Thursday, 30 November 2017

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
12/10/2017ರ ಪ್ರಶ್ನೋತ್ತರಗಳು
1) ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯ 'ಕಡಿಮೆ ತೂಕ'ದ ಮಕ್ಕಳು ಹಾಗೂ ತರುಣರನ್ನು ಹೊಂದಿರುವ ದೆಶ ಯಾವುದು?
A. ಚೀನಾ
B. ಅಮೇರಿಕ
C. ಭಾರತ ✔✔
D. ಕೆನಡ
📕📕📕📕📕📕📕📕📕📕📕📕📕📕
2) ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಭಾರತದ 3 ಲಕ್ಷ ಯುವಕರಿಗೆ ತರಬೇತಿ ಕೊಡಿಸಲು ಈ ಕೆಳಗಿನ ಯಾವ ದೇಶಕ್ಕೆ ಕಳುಹಿಸಲು ತಯಾರಿ ನಡೆಸಿದೆ?(ಪ್ರವೀಣ ಹೆಳವರ)
A. ಚೀನಾ
B. ಶ್ರೀಲಂಕಾ
C. ಜಪಾನ್ ✔✔
D. ಭೂತಾನ್
📕📕📕📕📕📕📕📕📕📕📕📕📕📕📕
3) ಫಿಫಾ (Federation International de Football Association") ಯಾವ ದೇಶದ ಮೇಲೆ ಅಂತರರಾಷ್ಟ್ರೀಯ ಫುಟ್‌ಬಾಲ್‌ ನಿಂದ ನಿಷೇಧ ಹೇರಿದೆ?
A. ಬಾಂಗ್ಲಾದೇಶ
B. ಶ್ರೀಲಂಕಾ
C. ಪಾಕಿಸ್ತಾನ ✔✔
D. ನೇಪಾಳ
 📕📕📕📕📕📕📕📕📕📕📕📕📕📕
4) ಭಾರತದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ(ಎಫ್ ಟಿಐಐ)ಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A. ಅಮಿತಾಭ್ ಬಚ್ಚನ್
B. ಅನುಪಮ್ ಖೇರ್ ✔✔
C. ಶಬಾನಾ ಆಜ್ಮಿ
D. ವಿದ್ಯಾ ಬಾಲನ್
📕📕📕📕📕📕📕📕📕📕📕📕📕📕📕
5) ಗರೀಭಿ ಭಾರತ್ ಛೋಡೋ ಅಭಿಯಾನವು ಯಾವ ವರ್ಷದೊಳಗೆ ಭಾರತದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿದೆ?
A. 2018
B. 2020
C. 2022 ✔✔
D. 2024
📕📕📕📕📕📕📕📕📕📕📕📕📕📕📕
6) ಕ್ರೀಡಾ ಕ್ಷೇತ್ರದಲ್ಲಿ ತೋರಿದ ಉತ್ತಮ ಸಾಧನೆಗಾಗಿ ಭಾರತ ಸರ್ಕಾರ ನೀಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು ಗುರುತಿಸಿ ?
A. ರಾಜೀವ್ ಗಾಂಧಿ ಖೇಲ್ ರತ್ನ
B. ಅರ್ಜುನ ಪ್ರಶಸ್ತಿ
C. ಧ್ಯಾನ್‌ಚಂದ್ ಪ್ರಶಸ್ತಿ
D. ಮೇಲಿನ ಎಲ್ಲವೂ✔✔
📕📕📕📕📕📕📕📕📕📕📕📕📕📕📕
7) ಅರಿಶಿನ ಪುಡಿಯಲ್ಲಿ ಕಂಡುಬರುವ ಕಲಬೆರಕೆ ವಸ್ತುವನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
A. ಟಾಲ್ಕಮ್ ಪುಡಿ
B. ಮರದ ತೊಗಟೆಯ ಪುಡಿ
C. ಮೆಟಾನಿಲ್ ಹಳದಿ✔✔
D. ಹಳದಿ ಬಣ್ಣದ ಅಡುಗೆ ಸೋಡಾ
📕📕📕📕📕📕📕📕📕📕📕📕📕📕📕
8) ಸಸ್ಯಶಾಸ್ತ್ರದ ಪ್ರಕಾರ ಆಲದ ಮರದ ಜೀವಿತಾವಧಿ 400 ವರ್ಷಗಳಾದರೆ, ದೈತ್ಯ ಸಿಕ್ಟೋಯಾ ಮರದ ಜೀವಿತಾವಧಿ ಎಷ್ಟು?
A. 2000 ವರ್ಷ 
B. 3500 ವರ್ಷ ✔✔
C. 4000 ವರ್ಷ 
D. 4500 ವರ್ಷ
📕📕📕📕📕📕📕📕📕📕📕📕📕📕
9) ಆನೆಗಳಿಗೆ ಪ್ರಸಿದ್ಧವಾಗಿರುವ ಹಾಗೂ ಸರೋವರದ ಮಧ್ಯಭಾಗದಲ್ಲಿರುವ ಮಧುಪುರ ರಾಷ್ಟ್ರೀಯ ಉದ್ಯಾನವನ ಯಾವ ದೇಶದಲ್ಲಿದೆ?
A. ಭಾರತ(ಪ್ರವೀಣ ಹೆಳವರ)
B. ಭೂತಾನ್
C. ಬಾಂಗ್ಲಾದೇಶ ✔✔
D. ನೇಪಾಳ
📕📕📕📕📕📕📕📕📕📕📕📕📕📕
10) ಈ ಕೆಳಕಂಡ ಯಾವ ಅಪರೂಪದ ಖನಿಜವನ್ನು ‘ಬಿಳಿ ಇದ್ದಿಲು’ ಎಂದು ಕರೆಯಲಾಗುತ್ತದೆ?
A. ಯುರೇನಿಯಂ ✔✔
B. ಥೋರಿಯಂ
C. ಲಿಥಿಯಮ್
D. ಲಿಗ್ನೈಟ್
📕📕📕📕📕📕📕📕📕📕📕📕📕📕📕

ಸಾಮಾನ್ಯ ಕನ್ನಡ ಎಸ್‌.ಡಿ.ಎ. ಮತ್ತು ಎಫ್.ಡಿ.ಎ. ಗೆ ಉಪಯುಕ್ತ

ಸಾಮಾನ್ಯ ಕನ್ನಡ ಎಸ್‌.ಡಿ.ಎ. ಮತ್ತು ಎಫ್.ಡಿ.ಎ. ಗೆ ಉಪಯುಕ್ತ 15/10/2017                             
1) "ವಿಜ್ಞಾನ " ಈ ಪದದ ತದ್ಭವ ರೂಪವೇನು?
a) ಬಿಜ್ಜಣ
b) ಬಿನ್ನಣ✔✔
c) ಬಿಜ್ಞಾನ
d) ವಿನ್ನಣ

2) ಈ ಕೆಳಗಿನವುಗಳಲ್ಲಿ  ಅನ್ಯದೇಶೀಯ ಪದ ಯಾವುದು ?
a) ಕದ
b) ಮೂಡಣ
c) ಕಾಗದ✔✔
d) ಅಂಗಳ

3) " ಮನ್ವಂತರ " ಇದು ಈ ಸಂಧಿಗೆ ಉದಾಹರಣೆ ಆಗಿದೆ.
a) ವೃದ್ಧಿ ಸಂಧಿ
b) ಯಣ್ ಸಂಧಿ ✔✔
c) ಜಶ್ತ್ವ ಸಂಧಿ
d) ಗುಣ ಸಂಧಿ

4) ಇಲ್ಲಿ ಯಾವುದು 'ದ್ವಿರುಕ್ತಿ' ಅಲ್ಲ .
a) ಮತ್ತೆ ಮತ್ತೆ
b) ಬೇಗ ಬೇಗ
c) ಪಟ ಪಟ✔✔
d) ದೊಡ್ಡ ದೊಡ್ಡ

5) "ನಾಯಿ"ಯು ಒಂದು ____________ಕ್ಕೆ  ಉದಾಹರಣೆ .
a) ಪುಲ್ಲಿಂಗ
b) ಸ್ತ್ರೀಲಿಂಗ
c) ನಪುಂಸಕ ಲಿಂಗ✔✔
d) ಯಾವುದು ಅಲ್ಲ

6) "ಆಡುಂಬೊಲ" ಪದದ ಅರ್ಥವೇನು?
a) ಆಡು ತಿನ್ನುವ ಪದಾರ್ಥ
b) ಆಡು ಕಟ್ಟುವ ಸ್ಥಳ
c) ಆಟದ ಬಯಲು✔✔
d) ಆಡುವ ಚೆಂಡು

7) ಈ ಕೆಳಗಿನವುಗಳಲ್ಲಿ  ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ ಯಾವುದು ?
a) ತನಗೆ✔✔
b) ನನಗೆ
c) ಅವನಿಗೆ
d) ಯಾರಿಗೆ

8) " ಜೋಗಿ " ಎಂಬುದು ಯಾರ ಕಾವ್ಯನಾಮ ?
a) ಕೃಷ್ನಾನಂದ ಕಾಮತ್
b) ಗಿರೀಶರಾವ್ ಹತ್ವಾರ್✔✔
c) ಎಚ್. ಎಸ್. ವೆಂಕಟೇಶಮೂರ್ತಿ
d) ಡಾ. ಎಲ್. ಬಸವರಾಜು

9) " ಕಡೆಗೋಲು " ಇದು ಯಾವ ಸಮಾಸವಾಗಿದೆ?
a) ಕರ್ಮಧಾರಯ ಸಮಾಸ
b) ತತ್ಪುರುಷ ಸಮಾಸ
c) ಕ್ರಿಯಾ ಸಮಾಸ
d) ಗಮಕ ಸಮಾಸ ✔✔

10) " ಸುರಗಿ" ಇದು __________________ರ ಆತ್ಮಕಥನವಾಗಿದೆ.
a) ಎ.ಕೆ. ರಾಮಾನುಜನ್
b) ಯು.ಆರ್. ಅನಂತಮೂರ್ತಿ ✔✔
c) ಬಾಗಲೋಡಿ ದೇವರಾಯ
d) ಕೆ.ಎಸ್. ನರಸಿಂಹಸ್ವಾಮಿ





ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
11/10/2017 ರ ಪ್ರಶ್ನೋತ್ತರಗಳು          
1) ಕೇರಳದ ಇತಿಹಾಸದಲ್ಲೆ ಮೊದಲ ಬಾರಿಗೆ ದಲಿತ ಯುವಕನೊಬ್ಬ ದೇವಾಲಯದ ಅರ್ಚಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರ ಹೆಸರೇನು?
A. ಕನನ್
B. ಕನ್ವಾಲ್
C. ಕೃಷ್ಣನ್✔✔
D. ಖೇತನ್
⚙⚙⚙⚙⚙⚙⚙⚙⚙⚙⚙⚙

2) ಸಿಯಾಚಿನ್ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಯಾರು?
A. ಮನಮೋಹನಸಿಂಗ್✔✔
B. ಅಬ್ದುಲ್ ಕಲಾಂ
C. ಅಟಲ್ ಬಿಹಾರಿ ವಾಜಪೇಯಿ
D. ನರೇಂದ್ರ ಮೋದಿ
⚙⚙⚙⚙⚙⚙⚙⚙⚙⚙⚙⚙

3) ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ 'ನಿಶಾನ್-ಇ-ಪಾಕಿಸ್ತಾನಿ­ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?(ಪ್ರವೀಣ ಹೆಳವರ)
A. ಜವಾಹರ್ ಲಾಲ್ ನೆಹರೂ.
B. ಪಿ.ವಿ.ನರಸಿಂಹರಾವ್.
C. ಮುರಾರ್ಜಿ ದೇಸಾಯಿ.✔✔
D. ರಾಜೀವ್ ಗಾಂಧಿ.
⚙⚙⚙⚙⚙⚙⚙⚙⚙⚙⚙⚙

4) ಭಾರತದ ಮೇಲೆ ಚೀನಾ 1962 ರಲ್ಲಿ ದಾಳಿ ಮಾಡಿದಾಗ ಅಂದಿನ ರಕ್ಷಣಾ ಸಚಿವರು ಯಾರಾಗಿದ್ದರು?
A. ಕೃಷ್ಣಾ ಮೆನನ್.✔✔
B. ಯಶವಂತರಾವ್ ಸಿನ್ಹಾ.
C. ಸರ್ದಾರ್ ಸ್ವರ್ಣ ಸಿಂಗ್.
D. ಇಂದಿರಾ ಗಾಂಧಿ.
⚙⚙⚙⚙⚙⚙⚙⚙⚙⚙⚙⚙

5) ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ?
A. ಪ್ರೀತಿಕಾ ಯಾಶಿನಿ✔✔
B. ತುಳಸಿಯಪ್ಪನ್
C. ದೇವಿಕಾ ಸಬರರ್
D. ರಾಕುಲ್ ಬಿಬಿ
⚙⚙⚙⚙⚙⚙⚙⚙⚙⚙⚙⚙

6) ಬ್ರೆಸ್ಟ್ ಮಿಲ್ಕ್ ಫೌಂಡೇಶನ್ ಸ್ಥಾಪಿಸಿರುವ ದೇಶದ ಮೊದಲ ಎದೆ ಹಾಲು ಬ್ಯಾಂಕ್ ಎಲ್ಲಿದೆ?
A. ಕೊಲ್ಕತ್ತ
B. ಚೆನ್ನೈ
C. ಬೆಂಗಳೂರು
D. ದೆಹಲಿ ✔✔
⚙⚙⚙⚙⚙⚙⚙⚙⚙⚙⚙

7) ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
A. ಮಹಾರಾಷ್ಟ್ರ
B. ಕೇರಳ ✔✔
C. ಪಾಂಡಿಚೇರಿ
D. ದೆಹಲಿ
⚙⚙⚙⚙⚙⚙⚙⚙⚙⚙⚙

8)  'ವಿಶ್ವಸಂಸ್ಥೆ' ಎಂಬ ಪದವನ್ನು ನೀಡಿದವರು ಯಾರು?
A. ಜಾನ್ ಡಿ ರಾಕಫೆಲ್ಲರ್.
B. ಡಿ.ರೂಸವೆಲ್ಟ್.✔✔
C. ವಿನ್ಸಟನ್ ಚರ್ಚಿಲ್.
D.  ವುಡ್ರೋ ವಿಲ್ಸನ್.
⚙⚙⚙⚙⚙⚙⚙⚙⚙⚙⚙⚙⚙

9) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಯಾವ ವರ್ಷದಿಂದ ಆರಂಭಿಸಿದೆ?
A. 2009
B. 2007✔✔
C. 2005
D. 2011
⚙⚙⚙⚙⚙⚙⚙⚙⚙⚙⚙

10) ಗ್ರಾಮೀಣಾಭಿವೃದ್ಧಿಯ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ 'ಯಲವಗಿ ಗ್ರಾಮ ಪಂಚಾಯಿತಿ' ಯಾವ ಜಿಲ್ಲೆಯಲ್ಲಿದೆ?
1)  ಗದಗ.
2) ದಕ್ಷಿಣಕನ್ನಡ.
3)  ಬೀದರ.
4)  ಹಾವೇರಿ.✔✔
⚙⚙⚙⚙⚙⚙⚙⚙⚙⚙

https://m.facebook.com/groups/224252954432390

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
10/10/2017 ರ ಪ್ರಶ್ನೋತ್ತರಗಳು
1) ಸುಪ್ರೀಂ ಕೋರ್ಟ್ ಈ ಬಾರಿಯ ದೀಪಾವಳಿಗೆ ಯಾವ ನಗರದಲ್ಲಿ ಸಿಡಿಮದ್ದು ಮತ್ತು ಪಟಾಕಿಗಳನ್ನು ಮಾರಾಟ ಮಾಡದಂತೆ ನಿಷೇಧ ಹೇರಿದೆ?
A. ಬೆಂಗಳೂರು
B. ದೆಹಲಿ✔✔
C. ಕೊಲ್ಕತ್ತ
D. ಚೆನ್ನೈ
📗📗📗📗📗📗📗📗📗📗📗📗📗📗📗
2) ಮಿಸ್ ಹಿಮಾಲಯ 2017 ಸ್ಪರ್ಧೆಯ ವಿನ್ನರ್ ಯಾರು?(ಪ್ರವೀಣ ಹೆಳವರ)
A. ಪ್ರೆಕ್ಷಾ ರಾಣಾ ✔✔
B. ರಮ್ಯಾ ಸರಣ್
C. ಆಯುಶಿ ಸೇಠಿ
D. ವಮಿಕಾ ನಿಧಿ
📗📗📗📗📗📗📗📗📗📗📗📗📗📗
3) ರಾಜ್ಯ ಸರಕಾರವು  ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಯಾವಾಗಿನಿಂದ  ಜಾರಿಗೊಳಿಸಲು ಉದ್ದೇಶಿಸಿದೆ?
A. ನವೆಂಬರ್ ೧
B. ನವೆಂಬರ್ ೧೦
C. ಡಿಸೆಂಬರ್ ೧✔✔
D. ಡಿಸೆಂಬರ್ ‍೧೦
📗📗📗📗📗📗📗📗📗📗📗📗📗📗
4) ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ(ಸಿ.ಜೆ) ಯಾರನ್ನು ನೇಮಕ ಮಾಡಲಾಗಿದೆ.?
A. ಸುಬ್ರೊ ಕಮಲ್‌ ಮುಖರ್ಜಿ
B. ಎಸ್.ಕೆ.ಮೆಹ್ರಾ
C. ರಂಜಿತ್ ಕುಮಾರ್
D. ಎಚ್.ಜಿ.ರಮೇಶ್‌✔✔
📗📗📗📗📗📗📗📗📗📗📗📗📗📗📗
5) ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳ ಅನುಷ್ಠಾನ ವಿಭಾಗದ ಉಪ ಮಹಾ ಪ್ರಧಾನ ನಿರ್ದೇಶಕಿಯಾಗಿ ಆಯ್ಕೆಯಾದ ಭಾರತೀಯ ಮಹಿಳೆ ಯಾರು? 
A. ಡಾ. ಗೀತಾ ಸಾವರೀಕರ್
B. ಡಾ. ಸೌಮ್ಯಾ ಸ್ವಾಮಿನಾಥನ್ ✔✔
C. ಡಾ. ಲೀನಾ ನಾಯರ್
D. ಡಾ. ಅಲ್ಕಾ ಬ್ಯಾನರ್ಜಿ
📗📗📗📗📗📗📗📗📗📗📗📗📗📗📗
6) 2017ರ ನವೆಂಬರ್ ತಿಂಗಳಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ ಚಂಪಾ ಆಯ್ಕೆಯಾಗಿದ್ದಾರೆ. ಈ ಕೆಳಕಂಡವುಗಳಲ್ಲಿ ಅವರ ಕೃತಿಯನ್ನು ಗುರುತಿಸಿ?
A. ಟಿಂಗರ ಬುಡ್ಡಣ್ಣ
B. ಗೋಕರ್ಣದ ಗೌಡಸಾನಿ 
C. ಕುಂಟ ಕುಂಟ ಕುರುವತ್ತಿ
D.  ಮೇಲಿನ ಎಲ್ಲವೂ✔✔
📗📗📗📗📗📗📗📗📗📗📗📗📗📗📗
7) ಇತ್ತೀಚೆಗೆ ರೋಹಿಂಗ್ಯಾ ಮುಸ್ಲಿಮರ ವಲಸೆ ಬಿಕ್ಕಟ್ಟು ಅಂತರರಾಷ್ಟ್ರೀಯ ಗಮನ ಸೆಳೆದಿದೆ. ರೋಹಿಂಗ್ಯಾಗಳು ಯಾವ ದೇಶದವರು?
A. ಭಾರತ
B. ಥೈಲ್ಯಾಂಡ್
C. ಮ್ಯಾನ್ಮಾರ್‌✔✔
D. ಬಾಂಗ್ಲಾದೇಶ
📗📗📗📗📗📗📗📗📗📗📗📗📗📗
8) ಸಿಂಗಾಪುರದ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಹಲೀಮತ್ ಯಾಕೂಬ್ ಅವರು ಮೂಲತಃ ಯಾವ ದೇಶದವರು? 
A. ಭಾರತ✔✔
B. ಪಾಕಿಸ್ತಾನ
C. ಬಾಂಗ್ಲಾದೇಶ
D. ಈಜಿಪ್ಟ್‌
📗📗📗📗📗📗📗📗📗📗📗📗📗📗📗
9) ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇ–ಬಸ್‌ ಸೇವೆಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ? 
A. ಅರುಣಾಚಲ ಪ್ರದೇಶ
B. ಉತ್ತರಪ್ರದೇಶ
C. ಮಧ್ಯಪ್ರದೇಶ
D. ಹಿಮಾಚಲ ಪ್ರದೇಶ✔✔
📗📗📗📗📗📗📗📗📗📗📗📗📗📗📗
10) ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಯಾವಾಗ ಆಚರಿಸುತ್ತಾರೆ ?(ಪ್ರವೀಣ ಹೆಳವರ)
A. ಸೆಪ್ಟೆಂಬರ್ ೧೦
B. ಅಕ್ಟೋಬರ್ ೧೦✔✔
C. ಆಗಸ್ಟ್ ೧೦
D. ನವೆಂಬರ್ ೧೦
📗📗📗📗📗📗📗📗📗📗📗📗📗

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು
08/10/2017ರ ಪ್ರಶ್ನೋತ್ತರಗಳು
1) ಪ್ರಸ್ತುತ ದೇಶದಲ್ಲಿರುವ ಒಟ್ಟು ಹೈಕೋರ್ಟಗಳ ಸಂಖ್ಯೆ ಎಷ್ಟು?
A. 20
B. 22
C. 30
D. 24✔✔
📗📗📗📗📗📗📗📗📗📗📗📗📗📗
2) ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
A. ಶಿವಾಜಿ.
B. ಕೃಷ್ಣದೇವರಾಯ.✔✔
C. ಅಕ್ಬರ್.
D. ಚಂದ್ರಗುಪ್ತ.
📗📗📗📗📗📗📗📗📗📗📗📗📗📗
3) ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
A.  1976
B.  1985
C.  1986
D.  1989✔✔
📗📗📗📗📗📗📗📗📗📗📗📗📗📗
4) ಸುಪ್ರೀಂಕೋರ್ಟನ್ ಒಟ್ಟು ನ್ಯಾಯಧೀಶರ ಸಂಖ್ಯೆ ಎಷ್ಟು?(ಪ್ರವೀಣ ಹೆಳವರ)
A.  29+1.
B.  30+1.✔✔
C.  31+1.
D.  39+1.
📗📗📗📗📗📗📗📗📗📗📗📗📗
5) ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?
A. ಹೈಟಿ.
B. ಕೋಸ್ಟರಿಕಾ.
C. ಬ್ರಿಟನ್.
D. ಆಸ್ಟ್ರೇಲಿಯಾ.✔✔
📗📗📗📗📗📗📗📗📗📗📗📗📗📗📗
6)  ಪ್ರಖ್ಯಾತ ದೇಶಭಕ್ತಿ ಗೀತೆಯಾದ 'ಏ ಮೇರೆ ವತನ್ ಕೀ ಲೋಗೊ' ಅನ್ನು ಬರೆದವರು ಯಾರು?
A. ಲತಾ ಮಂಗೇಶ್ಕರ್.
B. ಸಿ. ರಾಮಚಂದ್ರನ್.
C. ಕವಿ ಪ್ರದೀಪ್.✔✔
D. ಮೇಲಿನವರೂ ಯಾರು ಅಲ್ಲ.
📗📗📗📗📗📗📗📗📗📗📗📗📗📗
7) ಸಂಗೀತದ ಬಗ್ಗೆ ಮೊಟ್ಟ ಮೊದಲಿಗೆ ವಿವರಣೆ ನೀಡುವ ವೇದ ಯಾವುದು?
A. ಋಗ್ವೇದ.
B. ಸಾಮವೇದ.✔✔
C. ಯಜುರ್ವೇದ.
D. ಅಥರ್ವಣವೇದ.
📗📗📗📗📗📗📗📗📗📗📗📗📗📗
8) ಕಾಮರಾಜ ಪೋರ್ಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಬಂದರು ಯಾವುದು?
A. ಚೆನ್ನೈನ ಎನ್ನೋರ್ ಬಂದರು.✔✔
B. ಮಲ್ಪೆ ಬಂದರು.
C. ಗೋವಾ ಬಂದರು.
D. ಕೊಚ್ಚಿ ಬಂದರು.
📗📗📗📗📗📗📗📗📗📗📗📗📗
9) ಯುರೋಪ ಒಕ್ಕೂಟದಲ್ಲಿರುವ ಒಟ್ಟು ರಾಷ್ಟ್ರಗಳೆಷ್ಟು?
A. 25
B. 26
C. 27
D. 28✔✔
📗📗📗📗📗📗📗📗📗📗📗📗📗📗📗
10) 2011 ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಲಿಂಗಾನುಪಾತವೆಷ್ಟು?(ಪ್ರವೀಣ ಹೆಳವರ)
A.960
B. 962
C. 964
D. 968✔✔
📗📗📗📗📗📗📗📗📗📗📗📗📗📗

ಸರ್ದಾರ್ ಸರೋವರ ಅಣೆಕಟ್ಟು


ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಸರ್ದಾರ್ ಸರೋವರ ಅಣೆಕಟ್ಟಿನ ಕುರಿತ ಒಂದಷ್ಟು ಕುತೂಹಲಕಾರಿ ಮಾಹಿತಿ

 1961ರಲ್ಲೇ ಶಿಲ್ಯಾನ್ಯಾಸಗೊಂಡಿದ್ದ ಡ್ಯಾಮ್ ಯೋಜನೆ ಆರಂಭವಾಗಿದ್ದು ಮಾತ್ರ 1987ರಲ್ಲಿ!ಡ್ಯಾಂ ಉದ್ಘಾಟನೆ ಮಾಡಿದ ಪ್ರಧಾನಿ

ಗಾಂಧಿನಗರ: ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಭಾಜನವಾಗಿರುವ ಸರ್ದಾರ್ ಸರೋವರ ಡ್ಯಾಮ್ ಭಾನುವಾರ ಉದ್ಘಾಟನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಣೆಕಟ್ಟನ್ನು ಲೋಕಾರ್ಪಣೆ ಮಾಡಿದ್ದಾರೆ.ಕಾಂಕ್ರೀಟ್ ಬಳಕೆಯಲ್ಲಿ ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಎಂಬ ಕೀರ್ತಿಗೆ ಸರ್ದಾರ್ ಸರೋವ ಡ್ಯಾಮ್ ಪಾತ್ರವಾಗಿದ್ದು, ಈ ಬೃಹತ್ ಡ್ಯಾಮ್ ನ ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ..

1.ಕಾಂಕ್ರೀಟ್ ಬಳಕೆಯಲ್ಲಿ ದೇಶದ ಅತೀ ದೊಡ್ಡ ಡ್ಯಾಮ್ ಆಗಿದ್ದು, ವಿಶ್ವದ 2ನೇ ಅತೀ ದೊಡ್ಡ ಡ್ಯಾಮ್ ಆಗಿದೆ. ಕಾಂಕ್ರೀಟ್ ಬಳಕೆಯಲ್ಲಿ ಅಮೆರಿಕದ ಗ್ರಾಂಡ್ ಕೌಲಿ ಡ್ಯಾಮ್ ವಿಶ್ವದ ಮೊದಲ ಅತೀ ದೊಡ್ಡ ಡ್ಯಾಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ

.2. ಡ್ಯಾಮ್ 1.2 ಕಿ.ಮೀ ಉದ್ದವಿದ್ದು, 163 ಅಡಿ ಎತ್ತರ ಹೊಂದಿದೆ. ತನ್ನ ಎತ್ತರ ಹಾಗೂ ನೀರಿನ ಶೇಖರಣೆಯಲ್ಲೂ ಸರ್ದಾರ್ ಸರೋವರ ಡ್ಯಾಮ್ ಬೃಹತ್ ಅಣೆಕಟ್ಟು ಎಂಬ ಕೀರ್ತಿಗೆ ಭಾಜನವಾಗಿದೆ.

3. ಸರ್ದಾರ್ ಸರೋವರ ಡ್ಯಾಂ ನಲ್ಲಿ ಎರಡು ಪವರ್ ಹೌಸ್ (ವಿದ್ಯುತ್ ಉತ್ಪಾದನಾ ಘಟಕ)ಗಳಿದ್ದು, ಒಂದು 1,200 ಮೆಗಾ ವ್ಯಾಟ್ ಸಾಮರ್ಥ್ಯ ಹಾಗೂ ಮತ್ತೊಂದು 250 ಮೆಗಾ ವ್ಯಾಟ್ ವಿದ್ಯುತ್ ಉತ್ಬಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಉದ್ಧಾಟನೆಗೂ ಮುನ್ನವೇ ಅಂದರೆ ಇಲ್ಲಿಯವರೆದೂ ಈ ಡ್ಯಾಮ್ ನ ಮೂಲಕ ಸುಮಾರು 4,141 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

4.ಡ್ಯಾಂ ನಿರ್ಮಾಣಕ್ಕೆ ಸುಮಾರು 8 ಸಾವಿರ ಕೋಟಿ ವೆಚ್ವಾಗಿದ್ದು, ಈಗಾಗಲೇ ಈ ಡ್ಯಾಮ್ ನ ತನ್ನ ವಿದ್ಯುತ್ ಉತ್ಪಾದನೆ ಮೂಲಕ 16 ಸಾವಿರ ಕೋಟಿ ಹಣವನ್ನು ಸಂಪಾದನೆ ಮಾಡಿದೆ. ಅಂದರೆ ತನ್ನ ನಿರ್ಮಾಣಕ್ಕಿಂತಲೂ ದುಪ್ಪಟ್ಟು ಹಣ ಈ ಡ್ಯಾಮ್ ನಿಂದ ಉತ್ಪಾದನೆಯಾದ ವಿದ್ಯುತ್ ಮಾರಾಟದಿಂದ ಬಂದ ಹಣ ಸರ್ಕಾರದ ಬೊಕ್ಕಸ ಸೇರಿದೆ

5.ಇನ್ನು ಈ ಡ್ಯಾಮ್ ನಿಂದ ಉತ್ಪಾದನೆಯಾದ ವಿದ್ಯುತ್ ಅನ್ನು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳ ಹಂಚಿಕೊಳ್ಳಲಿದ್ದು, ಈ ಪೈಕಿ ಮಹಾರಾಷ್ಟ್ರಕ್ಕೆಶೇ.57ರಷ್ಟು, ಮಧ್ಯ ಪ್ರದೇಶಕ್ಕೆ ಶೇ.27ರಷ್ಟು ಮತ್ತು ಗುಜರಾತ್ ಗೆ ಶೇ.16ರಷ್ಟು ವಿದ್ಯುತ್ ಹಂಚಿಕೆ ಮಾಡಲಾಗುತ್ತದೆ.

6. ಈ ಡ್ಯಾಂನಲ್ಲಿ ಒಟ್ಟು 30 ಗೇಟ್ ಗಳಿದ್ದು, ಒಂದೊಂದು ಗೇಟ್ ಗಳು ಬೃಹತ್ ಪ್ರಮಾಣದ ಉಕ್ಕಿನಿಂದ ಮಾಡಲಾಗಿದೆ. ಪ್ರತೀಯೊಂದು ಗೇಟ್ ಕೂಡ 450 ಟನ್ ತೂಕವಿದ್ದು, ಈ ಗೇಟ್ ಗಳನ್ನು ತೆರೆಯಲು ಮತ್ತು ಸ್ಥಗಿತಗೊಳಿಸುವ ಪ್ರಕ್ರಿಯೆಯೇ ಸುಮಾರು 1 ಗಂಟೆ ತಗುಲುತ್ತದೆ.

7.ನರ್ಮದಾ ಬಚಾವೋ ಆಂದೋಲನವೂ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ವರೆಗೂ ಈ ಡ್ಯಾಮ್ ನಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹವಾಗಿರಲಿಲ್ಲ. ಇದೀಗ ಪೂರ್ಣ ಪ್ರಮಾಣದ ನೀರು ಸಂಗ್ರಹಕ್ಕೆ ನಿರ್ಧರಿಸಲಾಗಿದ್ದು, ಇದರಿಂದ 18 ಲಕ್ಷ ಹೆಕ್ಟೇರ್ ಕೃಷಿ ಭೂಮಿಗಿ ನೀರುಣಿಸಲು ನೆರವಾಗುತ್ತದೆ. ಈ ಡ್ಯಾಮ್ ನಿಂದ 9 ಸಾವಿರ ಹಳ್ಳಿಗಳು ಪ್ರಯೋಜನ ಪಡೆಯಲಿದೆ.

Tuesday, 7 November 2017

ಲಿಟಲ್ ಮಿಸ್ ವರ್ಲ್ಡ್ 2017: ಕರ್ನಾಟಕದ ಬಾಲಕಿ ಕೊರಳಿಗೆ ವಿಜಯ ಮಾಲೆ

 Gkforkpsc Praveen
ಪೂರ್ವಿ ಜಿ.ಬಿ.

Gkforkpsc Praveen 
ಬೆಂಗಳೂರು: ಗ್ರೀಸ್‌ನ ಥೆಸಲೊಂಕಿಯಲ್ಲಿ ನಡೆದ ’ಲಿಟಲ್‌ ಮಿಸ್‌ ವರ್ಲ್ಡ್‌ –2017’ ಅಂತರಾಷ್ಟ್ರೀಯ ಸೌಂದರ್ಯ ಮತ್ತು ಪ್ರತಿಭಾ ಸ್ಪರ್ಧೆಯಲ್ಲಿ ಕರ್ನಾಟಕದ ಪೂರ್ವಿ ಜಿ.ಬಿ. ‘ಬೆಸ್ಟ್‌ ಟ್ಯಾಲೆಂಟ್‌ ಪರ್‌ಫಾರ್ಮನ್ಸ್‌’ಆಗಿ ಹೊರಹೊಮ್ಮಿದ್ದಾಳೆ.

ಏಳು ದಿನ ನಡೆದ ಈ ಸ್ಪರ್ಧೆಯಲ್ಲಿ 30 ದೇಶಗಳ 65ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಆಯ್ಕೆ ಆದವರಲ್ಲಿ ಭಾರತದ ಐದು ಮಕ್ಕಳೂ ಇದ್ದರು. ಆ ಪೈಕಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಭಾಗದಲ್ಲಿ ಪೂರ್ವಿ ಈ ವಿಶೇಷ ಸಾಧನೆ ಮಾಡಿದ್ದಾಳೆ. ಬೆಂಗಳೂರಿನ ಸೋಫಿಯಾ ಪ್ರೌಢ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಈಕೆ ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಕುಕನೂರು ಗ್ರಾಮದವಳಾಗಿದ್ದಾಳೆ.

ಬೇರೆ ಬೇರೆ ರಾಷ್ಟ್ರಗಳ 10ಕ್ಕೂ ಹೆಚ್ಚು ತೀರ್ಪುಗಾರರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮಕ್ಕಳ ಆತ್ಮವಿಶ್ವಾಸ, ಪ್ರತಿಭೆ, ಬುದ್ಧಿಮತ್ತೆ, ವಾಕ್‌ ಚಾತುರ್ಯ, ಸೌಂದರ್ಯದ ಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಉಕ್ರೇನ್‌ನ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ ನೇತೃತ್ವದಲ್ಲಿ ದೀವಾ ಫ್ಯಾಷನ್‌ ಗ್ರುಪ್‌ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಕಳೆದ 17 ವರ್ಷಗಳಿಂದ ಸ್ಪರ್ಧೆ ನಡೆಸುತ್ತಿದ್ದು,ಜಗತ್ತಿನ ನಾನಾ ಭಾಗದ ಮಕ್ಕಳು ಭಾಗವಹಿಸುತ್ತಾರೆ.

ಈ ಸ್ಪರ್ಧೆಗೆ ವಿದೇಶಕ್ಕೆ ತೆರಳುವ ಮುನ್ನ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದಿದ್ದ ಆಡಿಷನ್‌ನಲ್ಲಿ 10 ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಆಗಸ್ಟ್ ನಲ್ಲಿ ಚೆನ್ನೈ ನಲ್ಲಿ ನಡೆದಿದ್ದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂರ್ವಿ ಗ್ರೀಸ್ ನಲ್ಲಿ ನಡೆಯುವ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ್ದಳು. ಅಂತಿಮ ಸುತ್ತಿನಲ್ಲಿ ಪೂರ್ವಿ ಹೊಯ್ಸಳ ಶಿಲ್ಪಕಲೆಯಲ್ಲಿ ಮೂಡಿದ್ದ ಬೇಲೂರು ಶಿಲಾ ಬಾಲಿಕೆಯ ವೇಷ ಧರಿಸಿದ್ದಳು.

2017ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

ಅಮೆರಿಕಾ ಲೇಖಕ ಜಾರ್ಜ್ ಸೌಂಡರ್ ಗೆ 2017ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ
Gkforkpsc Praveen
ಜಾರ್ಜ್ ಸೌಂಡರ್ಸ್

Gkforkpsc Praveen


ಲಂಡನ್: ಇಂಗ್ಲೆಂಡ್ ನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಈ ವರ್ಷ ಅಮೆರಿಕಾದ ಲೇಖಕ ಜಾರ್ಜ್ ಸೌಂಡರ್ಸ್ ಅವರಿಗೆ ಸಂದಿದೆ. ಇವರ ಲಿಂಕನ್ ಇನ್ ಬಾರ್ಡೊ ಕಾದಂಬರಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಎರಡನೇ ಅಮೆರಿಕಾದ ಲೇಖಕರು ಜಾರ್ಜ್ ಸೌಂಡರ್ ಆಗಿದ್ದಾರೆ.
ಅಬ್ರಹಾಂ ಲಿಂಕನ್ ನ 11 ವರ್ಷದ ಮಗ ವಿಲ್ಲೈಯ ಸಾವಿನ ಕುರಿತ ಚರಿತ್ರೆಯನ್ನು ಪುಸ್ತಕ ಹೊಂದಿದ್ದು ಸಂಪೂರ್ಣ ಮೂಲ ರೂಪದಲ್ಲಿದೆ ಎಂದು ಪ್ರಶಸ್ತಿಯ ತೀರ್ಪುಗಾರರು ಹೇಳಿದ್ದಾರೆ.
ಈ ಮೂಲ ಕಾದಂಬರಿಯ ರಚನೆ ಮತ್ತು ಶೈಲಿ ಲೇಖಕನ ಬುದ್ಧಿವಂತಿಕೆಯ ಆಳ ನಿರೂಪಣೆಯನ್ನು ಹೊಂದಿದೆ ಎಂದು ತೀರ್ಪುಗಾರರ ತಂಡದ ಮುಖ್ಯಸ್ಥ ಲೋಲಾ ಯಂಗ್ ಹೇಳಿದ್ದಾರೆ. 
ಈ ಪ್ರಶಸ್ತಿ ನನಗೆ ಸಂದ ಅತಿದೊಡ್ಡ ಗೌರವವಾಗಿದೆ ಎಂದು 58 ವರ್ಷದ ಜಾರ್ಜ್ ಸೌಂಡರ್ಸ್ ಹೇಳಿದ್ದಾರೆ.

ಮಾರುತಗಳು - ಸಾಮಾನ್ಯ ಜ್ಞಾನ

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ #ಮಾರುತ' ವೆಂದು ಕರೆಯಲಾಗುವುದು.

🔗 
ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.


🔗 
ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.


🔗 
ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.


🔗 
ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:

('ಪವನ ದಿಕ್ಸೂಚಿ' (Wind Vane))

🔗 
ಗಾಳಿಯ ವೇಗವನ್ನು ಅಳೆಯುವ ಮಾನ:

('ನಾಟ್' (Knot) ಅಥವ ಕಿ.ಮೀ )

🔗 
ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)


🔗 
ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.


 
ಒಂದು ನಾಟಿಕಲ್ ಮೈಲ್ಸ್ ಎಂದರೆ - 6080ಅಡಿಗಳು \ 1.85 km.


🔗
 ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು. ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.


🔗
ಭೂ ಮೇಲ್ಮೈಗೆ ಸಮಾಂತರವಾಗಿ ಚಲಿಸುವ ವಾಯುವಿಗೆ ಹೀಗೆನ್ನುವರು - ಗಾಳಿ \ ಮಾರುತ.


️ 🔗 
ಊಧ್ವ೯ಮುಖವಾಗಿ ಚಲಿಸುವ ವಾಯುವಿಗಿರುವ ಹೆಸರು - ವಾಯುಪ್ರವಾಹ.


🔗️ 
ಮಾರುತಗಳ ದಿಕ್ಕು ಮತ್ತು ವೇಗವನ್ನು ಅಳೆಯುವ ಮಾಪಕ - ಎನಿಮೋಮೀಟರ್ \ ಪವನ ಮಾಪಕ.


🔗"️ ಮಾರುತಗಳು ದೈನಂದಿನ ಚಲನೆಯ ಪ್ರಭಾವದಿಂದ ತಮ್ಮ ಪಥವನ್ನು ಬದಲಾಯಿಸುತ್ತವೆ" ಎಂದು ತಿಳಿಸಿದ ವಿಜ್ಞಾನಿ - ಕೋರಿಯಾಲಿಸ್ (1835).

🔗️ 
"ಉತ್ತರ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಬಲಕ್ಕೆ ದಕ್ಷಿಣ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಎಡ ದಿಕ್ಕಿಗೆ ಬಾಗಿ ಚಲಿಸುತ್ತದೆ" ಎಂದು ಸೂಚಿಸಿದ ವಿಜ್ಞಾನಿ - ಡಬ್ಲ್ಯು. ಫೆರಲ್ಸ್.


🔗️ 
ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುವ ಗಾಳಿಗಳು - ನಿರಂತರ ಮಾರುತಗಳು.


🔗 
ಉತ್ತರ ಗೋಳಾಧ೯ದಲ್ಲಿ ಈಶಾನ್ಯ ನೈರುತ್ಯ ಕಡೆಗೆ , ದಕ್ಷಿಣ ಗೋಳಾಧ೯ದಲ್ಲಿ ಆಗ್ನೇಯ - ವಾಯುವ್ಯ ಕಡೆಗೆ ಬೀಸುವ ಮಾರುತಗಳು - ವಾಣಿಜ್ಯ ಮಾರುತಗಳು.


🔗 
40°-60° ಅಕ್ಷಾಂಶಗಳ ನಡುವೆ ವೇಗವಾಗಿ ಬೀಸುವ ಮಾರುತಗಳು - ಪ್ರತಿವಾಣಿಜ್ಯ ಮಾರುತ.


🔗️ 
ಪ್ರತಿವಾಣಿಜ್ಯ ಮಾರುತಗಳು ಬೀಸುವ ಪ್ರದೇಶದಲ್ಲಿ ಕಂಡುಬರುವ ಇತರೆ ಮಾರುತಗಳು - ಆವತ೯ ಮತ್ತು ಪ್ರತ್ಯಾವತ೯ ಮಾರುತಗಳು.


🔗️ 
ಒಂದು ಪ್ರದೇಶದಲ್ಲಿ ಸದಾಕಾಲ ಒಂದೇ ದಿಕ್ಕಿನಿಂದ ಬೀಸುವ ಮಾರುತ - ಪ್ರಚಲಿತ ಮಾರುತ.



🔗️ ನಿಯತಕಾಲಿಕ ಮಾರುತಗಳಿಗೆ ಉದಾ - ಮಾನ್ಸೂನ್ ಮಾರುತಗಳು.

🔗
ಹೆಚ್ಚು ಒತ್ತಡವಿರುವ ಕಣಿವೆಗಳಿಂದ ಪವ೯ತಗಳ ತುದಿಯ ಕಡೆಗೆ ಬೀಸುವ ಗಾಳಿಗೆಳು - ಕಣಿವೆ ಮಾರುತಗಳು.


️ 🔗
ತಂಪಾದ ಉತ್ತಮ ಹವಮಾನವನ್ನು ನಿಮಿ೯ಸಬಲ್ಲ ಮಾರುತಗಳು - ಪ್ರತ್ಯಾವತ೯ ಮಾರುತ.


🔗 
ಪ್ರಮುಖ ಸ್ಥಳಿಯ ಮಾರುತಗಳೆಂದರೆ - ನೆಲ ,ಜಲ , ಪವ೯ತ ಮತ್ತು ಕಣಿವೆ ಮಾರುತಗಳು.


🔗 
ಶಾಶ್ವತ ಮಾರುತಗಳಿಗೆ ಉದಾ - ವ್ಯಾಪಾರಿ ಮಾರುತಗಳು , ಧೃವೀಯ ಮಾರುತಗಳು.