Monday, 29 February 2016

88ನೇ ಆಸ್ಕರ್ ಪ್ರಶಸ್ತಿ: ಲಿಯೊನಾರ್ಡ್ ಡಿಕಾಪ್ರಿಯೊಗೆ ಅತ್ಯುತ್ತಮ ನಟ ಪ್ರಶಸ್ತಿ.

☼ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ☼
88ನೇ ಆಸ್ಕರ್ ಪ್ರಶಸ್ತಿ: 8 ಪ್ರಶಸ್ತಿ ಬಾಚಿಕೊಂಡ 'ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್' ಚಿತ್ರ
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಲಾಸ್ ಏಂಜಲೀಸ್: ಪ್ರತಿಷ್ಠಿತ 88ನೇ ಆಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ಸೋಮವಾರ ಆರಂಭವಾಗಿದ್ದು, ಲಿಯೊನಾರ್ಡ್ ಡಿಕಾಪ್ರಿಯೊ ಅವರು 'ದಿ ರೆವಿನೆನ್ಟ್' ಚಿತ್ರದಲ್ಲಿನ ಉತ್ತಮ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಾಲಿವುಡ್ ನ ಅದ್ದೂರಿ ಸಮಾರಂಭವೆಂದೇ ಹೇಳಲಾಗುವ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಬೆಡಗಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ 'ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್' ಚಿತ್ರದ ತಂಡ ಸಂತಸದಲ್ಲಿ ಮಿಂದೇಳುತ್ತಿದ್ದು, ಈ ವರೆಗೂ 8 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಮ್ಯಾಡ್ ಮ್ಯಾಕ್ಸ್ ಫ್ಯೂರಿ ಸಿನಿಮಾ ಖ್ಯಾತ ನಿರ್ದೇಶಕ ಜಾರ್ಜ್ ಮಿಲ್ಲರ್ ಅವರು ನಿರ್ದೇಶಿಸಿದ್ದು, ಉತ್ತಮ ಮೇಕಪ್ ಮತ್ತು ಹೇರ್ ಸ್ಟೈಲ್, ಉತ್ತಮ ವಸ್ತ್ರ ವಿನ್ಯಾಸ ಉತ್ತಮ ಪ್ರೊಡಕ್ಷನ್ ಹಾಗೂ ಡಿಸೈನ್ ಸೇರಿ 8 ವಿಭಾಗಗಳಲ್ಲಿ ಪ್ರಶಸ್ತಿಗಳು ಈ ಚಿತ್ರಕ್ಕೆ ದೊರೆತಿದೆ.
ಪ್ರಶಸ್ತಿಗಳ ಪಟ್ಟಿ ಇಂತಿದೆ →
►ಆಮಿ ಅತ್ಯುತ್ತಮ ಸಾಕ್ಷ್ಯಚಿತ್ರ
► ಇನ್ ಸೈಡ್ ಔಟ್ ಅತ್ಯುತ್ತಮ ಆ್ಯನಿಮೇಟೆಡ್ ಸಿನಿಮಾಗಾಗಿ ನಿರ್ಮಾಪಕ ಜೋನಸ್ ಗೆ ಪ್ರಶಸ್ತಿ
►ಅತ್ಯುತ್ತಮ ಆ್ಯನಿಮೇಟೆಡ್ ಕಿರು ಚಿತ್ರ ಬಿಯರ್ ಸ್ಟೋರಿ
► ದಿ ಡ್ಯಾನಿಶ್ ಗರ್ಲ್ ಸಿನಿಮಾದ ನಟನೆಗಾಗಿ ಅಲಿಶಿಯಾ ವಿಕಂದರ್ ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ
► ವಸ್ತ್ರ ವಿನ್ಯಾಸಕ್ಕಾಗಿ ಜೆನ್ನಿ ಬೆವನ್ ಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ
► ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರದಉತ್ತಮ ಸಂಕಲನಕ್ಕಾಗಿ ಮಾರ್ಗರೇಟ್ ಸಿಕ್ಸಲ್ ಗೆ ಪ್ರಶಸ್ತಿ
► ದಿ ರೆವೆನೆಂಟ್ ಚಿತ್ರದ ಉತ್ತಮ ಛಾಯಾಗ್ರಹಣಕ್ಕಾಗಿ ಇಮ್ಯಾನುಯಲ್ ಗೆ ಪ್ರಶಸ್ತಿ
► ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರದ ಉತ್ತಮ ಸೌಂಡ್ ಎಡಿಟಿಂಗ್ ಗಾಗಿ ಮಾರ್ಕ್ ಮಾಂಗಿನಿ ಮತ್ತು ಡೇವಿಡ್ ವೈಟ್ ಗೆ ಪ್ರಶಸ್ತಿ
► ಬೆಸ್ಟ್ ಒರಿಜಿನಲ್ ಸ್ಕ್ರೀನ್ ಪ್ಲೇಗೆ ಜೋಶ್ ಸಿಂಗರ್ ಗೆ ಪ್ರಶಸ್ತಿ
► ಸ್ಪಾಟ್ ಲೈಟ್ ಸಿನಿಮಾದ ಚಿತ್ರಕಥೆಗಾಗಿ ಆಸ್ಕರ್ ಪ್ರಶಸ್ತಿ
► ಮ್ಯಾಡ್ ಮ್ಯಾಕ್ಸ್ ಫ್ಯೂರಿ ಚಿತ್ರದ ಉತ್ತಮ ಸೌಂಡ್ ಮಿಕ್ಸಿಂಗ್ ಗಾಗಿ ಕ್ರಿಸ್ ಜಂಕೀನ್ಸ್ ಗೆ ಪ್ರಶಸ್ತಿ
► ಎಕ್ಸ್ ಮಕೀನಾ ಚಿತ್ರದ ಬೆಸ್ಟ್ ವಿಶ್ಯುಯಲ್ ಎಫೆಕ್ಟ್ ಗಾಗಿ ವೈಟ್ ಹರ್ಟ್ಸ್ ಗೆ ಪ್ರಶಸ್ತಿ

No comments:

Post a Comment

Note: only a member of this blog may post a comment.