Saturday 16 January 2016

2016ರ ಫಿಲ್ಮ್‌ಫೇರ್ ಪ್ರಶಸ್ತಿ ಪ್ರಕಟ : ರಣವೀರ್‌, ದೀಪಿಕಾ ಅತ್ಯುತ್ತಮ ನಟ, ನಟಿ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಮುಂಬೈ,.16-ಭಾರತೀಯ ಚಲನಚಿತ್ರರಂಗದಲ್ಲಿ ಅತ್ಯುತ್ತಮ ನಟನೆಗೆ ನೀಡಲಾಗುವ ಪ್ರತಿಷ್ಠಿತ ಫಿಲ್ಮ್‌ಫೇರ್ ಪ್ರಶಸ್ತಿಯು ಬಾರಿ ಕನ್ನಡದ ನಟಿ ದೀಪಿಕಾ ಪಡುಕೋಣೆಗೆ ಲಭಿಸಿದೆ. ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಬಾಜಿರಾವ್‌ಮಸ್ತಾನಿ ಚಿತ್ರದಲ್ಲಿನ ಅತ್ಯುತ್ತಮ ನಟನೆಗೆ 2016ನೆ ಸಾಲಿನ ಫಿಲ್ಮ್‌ಫೇರ್ ಪ್ರಶಸ್ತಿಯು ದೀಪಿಕಾ ಪಡುಕೋಣೆಗೆ ಸಿಕ್ಕಿದೆ. ಕಳೆದ ರಾತ್ರಿ ಮುಂಬೈನ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಜಿರಾವ್ಮಸ್ತಾನಿ ಒಟ್ಟು 9 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಸುಜಿತ್ ಸಿರ್ಕರ್ ನಿರ್ದೇಶನದ ಪಿಕು ಚಿತ್ರ ಐದು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡರೆ, ಧೂಮ್ ಲಗಾಕಾ ಐಸಾ ಚಿತ್ರಕ್ಕೂ ಪ್ರಶಸ್ತಿ ಲಭಿಸಿದೆ.
2015ನೆ ಸಾಲಿನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯು ಬಾಜಿರಾವ್ ಮಸ್ತಾನಿ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆಗೆ ಬಂದರೆ, ಅತ್ಯುತ್ತಮ ನಟ ಪ್ರಶಸ್ತಿಯು ಪಿಕು ಚಿತ್ರಕ್ಕಾಗಿ ರಣವೀರ್ ಸಿಂಗ್‌ರ ಪಾಲಾಗಿದೆ.
ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟಿ ಸೇರಿದಂತೆ ಒಟ್ಟು 9 ವಿಭಾಗಗಳಲ್ಲಿ ಬಾಜೀರಾವ್ ಮಸ್ತಾನಿ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಜೀವಮಾನ ಸಾಧನ ಪ್ರಶಸ್ತಿಯು ಈ ಬಾರಿ ಹಿರಿಯ ನಟ ಮೌಶಮಿ ಚಟರ್ಜಿಗೆ ಬಂದರೆ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂಜಯ್‌ಲೀಲಾ ಬನ್ಸಾಲಿ, ಉತ್ತಮ ಸಂಭಾಷಣೆಗಾಗಿ ನೀರಜ್ ದ್ಯಾವನ್‌ಗೆ ಪ್ರಶಸ್ತಿ ಬಂದಿದೆ.
ಪ್ರಶಸ್ತಿ ವಿವರ:
ಅತ್ಯುತ್ತಮ ನಟಿ : ದೀಪಿಕಾ ಪಡುಕೋಣೆ, (ಪಿಕು, ಬಾಜೀರಾವ್ ಮಸ್ತಾನಿ)
ಅತ್ಯುತ್ತಮ ನಟ: ರಣವೀರ್‌ಸಿಂಗ್ (ಬಾಜಿರಾವ್ ಮಸ್ತಾನಿ)
ಅತ್ಯುತ್ತಮ ಚಿತ್ರ: ಬಾಜಿರಾವ್ ಮಸ್ತಾನಿ
ಅತ್ಯುತ್ತಮ ನಿರ್ದೇಶಕ: ಸಂಜಯ್‌ಲೀಲಾ ಬನ್ಸಾಲಿ (ಬಾಜಿರಾವ್ ಮಸ್ತಾನಿ)
ಉತ್ತಮ ಸಂಭಾಷಣಾ ನಿರ್ದೇಶಕ: ನೀರಜ್ ದ್ಯಾವನ್ (ಮಸಾನ್)
ಉತ್ತಮ ಸಂಭಾಷಣೆ: ಭೂಮಿ ಪೆಡ್ನೇಕರ್ (ಧೂಮ್ ಲಗಾಕೆ ಐಸಾ)
ಉತ್ತಮ ಸಂಭಾಷಣೆ: ಪಿಕು
ಅತ್ಯುತ್ತಮ ಸಂಭಾಷಣೆ: ಸೂರಜ್ ಪಾಂಚೋಲಿ (ಪಿಕು)
ತೀರ್ಪುಗಾರರ ಅತ್ಯುತ್ತಮ ನಟ ಆಯ್ಕೆ : ಅಮಿತಾಬ್ ಬಚ್ಚನ್
ತೀರ್ಪುಗಾರರ ಅತ್ಯುತ್ತಮ ನಟಿಆಯ್ಕೆ : ಕಂಗಾನಾ ರಾಣಾವತ್
ಅತ್ಯುತ್ತಮ ಪೋಷಕ ನಟಿ: ಪ್ರಿಯಾಂಕ ಚೋಪ್ರಾ
ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್
ಜೀವಮಾನ ಸಾಧನ ಪ್ರಶಸ್ತಿ: ಮೌಶಮಿ ಚಟರ್ಜಿ
ಆರ್.ಡಿ.ಬರ್ಮನ್ ಪ್ರಶಸ್ತಿ: ಆರ್ಮನ್ ಮಲ್ಲಿಕ್
ಉತ್ತಮ ಸಂಭಾಷಣೆ: ಇರ್ಷದ್ ಕಮೀಲ್
ಉತ್ತಮ ಸಂಗೀತ: ಅಂಕಿತ್ ತಿವಾರಿ

No comments:

Post a Comment

Note: only a member of this blog may post a comment.