ಪೂರ್ವಿ ಜಿ.ಬಿ. |
Gkforkpsc Praveen
ಬೆಂಗಳೂರು: ಗ್ರೀಸ್‌ನ ಥೆಸಲೊಂಕಿಯಲ್ಲಿ ನಡೆದ ’ಲಿಟಲ್ ಮಿಸ್ ವರ್ಲ್ಡ್ –2017’ ಅಂತರಾಷ್ಟ್ರೀಯ ಸೌಂದರ್ಯ ಮತ್ತು ಪ್ರತಿಭಾ ಸ್ಪರ್ಧೆಯಲ್ಲಿ ಕರ್ನಾಟಕದ ಪೂರ್ವಿ ಜಿ.ಬಿ. ‘ಬೆಸ್ಟ್ ಟ್ಯಾಲೆಂಟ್ ಪರ್‌ಫಾರ್ಮನ್ಸ್’ಆಗಿ ಹೊರಹೊಮ್ಮಿದ್ದಾಳೆ.
ಏಳು ದಿನ ನಡೆದ ಈ ಸ್ಪರ್ಧೆಯಲ್ಲಿ 30 ದೇಶಗಳ 65ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ಆಯ್ಕೆ ಆದವರಲ್ಲಿ ಭಾರತದ ಐದು ಮಕ್ಕಳೂ ಇದ್ದರು. ಆ ಪೈಕಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಭಾಗದಲ್ಲಿ ಪೂರ್ವಿ ಈ ವಿಶೇಷ ಸಾಧನೆ ಮಾಡಿದ್ದಾಳೆ. ಬೆಂಗಳೂರಿನ ಸೋಫಿಯಾ ಪ್ರೌಢ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಈಕೆ ಕೊಪ್ಪಳದ ಯಲಬುರ್ಗಾ ತಾಲ್ಲೂಕಿನ ಕುಕನೂರು ಗ್ರಾಮದವಳಾಗಿದ್ದಾಳೆ.
ಬೇರೆ ಬೇರೆ ರಾಷ್ಟ್ರಗಳ 10ಕ್ಕೂ ಹೆಚ್ಚು ತೀರ್ಪುಗಾರರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮಕ್ಕಳ ಆತ್ಮವಿಶ್ವಾಸ, ಪ್ರತಿಭೆ, ಬುದ್ಧಿಮತ್ತೆ, ವಾಕ್ ಚಾತುರ್ಯ, ಸೌಂದರ್ಯದ ಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಉಕ್ರೇನ್‌ನ ಮಕ್ಕಳ ಕಲೆ ಮತ್ತು ಸಾಂಸ್ಕೃತಿಕ ಉತ್ಸವದ ಸಂಸ್ಥಾಪಕಿ ನತಾಲಿಯಾ ನೇತೃತ್ವದಲ್ಲಿ ದೀವಾ ಫ್ಯಾಷನ್ ಗ್ರುಪ್ ಈ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಕಳೆದ 17 ವರ್ಷಗಳಿಂದ ಸ್ಪರ್ಧೆ ನಡೆಸುತ್ತಿದ್ದು,ಜಗತ್ತಿನ ನಾನಾ ಭಾಗದ ಮಕ್ಕಳು ಭಾಗವಹಿಸುತ್ತಾರೆ.
ಈ ಸ್ಪರ್ಧೆಗೆ ವಿದೇಶಕ್ಕೆ ತೆರಳುವ ಮುನ್ನ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದಿದ್ದ ಆಡಿಷನ್‌ನಲ್ಲಿ 10 ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು. ಆಗಸ್ಟ್ ನಲ್ಲಿ ಚೆನ್ನೈ ನಲ್ಲಿ ನಡೆದಿದ್ದ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪೂರ್ವಿ ಗ್ರೀಸ್ ನಲ್ಲಿ ನಡೆಯುವ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ್ದಳು. ಅಂತಿಮ ಸುತ್ತಿನಲ್ಲಿ ಪೂರ್ವಿ ಹೊಯ್ಸಳ ಶಿಲ್ಪಕಲೆಯಲ್ಲಿ ಮೂಡಿದ್ದ ಬೇಲೂರು ಶಿಲಾ ಬಾಲಿಕೆಯ ವೇಷ ಧರಿಸಿದ್ದಳು.
No comments:
Post a Comment
Note: only a member of this blog may post a comment.