Wednesday 30 December 2015

☼ ಕ್ವಿಜ್‌ ☼

 
1) ಅಂತರರಾಷ್ಟ್ರೀಯ ಜಾದೂಗಾರರ ಸಂಘ ನೀಡುವ 2015ನೇ ಸಾಲಿನ ಅಂತರರಾಷ್ಟ್ರೀಯ ಮರ್ಲಿ ಪ್ರಶಸ್ತಿ’ ಭಾರಿ ಯಾರಿಗೆ ಸಂದಿದೆ?
a) ಝೆನಿಯಾ ಭುಂಗಾರ  
b) ಹೆಲಿ ಭುಂಗಾರ
c) ಪರ್ಲ್‌    
d) ಸುಮತಿ ಆಚಾರ್ಯ

2) ಕೆನಡದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಚಿವ ಸಂಪುಟದಲ್ಲಿ ನಾಲ್ವರು ಭಾರತೀಯ ಮೂಲದ ಸಂಸದರು ಸಚಿವರಾಗಿದ್ದಾರೆ. ಕೆಳಕಂಡವರಲ್ಲಿ ಯಾರು ಸಚಿವರಲ್ಲ?
a) ಹರ್ಜಿತ್‌ ಸಜ್ಜನ್‌  
b) ಪ್ರೀತಿ ಕಪಾಡಿಯ
c) ಅಮರ್‌ಜಿತ್‌ ಸೋಹಿ 
d) ನವದೀಪ್‌ ಬೈನ್ಸ್‌

3) ಸಿಟಿಎಲ್‌ (ಚಾಂಪಿಯನ್ಸ್‌ ಟೆನಿಸ್‌ ಲೀಗ್‌) ರಾಯಪುರ ರೇಂಜರ್ಸ್‌’ ತಂಡ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಯಾರು ನೇಮಕಗೊಂಡಿದ್ದಾರೆ?
a) ಅನಿಲ್‌ ಕುಂಬ್ಳೆ           
b) ಲಿಯಾಂಡರ್‌ ಪೇಸ್‌
c) ಮಹೇಶ್‌ ಭೂಪತಿ       
d) ಸಾನಿಯಾ ಮಿರ್ಜಾ

4) ಇತ್ತೀಚೆಗೆ ಎಲ್ಲ ದರ್ಜೆಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ವಿರೇಂದ್ರ ಸೆಹ್ವಾಗ್‌ ಒಟ್ಟು ಎಷ್ಟು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ?
a) 235
b) 251
c)181
d) 211

5) ‘ಯಶ್‌ ಭಾರತಿ’ ಪ್ರಶಸ್ತಿ ಪಡೆದ ಸಾಧಕರಿಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ನೀಡುವುದಾಗಿ ಯಾವ ರಾಜ್ಯ ಸರ್ಕಾರ ಘೋಷಣೆ ಮಾಡಿದೆ?
a) ಉತ್ತರ ಪ್ರದೇಶ
b) ಮಧ್ಯಪ್ರದೇಶ
c) ಹಿಮಾಚಲ ಪ್ರದೇಶ  
d) ಅರುಣಾಚಲ ಪ್ರದೇಶ

6) 1989ರಲ್ಲಿ ತೆರೆಕಂಡ ಜಂಬೂಸವಾರಿ’ ಮಕ್ಕಳ ಕನ್ನಡ ಸಿನಿಮಾ 37ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಚಿತ್ರದ ನಿರ್ದೇಶಕರು ಯಾರು?
a) ಡಿ. ರಾಜೇಂದ್ರಬಾಬು  
b) ಕೆ.ಎಸ್‌.ಎಲ್‌ ಸ್ವಾಮಿ
c) ನಂಜುಂಡಪ್ಪ       
d) ಪುಟ್ಟಣ್ಣ ಕಣಗಾಲ್‌

7) ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ’ ಎಷ್ಟು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ?
a) ಸುಮಾರು 50 ಸಾವಿರ ಎಕರೆ  
b) ಸುಮಾರು 30 ಸಾವಿರ ಎಕರೆ
c) ಸುಮಾರು 33 ಸಾವಿರ ಎಕರೆ    
d) ಸುಮಾರು 25 ಸಾವಿರ ಎಕರೆ

8) ಚೀನಾ ದೇಶ ನೀಡುವ ಪ್ರತಿಷ್ಠಿತ 2015ನೇ ಸಾಲಿನ ಕನ್‌ಫ್ಯೂಶಿಯಸ್‌ ಶಾಂತಿ ಪ್ರಶಸ್ತಿ’ಯನ್ನು ಯಾರಿಗೆ ನೀಡಲಾಗಿದೆ?
a) ಯನ್‌ ಲಾಂಗ್‌ಪಿಂಗ್‌
b) ಪುಟಿನ್‌
c) ಫಿಡೆಲ್‌ ಕಾಸ್ಟ್ರೋ
d) ರಾಬರ್ಟ್‌ ಮುಗಾಬೆ

9) ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮೊಟ್ಟ ಮೊದಲ ಬಾರಿಗೆ ಪುರುಷ ಸದಸ್ಯರೊಬ್ಬರನ್ನು ನೇಮಕ ಮಾಡಲಾಗಿದೆ. ಅವರು ಯಾರು?
a) ಅಲೋಕ್‌ ರಾವತ್‌
b) ಕಿಶನ್‌ ಸಿಂಗ್‌ ಕಾಮತ್‌
c) ಸೂರ್ಯಕಾಂತ್‌  
d) ಪ್ರಕಾಶ್‌ ಠಾಕೂರ್‌

10) ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯುವ ಸಲುವಾಗಿ ಮಹರ್ಷಿ ವಾಲ್ಮಿಕಿ ಸಂಸ್ಕೃತ ವಿಶ್ವವಿದ್ಯಾಲಯ’ವನ್ನು ಕೆಳಕಂಡ ಯಾವ ರಾಜ್ಯದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
a) ಪಂಜಾಬ್‌                    
b) ಹರಿಯಾಣ
c) ರಾಜಸ್ತಾನ                    
d) ಮಹಾರಾಷ್ಟ್ರ

#ಉತ್ತರಗಳು....
1–a, 2–b, 3–a, 4–b, 5–a, 6–b, 7–c, 8–d, 9–a, 10–b

No comments:

Post a Comment

Note: only a member of this blog may post a comment.