Sunday, 10 January 2016

ಕರ್ನಾಟಕ ಇತಿಹಾಸ : ಗಂಗರು

   ಗಂಗರು  ಕರ್ನಾಟಕವನ್ನು  ಸುಮಾರು 600 ವರ್ಷ ಗಳ ಕಾಲ  ಆಳಿದರು.
    ಗಂಗರ ರಾಜ್ಯ ಕೋಲಾರ , ತುಮಕೂರು , ಬೆಂಗಳೂರು , ಮಂಡ್ಯ ಹಾಗೂ ಮೈಸೂರನ್ನ ಒಳಗೊಂಡಿತ್ತು .
    ಗಂಗರು ಬಾದಾಮಿ ಚಾಲುಕ್ಯರು ಹಾಗೂ ರಾಷ್ಟ್ರಕೂಟರ ಸಾಮಾಂತರಾಗಿದ್ದರು .
    ಕೋಲಾರ ಅಥವಾ ಕುವಲಾಲ ಇವರ ಆರಂಭದ ರಾಜಧಾನಿ
    ಗಂಗರ ಎರಡನೇ ರಾಜಧಾನಿ ತಲಕಾಡು
    ಗಂಗ ನಾಡಿನ ತಿರುಳು ಭಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು .
    ಗಂಗರಲ್ಲಿ ಪ್ರಸಿದ್ದನಾದ ದೊರೆ ಶ್ರೀ ಪುರುಷ”
    ರಾಚಮಲ್ಲನ ಮಂತ್ರಿಯಾದ ಚಾವುಂಡ ರಾಯನು ಶ್ರವಣ ಬೆಳಗೋಳದಲ್ಲಿ ಕ್ರಿ..980 ರಲ್ಲಿ ಗೊಮ್ಮಟೇಶ್ವರನ ಏಕಶಿಲಾ    ಮೂರ್ತಿಯನ್ನು ಕೆತ್ತಿಸಿದನು .
    ಗಂಗ ಮನೆತನವು ಕ್ರಿ..೧೦೦೪ರಲ್ಲಿ ಚೋಳರಿಂದ ಸೋತು ಕೊನೆಗೊಂಡಿತು
    ಚನ್ನಪಟ್ಟಣ್ಣದ ಮಾಕುಂದ ಹಾಗೂ ಬೆಂಗಳೂರು ಜಿಲ್ಲೆಯ ನೆಲಮಂಗಲ ಬಳಿಯ ಮನ್ನೇಯ ಇವರ ಿತರ ರಾಜಧಾನಿ .
    ಗಂಗರನ್ನು ತಲಕಾಡಿನ ಗಂಗರು ಎಂದು ಪ್ರಸಿದ್ದರಾಗಿದ್ದರು .
    ಗಂಗರ ರಾಜ ಮುದ್ರೆ ಅಥವಾ ರಾಜ ಲಾಂಛನ ಮದಗಜ
    ಗಂಗರು ಗಂಗಟಕಾರರು ಎಂದು ಹೆಸರುವಾಸಿಯಾಗಿದ್ದರು .
    ಗಂಗರು ಆಳಿತದ ಪ್ರದೇಶವನ್ನು ಗಂಗವಾಡಿ ಅಥವಾ ಗಂಗನಾಡು ಎಂದು ಕರೆಯುತ್ತಿದ್ದರು .
    ಗಂಗರು ಸ್ವತಂತ್ರರಾಗಿ ಕ್ರಿ.. 350 – 600 ರವರೆಗೆ ಆಳ್ವಿಕೆ ಮಾಡಿದ್ದಾರೆ .
    ಗಂಗರು ಚಾಲುಕ್ಯರ ಸಾಮಂತರಾಗಿ ಕ್ರಿ..600 - 758 ರವರೆಗೆ ಆಳ್ವಿಕೆ ಮಾಡಿದರು .
    ಗಂಗರು ರಾಷ್ಷ್ರಕೂಟರ ಸಾಮಾಂತರಾಗಿ ಕ್ರಿ..757 – 973 ರವರೆಗೆ ಆಳ್ವಿಕೆ ಮಾಡಿದರು .
    ಗಂಗರು ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಕ್ರಿ.. 973 – 990 ರವರೆಗೆ ಆಳ್ವಿಕೆ ಮಾಡಿದರು .
    ತಲಕಾಡು ಗಂಗರ ಪ್ರಧಾನ ಆಡಳಿತ ಕೇಂದ್ರವಾಗಿತ್ತು .

ಗಂಗರ ಮೂಲ
    ದೈವಿ ಸಿದ್ದಾಂತದ ಪ್ರಕಾರ ಇವರು ಇಕ್ಷಾಕು ವಂಶದವರೆಂದು
    ಕಣ್ವ ಮೂವಗ ಪ್ರಕಾರ ಿವರು ಕಣ್ವ ವಂಶದವರು ಎಂದು
    ತಮಿಳು ಮೂಲ - ಇವರು ಮೂಲತಃ ಪೆರೂರು ಆಗಿದ್ದು ( ಕೊಯಮತ್ತೂರು ) ಇವರು ತಮಿಳು ಮೂಲದಿಂದ ಬಂದವರೆಂದು ಹೇಳಲಾಗಿದೆ .
    ಕನ್ನಡ ಸಿದ್ದಾಂತದ ಪ್ರಕಾರ ಇವರು ಅಚ್ಚ ಕನ್ನಡಿಗರು - ಗಂಗರು ರಾಜಧಾನಿ ತಲಕಾಡು ದಕ್ಷಿಣ ಗಂಗೆ ಕಾವೇರಿ ನದಿಯ ದಡದಲ್ಲಿದ್ದರಿಂದ ವಂಶಕ್ಕೆ ಗಂಗ ಎಂದು ಹೆಸರು ಬಂದಿದೆ .

ಗಂಗ ಮನೆತನದ ರಾಜರುಗಳು

    ದಡಿಗ
    ಒಂದನೇ ಮಾಧವ
    ಎರಡನೇ ಮಾಧವ
    ಮೂರನೇ ಮಾಧವ
    ಅವನೀತ
    ದುರ್ವಿನೀತ
    ಶ್ರೀಪುರುಷ
    ಎರಡನೇ ಶಿವಮಾರ
    ಒಂದನೇ ರಾಚ ಮಲ್ಲ

ಗಂಗರ ರಾಜಕೀಯ ಇತಿಹಾಸ 
 ದಡಿಗ or ಕೊಂಗುಣಿ ವರ್ಮ

    ಇವನು ಗಂಗ ವಂಶದ ಸ್ಥಾಪಕ
    ಕುವಲಾಲ ಅಥವಾ ಕೋಲಾರ ಇವನ ರಾಜಧಾನಿ .
    ಬಾಣರನ್ನು ಸೋಲಿಸಿ ಗಂಗ ವಂಶಕ್ಕೆ ಅಡಿಪಾಯ ಹಾಕಿದ
    ಧರ್ಮ ಮಹಾರಾಜ ಹಾಗೂ ಬಾಣ ವಂಶದವನ ದಾವಲನ ಎಂಬುದು ಇವನ ಬಿರುದುದಳು .
    ಈತನ ಗುರುವಿನ ಹೆಸರು - ಸಿಂಹ ನಂದಿ ( ಜೈನಗುರು )
    ಸಿಂಹ ನಂದಿಯ ಇಚ್ಛೆಯ ಮೇರೆಗೆ ಶಿವಮೊಗ್ಗದ ದುಂಡಲಿ ಎಂಬಲ್ಲಿ ಒಂದು ಚೈತ್ಯಲಾಯವನ್ನು ನಿರ್ಮಿಸಿದನು .

ಒಂದನೇ ಮಾಧವ

    ದಡಿಗನ ನಂತರ ಅಧಿಕಾರಕ್ಕೆ ಬಂದವನು
    ಈತ ಸ್ವತಃ ಕವಿಯಾಗಿದ್ದನು ಹಾಗೂ ಕವಿಗಳಿಗೆ ಆಶ್ರಯ ನೀಡಿದ್ದನು
    ಈತ ರಚಿಸಿದ ಕೃತಿ - “ ದತ್ತ ಸೂತ್ರ
    ಇವನ ನಂತರ ಹರಿವರ್ಮ ಹಾಗೂ 2 ನೇ ಮಾಧವ ಆಳಿದರು

ಮೂರನೇ ಮಾಧವ

    ಇವನು ತಂಡಂಗಾಲ ಮಾಧವ ಎಂದು ಹೆಸರಾಗಿದ್ದಾನೆ .
    ಈತ ಕದಂಬ ಅರಸ ಕಾಕುಸ್ಥವರ್ಮನ ಮಗಳನ್ನು ವಿವಾಹವಾಗಿದ್ದ
    ವಿಜಯ ಕೀರ್ತಿ - ಿವನ ದೀಕ್ಷಾ ಗುರುಗಳಾಗಿದ್ದರು .

ಅವನೀತ

    ಈತ ಮೂರನೇ ಮಾಧವನ ಮಗ
    ಈತ ಶಿವನ ಆರಾಧಕನಾಗಿದ್ದನು .
    ಈತ ಸರ್ವಧರ್ಮ ಸಮನ್ವಯಿಯಾಗಿದ್ದನ್ನು
    ಇತನನ್ನ ಶಾಸನಗಳು ಹರ ಚರಣಾರ ಎಂದ ಪ್ರಣಿಪಾತ ಎಂದು ಉಲ್ಲೇಕಿಸಿದೆ

ದುರ್ವಿನೀತ

    ಈತ ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ
    ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ
    ಈತ ವೈಷ್ಣವ ಮತಾವಲಂಬಿಯಾಗಿದ್ದನು
    ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು
    ಇತ ಗುಣಾಡ್ಯನ ” “ ವಡ್ಡ ಕಥಾವನ್ನು ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು
    ಇತನ ಗುರು - ಪುಷ್ಯಪಾದ ಅಥವಾ ದೇವಾನಂದಿ
    ಇತನ ಬಿರುದುಗಳು - ಅವನೀತ ಸ್ತರ ಪೂಜಾಲಾಯ . ಅಹೀತ , ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ
    ಈತನ ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ .


ಶ್ರೀಪುರುಷ

    ದುರ್ವಿನೀತ ನಂತರ ಅಧಿಕಾರಕ್ಕೆ ಬಂದವನು
    ಈತ ಗಜಶಾಸ್ತ್ರ ಎಂಬ ಕೃತಿಯನ್ನ ರಚಿಸಿದರು
    ಈತ ರಾಜಧಾನಿಯನ್ನು ಮಾಕುಂದದಿಂದ - ಮಾನ್ಯಪರಕ್ಕೆ ಬದಲಾಯಿಸಿದನು
    ಒಂದನೇ ಶಿವಮಾರನಿಗೆ - ್ವನಿ ಮಹೇಂದ್ರ ಎಂಬ ಬಿರುದಿತ್ತು
    ತುಂಡಕ ಕದನ ದಲ್ಲಿ ಪಲ್ಲವರನ್ನು ಸೋಲಿಸಿದವನು
    ಇವನ ಕಾಲದಲ್ಲಿ ಗಂಗರಾಜ್ಯ ಶ್ರೀರಾಜ್ಯ ಎಂದು ಕರೆಸಿಕೊಂಡಿತು .
    ಈತನ ಬಿರುದುಗಳು - ರಾಜಕೇಸರಿ , ಪೆರ್ಮಾಡಿ , ಶ್ರೀವಲ್ಲಭ , ಬೀಮಕೋಪ

ಎರಡನೇ ಶಿವಮಾರ

    ಈತನ ಇನ್ನೊಂದು ಹೆಸರು - ಸೈಗೋತ
    ಈತನ ಕೃತಿಗಳು - ಗಜಾಷ್ಮಕ , ಸೇತುಬಂಧ ಹಾಗೂ ಶಿವಮಾರ ತರ್ಕ
    ಈತ ಶ್ರವಣಬೆಳಗೋಳದಲ್ಲಿ ಜೈನ ಬಸದಿಯನ್ನು ನಿರ್ಮಿಸಿದನು
    ಈತನ ತಂದೆಯ ಹೆಸರು - ಶ್ರೀಪುರುಷ

ಎರಡನೇ ಬೂತುಗ

    ಈತ ತತ್ಕೋಳಂ ಕದನದಲ್ಲಿ ಚೋಳರ ರಾಜಾದಿತ್ಯನನ್ನು ಕೊಂದನು .
    ಆತನ ಬಿರುದು - ಮಹಾರಾಜಾದಿರಾಜ

ಮಂತ್ರಿ ಚಾವುಂಡರಾಯ

    ಈತ ಗಂಗರ ಆಸ್ಥಾನದಲ್ಲಿ ಮಂತ್ರಿಯಾಗಿ ಹಾಗೂ ದಂಡನಾಯಕನಾಗಿದ್ದ
    ಈತ ್ಜಿತಸೇನಾ ಭಟ್ಟರಕ ಹಾಗೂ ನೇಮಿಚಂದ್ರ ಮುನಿಯ ಅನುಯಾಯಿ
    ಈತನ ಬಿರುದು - ಸತ್ಯವಿದಿಷ್ಠಿರ
    ಈತನ ಕೃತಿಗಳು - ಸಂಸ್ಕೃತದಲ್ಲಿ ಚರಿತ್ರಾಸಾರ ಕನ್ನಡದಲ್ಲಿ ಚಾವುಂಡರಾಯ ಪುರಣ ಅಥವಾ ಅಥವಾ ತ್ರಿಷಷ್ಠಿ ಲಕ್ಷಣ ಮಹಾಪುರರಣ

No comments:

Post a Comment

Note: only a member of this blog may post a comment.