Wednesday, 30 December 2015

♣♥ ಕ್ವಿಜ್‌ ♥♣


1) ಲಂಡನ್‌ನಲ್ಲಿ ನಡೆದ ವಿಶ್ವಕಪ್‌ ರಗ್ಬಿ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡ ದೇಶ ಯಾವುದು?
a) ನ್ಯೂಜಿಲೆಂಡ್‌ 
b) ಅಮೆರಿಕ
c) ದಕ್ಷಿಣ ಆಫ್ರಿಕಾ 
d)ಪೆರುಗ್ವೆ
2) ಮಾಜಿ ರಾಷ್ಟ್ರಪತಿ .ಪಿ.ಜೆ ಅಬ್ದುಲ್‌ ಕಲಾಂ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ ಅಮೃತ’ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಫಲಾನುಭವಿಗಳು ಯಾರು?
a) ವಿದ್ಯಾರ್ಥಿಗಳು
b) ಗರ್ಭಿಣಿಯರು ಮತ್ತು ಬಾಣಂತಿಯರು
c) ಹಿರಿಯ ನಾಗರಿಕರು 
d) ಅಂಗವಿಕಲರು
3) ಅಮೆರಿಕದ ಜನಸಂಖ್ಯಾ ಮಂಡಳಿ (ಯುಎಸ್‌ಸಿಬಿ) ಪ್ರಕಾರ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅತಿ ಹೆಚ್ಚು ಯಾವ ಭಾಷೆಯಲ್ಲಿ ವ್ಯವಹರಿಸುತ್ತಾರೆ?
a) ಕನ್ನಡ 
b)ತೆಲುಗು
c) ಹಿಂದಿ 
d) ತಮಿಳು
4) ಇಂಗ್ಲೆಂಡ್‌ನಲ್ಲಿ ಭಾರತೀಯ ಮುಖ್ಯ ರಾಯಭಾರಿಯನ್ನಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a) ಅರುಂಧತಿ ರಾಯ್‌ 
b) ಇಂದೂ ವಿಶ್ವನಾಥನ್‌
c) ಮಹಾರಾಜ್‌ ದುಲೀಪ್‌ ಸಿಂಗ್‌
d) ನವತೇಜ್‌ ಸಿಂಗ್‌ ಸರ್ನಾ
5) ಕೆನಡ ಸರ್ಕಾರದಲ್ಲಿ ಭಾರತೀಯ ಮೂಲದ ಸಂಸದ ಹರ್ಜಿತ್‌ ಸಿಂಗ್‌ ಸಜ್ಜನ್‌ ಅವರು ಯಾವ ಪ್ರಮುಖ ಖಾತೆಯನ್ನು ಹೊಂದಿದ್ದಾರೆ?
a) ರಕ್ಷಣಾ ಸಚಿವರು
b) ಹಣಕಾಸು ಸಚಿವರು
c) ವಿದೇಶಾಂಗ ವ್ಯವಹಾರ ಸಚಿವರು
d) ಗೃಹ ಸಚಿವರು
6) ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕರೊಬ್ಬರು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು 7 ದಿನ ಅಮಾನತು ಮಾಡಲಾಯಿತು. ಘಟನೆ ನಡೆದ ರಾಜ್ಯ ಯಾವುದು?
a) ಬಿಹಾರ 
b) ಒಡಿಶಾ
c) ಕರ್ನಾಟಕ 
d)ಕೇರಳ
7) ವಿಶ್ವಸಂಸ್ಥೆಯಲ್ಲಿ ಶಾಶ್ವತ ಪ್ರತಿನಿಧಿಯನ್ನಾಗಿ ಭಾರತ ಸರ್ಕಾರ ಇತ್ತೀಚೆಗೆ ಯಾರನ್ನು ನೇಮಕ ಮಾಡಿತು?
a) ಅಶೋಕ್‌ ಕುಮಾರ್‌ ಮುಖರ್ಜಿ 
b) ಹರಿ ಕುಮಾರ್‌ ಸಿನ್ಹಾ
c) ಸೈಯದ್‌ ಅಕ್ಬರುದ್ದೀನ್‌ 
d) ಮಾಧವರಾವ್‌ ಸಿಂಧ್ಯಾ
8) 2015 ಜಿ20 ಶೃಂಗ ಸಭೆಯು ನವೆಂಬರ್‌ ತಿಂಗಳಲ್ಲಿ ಯಾವ ದೇಶದಲ್ಲಿ ನಡೆಯಿತು? ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
a) ಫ್ರಾನ್ಸ್‌ 
b) ಇಟಲಿ
c) ಜರ್ಮನಿ 
d) ಟರ್ಕಿ
9) ಕೇಂದ್ರ ಸರ್ಕಾರದ 7ನೇ ವೇತನ ಆಯೋಗವು ಸರಕಾರಿ ನೌಕರರಿಗೆ ಎಷ್ಟು ಪ್ರಮಾಣ (ಶೇಕಡ ) ವೇತನ ಹೆಚ್ಚಿಸುವಂತೆ ಶಿಫಾರಸು ಮಾಡಿದೆ?
a) ಶೇ. 23.55 
b) ಶೇ. 22.55
c) ಶೇ. 25.55 
d) ಶೇ. 26.88
10) ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ)ಗೆ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ.
a) ಜ್ಯೋತಿ ಸಿಂಘಾಲ್‌ 
b) ಸ್ವಾತಿ ದಂಡೇಕರ್‌
c) ಸಮಕ್ಯ ಇರ್ವಾಣಿ 
d) ಅಮರ್‌ಜಿತ್‌ ಸೇನ್‌
1–a, 2-–b, 3–c, 4–d, 5–a, 6–b, 7–c, 8–d, 9–a, 10–b


No comments:

Post a Comment

Note: only a member of this blog may post a comment.