Wednesday 28 October 2015

ಮನುಷ್ಯನಿಗೆ ಒಂದೇ ಇಂದ್ರಿಯ ಶಕ್ತಿ?!

GK4KPSC
JNANASELE

 
ವಾಷಿಂಗ್ಟನ್: ಮನುಷ್ಯನಿಗೆ ಐದು ಇಂದ್ರಿಯ ಶಕ್ತಿಗಳಿಲ್ಲ, ಬದಲಿಗೆ ಇವೆಲ್ಲವುಳನ್ಣು ಸಂಭಾಳಿಸುವ ಏಕೈಕ ಇಂದ್ರಿಯ ಶಕ್ತಿಯಿದೆ. ವೀಕ್ಷಿಸುವುದು, ಆಲಿಸುವುದು, ರುಚಿ ನೋಡುವುದು, ವಾಸನೆ ಗ್ರಹಿಸುವುದು ಮತ್ತು ಸ್ಪರ್ಶ ಗುರುತಿಸುವುದು ಇವೆಲ್ಲವೂ ಒಂದೇ ವ್ಯವಸ್ಥೆಯಡಿ ಬರುವ ಸಾಧ್ಯತೆ ಇದೆ ಎಂದು ಅಮೆರಿಕದ ನರತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರುಚಿ ನೋಡುವುದು ಮತ್ತು ವಾಸನೆ ಗುರುತಿಸುವುದರ ನಡುವೆ ಸಾಮ್ಯತೆ ಕುರಿತು ಬ್ರ್ಯಾಂಡಿಸ್ ವಿಶ್ವವಿದ್ಯಾಲಯದ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾನ್ ಕಾಟ್ಜ್ ಅಧ್ಯಯನ ನಡೆಸುತ್ತಿದ್ದಾರೆ. 2009ರಲ್ಲಿ ಇಲಿಗಳ ಮೇಲೆ ಪ್ರಯೋಗ ನಡೆಸಿದ ಕಾಟ್ಜ್, ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡಾಗ ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುವುದನ್ನು ತೋರಿಸಿದ್ದರು. ಎರಡು ವರ್ಷಗಳ ನಂತರ ಇಲಿಗಳು ಇಷ್ಟವಾದ ಆಹಾರ ಪತ್ತೆ ಹಚ್ಚಲು ವಾಸನೆಯಷ್ಟೇ, ರುಚಿಯ ಮೇಲೂ ಅವಲಂಬಿತವಾಗಿರುತ್ತವೆ ಎಂಬ ಅಧ್ಯಯನ ವರದಿ ಪ್ರಕಟಿಸಿದ್ದರು.

ಇಲಿಗಳ ರುಚಿ ಗ್ರಹಣ ಶಕ್ತಿ ನಿಂತರೆ ಇಲಿಗಳಿಗೆ ವಾಸನೆ ಗ್ರಹಿಸಲು ಸಾಧ್ಯವೇ ಇಲ್ಲ ಎಂದು ಕಾಟ್ಜ್ ಹೊಸ ಅಧ್ಯಯನದಲ್ಲಿ ತಿಳಿಸಿದ್ದಾರೆ. ಇಲಿಗಳ ಬಾಯಿಯಿಂದ ಮಿದುಳಿನ ಜೀವಕೋಶಗಳಿಗೆ ರುಚಿ ಸಂಕೇತಗಳ ರವಾನೆಯಾಗುವುದನ್ನು ನಿಲ್ಲಿಸಿದರು. ಮರುಕ್ಷಣವೇ ವಾಸನೆ ಗ್ರಹಿಸುತ್ತಿದ್ದ ನರಗಳು ನಿಂತು ಹೋದವು. ಪ್ರಯೋಗದಿಂದ ರುಚಿ ಮತ್ತು ವಾಸನೆ ಗ್ರಹಿಕೆ ಬೇರೆ ಬೇರೆ ಇಂದ್ರಿಯಗಳಿಂದಲ್ಲ. ಒಂದೇ ಇಂದ್ರಿಯ ವ್ಯವಸ್ಥೆ ಇವುಗಳನ್ನು ಸಂಭಾಳಿಸುತ್ತಿದೆ. ಇನ್ನುಳಿದಂತೆ ಆಲಿಸುವುದು, ವೀಕ್ಷಿಸುವುದು ಎಲ್ಲವೂ ಒಂದೇ ಇಂದ್ರಿಯದ ಹತೋಟಿಯಲ್ಲಿ ಇರಬಹುದು ಎಂದು ಅಂದಾಜಿಸಿದ್ದಾರೆ.

No comments:

Post a Comment

Note: only a member of this blog may post a comment.