Thursday, 29 October 2015

ಅಪರೂಪದ 123 ಆಮೆಗಳ ವಶ



GK4KPSC
JNANASELE
 
ನವದೆಹಲಿ: ಅಳಿವಿನಂಚಿನಲ್ಲಿರುವ ಅಪರೂಪದ ಆಮೆಗಳನ್ನು ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ದೆಹಲಿಯ ಆನಂದ ವಿಹಾರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.



ಬಂಧಿತ ಮಹಿಳೆಯ ಬಳಿಯಿದ್ದ 123 ಆಮೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಿದೇಶಗಳಲ್ಲಿ ಭಾರಿ ಬೇಡಿಕೆ ಇರುವ ಆಮೆಗಳ ಮಾರಟ ಜಾಲವೇ ಇದರ ಹಿಂದಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.



ವಶಕ್ಕೆ ಪಡೆದ ಮೃದುಚಿಪ್ಪಿನ ಆಮೆಗಳು ಭಾರತೀಯ ಸಂತತಿಯದ್ದೇ ಆಗಿದ್ದು, 1972ರಿಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ರಕ್ಷಿಸಲಾಗುತ್ತಿದೆ. ಇವುಗಳ ಚಿಪ್ಪನ್ನು ತೆಗೆದು, ಬಿಸಿಲಲ್ಲಿ ಒಣಗಿಸಿ, ಪುಡಿ ಮಾಡಿ ವಿದೇಶಗಳಿಗೆ ಕಳ್ಳ ಸಾಗಣೆ ಮಾಡಲಾಗುತ್ತಿದೆ. ಮುಖ್ಯವಾಗಿ ಇವುಗಳ ಪುಡಿಯನ್ನೆ ಚೀನಾದಲ್ಲಿ ಔಷಧಿಗಳಿಗೆ ಬಳಕೆ ಮಾಡಲಾಗುತ್ತಿರುವ ಸಂಗತಿ ಪ್ರಕರಂದಿಂದ ಮತ್ತೆ ಸಾಬೀತಾಗಿದೆ. ಪಾಕಿಸ್ತಾನ, ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್​ಗಳಲ್ಲಿ ಮಾತ್ರ ಅಪರೂಪದ ಆಮೆಗಳು ಕಾಣಿಸಿಗುತ್ತವೆ.


No comments:

Post a Comment

Note: only a member of this blog may post a comment.