Tuesday, 27 October 2015

17ನೇ ಶತಮಾನದ ಮಾಸ್ತಿಗಲ್ಲು ಪತ್ತೆ




GK4KPSC
JNANASELE
 
ತೀರ್ಥಹಳ್ಳಿ: ಕೆಳದಿ ಅರಸರ ಕಾಲದ 17ನೇ ಶತಮಾನದ ವೀರ ಮಾಸ್ತಿಗಲ್ಲು ತಾಲೂಕಿನ
ಹೆಗ್ಗೋಡು ಸಮೀಪದ ಸಂತರಿಗೆ ಗ್ರಾಮದ ಗುತ್ಯಮ್ಮ ದೇವಸ್ಥಾನದ ಬಳಿ ಪತ್ತೆಯಾಗಿದೆ.
ಇದು ಮೂರು ಅರೆಗಳನ್ನು ಹೊಂದಿದೆ. ಶಿಲೆಯ ಮೇಲೆ ದೈವ ಸಾನ್ನಿಧ್ಯವಿದ್ದು, ಎರಡನೇ ಅರೆಯಲ್ಲಿ ಮಡಿದ ಯೋಧ ಹಾಗೂ ಆತನ ಐವರು
ಸತಿಯರ ಚಿತ್ರಗಳಿವೆ. ಮೂರನೇ ಅರೆಯಲ್ಲಿ ವೀರ ಮತ್ತು ಸಹಗಮನ ಮಾಡಿಕೊಂಡ ಸತಿಯ
ಚಿತ್ರವಿದೆ. ಈ ಶಾಸನವನ್ನು
ಜಿ.ಆರ್.ಸತ್ಯನಾರಾಯಣ ಮತ್ತು ಸ್ಥಳೀಯ ಇತಿಹಾಸ ತಜ್ಞ ಎಲ್.ಎಸ್.ರಾಘವೇಂದ್ರ ಪತ್ತೆ
ಮಾಡಿದ್ದಾರೆ.
ಆರು ಸಾಲುಗಳ ಬರಹದಲ್ಲಿ ‘ಬಂಶಹಾವಗಿ ಮಹಿಪದದ ಬಳಿಯ ಮಡಿಶಿದ ವೀರ ಬಡಣ
ವಡೆಯರು’ ಎಂದು ಬರೆಯಲಾಗಿದೆ. ಮತ್ತೊಂದು ಸಾಲಿನಲ್ಲಿ ‘ಕಾದು ಮಡಿದ ಜಶದೆಪ್ಪ ವಡೇಯರ ಮಗ ಬಡಯಣ್ಣ ಶಿಲ್ಪಿ ಬರಮನ ಮಗ ಬಡಯಣ’
ಎಂದೂ ದಾಖಲಿಸಲಾಗಿದೆ.
ಇದರ ಸನಿಹದಲ್ಲಿ ಇನ್ನೂ ಹಲವು ಲಿಪಿರಹಿತ ವೀರಗಲ್ಲುಗಳಿರಬಹುದು. ಈ ಪ್ರದೇಶದಲ್ಲಿ ಯುದ್ಧ ಸಂಭವಿಸಿರುವ ಸಾಧ್ಯತೆ ಹೆಚ್ಚಿದೆ
ಎಂದು ರಾಘವೇಂದ್ರ ತಿಳಿಸಿದ್ದಾರೆ.
ಚಿತ್ರ: ತೀರ್ಥಹಳ್ಳಿ ಬಳಿ ದೊರೆತ 17ನೇ ಶತಮಾನದ ವೀರ ಮಾಸ್ತಿಗಲ್ಲು.

No comments:

Post a Comment

Note: only a member of this blog may post a comment.