ಮೆಕ್ಸಿಕೊ: ಭಾರತದ ಅನುಭವಿ ಬಿಲ್ಗಾರ್ತಿ ದೀಪಿಕಾ ಕುಮಾರಿ, ‘ಆರ್ಚರಿ ವಿಶ್ವಕಪ್ ಫೈನಲ್’ನಲ್ಲಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಇದರಿಂದ ದೀಪಿಕಾ ಕಳೆದ ಐದು ಟೂರ್ನಿಗಳಲ್ಲಿ 4ನೇ ಬಾರಿಗೆ ಪದಕ ಜಯಿಸಲು ಸಫಲರಾಗಿದ್ದಾರೆ.
ಸೋಮವಾರ (26/10/2015) ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ 2-6 ರಿಂದ ಕೊರಿಯಾದ ಚಾಯ್ ಮಿಸುನ್ಗೆ ಶರಣಾಗುವ ಮೂಲಕ ಬೆಳ್ಳಿಗೆ ತೃಪ್ತಿಪಟ್ಟುಕೊಂಡರು. ಜತೆಗೆ ವರ್ಷಾಂತ್ಯದ ಟೂರ್ನಿಯಲ್ಲಿ ಐದನೇ ಯತ್ನದಲ್ಲೂ ಚಿನ್ನ ಜಯಿಸಲು ದೀಪಿಕಾ ವಿಫಲರಾದರು. ಟೂರ್ನಿಯಲ್ಲಿ ಭಾರತ ಒಟ್ಟಾರೆ 2 ಪದಕಗಳೊಂದಿಗೆ ಅಭಿಯಾನಕ್ಕೆ ಮುಕ್ತಾಯ ಹಾಡಿತು. ಶನಿವಾರ ಅಭಿಷೇಕ್ ವರ್ವ ಬೆಳ್ಳಿ ಪದಕ ಜಯಿಸಿದ್ದರು.
‘ಚಿನ್ನದ ಪದಕ ಗೆಲ್ಲುವ ವಿಶ್ವಾಸವಿತ್ತು. ಕೆಲವೊಂದು ಹಂತದಲ್ಲಿ ಮಾಡಿಕೊಂಡ ತಪ್ಪುಗಳಿಂದ ಸ್ವರ್ಣ ಕೈತಪ್ಪಿತು. ಆದರೂ, ಉತ್ತಮ ಪ್ರದರ್ಶನ ನೀಡಿದ ತೃಪ್ತಿಯಿದೆ’ ಎಂದು ದೀಪಿಕಾ ಪ್ರತಿಕ್ರಿಯಿಸಿದ್ದಾರೆ. 2010ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ದೀಪಿಕಾ ಗೆದ್ದ 2ನೇ ಅಂತಾರಾಷ್ಟ್ರೀಯ ಪದಕ ಇದಾಗಿದೆ. ಇದಕ್ಕೂ ಮುನ್ನ 2012ರ ಅಂಟಾಲ್ಯ ವಿಶ್ವಕಪ್ ಚರಣದಲ್ಲಿ ಚಿನ್ನ ಜಯಿಸಿದ್ದರು. ದೀಪಿಕಾ, ಈ ಮೊದಲು 2011ರಲ್ಲಿ ಇಸ್ತಾನ್ಬುಲ್, 2012ರಲ್ಲಿ ಟೋಕಿಯೊ, 2013ರಲ್ಲಿ ಪ್ಯಾರಿಸ್ನಲ್ಲಿ ನಡೆದ ಆರ್ಚರಿ ವಿಶ್ವಕಪ್ ಫೈನಲ್ನಲ್ಲಿ ಬೆಳ್ಳಿ ಗೆದ್ದಿದ್ದರು.
No comments:
Post a Comment
Note: only a member of this blog may post a comment.