
ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ ಎಂದು ಸಾಬೀತಾಗಿ ಶತಮಾನಗಳೇ ಕಳೆದಿದೆ. ಭೂಮಿಯ ವಾತಾವರಣದ ಮೊದಲೇ ಎರಡು ಪದರಗಳಾದ ಟ್ರೋಪೋಸ್ಪಿಯರ್ ಮತ್ತು ಸ್ಟ್ರಾಟೋಸ್ಪಿಯರ್‍ಗಳಲ್ಲಿ ಓಜೋನ್ ಇರುತ್ತದೆ. ಸುಮಾರÀು ಶೇಕಡಾ 90 ಭಾಗ ಓಜೋನ್ ಸ್ಟ್ರಾಟೋಸ್ಪಿಯರ್ ಪದರದಲ್ಲಿ ಇರುತ್ತದೆ. ಅಲ್ಲದೆ ಓಜೋನ್ ಸ್ಟ್ರಾಟೋಸ್ಪಿಯರ್‍ನಲ್ಲಿದ್ದರೆ ಜೀವರಕ್ಷಕ ಕವಚವಾಗಿರುತ್ತದೆ ಮತ್ತು ಟ್ರೋಪೋಸ್ಪಿಯರ್‍ನಲ್ಲಿದ್ದರೆ ಮಾಲಿನ್ಯಕಾರಕ ಅನಿಲವಾಗಿ ಪರಿವರ್ತನೆಯಾಗುತ್ತದೆ. ಭೂಮಿಯಿಂದ ಮೇಲ್ಮುಖವಾಗಿ 25ರಿಂದ 30 ಕಿ.ಮೀ ದೂರದಲ್ಲಿ ಸ್ಟ್ರಾಟೋಸ್ಪಿಯರ್‍ನಲ್ಲಿ ಓಜೋನ್ ಪದರವಾಗಿ ಸೂರ್ಯ ಕಿರಣಗಳಿಂದ ಹೊರಹೊಮ್ಮುವ ನೆರಳಾತೀತ ಕಿರಣಗಳನ್ನು ಹೀರಿಕೊಂಡು, ಚರ್ಮದ ಕ್ಯಾನ್ಸರ್‍ನಿಂದ ಮನುಕುಲವನ್ನು ರಕ್ಷಿಸುತ್ತದೆ ಎಂದು ನಮಗೆ ತಿಳಿದ ಸತ್ಯ ವಿಚಾರವಾಗಿದೆ. ಸೂರ್ಯನ ನೇರಳಾತೀತ ಕಿರಣಗಳ ಸಮ್ಮುಖದಲ್ಲಿ ಆಮ್ಲಜನಕದ ಒಂದು ಅಣು ಮತ್ತು ಪರಮಾಣು ಸೇರಿದಾಗ ಓಜೋನ್ ಪದರ ಸೃಷ್ಟಿಯಾಗುತ್ತದೆ. ಒಟ್ಟಿನಲ್ಲಿ ಓಜೋನ್ ಪದರದ ಸೃಷ್ಟಿಗೆ ಮುಖ್ಯವಾಗಿ ಬೇಕಾಗಿರುವುದು ಆಮ್ಲಜನಕದ ಅಣು ಮತ್ತು ಪರಮಾಣು ಹಾಗೂ ಸೂರ್ಯನ ನೆರಳಾತೀತ ಕಿರಣಗಳು ಓಜೋನ್ ಪದರ ಸೃಷ್ಟಿಯಾಗುವ ಈ ಪ್ರಕೃತಿಯ ಪ್ರಕ್ರಿಯೆಯಲ್ಲಿ ಆಮ್ಲಜನಕದ ಅಣು ಮತ್ತು ಪರಮಾಣುಗಳು ನೆರಳಾತೀತ ಕಿರಣಗಳನ್ನು ಹೀರಿ ಭೂಮಂಡಲದ ಜೀವರಾಶಿಗಳಿಗೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಹೀಗೆ ಓಜೋನ್ ಪದರ ಸೃಷ್ಟಿಯಾಗುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರ ಜೊತೆಗೆ ನೈಸರ್ಗಿಕವಾಗಿ ಹಾಗೂ ಮನುಷ್ಯನ ನಿಸರ್ಗ ವಿರೋಧಿ ಪ್ರಕ್ರಿಯೆಗಳಿಂದಾಗಿ ಓಜೋನ್ ಪದರ ಅನೈಸರ್ಗಿಕವಾಗಿ ಕ್ಷೀಣವಾಗುತ್ತಲೇ ಬರುತ್ತಿದೆ. ಹೀಗೆ ಓಜೋನ್ ಸೃಷ್ಟಿಯಾಗುವ ಪ್ರಕ್ರಿಯೆಗಿಂತ ಕ್ಷಿಣಿಸುವ ಪ್ರಕ್ರಿಯೆ ಹೆಚ್ಚಾದಂತೆ ಓಜೋನ್ ಪದರ ತೆಳುವಾಗುತ್ತಲೇ ಬರುತ್ತದೆ. ಒಟ್ಟಿನಲ್ಲಿ ತೆಳುವಾದ ಒಜೋನ್ ಪದರ ಸೂರ್ಯನ ನೆರಳಾತೀತ ಕಿರಣಗಳನ್ನು ತಡೆಯಲರದೇ, ಭೂಮಿಗೆ ನೇರವಾಗಿ ಸೇರಿಕೊಂಡು ಜೀವರಾಶಿಗಳ ಮೇಲೆ, ಮನುಕುಲದ ಮೇಲೆ ಮಾರಕವಾದ ದಾಳಿ ನಡೆಸುತ್ತದೆ.
OZONE LAYER
ಓಜೋನ್ ಪದರ ಕರಗಲು ಕಾರಣಗಳು ಏನು?
ಓಜೋನ್ ಪದರ ಕರಗಲು ಮುಖ್ಯ ಕಾರಣಗಳು ಬೆಳೆಯುತ್ತಿರುವ ಕೈಗಾರಿಕೀಕರಣ ಎಂದರೂ ತಪ್ಪಲ್ಲ. ಕಾಡು ಕಡಿದು ಕಾಂಕ್ರೀಟ್ ಜಂಗಲ್ ಮಾಡಿಕೊಂಡು ಆಧುನೀಕತೆಯ ನೆಪದಲ್ಲಿ ಪರಿಸರ ವಿರೋಧಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವುದೇ ಬಹಳ ದೊಡ್ಡ ದುರಂತ ಎಂದರೂ ತಪ್ಪಲ್ಲ. ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷಕಾರಕ ಅನಿಲಗಳು, ವಾಹನಗಳಿಂದ ಹೊರಸೂಸುವ ಹೊಗೆ, ಧೂಮಪಾನ, ಹವಾನಿಯಂತ್ರಕ ಯಂತ್ರಗಳಿಂದ ಹೊರಸೂಸುವ ವಿಷಾನಿಲಗಳು, ಶಿಥಿಲೀಕರಣ ಯಂತ್ರದಿಂದ ಹೊರಹೊಮ್ಮುವ ಅನಿಲಗಳು ಖಂಡಿತವಾಗಿಯೂ ಓಜೋನ್ ಪದರಕ್ಕೆ ಮಾರಕವಾಗಬಲ್ಲದು. ಮಥೇನ್, ಕಾರ್ಬನ್ ಮೋನೋಕ್ಸೈಡ್, ಕ್ಲೋರೋಪ್ಲೋರೋ ಕಾರ್ಬನ್, ಕ್ಲೋರಿನ್ ಬ್ರೋಮಿನ್, ಮಿಥೈಲ್ ಬ್ರೋಮೈಡ್, ಹೈಡ್ರೋ ಪ್ಲೋರೋಕಾರ್ಬನ್ ಮುಂತಾದ ಅನಿಲಗಳು ಓಜೋನ್ ಪದರವನ್ನು ತೆಳುವಾಗಿಸುವಲ್ಲಿ ಪ್ರಮುಖ ಭೂಮಿಕೆ ವಹಿಸುತ್ತದೆ.
ಓಜೋನ್ ಪದರ ತೆಳುವಾದಲ್ಲಿ ಉಂಟಾಗುವ ಅನಾಹುತಗಳು
ಆಕ್ಸ್‍ಪರ್ಡ್ ವಿಶ್ವ ವಿದ್ಯಾಲಯದ ಹಿರಿಯ ವಿಜ್ಞಾನಿ ಡಾಬ್ಸನ್ ಎಂಬಾತ ಓಜೋನ್ ಅನಿಲದ ಪ್ರಮಾಣವನ್ನು ಸಂಶೋಧನಾತ್ಮಕವಾಗಿ ಮೊದಲಿಗೆ ದಾಖಲಿಸಿದರು. ಅವರ ನೆನಪಲ್ಲಿ ಓಜೋನ್ ಪದರದ ಅಳತೆಗೆ ಡಾಬ್ಸನ್ ಯುನಿಟ್ ಎಂದೇ ನಾಮಕರಣ ಮಾಡಲಾಯಿತು. ಈ ಪದರ 290 ರಿಂದ 310ರ ವರೆಗಿದ್ದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ 290ಕ್ಕಿಂತ ಕಡಿಮೆಯಾದಲ್ಲಿ ಮನುಕುಲ ಮತ್ತು ಜೀವ ಸಂಕುಲಕ್ಕೆ ಖಂಡಿತವಾಗಿಯೂ ಮಾರಕವಾಗುತ್ತದೆ ಎಂದು ತಿಳಿದು ಬಂದಿದೆ. ಓಜೋನ್ ಪದರ ತೂತಾಗಿದೆ ಎಂದು ಆಡು ಮಾತಲ್ಲಿ ಹೇಳುವುದು ಇದರ ನಿಜವಾದ ಅರ್ಥ, ಓಜೋನ್ ಪದರ 290 ಡಾಬ್ಸನ್ ಯುನಿಟ್‍ಗಿಂತಲೂ ತೆಳುವಾಗಿ ತನ್ನ ಜೀವ ರಕ್ಷಕ ಸಾಮಥ್ರ್ಯವನ್ನು ಕಳಕೊಂಡಿದೆ ಎಂಬುದಾಗಿರುತ್ತದೆ. ಓಜೋನ್ ಪದರ ತೆಳುವಾದಲ್ಲಿ ಮನುಷ್ಯನ ಆರೋೀಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್ ಬರಬಹುದು. ಭೂಮಂಡಲದ ಇತರ ಜೀವ ಸಂಕುಲಗಳು ನಾಶವಾಗಿ ಪರಿಸರದ ಸಮತೋಲನ ತಪ್ಪಬಹುದು. ಭೂಮಿಯ ಫಲವತ್ತತೆ ಕಡಿಮೆಯಾಗಿ ಬರಡು ಭೂಮಿಯಾಗಲೂ ಬಹುದು. ಶುದ್ಧ ನೀರಿನ ಕೊರತೆಯೂ ಕಾಡಬಹುದು. ಒಟ್ಟಿನಲ್ಲಿ ಭೂಮಂಡಲ ಜೀವಿಸಲು ಯೋಗ್ಯವಾದ ಸ್ಥಳವಾಗಿ ಖಂಡಿತವಾಗಿಯೂ ಉಳಿಯದು ಎಂಬುದು ಸಾರ್ವಕಾಲಿಕ ಸತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಾಢವಾಗಿ ಯೋಚಿಸಿ ಪರಿಸರಕ್ಕೆ ಮಾರಕವಾಗುವ ಯಾವುದೇ ಕೈಗಾರೀಕೀಕರಣ ಯೋಜನೆಗಳು ಮತ್ತು ಪರಿಸರಕ್ಕೆ ಮಾರಕವಾಗುವ ಅನಿಲಗಳನ್ನು ಹೊರಸೂಸುವ ಯಂತ್ರೋಪಕರಣಗಳ ಬಳಕೆಯನ್ನು ಕಡಿಮೆ ಮಾಡಿ ಭೂಮಂಡಲವನ್ನು ನಮ್ಮ ನಂತರದ ಪೀಳಿಗೆಗೆ ವಾಸಕ್ಕೆ ಯೋಗ್ಯವಾದ ಸ್ಥಳವಾಗಿ ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.
ನಮ್ಮ ಜೀವನಶೈಲಿ, ಬದುಕಿನಪದ್ಧತಿ, ಆಹಾರ ಪದ್ಧತಿಯನ್ನು ಪರಿಸರಕ್ಕೆ ಪೂರಕವಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಇಲ್ಲವಾದಲ್ಲಿ ಇನ್ನೊಂದು ಶತಮಾನ ಕಳೆಯುವ ಹೊತ್ತಿಗೆ ನಮ್ಮ ಫಲವತ್ತ್ತಾದ ಭೂಮಂಡಲ ಬಂಜರು ಭೂಮಿಯಾಗಿ ಮರುಳುಗಾಡಾಗಿ ಪರಿವರ್ತತೆಯಾಗಲೂ ಬಹುದು.
ವಿಶ್ವ ಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಚೀನಾಕ್ಕೆ ದೊರಕಿದೆ ಅದೇ ರೀತಿ ಅತೀ ಕಡಿಮೆ ಇಂಗಾಲ ಹೊರಸೂಸುವ ರಾಷ್ಟ್ರವಾಗಿ ಇಥಯೋಪಿಯಾ ಹೊರಹೊಮ್ಮಿದೆ. ನಮ್ಮ ಭಾರತ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಇಂಗಾಲ ಹೊರಸೂಸುವ ದೇಶವಾಗಿದೆ. ಬೆಳವಣಿಗೆಯ ಧಾವಂತದಲ್ಲಿ ಕೈಗಾರೀಕರಣದ ಅನಿವಾರ್ಯತೆಯಲ್ಲಿ ಆರ್ಥಿಕತೆಯನ್ನು ಸದೃಢಗೊಳಿಸುವ ಪ್ರಕ್ರಿಯೆಯಲ್ಲಿ ಇಂತಹ ಬೆಳವಣಿಗೆಗಳು ನಡೆಯುವುದು ಸಹಜ. ಆದರೆ ಪರಿಸರ ಮತ್ತು ಆಧುನೀಕರಣ ಇವುಗಳ ನಡುವಿನ ಹೊಂದಾಣಿಕೆಯನ್ನು ತೂಗಿಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ಜಗತ್ತಿನ ಇತರ ರಾಷ್ಟ್ರಗಳ ಜತೆಗಿನ ಪೈಪೋಟಿಯಲ್ಲಿ, ಕೈಗಾರೀಕೀಕರಣದ ಮತ್ತು ಔದ್ಯೋಗೀಕರಣದ ನೆಪದಲ್ಲಿ ಹೆಚ್ಚು ಹೆಚ್ಚು ಹಸಿರುಮನೆ ಅನಿಲಗಳನ್ನು ಅಂದರೆ ಕಾರ್ಬನ್ ಡೈ ಆಕ್ಸೈಡ್, ಮಿಥೆನ್, ನೈಟ್ರನ್ ಆಕ್ಸೈಡ್ ಗಳನ್ನು ಪರಿಸರಕ್ಕೆ ಸೇರಿಸಿದಲ್ಲಿ ನಮ್ಮ ನಂತರದ ಪೀಳಿಗೆಯ ಜನಾಂಗ ಬದುಕಲು, ಉಸಿರಾಡಲು ಪರದಾಡಬೇಕಾದ ಕಾಲಬಂದರೂ ಬರಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಚಿಂತಿಸಿ ಮುಂದುವರಿಯಬೇಕಾದ ಕಾಲ ಬಂದೊದಗಿದೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ನಮ್ಮ ಮುಂದಿನ ಜನಾಂಗಕ್ಕೂ ಬದುಕಲು ಪೂರಕವಾದ ವಾತಾವರಣ ಮತ್ತು ಭೂಮಂಡಲದ ಫಲವತ್ತತೆಯನ್ನು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.
JNANASELE

Saturday, 3 February 2018

ಪ್ರಚಲಿತ ಘಟನೆಗಳ ಕ್ವಿಜ್ 14/01/2018

1) 'ಒಂದು ಭಾರತ ಶ್ರೇಷ್ಠ ಭಾರತ' ದ ಅಡಿಯಲ್ಲಿ ಏಳನೇ ಆವೃತ್ತಿಯ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ ಎಲ್ಲಿ ನಡೆಯುತ್ತದೆ ?
a) ದೆಹಲಿ
b) ತಮಿಳುನಾಡು
c) ಕರ್ನಾಟಕ ✔✔
d) ತೆಲಂಗಾಣ
📓📓📓📓📓📓📓📓📓📓📓📓📓📓
2) 2016ರಲ್ಲಿದ್ದಂತೆ ಭಾರತದ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ 1000ಕ್ಕೆ ಎಷ್ಟಿದೆ?
a) 43
b) 39✔✔
c) 38
d) 46
📓📓📓📓📓📓📓📓📓📓📓📓📓
3) ಮಾರ್ಗನ್ ಸ್ಟಾನ್ಲಿ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆ 2020-22ರಲ್ಲಿ ಯಾವ ಮಟ್ಟವನ್ನು ತಲುಪುತ್ತದೆ?
a) 9.7%
b) 6%
c) 7.3%✔✔
d) 8.3%
📓📓📓📓📓📓📓📓📓📓📓📓📓📓
4) ಮಹಾವಿತರನ್(Mahavitaran) ಎಂಬ ಕಂಪನಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ಸೌರಶಕ್ತಿ ✔✔
b) ಅಟೊಮೊಬೈಲ್
c) ತಂತ್ರಜ್ಞಾನ
d) ಸಂಪರ್ಕ
📓📓📓📓📓📓📓📓📓📓📓📓📓
5) ಭಾರತದ ಮೊದಲ ಹಸಿರು ಬಾಂಡ್ ಈ ಕೆಳಗಿನ ಯಾವುದರ ಪಟ್ಟಿಯಲ್ಲಿ ಸೇರಿದೆ?
a) NCDEX
b) NSE
c) MCX
d) BSE✔✔
📓📓📓📓📓📓📓📓📓📓📓📓📓
6) ಬೆಂಜಮಿನ್ ನೇತನ್ಯಾಹು ಯಾವ ದೇಶದ ಪ್ರಧಾನಿಯಾಗಿದ್ದಾರೆ?
a) ಟರ್ಕಿ
b) ಇರಾಕ್
c) ಅಫ್ಘಾನಿಸ್ತಾನ
d) ಇಸ್ರೇಲ್ ✔✔
📓📓📓📓📓📓📓📓📓📓📓📓📓
7) ರಿಝೌ (Rizhao) ಕ್ಷಿಪಣಿ ಹೊತ್ತೊಯ್ಯುವ ಯುದ್ಧ ನೌಕೆ  ಈ ಕೆಳಗಿನ ಯಾವ ದೇಶಕ್ಕೆ  ಸೇರಿದೆ?
a) ಇಸ್ರೇಲ್
b) ಇರಾಕ್
c) ಕೊರಿಯಾ
d) ಚೀನಾ ✔✔
📓📓📓📓📓📓📓📓📓📓📓📓📓
8) ಈ ಕೆಳಗಿನ ದೇಶಗಳಲ್ಲಿ ಯವುದು ಜಾಗತಿಕ ಉತ್ಪಾದನಾ ಸೂಚ್ಯಂಕದಲ್ಲಿ ಅಗ್ರಸ್ಥಾನ ಹೊಂದಿದೆ?
a) ಬ್ರೆಜಿಲ್
b) ಜಪಾನ್ ✔✔
c) ಇಂಗ್ಲೆಂಡ್
d) ಅಮೇರಿಕ
📓📓📓📓📓📓📓📓📓📓📓📓📓📓
9) ಈ ಕೆಳಗಿನ ರಾಜ್ಯಗಳಲ್ಲಿ NFHS-4 (National Family and Health Survey) ಸಮೀಕ್ಷೆ ಪ್ರಕಾರ ದೇಶದ ಅತಿ ಶ್ರೀಮಂತ ರಾಜ್ಯ ಯಾವುದು?
a) ತೆಲಂಗಾಣ
b) ಗುಜರಾತ್
c) ಪಂಜಾಬ್ ✔✔
d) ತಮಿಳುನಾಡು
📓📓📓📓📓📓📓📓📓📓📓📓📓📓
10) ಭಾರತದಲ್ಲಿ ಮೊದಲ ಐ.ಟಿ. ಟ್ರೇಡ್ ಯೂನಿಯನ್ ಎಲ್ಲಿ ಕಾರ್ಯಾರಂಭ ಮಾಡಿದೆ??
a) ಪುಣೆ ✔✔
b) ಹೈದರಾಬಾದ್
c) ಬೆಂಗಳೂರು
d) ಚೆನ್ನೈ
📓📓📓📓📓📓📓📓📓📓📓📓📓📓

Friday, 2 February 2018

ಪ್ರಚಲಿತ ಘಟನೆಗಳ ಕ್ವಿಜ್ 13/02/2018

1) ಈ ಕೆಳಗಿನ ಯಾವ ದೇಶದ ಜೊತೆ ಭಾರತ ಮೊದಲ ಬಾರಿಗೆ ಭದ್ರತಾ ಮಾತುಕತೆಯನ್ನು ನಡೆಸಿತು?
a) ಜಕಾರ್ತಾ
b) ಯು.ಎಸ್.ಎ.
c) ಇಂಡೊನೇಷ್ಯಾ ✔✔
d) ಟರ್ಕಿ
📖📖📖📖📖📖📖📖📖📖📖📖📖
2) ಆಡಳಿತ ಮತ್ತು ಐತಿಹಾಸಿಕ ದಾಖಲೆಗಳನ್ನು  ಸಂರಕ್ಷಿಸಲು ಯಾವ ರಾಜ್ಯ ಸರ್ಕಾರವು ಪ್ರತಿದಿನ 10,000 ಪುಟಗಳನ್ನು ಡಿಜಿಟಲೀಕರಣಗೊಳಿಸುತ್ತಿದೆ?
a) ಕೇರಳ
b) ಪುದುಚೇರಿ
c) ಗುಜರಾತ್
d) ರಾಜಸ್ಥಾನ ✔✔
📖📖📖📖📖📖📖📖📖📖📖📖📖
3) ಯಾವುದರಿಂದ ತಯಾರಿತ ರಾಷ್ಟ್ರೀಯ ಬಾವುಟವನ್ನು ಪ್ರತಿಯೊಬ್ಬರೂ ಬಳಸದಂತೆ ಕೇಂದ್ರ ಸರ್ಕಾರ  ಒತ್ತಾಯಿಸಿದೆ?
a) ರಬ್ಬರ್
b) ಕಾಗದ
c) ಪ್ಲಾಸ್ಟಿಕ್ ✔✔
d) ಬಟ್ಟೆ
📖📖📖📖📖📖📖📖📖📖📖📖📖
4) ನವೆಂಬರ್2017ರಲ್ಲಿ ಭಾರತದ ದೇಶೀಯ ವಿಮಾನ ಪ್ರಯಾಣಿಕರ ಸಂಚಾರದಲ್ಲಿ ಎಷ್ಟು ಹೆಚ್ಚಳವಾಯಿತು ?
a) 17.4
b) 16.4✔✔
c) 16.2
d) 18.2
📖📖📖📖📖📖📖📖📖📖📖📖📖📖
5) ಪ್ರಸ್ತುತ ಭಾರತದಲ್ಲಿನ ಮೊಬೈಲ್ ಪೆಮೆಂಟ್ ಬಳಕೆದಾರರ ಸಂಖ್ಯೆ ?
a) 34 ಮಿಲಿಯನ್
b) 46 ಮಿಲಿಯನ್
c) 76 ಮಿಲಿಯನ್
d) 56 ಮಿಲಿಯನ್✔✔
📖📖📖📖📖📖📖📖📖📖📖📖📖📖
6) ಭಾರತೀಯ ಭದ್ರತಾ ಪ್ರೆಸ್(Indian Security Press) ಎಲ್ಲಿದೆ?
a) ನಾಸಿಕ್✔✔
b) ಮೈಸೂರು
c) ಗ್ಯಾಂಗ್ಟಾಕ್
d) ದಿಬ್ರುಗರ್
📖📖📖📖📖📖📖📖📖📖📖📖📖
7) ಈ ಕೆಳಗಿನ ಯಾವ ದೇಶವು ಮೊದಲ ಬಾರಿಗೆ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ?
a) ಕುವೈತ್
b) ಕತಾರ್
c) ಸೌದಿ ಅರೇಬಿಯಾ ✔✔
d) ಮೇಲಿನ  ಎಲ್ಲವೂ
📖📖📖📖📖📖📖📖📖📖📖📖📖📖
8) ಸರ್ಕಾರವು ಈ ಕೆಳಗಿನ ಯಾವ ನಗರದಲ್ಲಿ ಕ್ಲೀನ್ ಏರ್ ಕ್ಯಾಂಪೇನ್  ಆರಂಭಿಸಲು ಮುಂದಾಗಿದೆ?
a) ಮುಂಬೈ
b) ದೆಹಲಿ ✔✔
c) ಬೆಂಗಳೂರು
d) ಲಖನೌ
📖📖📖📖📖📖📖📖📖📖📖📖📖📖
9) ಪ್ರಸ್ತುತ ಭಾರತದ ಮುಖ್ಯ ನ್ಯಾಯಮೂರ್ತಿ ಯಾರಾಗಿದ್ದಾರೆ?
a) ರಂಜನ್ ಗೊಗೋಯ್
b) ದೀಪಕ್ ಮಿಶ್ರಾ✔✔
c) ಜೊಸೆಫ್ ಕುರಿಯನ್
d) ಮದನ್ ಲೊಕುರ್
📖📖📖📖📖📖📖📖📖📖📖📖📖📖
10) ಯಾವ ರಾಜ್ಯ 15-19 ವರ್ಷದೊಳಗಿನ ಮದುವೆಯಾದ ಹೆಣ್ಣು ಮಕ್ಕಳನ್ನು ಗರಿಷ್ಠ ಸಂಖ್ಯೆಯಲ್ಲಿ ಹೊಂದಿದೆ?
a) ಹರ್ಯಾಣಾ
b) ಝಾರ್ಖಂಡ್ ✔✔
c) ಛತ್ತೀಸ್‍ಘಡ್
d) ಪಂಜಾಬ್
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 12/01/2018

1) ಮುಲ್ಲಪೆರಿಯಾರ್ ಅಣೆಕಟ್ಟಿನ ವಿಷಯವಾಗಿ ವಿಶೇಷ ಸಮಿತಿಯನ್ನು ಸ್ಥಾಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದು ಮುಲ್ಲಪೆರಿಯಾರ್ ಅಣೆಕಟ್ಟು ಎಷ್ಟು ಹಳೆಯದು?
a) 92 ವರ್ಷ
b) 100 ವರ್ಷ
c) 122 ವರ್ಷ✔✔
d) 112 ವರ್ಷ
📖📖📖📖📖📖📖📖📖📖📖📖📖📖
2) ಜನವರಿ 26ರ ರಾಜಪಥದಲ್ಲಿ ಮೊದಲ ಬಾರಿ ಪಾಲ್ಗೊಳ್ಳುತ್ತಿರುವ/ಪಾಲ್ಗೊಂಡ 27 ಸದಸ್ಯರ ಬಿಎಸ್ಎಫ್ ಮಹಿಳೆಯರ ತಂಡದ ಹೆಸರೇನು ?
a) ಬಿ.ಎಸ್.ಎಪ
b) ಬ್ಲ್ಯಾಕ್ ಹಾರ್ಸ್
c) ಸುಪರ್ ಗರ್ಲ್ಸ್
d) ಡೇರ್ ಡೆವಿಲ್ಸ್ ✔✔
📖📖📖📖📖📖📖📖📖📖📖📖📖📖
3) ಇತ್ತೀಚೆಗೆ ಪಟಿಯಾಲ ಬೈಪಾಸ್ ರಸ್ತೆಯ ಅಪಘಾತದಲ್ಲಿ ನಿಧನರಾದ ಕುಸ್ತಿಪಟು ಯಾರು?
a)ರಮೇಶ್ ಕುಮಾರ್
b) ಸುಖಚೈನ ಸಿಂಗ್ ಸಿಂಗ್ ಚೀಮಾ✔✔
c) ಗೊಘಾ ಪಹಲ್ವಾನ್
d) ಕರೀಮ್ ಬಕ್ಸ್
📖📖📖📖📖📖📖📖📖📖📖📖📖
4) ಇತ್ತೀಚೆಗೆ ಸುದ್ದಿಯಲ್ಲಿರುವ ರಾಹುಲ್ ದ್ರಾವಿಡ ಅವರು ಸೂಪರ್‌ ಹಿರೊ ಆಗಿರುವ ಕಾಮಿಕ್ ಬುಕ್ ನ ಹೆಸರೇನು?
a) ರಾಹುಲ್ : ದಿ ಹಿರೊ
b) ದಿ ವಾಲ್✔✔
c) ರಾಹುಲ್ : ದಿ ಸುಪರ್ ಹಿರೊ
d) ದಿ ಸುಪರ್ ಹಿರೊ
📖📖📖📖📖📖📖📖📖📖📖📖📖📖
5) ಇವರು ಛತ್ತೀಸ್ಗಢದ ಮುಖ್ಯ ಕಾರ್ಯದರ್ಶಿಯಾಗಿ  ನೇಮಕವಾಗಿದ್ದಾರೆ.
a) ಅಜಯ್ ಸಿಂಗ್✔✔
b) ಉತ್ಪಲ್ ಕುಮಾರ್ ಸಿಂಗ್
c) ರಾಜೀವ್ ಕುಮಾರ್
d) ದೀಪೇಂದ್ರ ಸಿಂಗ್
📖📖📖📖📖📖📖📖📖📖📖📖📖📖
6)  "ರಾಷ್ಟ್ರೀಯ ಯುವ ದಿನ" ವನ್ನಾಗಿ ಯಾರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ ?
a) ಚಾಣಕ್ಯ
b) ರಾಜಾ ರಾಮ್ ಮೊಹನ್ ರಾಯ್
c) ಸ್ವಾಮಿ ವಿವೇಕಾನಂದ✔✔
d) ಅರಬಿಂದೊ ಘೋಷ್
📖📖📖📖📖📖📖📖📖📖📖📖📖📖
7) ಇತ್ತೀಚೆಗೆ ಉಡಾಯಿಸಲ್ಪಟ್ಟ ಪಿಎಸ್ಎಲ್ವಿ(PSLV) ಎಷ್ಟು ಉಪಗ್ರಹಗಳನ್ನು ಕೊಂಡೊಯ್ದಿತು?
a) 24
b) 22
c) 34
d) 31✔✔
📖📖📖📖📖📖📖📖📖📖📖📖📖📖
8) ಯಾವ ರಾಜ್ಯವು ತನ್ನ ರಾಜ್ಯದಲ್ಲಿ ಹುಲಿಗಳಿವೆಯೆ? ಎಂದು ಎಣಿಕೆ ಮಾಡಲು ಹೋರಟಿದೆ?
a) ರಾಜಸ್ಥಾನ
b) ಗುಜರಾತ್ ✔✔
c) ಮಧ್ಯ ಪ್ರದೇಶ
d) ಪಶ್ಚಿಮ ಬಂಗಾಳ
📖📖📖📖📖📖📖📖📖📖📖📖📖📖
9) ಸಂಜಯ್ ಮಂಜ್ರೇಕರ್ ಅವರ ಆತ್ಮಚರಿತ್ರೆಯ ಹೆಸರೇನು?
a) My story
b) Me and my Cricket
c) The Race of My Life
d) Imperfect✔✔
📖📖📖📖📖📖📖📖📖📖📖📖📖📖
10) ಈ ಕೆಳಗಿನ ಯಾವ ಸಂಸ್ಥೆಯನ್ನು ಸೆಬಿ ಎರಡು ವರ್ಷಗಳ ಕಾಲ ಆಡಿಟಿಂಗ್ ಮಾಡದಂತೆ ನಿಷೇಧಿಸಿದೆ?
a) ಪ್ರೈಸ್ ವಾಟರ್ ಹೌಸ್ ನೆಟ್ವರ್ಕ್✔✔
b) ಏಷಿಯಾ ಮೊಟಾರ್ ವರ್ಕ್ಸ್‌
c) ಎನ್ಬಿಸಿ ಬೇರಿಂಗ್ಸ್
d) ಕ್ರಾಂಪ್ಟನ್ ಗ್ರೀವ್ಸ್
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 11/01/2018


1) ಕೊಲ್ಕತ್ತ ಅಂತಾರಾಷ್ಟ್ರೀಯ ಸ್ನೂಕರ್ ಒಪನ್  ಚಾಂಪಿಯನ್ಷಿಪ್ 2018 ನ್ನು ಯಾರು ಗೆದ್ದರು?
a) ಜಾನ್ ಹಿಗ್ಗಿನ್ಸ್
b) ಆದಿತ್ಯ ಮೆಹ್ತಾ ✔✔
c) ಮಾರ್ಕ್‌ ಸೆಲ್ಬಿ
d) ಗಗನ್ ಮೂರ್ತಿ
📖📖📖📖📖📖📖📖📖📖📖📖📖📖
2) 41 ಮಹಿಳಾ ಸಿಬ್ಬಂದಿಯನ್ನು ಹೊಂದಿ 'ಮಹಿಳಾ ಸಿಬ್ಬಂದಿ ಮಾತ್ರ ಇರುವ ರೈಲ್ವೆ ಸ್ಟೇಷನ್' ಎಂದು ಲಿಮ್ಕಾ ದಾಖಲೆಗೆ ಸೇರಿದ ಸ್ಟೇಷನ್ ಎಲ್ಲಿದೆ?
a) ದೆಹಲಿ
b) ಕೊಲ್ಕತ್ತ
c) ಮುಂಬೈ ✔✔
d) ಬೆಂಗಳೂರು
📖📖📖📖📖📖📖📖📖📖📖📖📖📖
3) ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತದ ಪ್ರಧಾನಿ ಕೊನೆಯ ಬಾರಿ ಯಾವಾಗ ಹಾಜರಾಗಿದ್ದರು?
a) 1997✔✔
b) 1967
c) 1965
d) 1995
📖📖📖📖📖📖📖📖📖📖📖📖📖📖
4) ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ, ಭಾರತೀಯ ಮೂಲದ ಯಾವ ಶಾಸನಕಾರನನ್ನು ತನ್ನ ಸರ್ಕಾರದಲ್ಲಿ ಸೇರಿಸಿಕೊಂಡಿದ್ದಾರೆ?
a) ವಿಕ್ಟೋರಿಯಾ ಅಟ್ಕಿನ್ಸ್
b) ಪೆನ್ನಿ ಮೊರ್ಡಾಂಟ್
c) ಅಕ್ಷತಾ ಮೂರ್ತಿ
d) ರಿಷಿ ಸುನಾಕ✔✔
📖📖📖📖📖📖📖📖📖📖📖📖📖📖
5) ಇತ್ತೀಚೆಗೆ ಬಿಡುಗಡೆ ಮಾಡಿದ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಗಳಿಸಿದ ಬೌಲರ್ ಯಾರು?
a) ವೆರ್ನರ್ ಪಿಲ್ಯಾಂಡರ್
b) ಕಗಿಸೊ ರಬಾಡಾ✔✔
c) ಪೀಟರ್ ಪೊಲಾಕ್
d) ಡೇಲ್ ಸ್ಟೇನ್
📖📖📖📖📖📖📖📖📖📖📖📖📖📖
6) ಇತ್ತೀಚೆಗೆ ಪ್ರತಿಷ್ಠಿತ 'ಲಿಜನ್ ಆಫ್‌ ಆನರ್'("Legion of Honour") ಪ್ರಶಸ್ತಿ ಯಾರಿಗೆ ಲಭಿಸಿದೆ ?
a) ಶಂತನು ಭಟ್ಟಾಚಾರ್ಯ
b) ನೀಲಮಣಿ ಅಹುಜಾ
c) ಸೌಮಿತ್ರ ಚಟರ್ಜಿ ✔✔
d) ಶ್ವೇತಾ ಕುಲಕರ್ಣಿ
📖📖📖📖📖📖📖📖📖📖📖📖📖📖
7) ಈ ಕೆಳಗಿನ ಯಾರು ಹಿಮಾಚಲ ಪ್ರದೇಶದ ನೂತನ  ಪೊಲೀಸ್ ಮಹಾನಿರ್ದೇಶಕರಾಗಿ ನೇಮಕವಾಗಿದ್ದಾರೆ?
a) ಸುರ್ಜೀತ್ ಮೆಹ್ತಾ
b) ಶ್ರೀನಿವಾಸ ಶರ್ಮಾ
c) ಸಜನ್ ಸಿಂಗ್
d) ಎಸ್.ಪಿ. ಮರ್ಡಿ✔✔
📖📖📖📖📖📖📖📖📖📖📖📖📖📖
8) ಜಿನಿವಾದಲ್ಲಿರುವ ವಿಶ್ವ ವ್ಯಾಪಾರ ಪರಿಷತ್ ನ ನೂತನ ಅಧ್ಯಕ್ಷರಾಗಿ ಯಾರು ನೇಮಕವಾಗಿದ್ದಾರೆ?
a) ರೊನನ್ ಮ್ಯಾಕ್ ಲಾಗ್ಲಿನ್
b) ಸನ್ನಿ ವರ್ಗೀಜ್✔✔
c) ಸಿರಿಲ್ ಹುಮ್ಯನ್
d) ಕೇಟ್ ಮೆಕ್ಕೆ
📖📖📖📖📖📖📖📖📖📖📖📖📖📖
9) ಬ್ಲೂಮ್ ಬರ್ಗ್ ಬಿಲಿಯನಿಯರ್ಸ್ ಇಂಡೆಕ್ಸ್‌ ಪ್ರಕಾರ ವಿಶ್ವದ ಅಗ್ರ ಶ್ರೀಮಂತನಾದ ಅಮೆಜಾನ್ ಸಂಸ್ಥಾಪಕನ ಹೆಸರೇನು?
a) ಜಾಕ್ ಮಾ
b) ಕುನಾಲ್ ಬಾಹ್ಲ್
c) ಜೆಫ್ ಬಿಜೊಸ್✔✔
d) ವಾರನ್ ಬಫೆಟ್
📖📖📖📖📖📖📖📖📖📖📖📖📖📖
10) ಇಸ್ರೋದ ಹೊಸ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
a) ಡಾ. ಶಿವನ್ ಕೆ.✔✔
b) ಶ್ರೀನಿವಾಸ್ ಕುಮಾರ್
c) ಕಿರಣ್ ಕುಮಾರ್
d) ದಿನೇಶ್ ಸೇಥಿ
📖📖📖📖📖📖📖📖📖📖📖📖📖📖

Wednesday, 31 January 2018

ಪ್ರಚಲಿತ ಘಟನೆಗಳ ಕ್ವಿಜ್ 10/01/2018

1) ಕೆಳಗಿನ ಯಾವ ಬುಡಕಟ್ಟು ಜನಾಂಗ  ಸಿಮ್ಲಿಪಾಲ್ ಆವಾಸಸ್ಥಾನವನ್ನು ನಿರಾಕರಿಸಿದೆ?
a) ವಾರಲಿಸ್
b) ಬಡಗಾಸ
c) ಮಂಕಿಡಿಯಾ✔✔
d) ಬೊಡೊಸ್
📖📖📖📖📖📖📖📖📖📖📖📖📖📖
2) ಇತ್ತೀಚೆಗೆ PhonePe ಕೆಳಗಿನ ಯಾವ ಮೊಬೈಲ್ ವಾಲೆಟ್ ಕಂಪನಿಯೊಂದಿಗೆ ಪಾಲುದಾರಿಕೆ ಪಡೆಯಿತು?
a) Mswipe
b) FreeCharge✔✔
c) Airtel
d) Paytm
📖📖📖📖📖📖📖📖📖📖📖📖📖📖
3) e-cigarettes ನ್ನೂ ನಿಷೇಧಿಸಿದ ರಾಜ್ಯ ಯಾವುದು?
a) ಹರ್ಯಾಣಾ
b) ಗುಜರಾತ್
c) ಬಿಹಾರ✔✔
d) ಕೇರಳ
📖📖📖📖📖📖📖📖📖📖📖📖📖
4) ಸರ್ಕಾರ ಈ ಕೆಳಗಿನ ಯಾವ ಯೋಜನೆಯ ಮೊದಲ ಹಂತವಾಗಿ 1 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಿಗೆ  ಆಪ್ಟಿಕಲ್ ಫೈಬರ್ ಹಾಕಿಸಿದೆ?
a) ಭಾರತ್ ನೆಟ್✔✔
b) ಡಿಜಿಟಲ್ ಇಂಡಿಯಾ
c) ಅಂತರ್ಜಾಲ ಭಾರತ
d) ಡಿಜಿ ಭಾರತ
📖📖📖📖📖📖📖📖📖📖📖📖📖
5) ಕೆಳಗಿನ ಯಾವ ದೇಶದ ಜೊತೆ ಭಾರತ ಅಕ್ರಮ ಭಾರತೀಯ ವಲಸೆಗಾರರನ್ನು ಒಂದು ತಿಂಗಳೊಳಗಾಗಿ ಹಿಂದಿರುಗಿಸುವಂತೆ ಒಪ್ಪಂದ ಮಾಡಿಕೊಂಡಿದೆ?
a) ಇಟಲಿ
b) ಅಮೇರಿಕಾ
c) ಯುನೈಟೆಡ್ ಕಿಂಗ್‍ಡಮ್ ✔✔
d) ಚೀನಾ
📖📖📖📖📖📖📖📖📖📖📖📖📖
6) ಈ ಕೆಳಗಿನ ಯಾವ ಬ್ಯಾಂಕ್  ಸಾಗರೋತ್ತರ ಬಾಂಡ್ ಗಳ ಮೂಲಕ $ 2 ಬಿಲಿಯನ್ ಸಂಗ್ರಹಿಸಲು ಯೋಜನೆ ತಯಾರಿಸಿದೆ?
a) ಕೊಟಕ್ ಮಹಿಂದ್ರಾ
b) ಪಂಜಾಬ್ ನ್ಯಾಶನಲ್ ಬ್ಯಾಂಕ್
c) ಕೆನರಾ ಬ್ಯಾಂಕ್
d) ಎಸ್.ಬಿ.ಆಯ್.✔✔
📖📖📖📖📖📖📖📖📖📖📖📖📖📖
7) ಈ ಕೆಳಗಿನ ಯಾವ ರಾಜ್ಯವು ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್‌ ನಲ್ಲಿ ಅಗ್ರಸ್ಥಾನ ಪಡೆದಿದೆ?
a) ರಾಜಸ್ಥಾನ
b) ಗುಜರಾತ್ ✔✔
c) ಮಹಾರಾಷ್ಟ್ರ
d) ತೆಲಂಗಾಣ
📖📖📖📖📖📖📖📖📖📖📖📖📖📖
8) ನೇರ ತೆರಿಗೆ ಸಂಗ್ರಹ ಡಿಸೆಂಬರ್ 2017ರವರೆಗೆ ಎಷ್ಟು ಬೆಳವಣಿಗೆಯನ್ನು ಕಂಡಿದೆ?
a) 8.2 %
b) 16.2 %
c) 18.2 %✔✔
d) 20 %
📖📖📖📖📖📖📖📖📖📖📖📖📖📖
9) ಇವರು ಭಾರತದ ರಾಷ್ಟ್ರೀಯ ಪಾವತಿ ನಿಗಮದ ಎಮ್.ಡಿ. ಮತ್ತು ಸಿಇಒ ಆಗಿ ನೇಮಕ ವಾಗಿದ್ದಾರೆ.
a) ಎ.ಪಿ.ಹೋಟಾ
b) ದಿಲಿಪ್ ಆಸ್ಬೆ✔✔
c) ಅಲೋಕ್ ಕುಮಾರ್ ರಂಜೀತ್
d) ದೇವೇಂದ್ರ ಚಾವ್ಲಾ
📖📖📖📖📖📖📖📖📖📖📖📖📖📖
10) ಇತ್ತೀಚೆಗೆ ಸಿಕ್ಕಿಂ ರಾಜ್ಯ ದ ಅಧಿಕೃತ ರಾಯಭಾರಿ ಎಂದು ಯಾರನ್ನು ಹೆಸರಿಸಲಾಯಿತು?
a) ಅಮಿತಾಭ್ ಬಚ್ಚನ್
b) ಅಮಿರ್ ಖಾನ್
c) ಎ.ಆರ್. ರೆಹಮಾನ್ ✔✔
d) ಸಲ್ಮಾನ್ ಖಾನ್
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 09/01/2018

1) ಡ್ರೋನ್ ಕ್ಯಾಮೆರಾಗಳನ್ನು ಪಡೆದ ಮೊದಲ ರೈಲ್ವೆ ವಲಯ ಯಾವುದು ?
a) ಪೂರ್ವ ಕೇಂದ್ರ ರೈಲ್ವೆ
b) ಉತ್ತರ ಕೇಂದ್ರ ರೈಲ್ವೆ
c) ಪಶ್ಚಿಮ ಕೇಂದ್ರ ರೈಲ್ವೆ✔✔
d) ದಕ್ಷಿಣ ಕೇಂದ್ರ ರೈಲ್ವೆ
📖📖📖📖📖📖📖📖📖📖📖📖📖
2) ಈ ಕೆಳಗಿನ ಯಾರು 'ಸ್ವಚ್ಛ ಸರ್ವೇಕ್ಷಣ ಅಭಿಯಾನ 2018' ನ್ನು ಉತ್ತೇಜಿಸಲು ಬೃಹತ್ ಮುಂಬೈ ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿದ್ದಾರೆ?
a) ಪ್ರಿಯಾಂಕಾ ಚೋಪ್ರಾ
b) ಅಮಿರ್ ಖಾನ್
c) ಅಮಿತಾಭ್ ಬಚ್ಚನ್
d) ಅಕ್ಷಯ್ ಕುಮಾರ್ ✔✔
📖📖📖📖📖📖📖📖📖📖📖📖📖
3) ಈ ಕೆಳಗಿನ ಮುಖ್ಯಮಂತ್ರಿಗಳ ಪೈಕಿ ಯಾರು ಮೊದಲ ಮುಫ್ತಿ ಮೊಹಮ್ಮದ್ ಸಯೀದ್ ಪ್ರಶಸ್ತಿ ಆಯ್ಕೆಯಾಗಿದ್ದಾರೆ ?
a) ರಮಣ ಸಿಂಗ್
b) ನಿತಿಶ್ ಕುಮಾರ್ ✔✔
c) ಮಾಣಿಕ್ ಸರ್ಕಾರ
d) ವಿರಭದ್ರ ಸಿಂಗ್
📖📖📖📖📖📖📖📖📖📖📖📖📖📖
4) ಹವಾಮಾನ ಮತ್ತು ವಾಯುಗುಣ ಸಂಶೋಧನೆಗೆ ಮೀಸಲಿರಿಸಿದ ವಿಶ್ವದ ನಾಲ್ಕನೇ ವೇಗದ ಸೂಪರ್‌ ಕಂಪ್ಯೂಟರ್ ಹೆಸರೇನು?
a) ಪ್ರತ್ಯುಶ್✔✔
b) ಪ್ರತೀಕ್
c) ಪ್ರಖಾರ
d) ಪ್ರೇರಿತ
📖📖📖📖📖📖📖📖📖📖📖📖📖
5) ಪ್ರತಿವರ್ಷ ಯಾವಾಗ ಪ್ರವಾಸಿ ಭಾರತೀಯ ದಿವಸ್ ಅನ್ನು ಭಾರತದಲ್ಲಿ ಆಚರಿಸಲಾಗುತ್ತದೆ?
a) 15 ಜನವರಿ
b) 12 ಜನವರಿ
c) 19 ಜನವರಿ
d) 9 ಜನವರಿ✔✔
📖📖📖📖📖📖📖📖📖📖📖📖📖
6) ವಿಶ್ವದ ಅತಿದೊಡ್ಡ ಮಂಜುಗಡ್ಡೆ ಉತ್ಸವ ಎಲ್ಲಿ  ನಡೆಯುತ್ತದೆ?
a) ಕೆನಡಾ
b) ಚೀನಾ✔✔
c) ಸ್ವಿಟ್ಜರ್ಲ್ಯಾಂಡ್
d) ಪೊಲೆಂಡ್
📖📖📖📖📖📖📖📖📖📖📖📖📖
7) ಭಾರತೀಯ ಮೂಲದ  ಮೊದಲ ವ್ಯಕ್ತಿಗಳ ಸಂಸದೀಯ ಕಾನ್ಫರೆನ್ಸ್ (Persons of Indian Origin PIO) ನ್ನು ನರೇಂದ್ರ ಮೋದಿ ಎಲ್ಲಿ ಉದ್ಘಾಟಿಸಿದರು?
a) ಚೆನ್ನೈ
b) ಕೊಲ್ಕತ್ತ
c) ದೆಹಲಿ ✔✔
d) ಬೆಂಗಳೂರು
📖📖📖📖📖📖📖📖📖📖📖📖📖
8) ಬ್ರಿಸ್ಬೇನ್ ಅಂತಾರಾಷ್ಟ್ರೀಯ ಕಿರೀಟ 2018 ನ್ನು ಯಾರು ಪಡೆದುಕೊಂಡರು ?
a) ರ್ಯಾನ್ ಹ್ಯಾರಿಸನ್
b) ನಿಕ್ ಕಿರ್ಗಿಝ್ ✔✔
c) ಸ್ಟಾನ್ ವಾವ್ರಿಂಕಾ
d) ನೊವಾಕ್ ಜೊಕೊವಿಕ್
📖📖📖📖📖📖📖📖📖📖📖📖📖
9) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ  ನಿಧನರಾದ ಸಕ್ಷಮ್ ಯಾದವ್ ಅವರು ಯಾವ ಕ್ಷೇತ್ರದಲ್ಲಿ ಸೇವೆ  ಸಲ್ಲಿಸಿದ್ದಾರೆ?
a) ಪವರ್ ಲಿಫ್ಟಿಂಗ್✔✔
b) ಬಾಕ್ಸಿಂಗ್
c) ಅಥ್ಲೆಟಿಕ್ಸ್
d) ಪತ್ರಿಕೋದ್ಯಮ 
📖📖📖📖📖📖📖📖📖📖📖📖📖
10) ಇತ್ತೀಚೆಗೆ ಸೌದಿ ಅರೇಬಿಯ ಹಜ್ ಒಪ್ಪಂದವನ್ನು ಈ ಕೆಳಗಿನ ಯಾವ ದೇಶದೊಂದಿಗೆ ಮಾಡಿಕೊಂಡಿದೆ?
a) ಪಾಕಿಸ್ತಾನ
b) ಭಾರತ ✔✔
c) ಬಾಂಗ್ಲಾದೇಶ
d) ಚೀನಾ 

ಪ್ರಚಲಿತ ಘಟನೆಗಳ ಕ್ವಿಜ್ 08/01/2018

1) ಕೇಂದ್ರ ಸರ್ಕಾರದಿಂದ ಯಾವ ರಾಜ್ಯವು ತನ್ನ ಮೊದಲ ಸಿನಿಮಾ ಮತ್ತು ದೂರದರ್ಶನ ಸಂಸ್ಥೆಯನ್ನು ಪಡೆಯಲಿದೆ?
a) ಹಿಮಾಚಲ ಪ್ರದೇಶ
b) ತೆಲಂಗಾಣ
c) ಅರುಣಾಚಲ ಪ್ರದೇಶ ✔✔
d) ಆಂಧ್ರ ಪ್ರದೇಶ
📓📓📓📓📓📓📓📓📓📓📓📓📓📓

2) ಅತಿ ಅಪಾಯಕಾರಿ ಗರ್ಭಧಾರಣೆಯ (high-risk pregnancy -HRP) ಪೋರ್ಟಲ್ ಅನ್ನು ಪ್ರಾರಂಭಿಸಿದ ದೇಶದ ಮೊದಲ ರಾಜ್ಯ ಯಾವುದು?
a) ಗುಜರಾತ್
b) ಹರ್ಯಾಣಾ ✔✔
c) ರಾಜಸ್ಥಾನ
d) ಕೇರಳ
📓📓📓📓📓📓📓📓📓📓📓📓📓📓

3) ರಾಷ್ಟ್ರೀಯ ಮಹಿಳೆಯರ  ಬಾಕ್ಸಿಂಗ್ ಚಾಂಪಿಯನ್ಶಿಪ್ ನ ಎರಡನೇ ಆವೃತ್ತಿ ಎಲ್ಲಿ ನಡೆಯಿತು?
a) ಗುಜರಾತ್
b) ಹರ್ಯಾಣಾ ✔✔
c) ರಾಜಸ್ಥಾನ
d) ತೆಲಂಗಾಣ
📓📓📓📓📓📓📓📓📓📓📓📓📓📓

4) ವಿದೇಶಾಂಗ ಸಚಿವಾಲಯ(ಆರ್ಥಿಕ ಸಂಬಂಧಗಳು)ಕ್ಕೆ ಇತ್ತೀಚೆಗೆ ನೇಮಕಗೊಂಡ ಕಾರ್ಯದರ್ಶಿ ಯಾರು?
a) ವಿಜಯ್ ಕೇಶವ್ ಗೋಖಲೆ
b) ಎಸ್ ಎಂ ಕೃಷ್ಣ
c) ಆರ್ ಪಿ ಎನ್ ಸಿಂಗ್
d) ಟಿ.ಎಸ್.ತಿರುಮೂರ್ತಿ✔✔
📓📓📓📓📓📓📓📓📓📓📓📓📓📓

5) ಚೀನಾ ತನ್ನ ಎರಡನೇ ವಿದೇಶಿ ನೌಕಾ ಬೇಸ್ ನ್ನು ಎಲ್ಲಿ  ನಿರ್ಮಿಸಲು ಯೋಜಿಸಿದೆ?
a) ಪಾಕಿಸ್ತಾನ ✔✔
b) ಬಾಂಗ್ಲಾದೇಶ
c) ಶ್ರೀಲಂಕಾ
d) ಅಫ್ಘಾನಿಸ್ತಾನ
📓📓📓📓📓📓📓📓📓📓📓📓📓📓

6) ವಿಕಲಚೇತನರಿಗಾಗಿ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ್ನು ಯಾವ ರಾಜ್ಯ ಆರಂಭಿಸಿತು?
a) ಗುಜರಾತ್
b) ಆಂಧ್ರ ಪ್ರದೇಶ
c) ತೆಲಂಗಾಣ ✔✔
d) ಪಶ್ಚಿಮ ಬಂಗಾಳ
📓📓📓📓📓📓📓📓📓📓📓📓📓📓

7) ಇತ್ತೀಚೆಗೆ ನಿಧನರಾದ ಜೆರ್ರಿ ವ್ಯಾನ್ ಡೈಕ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಯಾಗಿದ್ದರು?
a) ಪತ್ರಕರ್ತ
b) ನಿರ್ದೇಶಕ ಮತ್ತು ನಿರ್ಮಾಪಕ
c) ಸಂಗೀತಗಾರ
d) ನಟ ಮತ್ತು ಹಾಸ್ಯನಟ✔✔
📓📓📓📓📓📓📓📓📓📓📓📓📓📓

8) ಇತ್ತೀಚೆಗೆ ಹಿಮಾಚಲ ಪ್ರದೇಶ 'ಗುಡಿಯಾ'
(Gudiya) ಎಂಬ ಸಹಾಯವಾಣಿ ಯನ್ನು ಆರಂಭಿಸಿದೆ. ಇದರ ಉದ್ದೇಶ ಇದಾಗಿದೆ __________ .
a) ಬಾಲ್ಯ ವಿವಾಹದ ವರದಿಗಾಗಿ
b) ಮಹಿಳೆಯರ ಶಿಕ್ಷಣಕ್ಕಾಗಿ
c) ಹೆಣ್ಣು ಶಿಶು ಹತ್ಯೆ ವರದಿ
d) ಮಹಿಳೆಯರ ವಿರುದ್ಧ ಅಪರಾಧ ವರದಿ✔✔
📓📓📓📓📓📓📓📓📓📓📓📓📓📓

9) 75 ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭ ಎಲ್ಲಿ ನಡೆಯಿತು?
a) ಮನಿಲಾ
b) ಕೆನಡಾ
c) ಬ್ಯಾಂಕಾಕ್
d) ಲಾಸ್ ಏಂಜಲೀಸ್✔✔
📓📓📓📓📓📓📓📓📓📓📓📓📓📓


10) ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ತನ್ನ ಅಧಿಕೃತ ಲಾಂಛನ ಅನಾವರಣಗೊಳಿಸಿತು?
a) ಪಶ್ಚಿಮ ಬಂಗಾಳ ✔✔
b) ಉತ್ತರ ಪ್ರದೇಶ
c) ತೆಲಂಗಾಣ
d) ಗುಜರಾತ್ 
📓📓📓📓📓📓📓📓📓📓📓📓📓📓

Tuesday, 30 January 2018

ಪ್ರಚಲಿತ ಘಟನೆಗಳ ಕ್ವಿಜ್ 07/01/2018

1) ಈ ಕೆಳಗಿನ ಯಾವುದರ ನಿಷೇಧದಿಂದಾಗಿ ಮೊದಲ ಬಾರಿಗೆ ವಿಜ್ಞಾನಿಗಳು ಕಡಿಮೆ ಓಝೋನ್ ಸವಕಳಿಯನ್ನು ಗಮನಿಸಿದ್ದಾರೆ?
a) ಪ್ಲಾಸ್ಟಿಕ್
b) ರಾಸಾಯನಿಕಗಳು✔✔
c) ಬಯೊಗ್ಯಾಸ್
d) ರಬ್ಬರ್
📓📓📓📓📓📓📓📓📓📓📓📓📓📓

2) ಇತ್ತೀಚೆಗೆ ಅರಬ್ ಸಂಸ್ಥಾನಗಳು ಪೂರ್ವ ಜೆರುಸಲೆಮ್ ನ್ನು ಈ ಕೆಳಗಿನ ಯಾವುದರ ರಾಜಧಾನಿಯಾಗಿ ಘೋಷಿಸಿವೆ?
a) ಜೊರ್ಡಾನ್
b) ಪ್ಯಾಲೆಸ್ಟೈನ್ ✔✔
c) ಸಿರಿಯಾ
d) ಇರಾಕ್
📓📓📓📓📓📓📓📓📓📓📓📓📓📓

3) ಈ ಕೆಳಗಿನ ಯಾವ ಬ್ಯಾಂಕ್ ಹೆಚ್ಚಿನ ಎನ್ಪಿಎ(NPA-Non Performing Asset)ಗಳನ್ನು ಹೊಂದಿರುವ  ಬ್ಯಾಂಕುಗಳಲ್ಲಿ ಅಗ್ರಸ್ಥಾನ ಪಡೆದಿದೆ?
a) ಪಂಜಾಬ್ ನ್ಯಾಷನಲ್ ಬ್ಯಾಂಕ್✔✔
b) ಕೆನರಾ ಬ್ಯಾಂಕ್
c) ಕಾರ್ಪೊರೇಷನ್ ಬ್ಯಾಂಕ್
d) ಐ.ಸಿ.ಐ.ಸಿ.ಐ
📓📓📓📓📓📓📓📓📓📓📓📓📓📓

4) ಮೇವು ಹಗರಣ ಪ್ರಕರಣದಲ್ಲಿ ಸಿಬಿಐ ಈ ಕೆಳಗಿನ ಯಾವ ನಾಯಕರಿಗೆ 3.5 ವರ್ಷ ಜೈಲು ಶಿಕ್ಷೆ ವಿಧಿಸಿದೆ?
a) ತೇಜಸ್ವಿ ಯಾದವ್
b) ಲಾಲು ಪ್ರಸಾದ್ ಯಾದವ್✔✔
c) ಶರದ್ ಯಾದವ್
d) ಸೂರ್ಯ ಪ್ರಕಾಶ್
📓📓📓📓📓📓📓📓📓📓📓📓📓📓

5) ಇತ್ತೀಚೆಗೆ ಮರಣ ಹೊಂದಿದ ಅನುಭವಿ ಜಾನ್ ಯಂಗ್ ಒಬ್ಬ ___________ .
a) ಗಗನಯಾತ್ರಿ✔✔
b) ಲೇಖಕ
c) ಪಾಪ್‌ ಗಾಯಕ
d) ಪತ್ರಕರ್ತ
📓📓📓📓📓📓📓📓📓📓📓📓📓📓

6) ಈ ಕೆಳಗಿನ ಯಾವ ನಗರವು ಬಾಲಕಿಯರ ಉನ್ನತ ಶಿಕ್ಷಣದಲ್ಲಿ  ಗರಿಷ್ಠ ದಾಖಲಾತಿ ಅನುಪಾತವನ್ನು ದಾಖಲಿಸಲಾಗಿದೆ?
a) ಭುವನೇಶ್ವರ
b) ಜೈಪುರ
c) ಚಂಡೀಗಢ✔✔
d) ಚೆನ್ನೈ
📓📓📓📓📓📓📓📓📓📓📓📓📓

7) ಗ್ರಾಹಕರಿಗೆ ಎಫ್ಡಿ ಸೌಲಭ್ಯವನ್ನು ಒದಗಿಸಲು ಇಂಡಸ್ಐಂಡ್ ಬ್ಯಾಂಕ್ನೊಂದಿಗೆ ಒಪ್ಪಂದ ಮಾಡಿಕೊಂಡ ಪೇಮೆಂಟ್ಸ್ ಬ್ಯಾಂಕ್ ಯಾವುದು?
a) ಜಿಯೊ ಪೇಮೆಂಟ್ಸ್ ಬ್ಯಾಂಕ್
b) ಪೆಟಿಯಮ್ ಪೇಮೆಂಟ್ಸ್ ಬ್ಯಾಂಕ್✔✔
c) ಏರಟೆಲ್ ಪೇಮೆಂಟ್ಸ್ ಬ್ಯಾಂಕ್
d) ಫ್ರೀಚಾರ್ಜ
📓📓📓📓📓📓📓📓📓📓📓📓📓📓

8) ಗಿಲ್ಲೆಸ್ ಸೈಮನ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
a) ಫುಟ್‌ಬಾಲ್‌
b) ಬ್ಯಾಡ್ಮಿಂಟನ್
c) ಸ್ಕ್ವಾಶ್
d) ಟೆನಿಸ್ ✔✔
📓📓📓📓📓📓📓📓📓📓📓📓📓📓

9) ಆಂಡ್ರಾಯ್ಡ್ ಟ್ರೋಜನ್ ಎಂಬ ಹೆಸರಿನ ವೈರಸ್ ಕೆಳಗಿನವುಗಳಲ್ಲಿ  ಯಾವುದಾದರ ಮೇಲೆ ದಾಳಿ ಮಾಡಿತು?
a) ಇವಿಎಂ ಯಂತ್ರಗಳು
b) ಮೊಬೈಲ್ ಬ್ಯಾಂಕಿಂಗ್✔✔
c) ಆಧಾರ್ ಡೇಟಾಬೇಸ್
d) ಮೇಲಿನ ಎಲ್ಲವೂ
📓📓📓📓📓📓📓📓📓📓📓📓📓📓


10) ಈ ಕೆಳಗಿನ ಯಾವ ದೇಶವು ತೈಲ ಆಧಾರಿತ ಕ್ರಿಪ್ಟೋಕರೆನ್ಸಿಯನ್ನು ಪರಿಚಯಿಸಲು ನಿರ್ಧರಿಸಿದೆ?
a) ಸೌದಿ ಅರೇಬಿಯಾ
b) ಇರಾಕ್
c) ಬಹ್ರೇನ್
d) ವೆನೆಜುವೆಲಾ ✔✔
📓📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 06/01/2018

1) ಟಿ 20 ಅಂತಾರಾಷ್ಟ್ರೀಯ ಇತಿಹಾಸದಲ್ಲಿ ಮೂರು ಶತಕಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಯಾರು?
a) ಕಾಲಿನ್ ಮುನ್ರೋ✔✔
b) ಆಡಮ್ ಮಿಲ್ನೆ
c) ಹೆನ್ರಿಕ್ಸ್
d) ಕ್ರಿಸ್ ಹ್ಯಾರಿಸ್
📖📖📖📖📖📖📖📖📖📖📖📖📖📖

2) ಇತ್ತೀಚೆಗೆ ಚೀನಾದಲ್ಲಿ ಹೊಸದಾಗಿ ಪತ್ತೆಯಾದ ಅಳಿವಿನಂಚಿನಲ್ಲಿರುವ ಹೂಬಿಡುವ ಸಸ್ಯದ ಹೆಸರೇನು?
a) ಪಿಂಪರ್ನಲ್
b) ಅರಿಝೋನಾ ಅಗೇವ್
c) ಪ್ರಿಮುಲಾ ಜುಯಿ✔✔
d) ಜಾರ್ಜಿಯಾ ಆಸ್ಟರ್
📖📖📖📖📖📖📖📖📖📖📖📖📖📖

3) ಇತ್ತೀಚೆಗೆ ನಿಧನರಾದ ರಾಧಾ ವಿಶ್ವನಾಥ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
a) ಕಾದಂಬರಿಗಾರ್ತಿ
b) ಗಾಯಕಿ ಮತ್ತು ಶಾಸ್ತ್ರೀಯ ನರ್ತಕಿ✔✔
c) ತಬಲಾವಾದಕಿ
d) ಪತ್ರಕರ್ತೆ
📖📖📖📖📖📖📖📖📖📖📖📖📖📖

4) ಇತ್ತೀಚೆಗೆ ಪಾಕಿಸ್ತಾನ ದೇಶೀಯವಾಗಿ ಅಭಿವೃದ್ಧಿಪಡಿಸಿದ ನೌಕಾ ಕ್ಷಿಪಣಿಯ ಹೆಸರೇನು?
a) ಮುಹಫಿಜ್
b) ಹರ್ಬಾ✔✔
c) ಅಜ್ಮಾತ್
d) ಬಾಬರ್
📖📖📖📖📖📖📖📖📖📖📖📖📖📖

5) ಭಾರತ ಸರ್ಕಾರವು ಮೈಗೋವ್ ಪ್ಲ್ಯಾಟ್ಫಾರ್ಮ್ (MyGov platform) ಅನ್ನು ಪ್ರಾರಂಭಿಸಿದೆ. ಇದರ ಉದ್ದೇಶ ಏನು?
a) ನಾಗರಿಕರಿಗೆ ಸರ್ಕಾರದ ಸಾಧನೆ ತಿಳಿಸಲು
b) ಕೃಷಿ ಉತ್ಪನ್ನಗಳನ್ನು ರೈತರಿಗೆ ಮಾರಾಟ ಮಾಡಲು
c) ದೇಶದ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಭಾರತೀಯ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು✔✔
d) ನಾಗರಿಕ ಸೇವೆಗಳನ್ನು ಒದಗಿಸಲು
📖📖📖📖📖📖📖📖📖📖📖📖📖📖

6) ಟೈಫಾಯಿಡ್ ಸಂಯುಕ್ತ ಲಸಿಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ನಿಂದ ಯಾವ ಕಂಪೆನಿ ಇತ್ತೀಚೆಗೆ ಪೂರ್ವ ಅರ್ಹತಾ ಟ್ಯಾಗ್ ಅನ್ನು ಸ್ವೀಕರಿಸಿದೆ?
a) ವಿಂಗ್ಸ್ ಬಯೋಟೆಕ್
b) ಎಬಿಎಸ್ ಬಯೋಟೆಕ್
c) ಟೈಟಾನ್ ಬಯೋಟೆಕ್
d) ಭಾರತ್ ಬಯೋಟೆಕ್✔✔
📖📖📖📖📖📖📖📖📖📖📖📖📖📖

7) ಈ ಕೆಳಗಿನ ಯಾವ ರಾಜ್ಯವು ಇತ್ತೀಚೆಗೆ ಅಲ್ಪಸಂಖ್ಯಾತರ ಆಯೋಗವನ್ನು ರಚಿಸಿದೆ?
a) ಝಾರ್ಖಂಡ್
b) ಉತ್ತರ ಪ್ರದೇಶ
c) ತೆಲಂಗಾಣ ✔✔
d) ಪುದುಚೇರಿ
📖📖📖📖📖📖📖📖📖📖📖📖📖📖

8) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜಲ್ ಮಾರ್ಗ್ ವಿಕಾಸ್ ಯೋಜನೆಯ ಅನುಷ್ಠಾನಕ್ಕೆ ಎಷ್ಟು ವೆಚ್ಚದ ಅನುಮೋದನೆ ನೀಡಿತು ?
a) 5369 ಕೋಟಿ ರೂ  ✔✔
b) 5210 ಕೋಟಿ ರೂ
c) 6000 ಕೋಟಿ ರೂ
d) 5210 ಕೋಟಿ ರೂ
📖📖📖📖📖📖📖📖📖📖📖📖📖📖

9) ಹಿಮಾಲಯನ್ ಹೈಡ್ರೋ ಎಕ್ಸ್ಪೋ 2018 ಅನ್ನು ಎಲ್ಲಿ ಆಯೋಜಿಸಲಾಗಿದೆ?
a) ಬೆಂಗಳೂರು
b) ಕಾಠ್ಮಂಡು✔✔
c) ಡಾರ್ಜಿಲಿಂಗ್
d) ಮುಂಬೈ
📖📖📖📖📖📖📖📖📖📖📖📖📖📖


10) ಇತ್ತೀಚೆಗೆ  ವರ್ಲ್ಡ್ ಬುಕ್ ಫೇರ್ ಎಲ್ಲಿ ಪ್ರಾರಂಭವಾಯಿತು?
a) ನವದೆಹಲಿ✔✔
b) ಕೊಲ್ಕತ್ತ
c) ಮುಂಬೈ
d) ಗೊವಾ
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 05/01/2018

1) ಇತ್ತೀಚೆಗೆ ಕೇಂದ್ರ ಸರ್ಕಾರವು "ಬಯಲುಶೌಚ ಮುಕ್ತ ನಗರ " ಎಂದು ಯಾವ ನಗರವನ್ನು ಘೋಷಿಸಿದೆ?
a) ದೆಹಲಿ
b) ಬೆಂಗಳೂರು
c) ಹೈದರಾಬಾದ್✔✔
d) ಭುವನೇಶ್ವರ
📓📓📓📓📓📓📓📓📓📓📓📓📓

2) "ಮೂರನೇ ಆವೃತ್ತಿಯ ಭಾರತೀಯ ವಿಜ್ಞಾನ ಸಿನಿಮೋತ್ಸವ 2018" ಎಲ್ಲಿ ನಡೆಯಲಿದೆ?
a) ಬೆಂಗಳೂರು
b) ಗೋವಾ ✔✔
c) ಚೆನ್ನೈ
d) ಡಾರ್ಜಿಲಿಂಗ್
📓📓📓📓📓📓📓📓📓📓📓📓📓📓

3) "2022 ರ 39 ನೇ ನ್ಯಾಶನಲ್ ಗೇಮ್ಸ್" ಎಲ್ಲಿ ನಡೆಯುತ್ತವೆ ?
a) ರಾಜಸ್ಥಾನ
b) ಗುಜರಾತ್
c) ಪಶ್ಚಿಮ ಬಂಗಾಳ
d) ಮೆಘಾಲಯ ✔✔
📓📓📓📓📓📓📓📓📓📓📓📓📓📓

4) ದೇಶದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯಡಿ, ಇತ್ತೀಚೆಗೆ ಯುಎಸ್ ನಿಂದ ನಿಷೇಧಿಸಲ್ಪಟ್ಟ ರಾಷ್ಟ್ರ ಯಾವುದು?
a) ಇರಾಕ್
b) ಅಫ್ಘಾನಿಸ್ತಾನ
c) ಪಾಕಿಸ್ತಾನ ✔✔
d) ಸೌಥ್ ಕೊರಿಯಾ
📓📓📓📓📓📓📓📓📓📓📓📓📓📓

5) 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಶ್ಮೀರಿ ಚಲನಚಿತ್ರವೊಂದು ಕಾಶ್ಮೀರದಿಂದ ಹೊರಗೆ  ಬಿಡುಗಡೆಯಾಗುತ್ತಿದೆ. ಈ ಚಿತ್ರವು ಯಾವ ಥೀಮ್ ಆಧಾರಿತವಾಗಿದೆ?
a) ರಾಜಕೀಯ ಅರಾಜಕತೆ
b) ಮಾದಕ ದ್ರವ್ಯ ಸೇವನೆ & ನಿರುದ್ಯೋಗ ✔✔
c) ಮಹಿಳಾ ಶಿಕ್ಷಣ
d) ಭಾರತ ವಿಭಜನೆ
📓📓📓📓📓📓📓📓📓📓📓📓📓📓

6) "ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ" (ULFA) ನೊಂದಿಗೆ ಮಾತುಕತೆ ನಡೆಸಲು ಹೊಸದಾಗಿ ನೇಮಕಗೊಂಡ ಸಂವಾದಕನಾರು?
a) ಎ.ಬಿ. ಮಾಥುರ್✔✔
b) ದೀನೇಶ್ವರ್ ಶರ್ಮಾ
c) ಓಂ ಪ್ರಕಾಶ್ ರಾವತ್
d) ಜ್ಯೋತಿಂದ್ರನಾಥ್ ದಿಕ್ಸಿತ್
📓📓📓📓📓📓📓📓📓📓📓📓📓📓

7) ಈ ಕೆಳಗಿನ ಯಾರು ' ಇಮಾಮಿ ಗ್ರುಪ್ (Emami Group) ನ ಹೊಸ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
a) ಅಕ್ಷಯ್ ಕುಮಾರ್
b) ಶಾಹರುಕ್ ಖಾನ್
c) ಸಲ್ಮಾನ್ ಖಾನ್ ✔✔
d) ಆಮೀರ್ ಖಾನ್
📓📓📓📓📓📓📓📓📓📓📓📓📓📓

8) ಈ ಕೆಳಗಿನ ಯಾವ ಬ್ಯಾಂಕ್ ನ  ವಿರುದ್ಧ ಆರ್ಬಿಐ 'ಪ್ರಾಂಪ್ಟ್ ಸರಿಪಡಿಸುವ ಕ್ರಮ' (Prompt Corrective Action) ಅನ್ನು ಪ್ರಾರಂಭಿಸಿದೆ?
a) ಪಂಜಾಬ್ ನ್ಯಾಷನಲ್ ಬ್ಯಾಂಕ್
b) ಅಲಹಾಬಾದ್ ಬ್ಯಾಂಕ್✔✔
c) ಕೆನರಾ ಬ್ಯಾಂಕ್
d) ಕಾರ್ಪೊರೇಷನ್ ಬ್ಯಾಂಕ್
📓📓📓📓📓📓📓📓📓📓📓📓📓📓

9) ಇತ್ತೀಚೆಗೆ 'ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್' ಎಷ್ಟು ರೂ. ಮೌಲ್ಯದ ಐದು ಯೋಜನೆಗಳಿಗೆ ಅನುಮೋದನೆ ನೀಡಿದೆ?
a) ರೂ. 275.01 ಕೋಟಿ
b) ರೂ. 265.01 ಕೋಟಿ
c) ರೂ. 295.01 ಕೋಟಿ✔✔
d) ರೂ. 200.01 ಕೋಟಿ
📓📓📓📓📓📓📓📓📓📓📓📓📓📓


10) ಭಾರತದಲ್ಲಿ ಸ್ವಚ್ ಭಾರತ್ ಅಭಿಯಾನ್ ಯಾವಾಗ ಪ್ರಾರಂಭವಾಯಿತು?
a) 2014✔✔
b) 2015
c) 2016
d) 2017
📓📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 04/01/2018

1) ಯಾವ ಸರ್ಕಾರವು ಹೊಸ ಕಟ್ಟಡಗಳಲ್ಲಿ ಸೌರ ದ್ಯುತಿವಿದ್ಯುಜ್ಜನಕ ಪವರ್ ಪ್ಲಾಂಟ್ ಅಳವಡಿಕೆಯನ್ನು  ಕಡ್ಡಾಯ ಮಾಡಿದೆ?
a) ಒಡಿಶಾ
b) ಹರ್ಯಾಣಾ ✔✔
c) ಗುಜರಾತ್
d) ದೆಹಲಿ
📖📖📖📖📖📖📖📖📖📖📖📖📖📖

2) ವಿದ್ಯುತ್ ಮತ್ತು ನೀರಿನ ಉಳಿತಾಯಕ್ಕಾಗಿ ಯಾವ ರಾಜ್ಯವು ಸೌರ-ಆಧಾರಿತ ನೀರಾವರಿ ಯೋಜನೆಯನ್ನು ಪ್ರಾರಂಭಿಸಿದೆ?
a) ತಮಿಳುನಾಡು
b) ರಾಜಸ್ಥಾನ
c) ಹರ್ಯಾಣಾ ✔✔
d) ಮಹಾರಾಷ್ಟ್ರ
📖📖📖📖📖📖📖📖📖📖📖📖📖📖

3) ಜಮ್ಮು ಮತ್ತು ಕಾಶ್ಮೀರದ ಯಾವ ಸುರಂಗ ಯೋಜನೆಯು ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ನಡುವೆ ಎಲ್ಲಾ ಹವಾಮಾನದಲ್ಲಿ ಸಂಪರ್ಕವನ್ನು ಒದಗಿಸುತ್ತದೆ?
a) ನಾಥು ಲಾ ಪಾಸ್
b) ರೋಹ್ಟಂಗ್ ಪಾಸ್
c) ಜೊಜಿಲಾ ಪಾಸ್✔✔
d) ಜಿಲೆಪ್ ಲಾ ಪಾಸ್
📖📖📖📖📖📖📖📖📖📖📖📖📖📖

4) ಕೇಂದ್ರ ಸಚಿವ ಸಂಪುಟವು ಹೊಸ AIIMS ನ್ನು ಎಲ್ಲಿ ಸ್ಥಾಪಿಸಲು ತನ್ನ ಅನುಮೋದನೆಯನ್ನು ನೀಡಿತು?
a) ನಾಸಿಕ್
b) ಗ್ವಾಲಿಯರ್
c) ಇಂದೋರ್
d) ಬಿಲಾಸಪುರ್✔✔
📖📖📖📖📖📖📖📖📖📖📖📖📖📖

5) ಆರ್ಬಿಐ ಬಿಡುಗಡೆ ಮಾಡಲಿರುವ ಹೊಸ ರೂ 10 ನೋಟುಗಳ ಬಣ್ಣ ಯಾವುದಾಗಿರಲಿದೆ?
a) ಕೆಂಪು
b) ಹಳದಿ
c) ಚಾಕೊಲೇಟ್ ಬ್ರೌನ್✔✔
d) ನೀಲಿ
📖📖📖📖📖📖📖📖📖📖📖📖📖📖

6) NABARD ನ ಕೇಂದ್ರ ಕಛೇರಿ ಎಲ್ಲಿದೆ?
a) ಮುಂಬೈ ✔✔
b) ದೆಹಲಿ
c) ಮಂಗಳೂರು
d) ಬೆಂಗಳೂರು
📖📖📖📖📖📖📖📖📖📖📖📖📖📖

7) ಹೊಸದಾಗಿ ರಾಷ್ಟ್ರಿಯ ಭದ್ರತಾ ಉಪ- ಸಲಹೆಗಾರ(NSA)ನಾಗಿ ಯಾರು ನೇಮಕಗೊಂಡರು?
a) ಅಜಿತ್ ಡೋವಲ್
b) ರಾಜಿಂದರ್ ಖನ್ನಾ✔✔
c) ಅಚಲಕುಮಾರ್
d) ಓಂ ಪ್ರಕಾಶ ರಾವತ್
📖📖📖📖📖📖📖📖📖📖📖📖📖📖

8) ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್ ಅವರು ಉಚಿತ CT ಸ್ಕ್ಯಾನ್ ಸೇವೆಯನ್ನು ಎಲ್ಲಿ ಪ್ರಾರಂಭಿಸಿದರು?
a) ಗೌಹಾತಿ
b) ಮಜೌಲಿ✔✔
c) ದಿಸ್ಪುರ್
d) ಸೋನಿತಪುರ
📖📖📖📖📖📖📖📖📖📖📖📖📖📖

9) ಇತ್ತೀಚೆಗೆ ಈ ಕೆಳಗಿನ ರಾಷ್ಟ್ರಗಳಲ್ಲಿ  ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಸೇರದೆ ಇರುವ ದೇಶ ಯಾವುದು?
a) ಕುವೈತ್
b) ಪೊಲೆಂಡ್
c) ಪೆರು
d) ಪ್ಯಾಲೆಸ್ಟೈನ್ ✔✔
📖📖📖📖📖📖📖📖📖📖📖📖📖📖


10) ತೆರೆದ ಮಲವಿಸರ್ಜನೆಗಾಗಿ 500 ರೂ. ದಂಡ ವಿಧಿಸಲು ಯಾವ ರಾಜ್ಯ ನಿರ್ಧರಿಸಿದೆ?
a) ಪುದುಚೆರಿ
b) ತಮಿಳುನಾಡು
c) ಮಹಾರಾಷ್ಟ್ರ ✔✔
d) ಕೇರಳ 
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 03/01/2018

1) ಇತ್ತೀಚಿನ ಇಂಟರ್ನ್ಯಾಷನಲ್ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಶ್ರೇಯಾಂಕದಲ್ಲಿ ಭಾರತದ ಅತ್ಯುನ್ನತ ಶ್ರೇಯಾಂಕಿತ ಆಟಗಾರ ಯಾರಾಗಿದ್ದಾರೆ?
a) ಜಿ ಸತ್ಯಾಯಾನ್✔✔
b) ಮಾ ಲಾಂಗ್
c) ಜಾಂಗ್ ಜೆಕ್
d) ಶರತ್ ಕಮಲ್
📖📖📖📖📖📖📖📖📖📖📖📖📖📖

2) ಯಾವ ದೇಶವು ಚೀನಾದೊಂದಿಗಿನ ದ್ವಿಪಕ್ಷೀಯ ವ್ಯಾಪಾರಕ್ಕಾಗಿ ಯುವಾನ್ ಚೀನೀ ಕರೆನ್ಸಿಯನ್ನು ಬಳಸಲು  ಹಸಿರು ಸಂಕೇತವನ್ನು ನೀಡಿದೆ?
a) ಭಾರತ
b) ಬಾಂಗ್ಲಾದೇಶ
c) ನೇಪಾಳ
d) ಪಾಕಿಸ್ತಾನ ✔✔
📖📖📖📖📖📖📖📖📖📖📖📖📖📖

3) ಇತ್ತೀಚೆಗೆ ಯಾವ ರಾಷ್ಟ್ರದ ಭಾಷೆಯು ಯುನೆಸ್ಕೋ ದ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ಸೇರಿತು?
a) ಟರ್ಕಿ ✔✔
b) ಅಲಾಸ್ಕ
c) ಅಲ್ಜೀರಿಯ
d) ನೈಜೀರಿಯ
📖📖📖📖📖📖📖📖📖📖📖📖📖📖

4) ಹಣಕಾಸು ಸಚಿವಾಲಯ ಆರ್ಬಿಐ ಬಾಂಡುಗಳ ಬಡ್ಡಿ ದರವನ್ನು ಪ್ರತಿಶತ ಎಷ್ಟಕ್ಕೆ ತಗ್ಗಿಸಿದೆ?
a) 6.65
b) 7.25
c) 7.75✔✔
d) 6.25
📖📖📖📖📖📖📖📖📖📖📖📖📖📖

5) ಜನವರಿ 2 ರಂದು ಮರಣ ಹೊಂದಿದ ಪ್ರಸಿದ್ಧ ಉರ್ದು ಕವಿ ಯಾರು?
a) ನಿಡಾ ಫಜ್ಲಿ
b) ಅದಾ ಜಾಫ್ರಿ
c) ಅನ್ವರ್ ಅಲಿ
d) ಅನ್ವರ್ ಜಲಾಲ್ಪುರಿ✔✔
📖📖📖📖📖📖📖📖📖📖📖📖📖📖

6) ಫೆಬ್ರವರಿ 28 ರಿಂದ 'ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಸ್ಪೋ' ಎಲ್ಲಿ ನಡೆಯಲಿದೆ?
a) ಮಹಾರಾಷ್ಟ್ರ
b) ಕರ್ನಾಟಕ ✔✔
c) ಕೇರಳ
d) ತಮಿಳುನಾಡು
📖📖📖📖📖📖📖📖📖📖📖📖📖📖

7) ಕೇಂದ್ರದ ಫೇಮ್-ಇಂಡಿಯಾ ಯೋಜನೆ ಅಡಿಯಲ್ಲಿ 40 ವಿದ್ಯುತ್ ಬಸ್ಸುಗಳು, 100 ನಾಲ್ಕುಚಕ್ರ ವಾಹನಗಳು ಮತ್ತು 500 ತ್ರಿಚಕ್ರ ವಾಹನಗಳನ್ನು ಯಾವ ರಾಜ್ಯವು ಪಡೆಯುತ್ತದೆ?
a) ಕರ್ನಾಟಕ ✔✔
b) ಮಹಾರಾಷ್ಟ್ರ
c) ಹರ್ಯಾಣಾ
d) ಉತ್ತರ ಪ್ರದೇಶ
📖📖📖📖📖📖📖📖📖📖📖📖📖📖

8) ಯಾವ ರಾಜ್ಯ ಪೊಲೀಸ್ ಪ್ರವಾಸಿಗರಿಗಾಗಿ ವಿಶೇಷ ಪೋಲಿಸ್ ಪಡೆಯನ್ನು ಪ್ರಾರಂಭಿಸಿದೆ?
a) ದೆಹಲಿ
b) ಪುದುಚೇರಿ ✔✔
c) ತೆಲಂಗಾಣ
d) ಗುಜರಾತ್
📖📖📖📖📖📖📖📖📖📖📖📖📖📖

9) ಯಾವ ದೇಶವು ತನ್ನ ಕನಿಷ್ಠ ವೇತನವನ್ನು 40 ಪ್ರತಿಶತದಷ್ಟು ಹೆಚ್ಚಿಸಿದೆ?
a) ಜೊರ್ಡಾನ್
b) ಬ್ರೆಜಿಲ್
c) ವೆನೆಜುವೆಲಾ ✔✔
d) ಅಲಾಸ್ಕ
📖📖📖📖📖📖📖📖📖📖📖📖📖📖


10) 2018 ರಲ್ಲಿ ಉಡಾವಣೆಗೆ ನಿಗದಿಪಡಿಸಲಾದ ನಾಸಾದ ಸೌರ ಶೋಧಕದ ಹೆಸರೇನು?
a) ಪಾರ್ಕರ್✔✔
b) ಮಿಶನ್ 2018
c) ಇನಸೈಟ್
d) ಪೊಟಾನ್-2018
📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳ ಕ್ವಿಜ್ 02/01/2018

1) ಇತ್ತೀಚೆಗೆ ಯು.ಎಸ್. ನ ಯಾವ ರಾಜ್ಯವು  ಗಾಂಜಾ ಉಪಯೋಗವನ್ನು (ಮನರಂಜನೆಗಾಗಿ) ಕಾನೂನುಬದ್ಧಗೊಳಿಸಿದೆ?
a) ಟೆಕ್ಸಾಸ್
b) ಫ್ಲೋರಿಡಾ
c) ಕ್ಯಾಲಿಫೋರ್ನಿಯಾ✔✔
d) ಅಲಾಸ್ಕಾ

📖📖📖📖📖📖📖📖📖📖📖📖📖📖

2) ಪ್ರಧಾನ ಮಂತ್ರಿಯ ಅಧಿಕೃತ ವೆಬ್ಸೈಟ್- www.pmindia.gov.in ಇತ್ತೀಚೆಗೆ ಯಾವ ಎರಡು ಭಾಷೆಗಳಲ್ಲಿ ಪ್ರಾರಂಭವಾಯಿತು?
a) ಅಸ್ಸಾಮಿ ಮತ್ತು ಮಣಿಪುರಿ✔✔
b) ಸಿಂಧಿ ಮತ್ತು ಉರ್ದು
c) ಸಂತಾಲಿ ಮತ್ತು ಉರ್ದು
d) ಉರ್ದು ಮತ್ತು ತೆಲುಗು

📖📖📖📖📖📖📖📖📖📖📖📖📖📖

3) ಪಟ್ಟಾಯದಲ್ಲಿ ನಡೆದ ಗಾಲ್ಫ್ ರಾಯಲ್ ಕಪ್ ಗೆದ್ದವರು ಯಾರು?
a) ಜೀವ್ ಮಿಲ್ಕಾ ಸಿಂಗ್
b) ಜ್ಯೋತಿ ರಂಧವ
c) ಶಿವ ಕಪೂರ್✔✔
d) ಅರುಣ್ ಅಟ್ವಾಲ್

📖📖📖📖📖📖📖📖📖📖📖📖📖📖

4) ಇತ್ತೀಚೆಗೆ ಭಾರತದ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡನ ವ್ಯವಸ್ಥಾಪಕ ನಿರ್ದೇಶಕರಾಗಿ ಯಾರು ನೇಮಕಗೊಂಡರು?
a) ಕುಮಾರ್ ವಿ ಪ್ರತಾಪ್
b) ಸಂಜೀವ್ ಕೌಶಿಕ್
c) ರಾಜೀವ್ ರಿಷಿ
d) ಪಂಕಜ್ ಜೈನ್✔✔

📖📖📖📖📖📖📖📖📖📖📖📖📖📖

5) ಜನವರಿ 1 ರಿಂದ ಯಾವ ಎರಡು ಗಲ್ಫ್ ದೇಶಗಳು ಮೌಲ್ಯವರ್ಧಿತ ತೆರಿಗೆಯನ್ನು ಪರಿಚಯಿಸಿದವು?
a) ಬಹ್ರೇನ್ ಮತ್ತು ಇರಾಕ್
b) ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್✔✔
c) ಕುವೈತ್ ಮತ್ತು ಒಮಾನ್
d) ಇರಾಕ್ ಮತ್ತು ಇರಾಕ್

📖📖📖📖📖📖📖📖📖📖📖📖📖📖

6) ಭಾರತದ ಮುಂದಿನ ವಿದೇಶಾಂಗ ಕಾರ್ಯದರ್ಶಿಯಾಗಿ ಯಾರನ್ನು ಹೆಸರಿಸಲಾಗಿದೆ?
a) ಎಸ್ ಜೈಶಂಕರ್
b) ನಿರುಪಮಾ ರಾವ್
c) ವಿಜಯ್ ಕೇಶವ ಗೋಖಲೆ✔✔
d) ನಿರುಪಮಾ ಶೆಣೈ

📖📖📖📖📖📖📖📖📖📖📖📖📖📖

7) ಈ ಕೆಳಗಿನವುಗಳಲ್ಲಿ ಯಾವುದು "ಬಯಲು ಶೌಚಾಲಯ ಮುಕ್ತ ರಾಜ್ಯ" ಎಂಬ ಖ್ಯಾತಿ ಪಡೆದ ಎರಡನೇ ಈಶಾನ್ಯ ರಾಜ್ಯವಾಗಿದೆ?
a) ಅರುಣಾಚಲ ಪ್ರದೇಶ✔✔
b) ನಾಗಾಲ್ಯಾಂಡ್
c) ಅಸ್ಸಾಂ
d) ಮಣಿಪುರ

📖📖📖📖📖📖📖📖📖📖📖📖📖📖

8) 32ನೇ ಸುರಜಕುಂಡ ಅಂತರಾಷ್ಟ್ರೀಯ ಕರಕುಶಲ ಮೇಳಕ್ಕೆ ಈ ಕೆಳಗಿನ ಯಾವ ರಾಜ್ಯವನ್ನು ಥೀಮ್ ರಾಜ್ಯವಾಗಿ ಆಯ್ಕೆ ಮಾಡಲಾಗಿದೆ?
a) ಪಂಜಾಬ್
b) ಹರ್ಯಾಣಾ
c) ಉತ್ತರ ಪ್ರದೇಶ ✔✔
d) ತಮಿಳುನಾಡು

📖📖📖📖📖📖📖📖📖📖📖📖📖📖

9) ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 2018ನ್ನು ಈ ಕೆಳಗಿನ ಯಾವುದರ ವೃದ್ಧಿಗಾಗಿ ಮೀಸಲಿರಿಸಿದ್ದಾರೆ?
a) ಸಣ್ಣ ಕೈಗಾರಿಕಾಭಿವೃದ್ಧಿ
b) ತೆಲುಗು ಭಾಷೆ ✔✔
c) ಕೃಷಿ ಅಭಿವೃದ್ಧಿ
d) ವಿದ್ಯುತ್
📖📖📖📖📖📖📖📖📖📖📖📖📖📖

10) ಯಾವ ರಾಜ್ಯ ಸರ್ಕಾರ ಈ ವರ್ಷದ ಕ್ಯಾಲೆಂಡರ್ ಅನ್ನು ಬ್ರೈಲ್ ಲಿಪಿಯಲ್ಲಿ  ಪ್ರಕಟಿಸಿದೆ?
a) ಮಣಿಪುರ
b) ಕೇರಳ
c) ತೆಲಂಗಾಣ
d) ಒಡಿಶಾ ✔✔

📖📖📖📖📖📖📖📖📖📖📖📖📖📖

ಪ್ರಚಲಿತ ಘಟನೆಗಳು ಕ್ವಿಜ್ 01/01/2018

1) ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಯಾರು?
a) 10 ಏಷಿಯಾನ್ ರಾಷ್ಟ್ರಗಳ ನಾಯಕರು✔✔
b) ಅಫ್ಘಾನಿಸ್ತಾನದ ಅಧ್ಯಕ್ಷರು
c) ನೇಪಾಳದ ಪ್ರಧಾನಿ
d) ಸಾರ್ಕ್ ರಾಷ್ಟ್ರಗಳ ನಾಯಕರು
📓📓📓📓📓📓📓📓📓📓📓📓📓📓

2) ಪ್ರಸ್ತುತ ಬಿಹಾರದ ಗವರ್ನರ್ ಯಾರು?
a) ನಿತೀಶ್ ಕುಮಾರ್
b) ಸತ್ಯ ಪಾಲ್ ಮಲಿಕ್✔✔
c) ನವೀನ್ ಪಟ್ನಾಯಕ್
d) ರಾಮ್ ನಾಯ್ಕ್
📓📓📓📓📓📓📓📓📓📓📓📓📓

3) “ಉರ್ಜಾ ಗಂಗಾ” ಮಹತ್ವಕಾಂಕ್ಷಿ ಕೊಳವೆ ಅನಿಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಿ ಉದ್ಘಾಟಿಸಿದರು ?
a) ಮೊರಾದಾಬಾದ್
b) ವಾರಣಾಸಿ ✔✔
c) ಲಕ್ನೋ
d) ಅಲಿಗಢ್
📓📓📓📓📓📓📓📓📓📓📓📓📓📓

4) ಅಸ್ಸಾಂನ ಒಳನಾಡು  ಜಲಸಾರಿಗೆಯ ಒಟ್ಟಾರೆ ಅಭಿವೃದ್ಧಿಗೆ ಎಷ್ಟು ಹಣವನ್ನು ಮಂಜೂರು ಮಾಡಲಾಗಿದೆ?
a) ರೂ 2,000 ಕೋಟಿ
b) ರೂ 5,000 ಕೋಟಿ
c) ರೂ 3,250 ಕೋಟಿ
d) ರೂ 1,250 ಕೋಟಿ✔✔
📓📓📓📓📓📓📓📓📓📓📓📓📓📓

5) "ಭವಂತರ್ ಭರ್ಪಾಯಿ ಯೋಜನೆ"ಯ ಗುರಿ ಏನು?
a) ರೈತರಿಗೆ ಮೂಲಭೂತ ನೆರವು ನೀಡುವುದು
b) ರೈತರ ಉತ್ಪನ್ನಗಳಿಗೆ ‘ಮಾದರಿ ದರ’ ಒದಗಿಸುವುದು✔✔
c) ಕಡಿಮೆ ಬೆಲೆಯಲ್ಲಿ ಬೀಜಗಳನ್ನು ಒದಗಿಸುವುದು
d) ಬೆಳೆಗಳ ದರವನ್ನು ಲೆಕ್ಕಾಚಾರ ಮಾಡುವುದು
📓📓📓📓📓📓📓📓📓📓📓📓📓📓

6) ಜನವರಿ 1, 2018 ರಿಂದ ಯಾವ ರಾಜ್ಯದ ಪೊಲೀಸ್ ಡಿಜಿಟಲ್ ಆಗಿದೆ?
a) ಒಡಿಶಾ✔✔
b) ಮಹಾರಾಷ್ಟ್ರ
c) ಆಂಧ್ರ ಪ್ರದೇಶ
d) ರಾಜಸ್ಥಾನ
📓📓📓📓📓📓📓📓📓📓📓📓📓📓

7) ಜೇವರ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯನ್ನು ಎಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ?
a) ದೆಹಲಿ
b) ಗ್ರೇಟರ್ ನೋಯ್ಡಾ✔✔
c) ಮುಂಬೈ
d) ಗೋವಾ
📓📓📓📓📓📓📓📓📓📓📓📓📓📓

8) ದಂತದ ಉತ್ಪನ್ನಗಳ ದೇಶೀಯ ವ್ಯಾಪಾರವನ್ನು ಯಾವ ದೇಶ ಇತ್ತೀಚೆಗೆ ನಿಷೇಧಿಸಿತು?
a) ನೇಪಾಳ
b) ಚೀನಾ✔✔
c) ದಕ್ಷಿಣ ಆಫ್ರಿಕಾ
d) ಯುಎಸ್
📓📓📓📓📓📓📓📓📓📓📓📓📓📓

9) ಈ ಕೆಳಗಿನ ಯಾವ ಸ್ಥಳದಲ್ಲಿ, ವಿಜ್ಞಾನಿಗಳು ಟೆಟ್ರಾಮಿಯೇರಿಯಮ್ ಜಾತಿಗೆ ಸೇರಿದ 2 ಹೊಸ ಇರುವೆ ಪ್ರಬೇಧಗಳನ್ನು ಕಂಡುಹಿಡಿದಿದ್ದಾರೆ?
a) ಲಕ್ಷದ್ವೀಪ
b) ಪಶ್ಚಿಮ ಘಟ್ಟಗಳು
c) ಮಣಿಪುರ
d) ಅಂಡಮಾನ್ಸ್✔✔
📓📓📓📓📓📓📓📓📓📓📓📓📓📓


10) ಹೊಸ ಅಧಿಸೂಚನೆಯ ಪ್ರಕಾರ  SEBI ಈಗ ಎಷ್ಟು ಪೂರ್ಣ ಕಾಲಿಕ ಸದಸ್ಯರನ್ನು ಹೊಂದಲಿದೆ?
a) 2
b) 3
c) 4✔✔
d) 6
📓📓📓📓📓📓📓📓📓📓📓📓📓📓

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು 30/12/2017

1) ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
a) ಆಶಿಶ್ ಉಪಾಧ್ಯಾಯ
b) ಆಶಾ ಚೌಧರಿ
c) ಸಂಜಯ್ ತೋಮರ್
d) ಸುಮಿತಾ ಮಿಶ್ರಾ✔✔
📓📓📓📓📓📓📓📓📓📓📓📓📓📓
2) 15 ನೇ ಹಣಕಾಸು ಆಯೋಗದ ಜಂಟಿ ಕಾರ್ಯದರ್ಶಿಯಾಗಿ ಯಾರು ಆಯ್ಕೆಯಾಗಿದ್ದಾರೆ?
a) ಎನ್ಕೆ ಸಿಂಗ್✔✔
b) ರಾಜೇಶ್ ರಂಜನ್
c) ಮುಖ್ಮೆತ್ ಸಿಂಗ್ ಭಾಟಿಯಾ
d) ಆಶಿಶ್ ಉಪಾಧಾಯ್
📓📓📓📓📓📓📓📓📓📓📓📓📓📓
3) 2018 ರ ಭಾರತೀಯ ವಿಜ್ಞಾನ ಕಾಂಗ್ರೆಸ್ ಎಲ್ಲಿ ನಡೆಯಲಿದೆ?(ಪ್ರವೀಣ ಹೆಳವರ)
a) ಇಂಫಾಲ್✔✔
b) ಬೆಂಗಳೂರು
c) ಹೈದರಾಬಾದ್
d) ದೆಹಲಿ
📓📓📓📓📓📓📓📓📓📓📓📓📓📓
4) 2017 ರ ಹರಿವರಾಸಣಂ ಅವಾರ್ಡ್ ಯಾರಿಗೆ ಲಭಿಸಿದೆ ?
a) ನಿತಿಶಾ ನಾಯರ್
b) ಮಮತಾ ಚಕ್ರವರ್ತಿ
c) ಕೆ.ಎಸ್‌.ಚಿತ್ರ ✔✔
d) ಸುದೇಶ ಅಹುಜಾ
📓📓📓📓📓📓📓📓📓📓📓📓📓📓
5)ಯಾವ ದೇಶವು ತನ್ನ ದೇಶದ ಪೋಲಿಸ್ ಅಧಿಕಾರವನ್ನು  ಸೀಮಿತಗೊಳಿಸುವ ಕಾನೂನನ್ನು ಜಾರಿಗೊಳಿಸಿದೆ?
a) ಕತಾರ್
b) ಈಜಿಪ್ಟ್
c) ಇಸ್ರೇಲ್✔✔
d) ಸೌದಿ ಅರೆಬಿಯ
📓📓📓📓📓📓📓📓📓📓📓📓📓📓
6) 78 ನೇ ಭಾರತೀಯ ಇತಿಹಾಸ ಕಾಂಗ್ರೆಸ್ ಅಧಿವೇಶನ ಯಾವ ನಗರದಲ್ಲಿ ನಡೆದಿದೆ ?
a) ಕೊಲ್ಕತ್ತ ✔✔
b) ದೆಹಲಿ
c) ಬೆಂಗಳೂರು
d) ಹೈದರಾಬಾದ್
📓📓📓📓📓📓📓📓📓📓📓📓📓📓
7) ಮಾಜಿ ಫುಟ್ಬಾಲ್ ಸೂಪರ್ ಸ್ಟಾರ್  ಜಾರ್ಜ್ ವಾಹ್ ಇತ್ತೀಚಿಗೆ ನಡೆದ ಯಾವ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದಾರೆ ?
a) ಟಾಂಜಾನಿಯಾ
b) ಜಾರ್ಜಿಯಾ
c) ಇರಾನ್
d) ಲೈಬೀರಿಯ✔✔
📓📓📓📓📓📓📓📓📓📓📓📓📓📓
8) ಭಾರತೀಯ ಫುಟ್ಬಾಲ್ ತರಬೇತುದಾರರ ಒಕ್ಕೂಟ ಯಾವ ನಗರದಲ್ಲಿ ಕಾರ್ಯಾರಂಭ ಮಾಡಿದೆ?
a) ಚೆನ್ನೈ
b) ನವದೆಹಲಿ
c) ಮುಂಬೈ ✔✔
d) ನಾಸಿಕ್
📓📓📓📓📓📓📓📓📓📓📓📓📓📓
9) ಇತ್ತೀಚಿಗೆ ಮುಕ್ತಾಯವಾದ ಇಂಡೋ-ಮಾಲ್ಡೀವ್ಸ್ ಜಂಟಿ ಮಿಲಿಟರಿ ವ್ಯಾಯಾಮವನ್ನು ಹೆಸರಿಸಿ.
a) ಇಕುವೆರಿನ್✔✔
b) ಮಿತ್ರ ಶಕ್ತಿ
c) ವಿಜಯಶಕ್ತಿ
d) ಯಾವುದು ಅಲ್ಲ
📓📓📓📓📓📓📓📓📓📓📓📓📓📓
10) ಇತ್ತೀಚಿಗೆ ಯಾವ ರಾಜ್ಯದಲ್ಲಿನ ಕೊಳಚೆ ಮತ್ತು ಅನಧಿಕೃತ ವಸಾಹತುಗಳನ್ನು ರಕ್ಷಿಸಲು ಸಂಸತ್ತು ಮಸೂದೆಯನ್ನು ಅಂಗೀಕರಿಸಿದೆ?
a) ದೆಹಲಿ ✔✔
b) ಪಶ್ಚಿಮ ಬಂಗಾಳ
c) ಮಹಾರಾಷ್ಟ್ರ
d) ತಮಿಳುನಾಡು
📓📓📓📓📓📓📓📓📓📓📓📓📓📓