Tuesday 27 October 2015

ಕರ್ನಾಟಕದ ಸಂಪೂರ್ಣ ಚಿತ್ರಣ

GK4KPSC
GK4KPSC

GK4KPSC
ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಕರ್ನಾಟಕವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳು ನಾಡುವಿನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.
ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ.
ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ ಮತ್ತು ರಾಜ್ಯದಲ್ಲಿ ಮೊದಲ ಬಾರಿಗೆ ಶಿವಲಿಂಗ ಕೂಡ್ಲಿ ಇವರು ರಾಯಚೂರು ಜಿಲ್ಲೆಯವರು ಇವರ ಸಾಧನೆ ತು‍೦ಬ ಅಪಾರ.
ರಾಜ್ಯದ ನೂತನ ರಾಜ್ಯಪಾಲರಾಗಿ ವಾಜುಭಾಯ್‌ ವಾಲಾ ರಾಜಭವನದಲ್ಲಿ ದಿ.1-9-2014 ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಪ್ರಮಾಣವಚನ ಬೋಧಿಸಿದರು.
1.ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು:
ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರೀಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ.
ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯ ದ ಆಳ್ವಿಕೆಗೆ ಒಳಪಡುವ ಮೊದಲು ನಂದ ಸಾಮ್ರಾಜ್ಯದ ಭಾಗವಾಗಿತ್ತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು.
ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗೂ ಅದರ ರಾಜಧಾನಿ ಬನವಾಸಿಯಾಗಿತ್ತು.ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ. ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯ ದಾತರಾಗಿದ್ದರು.
ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ.ಶ.೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗೂ ಪೂರ್ವ ಚಾಲುಕ್ಯರ ವಿರುದ್ಧ ನಿರಂತರ ಕಾಳಗದಲ್ಲಿರುತ್ತಿದ್ದರು.
ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯ ಸ್ಥಿತಿಯನ್ನು ತಲುಪಿದವು.ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು.ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು.ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.
೧೫೬೫ರಲ್ಲಿ, ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು.ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು, ದಖನ್ ಪ್ರದೇಶವನ್ನು ಆಳುತ್ತಿದ್ದರು. ೧೭ನೆಯ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲ್‌ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗೂ ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗೂ ಅನ್ಯ ರಾಜರು ಆಳುತ್ತಿದ್ದರು.
ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು.
ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು.
ಬ್ರಿಟಿಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗೂ ಬ್ರಿಟಿಷ್ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು. ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು.
೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು.
ಕಾರ್ನಾಡ ಸದಾಶಿವರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.
ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ಭೌಗೋಳಿಕಸಂಪಾದಿಸಿ
2.ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:
ಕರಾವಳಿ ಕರ್ನಾಟಕ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.
ಮಲೆನಾಡು - ಪಶ್ಚಿಮ ಘಟ್ಟಗಳು, ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.
ಬಯಲುಸೀಮೆ - ದಖ್ಖನ್ ಪ್ರಸ್ಥ ಭೂಮಿ(ಅಥವಾ ದಕ್ಷಿಣ ಪ್ರಸ್ಥಭೂಮಿ), ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ.
ಕರ್ನಾಟಕದ ಬಯಲು ಪ್ರದೇಶದ ಉತ್ತರ ಭಾಗವು ಭಾರತದ ಎರಡನೆಯ ಅತಿ ದೊಡ್ಡ ಶುಷ್ಕ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ (ಎತ್ತರ ೧೯೨೯ ಮೀ.(೬೩೨೯ ಅಡಿಗಳು)) ಕರ್ನಾಟಕದಲ್ಲಿ ಏಳು ಜಲಾನಯನ ಪ್ರದೇಶಗಳಿವೆ (river basin).[೧] ಅವುಗಳೆಂದರೆ:
ಕೃಷ್ಣಾ ಜಲಾನಯನ ಪ್ರದೇಶ: ರಾಜ್ಯದ ಉತ್ತರ ಭಾಗದಲ್ಲಿರುವ ಕೃಷ್ಣಾನದಿಯ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಭೀಮಾ ನದಿಗಳು ಹರಿಯುತ್ತವೆ.
ಕಾವೇರಿ ಜಲಾನಯನ ಪ್ರದೇಶ: ದಕ್ಷಿಣದ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಗಳಾದ ಹಾರಂಗಿ, ಹೇಮಾವತಿ, ಕಬಿನಿ, ಸುವರ್ಣಾವತಿ, ಲಕ್ಷ್ಮಣ ತೀರ್ಥ, ಶಿಂಶಾ, ಅರ್ಕಾವತಿ ನದಿಗಳು ಹರಿಯುತ್ತವೆ.
ಗೋದಾವರಿ ಜಲಾನಯನ ಪ್ರದೇಶ: ಗೋದಾವರಿ ಜಲಾನಯನ ಪ್ರದೇಶದಲ್ಲಿ ಪ್ರಧಾನ ಉಪನದಿಯಾದ ಮಂಜೀರಾ ನದಿ ಹರಿಯುತ್ತದೆ.
ಪಶ್ಚಿಮಕ್ಕೆ ಹರಿಯುವ ನದಿಗಳ ಜಲಾನಯನ ಪ್ರದೇಶ: ಈ ಪ್ರದೇಶದಲ್ಲಿ ಮಾಂಡವಿ, ಕಾಳಿ, ಗಂಗವಲ್ಲಿ, ಅಘನಾಶಿನಿ, ಶರಾವತಿ, ಚಕ್ರಾ, ವಾರಾಹಿ, ನೇತ್ರಾವತಿ, ಬಾರಾಪೋಲ್ ನದಿಗಳು ಹರಿಯುತ್ತವೆ.
ಉತ್ತರ ಪಿನಾಕಿನಿ ಜಲಾನಯನ ಪ್ರದೇಶ
ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶ
ಪಾಲಾರ್ ಜಲಾನಯನ ಪ್ರದೇಶ
3.ಕರ್ನಾಟಕದಲ್ಲಿ ನಾಲ್ಕು ರೀತಿಯ ಭೂರಚನೆಗಳಿವೆ. ಅವುಗಳೆಂದರೆ:
ಧಾರವಾಡದ ಶೀಸ್ಟಗಳು (ಪದರು ಶಿಲೆ) ಮತ್ತು ಪೆಡಸುಕಲ್ಲಿನ(ಗ್ರಾನೈಟ್) ನಯಿಸ್(gneiss)ಗಳಿಂದ ಮಾಡಲ್ಪಟ್ಟ ಆರ್ಕಿಯನ್ ಸಂಕೀರ್ಣ
ಕಲಡ್ಗಿ ಮತ್ತು ಭೀಮಾ ಸರಣಿಯ ಪ್ರೊಟೆರೋಜೋಯಿಕ್ ಅವಶೇಷ ರಹಿತ ಪದರು ರಚನೆಗಳು
ದಖನ್ ಟ್ರ್ಯಾಪ್ಪಿಯನ್ ಮತ್ತು ಇಂಟರ್-ಟ್ರ್ಯಾಪ್ಪಿಯನ್ ನಿಕ್ಷೇಪಗಳು
ಭೂರಚನೆಯ ತೃತೀಯ ಅವಧಿಯ ಹಾಗು ಇತ್ತೀಚಿನ ಲ್ಯಾಟರೈಟ್ ಗಳು ಮತ್ತು ಮೆಕ್ಕಲು ಮಣ್ಣಿನ ನಿಕ್ಷೇಪಗಳು
ರಾಜ್ಯದ ೬೦% ಭಾಗ ನಯಿಸ್(gneiss)ಗಳು, ಪೆಡಸುಕಲ್ಲುಗಳು(ಗ್ರಾನೈಟ್) ಹಾಗು ಚಾರ್ನೊಕೈಟ್ ಬಂಡೆಗಳಿಂದ ಕೂಡಿರುವ ಆರ್ಕಿಯನ್ ಸಂಕೀರ್ಣದಿಂದ ಆವೃತವಾಗಿದೆ. ಭೂರಚನೆಯ ತೃತೀಯ ಅವಧಿಯ ಆದಿಯಲ್ಲಿ ಜ್ವಾಲಾಮುಖಿ ಚಟುವಟಿಕೆಯ ನಿಲುಗಡೆಯ ನಂತರ ನಿರ್ಮಾಣ ವಾದ ಲ್ಯಾಟರೈಟ್ ಹೊದಿಕೆಗಳನ್ನು ದಖನ್ ಟ್ರ್ಯಾಪ್ಸಲ್ಲಿರುವ ಹಲವು ಜಿಲ್ಲೆಗಳಲ್ಲಿ ಕಾಣಬಹುದು.
ಕರ್ನಾಟಕದಲ್ಲಿ ಹನ್ನೊಂದು ರೀತಿಯ ಮಣ್ಣಿನ ವ್ಯವಸ್ಥೆಗಳಿವೆ: ಎಂಟಿಸೊಲ್ಸ್, ಇನ್ಸೆಪ್ಟಿಸೊಲ್ಸ್, ಮೊಲ್ಲಿಸೊಲ್ಸ್, ಸ್ಪೊಡೊಸೊಲ್ಸ್, ಅಲ್ಫಿಸೊಲ್ಸ್, ಅಲ್ಟಿಸೊಲ್ಸ್, ಆಕ್ಸಿಸೊಲ್ಸ್, ಅರಿಡಿಸೊಲ್ಸ್, ವರ್ಟಿಸೊಲ್ಸ್, ಆಂಡಿಸೊಲ್ಸ್ ಮತ್ತು ಹಿಸ್ಟೊಸೊಲ್ಸ್.
ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು: ಕೆಂಪು ಮಣ್ಣು, ಜೇಡಿ ಮಣ್ಣು, ಕಪ್ಪು ಮಣ್ಣು, ಮೆಕ್ಕಲು ಮಣ್ಣು, ಅರಣ್ಯ ಮಣ್ಣು ಮತ್ತು ಕರಾವಳಿ ಮಣ್ಣು.
ಕರ್ನಾಟಕ ನಾಲ್ಕು ಋತುಗಳನ್ನು ಅನುಭವಿಸುತ್ತದೆ. ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲ, ಮಾರ್ಚ್ ಮತ್ತು ಮೇಯಲ್ಲಿ ಬೇಸಿಗೆ ಕಾಲ, ಜೂನ್ ನಿಂದ ಸೆಪ್ಟೆಂಬರ್ ವರೆಗೆ ವರ್ಷಾಕಾಲ ಹಾಗು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವರ್ಷೋತ್ತರ ಕಾಲ.
ಹವಾಮಾನದ ಆಧಾರದ ಮೇಲೆ ಕರ್ನಾಟಕವನ್ನು ಮೂರು ವಲಯಗಳಾಗಿ ವಿಂಗಡಿಸಬಹುದು: ಕರಾವಳಿ, ಉತ್ತರ ಒಳನಾಡು ಹಾಗು ದಕ್ಷಿಣ ಒಳನಾಡು. ಇವುಗಳಲ್ಲಿ ಕರಾವಳಿ ವಲಯವು ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಕರಾವಳಿ ವಲಯದ ವಾರ್ಷಿಕ ಸರಾಸರಿ ಮಳೆ ೩೬೩೮.೫ಮಿಲಿಮೀಟರ್ (೧೪೩ ಅಂಗುಲ) ರಾಜ್ಯದ ವಾರ್ಷಿಕ ಸರಾಸರಿ ಮಳೆ ೧೧೩೯ಮಿಲಿಮೀಟರ್ (೪೫ ಅಂಗುಲ)ಗಿಂತ ತುಂಬ ಜಾಸ್ತಿಯಿದೆ.
ಕರ್ನಾಟಕದ ಅತಿ ಹೆಚ್ಚು ತಾಪಮಾನವಾದ ೪೫.೬°C (೧೧೪ °F) ರಾಯಚೂರಿನಲ್ಲಿ ದಾಖಲಾಯಿತು.
ಕರ್ನಾಟಕದ ಅತಿ ಕಡಿಮೆ ತಾಪಮಾನವಾದ ೨.೮°C (೩೭ °F) ಬೀದರಿನಲ್ಲಿ ದಾಖಲಾಯಿತು.
ಕರ್ನಾಟಕದ ಸುಮಾರು ೩೮,೭೨೪ ಚ.ಕಿಮೀ. (೧೪,೯೫೧ ಚ.ಮೈ) ಪ್ರದೇಶವು ಅರಣ್ಯದಿಂದ ಆವೃತವಾಗಿದೆ.
ಕರ್ನಾಟಕದ ಅರಣ್ಯ ಪ್ರದೇಶದ ಶೇಕಡಾವಾರು ಸಮಸ್ತ ಭಾರತದ ಸರಾಸರಿಯಾದ ೨೩%ಗಿಂತ ಸ್ವಲ್ಪ ಕಡಿಮೆಯಿದೆ ಹಾಗು ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ವಿಧಿಸಲಾದ ೩೩%ಗಿಂತ ಗಮನಾರ್ಹವಾಗಿ ಕಡಿಮೆಯಿದೆ.
4.ಕರ್ನಾಟಕ ರಾಜ್ಯದ ಚಿಹ್ನೆಗಳು:
ರಾಜ್ಯ ಭಾಷೆಕನ್ನಡ
ರಾಜ್ಯ ಚಿನ್ಹೆಗಂಡಬೇರುಂಡ
ರಾಜ್ಯ ಗೀತೆಜಯ್ ಭಾರತ ಜನನಿಯ ತನುಜಾತೆ
ಕವಿ:ಕುವೆಂಪು
5.ಒಟ್ಟು ೩೦ ಜಿಲ್ಲೆಗಳು:
1ಬಾಗಲಕೋಟ
2ಬೆಂಗಳೂರು
3ಬೆಂಗಳೂರು ಗ್ರಾಮೀಣ
4ಬೆಳಗಾವಿ
5ಬಳ್ಳಾರಿ
6ಬೀದರ
7ಬಿಜಾಪುರ
8ಚಾಮರಾಜನಗರ
9ಚಿಕ್ಕಬಳ್ಳಾಪುರ
10ಚಿಕ್ಕಮಗಳೂರು
11ಚಿತ್ರದುರ್ಗ
12ದಕ್ಷಿಣ ಕನ್ನಡ
13ದಾವಣಗೆರೆ
14ಧಾರವಾಡ
15ಗದಗ
16ಗುಲ್ಬರ್ಗ
17ಹಾಸನ
18ಹಾವೇರಿ
19ಕೊಡಗು
20ಕೋಲಾರ
21ಕೊಪ್ಪಳ
22ಮಂಡ್ಯ
23ಮೈಸೂರು
24ರಾಯಚೂರು
25ಶಿವಮೊಗ್ಗ
26ತುಮಕೂರು
27ಉಡುಪಿ
28ಉತ್ತರ ಕನ್ನಡ
29ರಾಮನಗರ
30ಯಾದಗಿರಿ
ಪ್ರತಿಯೊಂದು ಜಿಲ್ಲೆಗೆ ಜಿಲ್ಲಾಧಿಕಾರಿ ಇರುತ್ತಾರೆ. ಸಹಾಯಕ ಕಮಿಷನರ್, ತಹಸೀಲುದಾರ, ಶಿರಸ್ತೆದಾರ/ಸಹಾಯಕ ತಹಸೀಲುದಾರ, ಕಂದಾಯ ಪರಿಶೀಲನಾಧಿಕಾರಿ, ಗ್ರಾಮ ಲೆಕ್ಕಿಗ ಮೊದಲಾದ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗೆ ನೆರವಾಗಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಇರುತ್ತಾರೆ.
ಜಿಲ್ಲೆಯನ್ನು ವಿಭಾಗಿಸಿ ತಾಲೂಕುಗಳನ್ನು ರಚಿಸಲಾಗಿದೆ.
ತಾಲೂಕನ್ನು ವಿಭಾಗಿಸಿ ಗ್ರಾಮಗಳನ್ನು ರಚಿಸಲಾಗಿದೆ.
ಜಿಲ್ಲಾಡಳಿತದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳು, ಗ್ರಾಮ ಪಂಚಾಯತ್ ಗಳು, ನಗರಪಾಲಿಕೆಗಳು ಪಾಲ್ಗೊಳ್ಳುತ್ತವೆ
6.ಜನಸಂಖ್ಯೆ :-
೨೦೧೧/2011ರ ಜನಗಣತಿ ಪ್ರಕಾರ, ಕರ್ನಾಟಕದ ಜನಸಂಖ್ಯೆಯು ೬,೧೧,೩೦,೭೦೪ ಆಗಿದೆ ಹಾಗು ಇದರಲ್ಲಿ ಪುರುಷರ ಸಂಖ್ಯೆ ೩,೧೦,೫೭,೭೪೨ (೫೦.೮೦%) ಹಾಗು ಸ್ತೀಯರ ಸಂಖ್ಯೆ ೩,೦೦,೭೨,೯೬೨ (೪೯.೧೯%) ಅಂದರೆ ಪ್ರತಿ ೧೦೦೦ ಪುರುಷರಿಗೆ ೯೬೮ ಸ್ತೀಯರು.
೨೦೦೧/2001ರ ಜನಸಂಖ್ಯೆಕ್ಕಿಂತ ೨೦೧೧/2011ರ ಜನಸಂಖ್ಯೆ ೧೫.೬೭%ರಷ್ಟು ಹೆಚ್ಚಿದೆ. ಜನಸಂಖ್ಯಾ ಸಾಂದ್ರತೆಯು ೩೧೮.೮/ಚ.ಕಿಮೀ.ರಷ್ಟಿದೆ ಹಾಗು ನಗರ ಪ್ರದೇಶಗಳಲ್ಲಿ ೩೮.೫೭% ರಷ್ಟು ಜನ ವಾಸಿಸುತ್ತಾರೆ.
7.ಸಾಕ್ಷರತೆ:-
೭೫.೬%ರಷ್ಟಿದೆ,ಇದರಲ್ಲಿ ಪುರುಷರ ಸಾಕ್ಷರತೆಯು ೮೨.೮೫% ಮತ್ತು ಸ್ತೀಯರ ಸಾಕ್ಷರತೆಯು ೬೮.೧೩%ರಷ್ಟಿದೆ.
ಜನಸಂಖ್ಯೆಯ ೮೩% ಹಿಂದುಗಳು, ೧೧% ಮುಸಲ್ಮಾನರು, ೪% ಕ್ರೈಸ್ತರು, ೦.೭೮% ಜೈನರು, ೦.೭೩% ಬೌದ್ಧರು ಮತ್ತು ಉಳಿದವರು ಅನ್ಯ ಧರ್ಮದವರು.
ಕನ್ನಡವು ಕರ್ನಾಟಕದ ಆಡಳಿತ ಭಾಷೆಯಾಗಿದೆ ಹಾಗು ಸುಮಾರು ೬೪.೭೫%ರಷ್ಟು ಜನರ ಮಾತೃಭಾಷೆಯಾಗಿದೆ.
೧೯೯೧ರಲ್ಲಿ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಲ್ಲಿ ೯.೭೨‍% ಉರ್ದು, ೮.೩೪% ತೆಲುಗು, ೫.೪೬% ತಮಿಳು, ೩.೯೫% ಮರಾಠಿ, ೩.೩೮% ತುಳು, ೧.೮೭% ಹಿಂದಿ, ೧.೭೮% ಕೊಂಕಣಿ, ೧.೬೯% ಮಲಯಾಳಂ ಮತ್ತು ೦.೨೫% ಕೊಡವ ತಕ್‌ ಮಾತಾಡುವ ಜನರಿದ್ದರು.
ಕರ್ನಾಟಕದ ಜನನ ದರವು ೧೯.೯ (ಪ್ರತಿ ಸಾವಿರ ಜನರಿಗೆ), ಮೃತ್ಯು ದರವು ೭.೩ (ಪ್ರತಿ ಸಾವಿರ ಜನರಿಗೆ), ಶಿಶು ಮೃತ್ಯು ದರವು ೪೭ (ಪ್ರತಿ ಸಾವಿರ ಜನನಗಳಿಗೆ), ಮಾತೃ ಮೃತ್ಯು (ಜನನ ಸಮಯದಲ್ಲಿ) ದರವು ೨೧೩ (ಪ್ರತಿ ಲಕ್ಷ ಜನನಗಳಿಗೆ), ಒಟ್ಟು ಸಂತಾನ ದರವು (ಪ್ರತಿ ಮಹಿಳೆಗೆ ಅವಳ ಸಂತಾನೋತ್ಪತ್ತಿ ಕಾಲದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ) ೨.೧ ಆಗಿದೆ.
7.ಕರ್ನಾಟಕದ ವಿಶ್ವವಿದ್ಯಾಲಯಗಳು:-
೧. ಮೈಸೂರು ವಿಶ್ವವಿದ್ಯಾನಿಲಯ
೨. ಕರ್ನಾಟಕ ವಿಶ್ವವಿದ್ಯಾನಿಲಯ
೩. ಬೆಂಗಳೂರು ವಿಶ್ವವಿದ್ಯಾನಿಲಯ
೪. ಕೃಷಿ ವಿಶ್ವವಿದ್ಯಾನಿಲಯ
೫. ಕ್ರೆಸ್ಟ್ ಯುನಿವರ್ಸಿಟಿ
೬. ಗುಲ್ಬರ್ಗ ವಿಶ್ವವಿದ್ಯಾನಿಲಯ
೭. ಮಂಗಳೂರು ವಿಶ್ವವಿದ್ಯಾನಿಲಯ
೮. ಕೃಷಿ ವಿಶ್ವವಿದ್ಯಾನಿಲಯ
೯. ಕುವೆಂಪು ವಿಶ್ವವಿದ್ಯಾನಿಲಯ
೧೦.ಕನ್ನಡ ವಿಶ್ವವಿದ್ಯಾನಿಲಯ
೧೧.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
೧೨.ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾನಿಲಯ
೧೩.ದಾವಣಗೆರೆ ವಿಶ್ವವಿದ್ಯಾನಿಲಯ
೧೪.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
೧೫.ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ
೧೬.ತುಮಕೂರು ವಿಶ್ವವಿದ್ಯಾನಿಲಯ
೧೭.ಕರ್ನಾಟಕ ಪಶು ವೈದ್ಯಕೀಯ,ಮೀನುಗಾರಿಕೆ ವಿಶ್ವವಿದ್ಯಾನಿಲಯ
೧೮.ಕೃಷಿ ವಿಶ್ವವಿದ್ಯಾನಿಲಯ
೧೯.ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾನಿಲಯ
೨೦.ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ
೨೧.ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ
೨೨.ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ
೨೩.ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ
೨೪.ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ
8.ಕರ್ನಾಟಕದ ಆರ್ಥಿಕತೆ
ಕರ್ನಾಟಕ ಭಾರತ ದೇಶದ ಅತ್ಯಂತ ವೇಗವಾಗಿ ಅಭಿವೃದ್ದಿ ಹೋದುತ್ತಿರುವ ರಾಜ್ಯ. ೨೦೦೮-೦೯ರ ಆರ್ಥಿಕ ಬೆಳವಣಿಗೆ ದರದ ಪ್ರಕಾರವಾಗಿ ರಾಜ್ಯದ ಅಭಿವೃದ್ದಿ ದರವು $೫೮.೨೩ರಷ್ಟಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ತಲಾದಾಯದಲ್ಲಿಯೂ ಅತ್ಯಂತ ವೇಗದ ಬೆಳ್ವಣಿಗೆಯನ್ನು ಕಳೆದೊಂದು ದಶಕದಲ್ಲಿ ಕರ್ನಾಟಕ ರಾಜ್ಯ ದಾಖಲಿಸಿದೆ. ತಲಾದಾಯದ ಜಿಡಿಪಿ ಅಂಕಿ ಅಂಶಗಳ ಅನುಸಾರ ರಾಜ್ಯವು ದೇಶದ ರಾಜ್ಯಗಳಲ್ಲಿ ೬ ನೇ ಸ್ಥಾನದಲ್ಲಿದೆ. ೨೦೦೬ರ ಸೆಪ್ಟೆಂಬರ್ ತಿಂಗಳವರೆಗೆ ಒಟ್ತು ೭೮,೦೯೭ ರುಪಾಯಿಗಳ ವಿದೇಶಿ ಬ್ಂಡ್ವಾಳ್ವು ಹರಿದು ಬಂದಿರುತ್ತದೆ.
೨೦೦೪ರ ಅಂತ್ಯದ ವೇಳೆಗೆ ರಾಜ್ಯದ ನಿರುದ್ಯೋಗ ಪ್ರಮಾಣ ೪.೯೪%ರಷ್ಟಿದ್ದು ಇದೇ ವೇಳೆ ದೇಶದಲ್ಲಿನ ನಿರುದ್ಯೋಗದ ಪ್ರಮಾಣವು ೫.೯೯% ಇದ್ದುದು ಗಮನಾರ್ಹ ಅಂಶ. ಅದೇ ಸಮಯದಲ್ಲಿ ಕರ್ನಾಟಕದ ಹಣದುಬ್ಬರ ದರವೂ ಕೂಡ ರಾಷ್ತ್ರೀಯ ಹಣದುಬ್ಬರ ದರಕ್ಕಿಂತಲೂ ಕಡಿಮೆ ಯಾಗಿತ್ತು.
ರಾಷ್ತ್ರದ ಹಣದುಬ್ಬರ ಪ್ರಮಾಣ ೪.೭% ಇದ್ದರೆ, ರಾಜ್ಯದ ಹಣದುಬ್ಬರ ದರ ೪.೪% ಇತ್ತು. ದೇಶದಲ್ಲಿನ ಬಡತನದ ಅಂದಾಜು ೨೭% ಆಗಿದ್ದರೆ ಕರ್ನಾಟಕದಲ್ಲಿ ಅದು ೧೭% ಆಗಿರುತ್ತದೆ. ರಾಜ್ಯದಲ್ಲಿ ಒಟ್ಟು ೫೬% ದಷ್ಟು ಮಂದಿ ಕೃಷಿಯಾಧಾರಿತ ಉದ್ಯೋಗಸ್ಥರಾಗಿದ್ದು ಒಟ್ತು ೧೨.೩೧ ಮಿಲಿಯನ್ ಹೆಕ್ಟೇರ್ ನಶ್ಟು ಭೂಮಿಯನ್ನು ಕೃಷಿಗಾಗಿ ಬಳಸಲಾಗುತ್ತಿದೆ, ಇದು ರಾಜ್ಯದ ಒಟ್ಟು ಭೂಪ್ರದೇಶದ ೬೪%ರಷ್ಟಾಗುತ್ತದೆ. ಇದರಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮಾನ್ಸೂನ್ ಮಾರುತ ತರುವ ಮಳೆಯನ್ನವಲಂಬಿಸಿದ್ದರೆ, ೨೬.೫೫ ದಷ್ಟು ಭೂಮಿಯು ಮಾತ್ರ ನೀರಾವರಿ ಸೌಲಭ್ಯವನ್ನು ಹೊಂದಿದೆ.
ಕರ್ನಾಟಕದಲ್ಲಿ ಸಾಕಷ್ಟು ಸಾರ್ವಜನಿಕ ಹಾಗೂ ಖಾಸಗಿ ವಲಯದ ಕೈಗಾರಿಕೆಗಳಿದ್ದು ಅವುಗಳಲ್ಲಿ ಕೆಲ ಪ್ರಮುಖವಾದವುಗಳನ್ನು ಹೀಗೆ ಹೆಸರಿಸಬಹುದು: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಹೆವ್ವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್, ಇನ್ಫೋಸಿಸ್ ಮೊದಲಾದವು.
ಅಲ್ಲದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ಶಕಿ ಸಂಪನ್ಮೂಲ ಸಂಶೋಧನಾ ಕೇಂದ್ರ, ಕೇಂದ್ರ ಆಹಾರ ತಂತ್ರಜ಼ಾನ ಸಂಶೋಧನಾ ಕೇಂದ್ರದ ಪ್ರಧಾನ ಕಛೇರಿಗಳಿರುವುದು ಕರ್ನಾಟಕದ ಬೆಂಗಳೂರಿನಲ್ಲಿ.
ಇದಲ್ಲದೆ ಮಂಗಳೂರಿನಲ್ಲಿ ಮಂಗಳೂರು ರಿಫೈನರಿ ಪೆತ್ರೋಕೆಮಿಕಲ್ಸ್ ಲಿಮಿಟೆಡ್ ಎನ್ನುವ ತೈಲೋತ್ಪನ್ನ ಕೈಗಾರಿಕ ಘಟಕವೂ ಕಾರ್ಯ ನಿರ್ವಹಿಸುತ್ತಿದೆ.
ಕರ್ನಾಟಕದಲ್ಲಿ ೧೯೮೦ರಿಂದ ಆರಂಭವಾದ ಮಹಿತಿ ತ್ಂತ್ರಜ಼ಾನ ಉದ್ಯಮ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ೨೦೦೭ ರ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಸುಮಾರು ೨೦೦೦ ಮಾಹಿತಿ ತಂತ್ರಜ್ಞಾನ ಘಟಕಗಳಿವೆ.
ದೇಶದ ಐಟಿ ದಿಗ್ಗಜ ಸಂಸ್ಥೆಗಳೆನಿಸಿದ ಇನ್ಫೋಸಿಸ್, ವಿಪ್ರೋ ಕೂಡ ಕರ್ನಾಟಾಕದಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ. ೨೦೦೬-೦೭ರ ಅಂಕಿ ಅಂಶಗಳ ಅಂದಾಜಿನ ಪ್ರಕಾರ ದೇಶದ ೩೮% ದಷ್ಟು ಮಾಹಿತಿ ತಂತ್ರಜ್ಞಾನ ರಪ್ತು ವಹಿವಾಟು ಕರ್ನಾಟಕದಿಂದ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಬೆಂಗಳೂರು "ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ" ಎ೦ದು ಪ್ರಸಿದ್ಧವಾಗಿದೆ.
ಕರ್ನಾಟಕವು ರೇಷ್ಮೆ ಉದ್ಯಮಕ್ಕೂ ಹೆಸರಾಗಿದ್ದು ರಾಜ್ಯದ ಮೈಸೂರ್ ಸಿಲ್ಕ್ ವಿಶ್ವವ್ಯಾಪಿ ಮನ್ನಣೆ ಹೊಂದಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮುದ್ದೇನಹಳ್ಳಿ ಸಮೀಪ "ಸಿಲ್ಕ್ ಸಿಟಿ" ನಿರ್ಮಾಣಕ್ಕಾಗಿ ಸುಮಾರು ೭೦ ಕೋಟಿ ರುಪಾಯಿಗಳನ್ನ ವಿನಿಯೋಗಿಸಲು ಮುಂದಾಗಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿಯು ಸಹ ರಾಜ್ಯವು ನುಂಚೂಣಿಯಲ್ಲಿದ್ದು ದೇಶದ ೭ ಪ್ರಧಾನ ರಾಶ್ಟ್ರೀಕೃತ ಬ್ಯಾಂಕುಗಳ ಮೂಲ ನೆಲೆ ಇರುವುದು ಕರ್ನಾಟಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿವೆ.
9.ರಾಜಕೀಯ ವ್ಯವಸ್ಥೆ :-
ಕರ್ನಾಟಕದ ಶಾಸಕಾಂಗದ ವ್ಯವಸ್ಥೆ ಭಾರತದ ಸಂಸತ್ತಿನ ವ್ಯವಸ್ಥೆಯನ್ನು ಅನುಕರಿಸುತ್ತದೆ.
ಕರ್ನಾಟಕ ವಿಧಾನ ಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಕರ್ನಾಟಕ ಸರ್ಕಾರದ ಎರಡು ಮುಖ್ಯ ಮನೆಗಳು.
ವಿಧಾನ ಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ವಿಧಾನ ಪರಿಷತ್ತಿಗೆ ಪರೋಕ್ಷ ಚುನಾವಣೆಗಳು ನಡೆಯುತ್ತವೆ.
ವಿಧಾನ ಸಭೆಯ ಸದಸ್ಯರ ಸಂಖ್ಯೆ ೨೨೫.
ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ೭೫.
ವಿಧಾನ ಸಭೆಯ ಸದಸ್ಯತ್ವದ ಗರಿಷ್ಠ ಅವಧಿ ೫ ವರ್ಷಗಳಾಗಿವೆ.
ವಿಧಾನ ಪರಿಷತ್ತಿನ ಸದಸ್ಯತ್ವದ ಗರಿಷ್ಠ ಅವಧಿ ೬ ವರ್ಷಗಳಾಗಿವೆ.
ಮೊದಲ ವಿಧಾನ ಸಭೆ ೧೯೫೨ ರಿಂದ ೧೯೫೭ ರ ವರೆಗೆ ಸೇರಿತ್ತು.
ವಿಧಾನ ಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದ ಅಥವಾ ರಾಜಕೀಯ ಪಕ್ಷಗಳ ಒಕ್ಕೂಟದ ನಾಯಕರು ಮುಖ್ಯಮಂತ್ರಿಗಳಾಗಿ ಆರಿಸಲ್ಪಡುತ್ತಾರೆ. ಇದುವರೆಗೆ ಒಟ್ಟು ೨೨ ಮುಖ್ಯಮಂತ್ರಿಗಳನ್ನು ಕರ್ನಾಟಕ ಕಂಡಿದೆ.
೨೦೦೮ ಕರ್ನಾಟಕ ವಿಧಾನಸಭೆ ಚುನಾವಣೆ--ಕರ್ನಾಟಕ ವಿಧಾನ ಪರಿಷತ್---ಕರ್ನಾಟಕ ರಾಜ್ಯ ದ ಚುನಾವಣೆ
ಕರ್ನಾಟಕದಲ್ಲಿ ಸಕ್ರಿಯವಾಗಿರುವ ರಾಜಕೀಯ ಪಕ್ಷಗಳಲ್ಲಿ ಕೆಲವೆಂದರೆ ಕಾಂಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ ಕ್ರಾ೦ತಿರ೦ಗ ಕೆಸಿಪಿ, ಜನತಾ ದಳ(ಜಾತ್ಯತೀತ) ಇತ್ಯಾದಿ.
10.ಸ್ವಾಭಾವಿಕ ಪ್ರದೇಶಗಳು:-
ಕರ್ನಾಟಕ ಅನೇಕ ಅಭಯಾರಣ್ಯಗಳ ತವರು. ಇವು ಮೈಸೂರು ಜಿಲ್ಲೆಯ ಬಂಡೀಪುರ ಅಭಯಾರಣ್ಯ, ಬೆಂಗಳೂರು ಜಿಲ್ಲೆಯ ಬನ್ನೇರುಘಟ್ಟ ಅಭಯಾರಣ್ಯ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ನಾಗರಹೊಳೆ ಅಭಯಾರಣ್ಯ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕುದುರೆಮುಖ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಶಿ ಅಭಯಾರಣ್ಯ. ಅನೇಕ ವನ್ಯ ಮೃಗಧಾಮಗಳು ಸಹ ಕರ್ನಾಟಕದಲ್ಲಿ ಇವೆ.
11.ಅಭಿವೃದ್ಧಿ
ಪಶು ಸಾಂಗೋಪನೆ
ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದೆ. .ರಾಜ್ಯ ದಲ್ಲಿ ಒಟ್ಟು ೧.೨೫ ಕೋಟಿ ಜಾನುವಾರುಗಳಿವೆ. ಇತ್ತೀಚೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದಿಂದಾಗಿ ೧೪,೪೪೧ (೧೯-೨-೨೦೧೪ ಕ್ಕೆ)ಜಾನುವಾರುಗಳು ಸತ್ತಿವೆ; ಲಸಿಕೆ ಹಾಕುವ ಕಾರ್ಯಕ್ರಮ ನಡೆದಿದೆ . ಹಾಲಿನ ಉತ್ಪಾದನೆ ವರ್ಷಕ್ಕೆ ೪೯ ಲಕ್ಷ ಲೀಟರ್ ನಿಂದ ೫೨-೫೩ ಉತ್ಪಾದನೆ ಆಗುತ್ತದೆ . ಸುಮಾರು ೧೫ ಲಕ್ಷ ಲೀಟರ್ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ ಆಗುತ್ತಿದ್ದು , ಸಿಂಗಪುರ, ರಷ್ಯಾ, ಶ್ರೀಲಂಕಾ, ಮ್ಯನ್ಮಾರ್ ಮೊದಲಾದ ದೇಶಗಳಿಗೆ ರಪ್ತು ಮಾಡಲಾಗುತ್ತಿದೆ (19-2-2014 ಹಾಲು ಮಹಾ ಮಂಡಳಿಯ ನಿರ್ದೇಶಕ - ಎಂ. ಎಸ್. ಪ್ರೇಮನಾಥ್ ಬೆಂಗಳೂರು ಸುದ್ದಿಗೋಷ್ಠಿ- ಸುದ್ದಿಮಾಧ್ಯಮ- ಪ್ರಜಾವಾಣಿ)
12.ಐತಿಹಾಸಿಕ ಸ್ಥಳಗಳು:-
ಕರ್ನಾಟಕದಲ್ಲಿ ಐತಿಹಾಸಿಕ ಆಕರ್ಷಣೆಗಳನ್ನು ಒಳಗೊಂಡ ಕೆಲವು ಪ್ರದೇಶಗಳು:
ಬಾದಾಮಿ, ಐಹೊಳೆ, ಪಟ್ಟದಕಲ್ಲು
ಹಾಸನ ಜಿಲ್ಲೆಯಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಸಕಲೇಶಪುರ
ಸಾಗರ(ವರದಹಳ್ಳಿ,ಇಕ್ಕೇರಿ,ಕೆಳದಿ,ಸಿಗಂದೂರು,ಮಾರಿಕಾಂಬಾ ದೇವಸ್ಥಾನ ಸಾಗರ)
ಹಂಪೆ
ಬಿಜಾಪುರ
ಮೈಸೂರು
ಚಿತ್ರದುರ್ಗ
ಭದ್ರಾವತಿ
ಬೀದರ್
ಮಾಕಿರೆಡ್ಡೀಪಲ್ಲಿ ಚಿಕ್ಕಬಳ್ಳಾ ಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲಿದೆ.
ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲಿದೆ.
ಮಾನ್ಯಪುರ (ಈಗಿನ ಮಣ್ಣೆ - ಬೆಂಗಳೂರು ಗ್ರಾಮಾಂತರ ಜಿಲ್ಲೆ),
ಉ‍‍‍‍‍ಡುಪಿ
ದಕ್ಷಿಣ ಕನ್ನಡ (ಸಯ್ಯಿದ್ ಮದನಿ ದರ್ಗಾ ಉಳ್ಳಾಲ, ರಾಣಿಅಬ್ಬಕ್ಕ ಪ್ರತಿಮೆ ಉಳ್ಳಾಲ, ಶ್ರೀ ಗೋಕರ್ನಥ ದೇವಸ್ಥಾನ ಕುದ್ರೋಳಿ, ಸೈಂಟ್ ಅಲೋಶಿಯಸ್ ಚರ್ಚ್ ಮಂಗಳೂರು, ಕೇಂದ್ರ ಜುಮಾ ಮಸ್ಜಿದ್ ಮಂಗಲಳೂರು, ಸಿಟಿ ಸೆಂಟರ್ ಮಾಲ್, ಪಿಳಿಕುಳ ನಿಸರ್ಗಧಾಮ, ತಣ್ಣೀರುಬಾವಿ ಬೀಚ್, ಮಂಗಳೂರು ಕೈಗಾರಿಕಾ ವಲಯ ಬೈಕಂಪಾಡಿ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್(ಎಂ.ಆರ್.ಪಿ.ಎಲ್) ಹಾಗೂ ಇನ್ನಿತರ ),
ಸಂಸ್ಕೃತಿ
13.ಕಲೆ
ಬಿದ್ರಿ ಕಲೆ ಸುಮಾರು ೧೪ನೆ ಶತಮಾನ್ ದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಪ್ರಾಚಿನ ಕಲೆ ಯಲ್ಲಿ ಒಂದು. ಇವತ್ತಿಗೂ ಈ ಕಲೆಯ ಬೇಡಿಕೆ ದೇಶ-ವಿದೇಶದಲ್ಲಿ ತುಂಬಾ ಇದೆ.
ಇತ್ತೀಚಿನ ಕಾಮ್ಮೊನ್ ವೆಅಲ್ಥ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಭಾರತ ದೇಶದಿಂದ ಬಿದ್ರಿ ಕಲೆ ಉಡುಗೊರೆ ಕೊಡಲಾಗಿತ್ತು. ಮತ್ತೆ ಬಿದ್ರಿ ಕಲೆಯ ಊಡುಗೋರೆ USUS ಊ ಎಸ್ ನ ವೈಟ್ ಹೌಸ್ನಲ್ಲಿ ಕೂಡ ಇಡಲಾಗಿದೆ . ಇವು ಬಿದ್ರಿ ಕಲೆಯ ಕೆಲವು ಉಪಾದಿಗಳು
14.ಧಾರ್ಮಿಕ ಕ್ಷೇತ್ರಗಳು:-
ಕರ್ನಾಟಕ : ಸಾಗರ, ಗಾಣಗಾಪುರ, ಧರ್ಮಸ್ಥಳ, ಶೃಂಗೇರಿ, ಉಡುಪಿ, ಮೇಲುಕೋಟೆ, ಬಸವಕಲ್ಯಾಣ, ಆದಿಚುಂಚನಗಿರಿ, ಬಾಳೆ ಹೊನ್ನೂರು, ಹೊರನಾಡು, ಕಟೀಲು, ಗೋಕರ್ಣ, ಸಿದ್ಧಗಂಗಾ ಮಠ, ದ್ಯಾವನೂರು, ಕೊಲ್ಲೂರು, ಮುರುಡೇಶ್ವರ, ಶಿರ್ಸಿ, ಕುಕ್ಕೆ ಸುಬ್ರಹ್ಮಣ್ಯ, ಕೂಡಲ ಸಂಗಮ, ಬನವಾಸಿ, ಸವದತ್ತಿ, ಗೋಲಗುಮ್ಮಟ, ಬಾದಾಮಿ, ಗುರಗುಂಜಿ, ಚಾಮುಂಡಿ ಬೆಟ್ಟ, ನಂಜನಗೂಡು,ನ೦ಬಿನಾಯಕನಹಳ್ಳಿ. ಖಿಳೆಗಾಂವ ಬಸವಣ್ಣ, ಮೂಡಬೂಳ ವೇಣುಗೋಪಾಲ ಸ್ವಾಮಿ ದೇವಾಲಯ, ಗುಲ್ಬರ್ಗದ ಕೋಟೆ, ಶರಣಬಸವೇಶ್ವರ ದೇವಾಲಯ, ಬಂದೇನವಾಜ್ ದರ್ಗ, ಬುದ್ಧವಿಹಾರ, ದೇವರಗುಡ್ಡ ,ಮೈಲಾರ, ಮಲೆಮಹದೇಶ್ವರ, ನಂಜವದೂತ ಮಠ ಸಿರಾ ಯಲಗೂರು , ಹುಲಿಗಿಯ ಹುಲಿಗೆಮ್ಮ ದೇವಿ. ಇಟಗಿಯ ಭಿಮಕ್ಕನ ಗುಡಿ ಮುಂತಾದ ಹಲವು ಧಾರ್ಮಿಕ ಕ್ಷೇತ್ರಗಳಿಂದ ಕೂಡಿದೆ.
15.ಭಾಷೆಗಳು:-
ಕರ್ನಾಟಕದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅದರಲ್ಲಿ ಕೆಲವು ಮುಖ್ಯವಾದವುಗಳೆ೦ದರೆ:
ಕನ್ನಡ
ತುಳು
ಅರೆಭಾಷೆ ಕನ್ನಡ(ಗೌಡ ಕನ್ನಡ)
ಕೊಡವ ತಕ್ಕ್
ಕೊಂಕಣಿ
ತಮಿಳು
ತೆಲಗು
ಮಲೆಯಾಳಂ
ಹಿಂದಿ-(Urdu)ಮುಂತಾದುವು.
16.ಪ್ರಮುಖರು:-
ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಬಸವಣ್ಣ, ಪುರಂದರದಾಸರು, ಕನಕದಾಸ, ಮಧ್ವಾಚಾರ್ಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಕೃಷ್ಣದೇವರಾಯ, ಜಯಚಾಮರಾಜೇಂದ್ರ ಒಡೆಯರ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಎಸ್.ನಿಜಲಿಂಗಪ್ಪ , ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ಅ.ನ.ಕೃಷ್ಣರಾಯರು, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು, ಆಲೂರು ವೆಂಕಟರಾಯರು, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ, ಡಾ.ದೇಜಗೌ, ಡಾ.ಚಂದ್ರಶೇಖರ ಕಂಬಾರ, ಯು.ಆರ್.ಅನಂತಮೂರ್ತಿ, ಪೂರ್ಣಚಂದ್ರತೇಜಸ್ವಿ, ಡಾ.ಎಸ್.ಎಲ್.ಭೈರಪ್ಪ, ದ.ರಾ.ಬೇಂದ್ರೆ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜಿ.ಎಸ್. ಶಿವರುದ್ರಪ್ಪ, ಪಂಜೆ ಮಂಗೇಶ ರಾಯರು, ಡಾ.ಡಿ ವಿ ಗುಂಡಪ್ಪ, ಡಾ. ಚಿದಾನಂದಮೂರ್ತಿ, ಡಾ. ಸೂರ್ಯನಾಥ ಕಾಮತ್, ದೇವರಾಜ ಅರಸು, ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ , ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಕಾರ್ನಾಡು ಸದಾಶಿವರಾಯರು, ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಡಾ ರಾಜಾರಾಮಣ್ಣ, ಪ್ರೊ. ಯು ವಿ ರಾವ್, ಪ್ರೊ. ಸಿ ಎನ್ ಆರ್ ರಾವ್. ಎನ್.ಆರ್.ನಾರಾಯಣ ಮೂರ್ತಿ. ಪಂ.ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಪ್ರೊ.ಎಂ.ವೆಂಕಟಸುಬ್ಬಯ್ಯ, ಕೆ.ಎಸ್.ನರಸಿಂಹಸ್ವಾಮಿ. ಕೆ.ಎಸ್.ನಿಸಾರ್ ಅಹಮದ್ ಸಂತೋಷ್ ಹೆಗ್ದೆ, ಕಾಗೊಡು ತಿಮ್ಮಪ್ಪ, ನಾಡೋಜ ಚನ್ನವೀರ ಕಣವಿ. ನಾಡೋಜ ಪಾಟೀಲ ಪುಟ್ಟಪ್ಪ ಮುಂತಾದವರು.
17.ರಾಜಕಾರಣದಲ್ಲಿ ಪ್ರಮುಖರು:

ಕೆ೦ಗಲ್ ಹನುಮ೦ತಯ್ಯ, ದೇವರಾಜ್ ಅರಸ್, ರಾಮಕೃಷ್ಣ ಹೆಗ್ದೆ, ಎಸ್ ಬ೦ಗಾರಪ್ಪ, ಹೆಚ್.ಡಿ.ದೇವೆಗೌಡ, ಬಿ.ಎಸ್.ಯೆಡಿಯೂರಪ್ಪ, ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಕರ್ಗೆ, ಜಿ.ಎಸ್.ಪರಮೇಶ್ವರ್, ಸದಾನಂದಗೌಡ, ಅನಂತಕುಮಾರ್ ಇತ್ಯಾದಿ


#PRAVEENBH

No comments:

Post a Comment

Note: only a member of this blog may post a comment.