Sunday 24 January 2016

ಗಣರಾಜ್ಯೋತ್ಸವ! ಭಾರತೀಯ ಪ್ರಜಾಪ್ರಭುತ್ವದ ಹಬ್ಬ!

HAPPY REPUBLIC DAY......PRAVEEN

ಸ್ವಾತಂತ್ರ್ಯೋತ್ಸವ (ಆಗಸ್ಟ್ 15) ಹಾಗೂ ಗಣರಾಜ್ಯೋತ್ಸವ (ಜನವರಿ 26) ನಮ್ಮ ರಾಷ್ಟ್ರೀಯ ಹಬ್ಬಗಳು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಹೆಮ್ಮೆಯ ದಿನಗಳು.

ಭಾರತ ಜಗತ್ತಿನ ಹಳೆಯ ರಾಷ್ಟ್ರಗಳಲ್ಲಿ ಒಂದು. ಇದು `ರಾಷ್ಟ್ರ' ಎಂಬ ಕಲ್ಪನೆ ಋಗ್ವೇದದಲ್ಲಿಯೇ ಇದೆ. ಹಾಗೆಯೇ ಇದು `ಗಣರಾಜ್ಯ' ಎಂಬ ಕಲ್ಪನೆ ವೈದಿಕ ಹಾಗೂ ಬೌದ್ಧ ಸಾಹಿತ್ಯದಲ್ಲಿ ಸಿಗುತ್ತದೆ.

1947 ಆಗಸ್ಟ್ 15 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವತಂತ್ರರಾದ ನಂತರ ನಾವು ಆಧುನಿಕ ಸಂಸದೀಯ ಪ್ರಜಾತಂತ್ರವನ್ನು ಅಳವಡಿಸಿಕೊಂಡೆವು. 1950 ಜನವರಿ 26 ರಂದು ನಮ್ಮ ಹೊಸ ಸಂವಿಧಾನ ಜಾರಿಗೆ ಬಂದಿತು. ಅಂದಿನಿಂದ ಆಧುನಿಕ ಅರ್ಥದಲ್ಲಿ ಭಾರತ `ಗಣರಾಜ್ಯ'ವಾಯಿತು. ನೂರಾರು ವರ್ಷಗಳ ನಂತರ ಭಾರತೀಯರೆಲ್ಲರೂ ಶಾಸನಾತ್ಮಕವಾಗಿ ಮತ್ತೆ ಒಂದೇ ಸಕರ್ಾರದ ಅಡಿಯಲ್ಲಿ ಇರುವಂತಾಯಿತು. ಅಂದಿನಿಂದ ನಾವು ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವ (ರಿಪಬ್ಲಿಕ್ ಡೇ) ಆಚರಿಸುತ್ತೇವೆ.

ಆಚರಣೆಯ ಅಂಗವಾಗಿ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಭಾರಿ ಮಿಲಿಟರಿ ಪೆರೇಡ್ (ಕವಾಯತು) ಹಾಗೂ ಸಾಂಸ್ಕೃತಿಕ ಮೆರವಣಿಗೆಗಳು ನಡೆಯುತ್ತವೆ. ಯಾರಾದರೂ ವಿದೇಶಿ 5 ಸರ್ಕಾರದ ಮುಖ್ಯಸ್ಥರನ್ನು ಆಮಂತ್ರಿಸಿ ಅವರ ಸಮ್ಮುಖದಲ್ಲಿ ದೇಶದ ಮಿಲಿಟರಿ ಹಾಗೂ ಸಾಂಸ್ಕೃತಿಕ ಶಕ್ತಿಯ ಪ್ರದರ್ಶನ ಮಾಡಲಾಗುತ್ತದೆ.

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ

ಸಲದ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರನ್ನು ಆಹ್ವಾನಿಸಿದೆ.

ಹೊಲಾಂಡೆ ಅವರು ಭಾರತದ ಸರಕಾರದ ಆಹ್ವಾನವನ್ನು ಸ್ವೀಕರಿಸಿದ್ದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾರತೀಯ ಸೇನೆಯಿಂದ ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ.

ಕಳೆದ ವರ್ಷ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಒಬಾಮಾ ಜತೆಗೆ ಅವರ ಪತ್ನಿ ಮಿಶೆಲ್‌ ಒಬಾಮಾ ಕೂಡ ಬಂದಿದ್ದರು.

ದೇಶದ ರಾಷ್ಟ್ರಪತಿಯ ನಿವಾಸವಾದ `ರಾಷ್ಟ್ರಪತಿ ಭವನ' ಬಳಿ ಇರುವ ರೈಸಿನಾ ಹಿಲ್ನಿಂದ ಆರಂಭವಾಗುವ ಮೆರವಣಿಗೆ ರಾಜಪಥ್ ಉದ್ದಕ್ಕೂ ತೆರಳಿ ಇಂಡಿಯಾ ಗೇಟ್ (ಹುತಾತ್ಮ ಸೈನಿಕರ ಸ್ಮಾರಕ) ದಾಟಿ ಹಳೆಯ ದೆಹಲಿಯಲ್ಲಿರುವ ಐತಿಹಾಸಿಕ ಕೆಂಪು ಕೋಟೆಯನ್ನು ತಲುಪುತ್ತದೆ.

ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳ ವಿವಿಧ ವೀಭಾಗಗಳ ಯೋಧರು ತಮ್ಮ ಸಮವಸ್ತ್ರ ಹಾಗೂ ಅಧಿಕೃತ ಪದಕಗಳನ್ನು ಧರಿಸಿ ಕವಾಯತಿನಲ್ಲಿ ಭಾಗವಹಿಸುತ್ತಾರೆ. ದೇಶದ ಮಹಾದಂಡನಾಯಕರಾಗಿರುವ ರಾಷ್ಟ್ರಪತಿಗಳಿಗೆ ಗೌರವವಂದನೆ (ಸೆಲ್ಯೂಟ್) ಅಪರ್ಿಸುತ್ತಾರೆ. ಛೀಫ್ ಗೆಸ್ಟ್ ಆಗಿರುವ ವಿದೇಶಿ ಮುಖ್ಯಸ್ಥರು ರಾಷ್ಟ್ರಪತಿಗಳ ಜೊತೆ ಮೆರವಣಿಗೆ ವೀಕ್ಷಿಸುತ್ತಾರೆ.

ಮೆರವಣಿಗೆಯಲ್ಲಿ ಸಾಂಪ್ರದಾಯಿಕ ನೃತ್ಯ ತಂಡಗಳು, ಜಾನಪದ ತಂಡಗಳು, ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರಗಳು ಭಾಗವಹಿಸುತ್ತವೆ. ತಮ್ಮ ಸಮಯಪ್ರಜ್ಞೆ ಹಾಗೂ ಸಾಹಸ ಮನೋಭಾವಗಳಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡಿ `ರಾಷ್ಟ್ರೀಯ ಶೌರ್ಯ ಪ್ರಶಸ್ತಿ' ಪಡೆದ ಮಕ್ಕಳನ್ನು ಆನೆಯ ಮೇಲಿನ ಅಂಬಾರಿಯಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ!

ನವದೆಹಲಿಯಂತೆಯೇ ವಿವಿಧ ರಾಜ್ಯಗಳ ರಾಜಧಾನಿಗಳಲ್ಲೂ ಮೆರವಣಿಗೆ, ಪೊಲೀಸರ ಕವಾಯತು ನಡೆಯುತ್ತದೆ. ಆಯಾ ರಾಜ್ಯಗಳ ರಾಜ್ಯಗಳ ರಾಜ್ಯಪಾಲರುಗಳು ಗೌರವವಂದನೆ ಸ್ವೀಕರಿಸುತ್ತಾರೆ.

No comments:

Post a Comment

Note: only a member of this blog may post a comment.