Wednesday 18 March 2020

ಜನವರಿ 2020 ರ ಪ್ರಚಲಿತ ಘಟನೆಗಳು SDA, FDA ಗೆ ಉಪಯುಕ್ತ

➡️ಅಂಧರು ಕರೆನ್ಸಿ ನೋಟುಗಳನ್ನು ಸುಲಭವಾಗಿ ಗುರುತಿಸಲು ನೆರವಾಗುವ ಮೊಬೈಲ್‌ ಆ್ಯಪ್‌ ‘MANI
(Mobile Aided Note Identifier)  ಅನ್ನು ಆರ್‌ಬಿಐ ಜನೇವರಿ 1 ರ ಬುಧವಾರ ಬಿಡುಗಡೆ ಮಾಡಿದೆ. 
ಈ ಮೊಬೈಲ್‌ ಆ್ಯಪ್‌ ಅಂತರ್ಜಾಲದ ಸಂಪರ್ಕ ಇಲ್ಲದೇ ಇರುವಾಗಲೂ ಇದು ಕರೆನ್ಸಿ ನೋಟುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ ಎಂದು ಆರ್‌ಬಿಐ ತಿಳಿಸಿದೆ.
➡ ಇತ್ತೀಚೆಗೆ ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆ ರಚಿಸಿದ್ದು, ‘ರಕ್ಷಣಾ ಪಡೆಗಳ ಮುಖ್ಯಸ್ಥ‘ರು (ಸಿಡಿಎಸ್‌) ಅದರ ಮುಖ್ಯಸ್ಥರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದರಂತೆ ಸಿಡಿಎಸ್‌ ಮುಖ್ಯಸ್ಥರಾಗಿ ನೇಮಕವಾಗಿರುವ ಜನರಲ್‌ ಬಿಪಿನ್‌ ರಾವತ್‌ ನೇತೃತ್ವವಹಿಸಲಿದ್ದಾರೆ.
ಹೊಸ ಇಲಾಖೆ ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
➡️ಕರ್ನಾಟಕ ರಾಜ್ಯದ ನೂತನ ಅಡ್ವೊಕೇಟ್ ಜನರಲ್‌ ಆಗಿ ಪ್ರಭುಲಿಂಗ ನಾವದಗಿ ಅವರನ್ನು ನೇಮಕ ಮಾಡಲಾಗಿದೆ. ಹಿರಿಯ ವಕೀಲರಾಗಿದ್ದ ನಾವದಗಿ ಅವರನ್ನು ನೂತನ ಅಡ್ವೊಕೇಟ್ ಜನರಲ್‌ ಆಗಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಪ್ರಭುಲಿಂಗ ನಾವದಗಿ
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಂಡ ಬಳಿಕ ಆ ಸರಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ ಅವರು ಜುಲೈ 26 ರ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಬದಲಿಗೆ ಈಗ ಹಿರಿಯ ವಕೀಲರಾಗಿದ್ದ ಪ್ರಭುಲಿಂಗ ಕೆ. ನಾವದಗಿ ಅವರನ್ನು ಗವರ್ನರ್ ವಜುಭಾಯಿ ವಾಲಾ ನೇಮಕ ಮಾಡಿದ್ದಾರೆ.
➡️ರಾಜ್ಯ ಯೋಜನಾ ಮಂಡಳಿಯ ಸಲಹೆಗಾರರನ್ನಾಗಿ ಜಿ.ಎನ್.ಹೆಗಡೆ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಪ್ರಸ್ತುತ ರಾಜ್ಯ ಯೋಜನಾ ಮಂಡಳಿಯ ಅಧ್ಯಕ್ಷರು : ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ 
ಪ್ರಸ್ತುತ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು: ಬಿ.ಜೆ.ಪುಟ್ಟಸ್ವಾಮಿ.
➡️ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ 2020ನೇ ಸಾಲಿನ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’ ನೀಡಲಾಗುವುದು ಎಂದು ಆಯ್ಕೆ ಸಮಿತಿ ಅಧ್ಯಕ್ಷ ನಾ ಡಿಸೋಜಾ ತಿಳಿಸಿದ್ದಾರೆ.
ಸಂದೇಶ ಪ್ರತಿಷ್ಟಾನದ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ  ಬೊಳುವಾರು ಅವರ "ಸ್ವಾತಂತ್ರ್ಯದ ಓಟ" ಕಾದಂಬರಿ ಆಯ್ಕೆಯಾಗಿದೆ.
➡️ ಭಾರತದ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿಯಾಗಿದ್ದ ಸುನೀತಾ ಲಕ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಜನೇವರಿ 2 ರ ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
2018 ರ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ತಂಡದ ಸದಸ್ಯೆ ಸುನೀತಾ ಅವರಿಗೆ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
➡️ಕನ್ನಡದಲ್ಲಿ ತೀರ್ಪು ನೀಡಿದ 72 ನ್ಯಾಯಾಧೀಶರು ಹಾಗೂ ಕನ್ನಡದಲ್ಲಿ ವಾದ ಮಂಡಿಸಿದ 30 ವಕೀಲರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ‘ನ್ಯಾಯಾಂಗ ಕನ್ನಡ ಪ್ರಶಸ್ತಿ’ ಘೋಷಣೆ ಮಾಡಿದೆ.
2008–09ನೇ ಸಾಲಿನಿಂದ ಈವರೆಗೆ 405 ನ್ಯಾಯಾಧೀಶರು ಹಾಗೂ 19 ಸರ್ಕಾರಿ ಅಭಿಯೋಜಕರು ಈ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ತಲಾ ರೂ 10 ಸಾವಿರ ನಗದು ಬಹುಮಾನ ಮತ್ತು ಫಲಕಹೊಂದಿದೆ.
➡️ಹೊಸ ವರ್ಷದ ಮೊದಲ ದಿನ(ಜನೇವರಿ 1)  ಭಾರತ ಹೊಸದೊಂದು ದಾಖಲೆ ಬರೆದಿದೆ. ಆ ದಿನ ಭಾರತದಲ್ಲಿ 67, 385 ಶಿಶುಗಳು ಜನಿಸಿದ್ದು ಇದು ವಿಶ್ವದಲ್ಲಿಯೇ ಅತ್ಯಧಿಕವಾಗಿದೆ
➡️ ಅಮೆರಿಕದ  ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಅವರು ಬ್ರಿಟನ್‌ನ ಬೆಲ್‌ ಫಾಸ್ಟ್‌ನ ಕ್ವೀನ್ಸ್‌ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿದ್ದಾರೆ.‌‌‌ 
ಹಿಲರಿ ಅವರು, ಈ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡ ಮೊದಲ ಮಹಿಳಾ ಕುಲಪತಿಯಾಗಿದ್ದಾರೆ.
➡️ ಬಾಗಲಕೋಟೆ ಜಿಲ್ಲೆಯಲ್ಲಿರುವ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದಿಂದ ಪ್ರತಿ ವರ್ಷ ನೀಡುವ ‘ಬಸವ ಕೃಷಿ’ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ತೆಲಂಗಾಣ ರಾಜ್ಯದ ರೈತರ ಹಕ್ಕುಗಳ ಹೋರಾಟಗಾರ ಪ್ರಕಾಶರಾವ್ ವೀರಮಲ್ಲ ಭಾಜನರಾಗಿದ್ದಾರೆ.
➡️ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್ ಜನೇವರಿ 2 ರ ಗುರುವಾರ ಬಿಡುಗಡೆ ಮಾಡಿರುವ  21 ವರ್ಷದೊಳಗಿನವರ ರ‍್ಯಾಂಕಿಂಗ್‌ ರ‍್ಯಾಂಕಿಂಗ್‌ ಪಟ್ಟಿಯ ಸೀನಿಯರ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಯುವ ಟೇಬಲ್ ಟೆನಿಸ್ ಆಟಗಾರ ಮಾನವ್ ಠಕ್ಕರ್, 21 ವರ್ಷದೊಳಗಿನವರ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
➡️ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಖಾಸಿಂ ಸುಲೇಮಾನಿ (62) ಅವರನ್ನು ಅಮೆರಿಕ ಜನೇವರಿ 3 ರ  ಶುಕ್ರವಾರ ಹತ್ಯೆ ಮಾಡಿದೆ.
➡️ ಭಾರತದ ಎಡಗೈ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರು ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಜನೇವರಿ 4 ರ ಶನಿವಾರ ನಿವೃತ್ತಿ ಘೋಷಿಸಿದ್ದಾರೆ.
➡️ 2019-20 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಜೀವಮಾನ ಗೌರವ ಪ್ರಶಸ್ತಿಗೆ ಬೆಂಗಳೂರಿನ ಜಿ.ವಿ.ಶಾರದಾ ಅವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯು ರೂ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
➡️ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನೀಡುವ ‘ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಗೆ ಭರತನಾಟ್ಯ ಕಲಾವಿದೆ ಡಾ.ಪದ್ಮಾ ಸುಬ್ರಹ್ಮಣ್ಯ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂ 25 ಸಾವಿರ ನಗದು ಒಳಗೊಂಡಿದೆ.
➡️ಜನೇವರಿ 4 ರಂದು ನಡೆದ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತರಪ್ರದೇಶದ ಯುವ ಶೂಟರ್‌ ಸೌರಭ್‌ ಚೌಧರಿ ಅವರು 10 ಮೀಟರ್‌  ಏರ್‌ ರೈಫಲ್‌ ವಿಭಾಗದಲ್ಲಿ ಒಟ್ಟು 246.4 ಪಾಯಿಂಟ್ಸ್ ಗಳಿಸುವ ಮೂಲಕ ಚಿನ್ನದ ಪದಕ ಕೊರಳಿಗೇರಿಸಿಕೊಂಡರು.
➡️ಖ್ಯಾತ ಒಡಿಸ್ಸಿ ಶಾಸ್ತ್ರೀಯ ನೃತ್ಯ ಕಲಾವಿದೆ ಮಿನಾತಿ ಮಿಶ್ರಾ ಅವರು ಜನೇವರಿ 6 ರ ಸೋಮವಾರ ಮುಂಜಾನೆ ಸ್ವಿಟ್ಜರ್ಲೆಂಡ್‌ನಲ್ಲಿ ನಿಧನರಾದರು. ಆಕೆಗೆ 91 ವರ್ಷ. ವಯಸ್ಸಾಗಿತ್ತು.
➡️ ಮೊದಲ ಮಹಾ ಯುದ್ಧದ ಕಥಾವಸ್ತುವುಳ್ಳ ಹಾಲಿವುಡ್‌ ಚಿತ್ರ ‘1917’, ಈ ಬಾರಿಯ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳಡಿ ‘ಶ್ರೇಷ್ಠ ಚಿತ್ರ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

➡️ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಪಿ.ಮಗೇಶ್‌ ಚಂದ್ರನ್‌ ಅವರು ಇಂಗ್ಲೆಂಡ್‌ನ ಹಾಸ್ಟಿಂಗ್ಸ್‌ನಲ್ಲಿ ನಡೆದ ಪ್ರತಿಷ್ಠಿತ ಹಾಸ್ಟಿಂಗ್ಸ್‌ ಇಂಟರ್‌ನ್ಯಾಷನಲ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
➡️ಭಾರತ ಒಲಿಂಪಿಕ್ ಸಂಸ್ಥೆಯು  ಭಾರತ ಕರಾಟೆ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಿದೆ.  ಕರಾಟೆ ಸಂಸ್ಥೆಯು (ಕೆಐಎ) ನಿಯಮಾವಳಿಯನ್ನು ಉಲ್ಲಂಘಿಸಿರುವ ಆರೋಪದಲ್ಲಿ ಈ ಶಿಕ್ಷೆಗೆ ಗುರಿಯಾಗಿದೆ.
➡️ಭಾರತ ಮೂಲದ ಇಬ್ಬರು ಮಹಿಳಾ ವಕೀಲರಾದ ಅರ್ಚನಾ ರಾವ್ ಮತ್ತು ದೀಪಾ ಅಂಬೇಕರ್ ಅವರನ್ನು ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನಾಗಿ ನ್ಯೂಯಾರ್ಕ್ ನಗರದ ಮೇಯರ್ ಬಿಲ್ ದೆ ಬ್ಲಾಸಿಯೊ ನೇಮಕ ಮಾಡಿದ್ದಾರೆ.
➡️ಡಾ.ಜಿ.ಎಸ್.ಶಿವರುದ್ರಪ್ಪ ವಿಶ್ವಸ್ಥ ಮಂಡಳಿ ನೀಡುವ ಡಾ.ಜಿ.ಎಸ್.ಎಸ್ ಪ್ರಶಸ್ತಿಗೆ ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಆಯ್ಕೆಯಾಗಿದ್ದಾರೆ.
➡️ಕರ್ನಾಟಕ  ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರನ್ನಾಗಿ ಪಿ.ಇ.ಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಎಂ.ಆರ್.ದೊರೆಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.
➡️ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಬಸವಧರ್ಮ ಪೀಠವು ಮಾತೆ ಮಹಾದೇವಿ ಹೆಸರಿನಲ್ಲಿ ಈ ವರ್ಷ(2020 ನೇ ಸಾಲಿನ) ಆರಂಭಿಸಿರುವ ‘ಬಸವಾತ್ಮಜೆ’ ಪ್ರಶಸ್ತಿಗೆ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.
➡️ಚೀನಾ ಸ್ಥಾಪಿಸಿರುವ ವಿಶ್ವದ ಬೃಹತ್ ರೇಡಿಯೊ ದೂರದರ್ಶಕ ಅಧಿಕೃತವಾಗಿ ಜನವರಿ 11 ರ ಶನಿವಾರ ಕಾರ್ಯಾಚರಣೆ ಆರಂಭಿಸಿದೆ. ಈ ದೂರದರ್ಶಕದ ವಿಸ್ತೀರ್ಣ 30 ಪುಟ್‌ಬಾಲ್‌ ಮೈದಾನಗಳಷ್ಟಿದೆ. 
Sky Eye
ಇದನ್ನು ‘ಸ್ಕೈ ಐ’ಎಂದೂ ಕರೆಯಲಾಗುತ್ತದೆ.
➡️ಯೋಗಾಭ್ಯಾಸದಲ್ಲಿ ತೋರಿದ ಸಾಧನೆಗಾಗಿ ಭಾರತ ಮೂಲದ ಬ್ರಿಟಿಷ್‌ ಬಾಲಕ, 10 ವರ್ಷದ ಈಶ್ವರ್ ಶರ್ಮಾಗೆ ‘ಗ್ಲೋಬಲ್‌ ಚೈಲ್ಡ್‌ ಪ್ರಾಡಿಜಿ ಅವಾರ್ಡ್‌– 2020’ ಪ್ರಶಸ್ತಿ ಲಭಿಸಿದೆ.
➡️2021ರ ಜನವರಿ 15ರಿಂದ ಹಾಲ್‌ಮಾರ್ಕ್‌ ಇರುವ 14 ಕ್ಯಾರಟ್‌, 18ಕ್ಯಾರಟ್‌, 22ಕ್ಯಾರಟ್‌ನ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
➡️ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಮಹಾ ನಿರ್ದೇಶಕರಾಗಿ ಐಪಿಎಸ್‌ ಅಧಿಕಾರಿ ಆನಂದ್‌ ಪ್ರಕಾಶ್‌ ಮಹೇಶ್ವರಿ ಜನವರಿ 15 ರ ಬುಧವಾರ ಅಧಿಕಾರ ಸ್ವೀಕರಿಸಿದರು.
➡️ಕನ್ನಡ ಸಾಹಿತ್ಯ ಪರಿಷತ್ ನೀಡುವ 2020ನೇ ಸಾಲಿನ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಪದ್ಮಭೂಷಣ ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಡಾ.ಇಂದಿರಾ ಹೆಗಡೆ ಆಯ್ಕೆಯಾಗಿದ್ದಾರೆ.
➡️ದುಬೈನ ಧ್ವನಿ ಪ್ರತಿಷ್ಠಾನ ನೀಡುವ ‘ಧ್ವನಿ’ ಅಂತರರಾಷ್ಟ್ರೀಯ ಪ್ರಶಸ್ತಿಗೆ ಕವಿ ಡಾ.ಎಚ್‌.ಎಸ್.ವೆಂಕಟೇಶಮೂರ್ತಿ ಆಯ್ಕೆಯಾಗಿದ್ದಾರೆ.
➡️ಆಸ್ಟ್ರೇಲಿಯಾ ಸರ್ಕಾರ ಕೊಡ ಮಾಡುವ ಅತ್ಯುನ್ನತ ನಾಗರಿಕ ಗೌರವ "ಆರ್ಡರ್ ಆಫ್ ಆಸ್ಟ್ರೇಲಿಯಾ"ಕ್ಕೆ ಬೆಂಗಳೂರು ಮೂಲದ ಬಯೋಕಾನ್ ಸಂಸ್ಥಾಪಕಿ  ಕಿರಣ್ ಮಜುಂದಾರ್ ಶಾ ಅವರು ಪಾತ್ರರಾಗಿದ್ದಾರೆ.
Kiran Mazumdar-Shaw
Kiran Mazumdar Shaw
➡️ಎಲ್.& ಟಿ ಕಂಪನಿ ತಯಾರಿಸಿರುವ 51 ನೆಯ ಕೆ-9 ವಜ್ರ-ಟಿ ಫಿರಂಗಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಜನವರಿ 16 ರ ಗುರುವಾರ ಚಾಲನೆ ನೀಡಿದರು.
️➡️ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಜೆಎಲ್‌ಎಲ್‌ ಇಂಡಿಯಾ ಬಿಡುಗಡೆಗೊಳಿಸಿದ ವಿಶ್ವದ 130 ಕ್ರಿಯಾಶೀಲ ನಗರಗಳ ಸಾಲಿನಲ್ಲಿ ಮೊದಲ ಸ್ಥಾನದ ಗೌರವಕ್ಕೆ  ಹೈದರಾಬಾದ್‌ ನಗರವು ಪಾತ್ರವಾಗಿದೆ.
➡️ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೊ) ಮಾನವ ಸಹಿತ ಗಗನಯಾನಕ್ಕೂ ಮುನ್ನ ‘ವ್ಯೋಮ ಮಿತ್ರ’ ಹೆಸರಿನ ‘ಲೇಡಿ ರೋಬೊ’ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
➡️ಜಾರ್ಖಂಡ್‌ನ ಝಾರಿಯಾ ನಗರ ಭಾರತದ ಅತಿ ಹೆಚ್ಚು ವಾಯುಮಾಲಿನ್ಯ ನಗರವಾಗಿದೆ ಎಂದು ಗ್ರೀನ್‌ಪೀಸ್‌ ಇಂಡಿಯಾ ವರದಿ ತಿಳಿಸಿದೆ.
➡️ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ನೀಡಲಾಗುವ 2019-20ನೇ ಸಾಲಿನ  ‘ಅಂಬಿಕಾತನಯದತ್ತ’ ಪ್ರಶಸ್ತಿಗೆ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
➡️2019ರ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 41ನೇ ರ‍್ಯಾಂಕ್‌ನಿಂದ 51ನೇ ರ‍್ಯಾಂಕ್‌ಗೆ ಕುಸಿದಿದೆ. ನಾರ್ವೆಯು ಮೊದಲ ಮತ್ತು ಉತ್ತರ ಕೊರಿಯ (169) ಕೊನೆಯ ರ‍್ಯಾಂಕ್‌ನಲ್ಲಿ ಉಳಿದಿವೆ.
➡️ಜಪಾನಿನ ರಾಷ್ಟ್ರೀಯ ನೌಕಾಪಡೆಯ ಜಲಾಂತರ್ಗಾಮಿ ಅಕಾಡೆಮಿಗೆ ದಾಖಲಾತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸಾಕಿ ಟಕೆನೌಚಿ ಎನ್ನುವವರು ಪಾತ್ರರಾಗಿದ್ದಾರೆ.
➡️ಗ್ರೀಸ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಕ್ಯಾತರಿನಿ ಸಕೆಲ್ಲೆರೊಪೌಲೌ ಆಯ್ಕೆಯಾಗಿದ್ದಾರೆ. ಸಂಸತ್ತಿನ ಒಟ್ಟು 300 ಸದಸ್ಯರಲ್ಲಿ 261 ಸದಸ್ಯರು, 63 ವರ್ಷದ ಕ್ಯಾತರಿನಿ ಪರ ಮತ ಚಲಾಯಿಸುವ ಮೂಲಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
➡️ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ-2019) ಪಟ್ಟಿಯಲ್ಲಿ ಭಾರತಕ್ಕೆ 80 ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಸ್ಥಾನಗಳು ಕುಸಿದಿದೆ.
➡️ಚೀನಾದ ವುಹಾನ್‌ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ ಅರ್ಹತಾ ಬಾಕ್ಸಿಂಗ್‌ ಟೂರ್ನಿಯನ್ನು ಜೋರ್ಡಾನ್‌ಗೆ ಸ್ಥಳಾಂತರಿಸಲಾಗಿದೆ. ಚೀನಾದಲ್ಲಿ ಕೊರೊನಾ ವೈರಸ್‌ ಹಾವಳಿಯ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜನವರಿ 24 ರ ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
➡️ಜನವರಿ 28 ರಂದು ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ತರಂಜಿತ್‌ ಸಿಂಗ್‌ ಸಂಧು ಅವರನ್ನು ಅಮೆರಿಕದಲ್ಲಿ ಭಾರತದ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
➡️ ಭಾರತದವರಾದ ಪರಿಸರ ಆರ್ಥಿಕ ತಜ್ಞ ಪವನ್ ಸುಖ್ ದೇವ್ ಅವರಿಗೆ "ಪರಿಸರ ನೊಬೆಲ್" ಎಂದೇ ಖ್ಯಾತಿಪಡೆದಿರುವ ಪ್ರತಿಷ್ಠಿತ "ಟೈಲರ್ ಪ್ರಶಸ್ತಿ" ದೊರೆತಿದೆ.
"ಹಸಿರು ಆರ್ಥಿಕತೆ" ಕುರಿತ ಅವರ ಸಂಶೋಧನೆ ಮತ್ತು ಕಾರ್ಯಗಳಿಗೆ ಪ್ರಶಸ್ತಿ ದೊರೆತಿದ್ದು, ಜೀವ ವಿಜ್ಞಾನಿ ಗ್ರೆಚೆನ್ ಡೈಲಿ ಅವರೊಂದಿಗೆ 2020 ರ ಸಾಲಿನ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
➡️ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಸೈನಾ ನೆಹ್ವಾಲ್ ಅವರು ಜನವರಿ 29 ರ ಬುಧವಾರ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

➡️ಆಫ್ರಿಕಾ ಚೀತಾವನ್ನು ಕರೆತರಲು ಸುಪ್ರೀಂ ಕೋರ್ಟ್ ಜನವರಿ 28 ರ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದ್ದು, ಭಾರತದಲ್ಲಿ ಸೂಕ್ತ ಎನಿಸುವ ಎಚ್ಚರಿಕೆಯಿಂದ ಆಯ್ಕೆ ಮಾಡಿದ ವನ್ಯಜೀವಿ ತಾಣದಲ್ಲಿ ಬಿಡಬೇಕು ಎಂದು ಸೂಚಿಸಿದೆ.
➡️ಡೆಬಿಟ್ ಕಾರ್ಡ್ ರಹಿತ ಎಟಿಎಂ ವ್ಯವಹಾರಕ್ಕೆ ಐ.ಸಿ.ಐ.ಸಿ.ಐ. ಬ್ಯಾಂಕ್ ಸಜ್ಜಾಗಿದೆ. ಐ.ಸಿ.ಐ.ಸಿ.ಐ. ಬ್ಯಾಂಕ್ ‘ಐ ಮೊಬೈಲ್’ ಆ್ಯಪ್ ಮೂಲಕ ಗ್ರಾಹಕರಿಗೆ ತನ್ನ ಎಟಿಎಂಗಳಿಂದ ಕಾರ್ಡ್ ರಹಿತ ನಗದು ಪಡೆದುಕೊಳ್ಳುವ ಸೌಲಭ್ಯವನ್ನು ನೀಡುತ್ತಿದೆ.
➡️ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ  2020 ರ ಜುಲೈನಲ್ಲಿ ನಡೆಯಲಿರುವ  ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ.ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಥ್ಲೆಟಿಕ್ಸ್ ಸೆಂಟ್ರಲ್‌ ನಾರ್ತ್‌ ಈಸ್ಟ್‌ ಕೂಟದಲ್ಲಿ ಅವರು 87.86 ಮೀ. ದೂರ ಜಾವೆಲಿನ್‌ ಎಸೆದು ಅರ್ಹತೆ ಗಳಿಸಿದ್ದಾರೆ.
➡️ನವದೆಹಲಿಯಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಪರೇಡ್‌ನ‌ಲ್ಲಿ ಭಾಗವಹಿಸಿದ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳ ಪೈಕಿ ಅಸ್ಸಾಂನ ಸ್ತಬ್ಧಚಿತ್ರ “ಅತ್ಯುತ್ತಮ ಸ್ತಬ್ಧಚಿತ್ರ’ ಕ್ಕೆ ಆಯ್ಕೆಯಾಗಿ ಮೊದಲ ಬಹುಮಾನ ಪ್ರಶಸ್ತಿಗೆ ಭಾಜನವಾಗಿದೆ.

➡️ವೈದ್ಯಕೀಯ ಗರ್ಭಪಾತದ ಗರಿಷ್ಠ ಅವಧಿಯ ಮಿತಿಯನ್ನು ಈಗಿರುವ  20  ವಾರಗಳಿಂದ  24 ವಾರಗಳಿಗೆ ಹೆಚ್ಚಿಸುವ ಮಹತ್ವದ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಜನವರಿ 29 ರ  ಬುಧವಾರ ಒಪ್ಪಿಗೆ ನೀಡಿದೆ.
➡️‘ಸಂವಿಧಾನ್‌’ ಎಂಬ ಶಬ್ದ ಆಕ್ಸ್‌ಫ‌ರ್ಡ್‌ ಹಿಂದಿ ನಿಘಂಟಿನ 2019ನೇ ಸಾಲಿನ ‘ವರ್ಷದ ಪದ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಪ್ರಸ್‌ (ಒಯುಪಿ) ಈ ಅಂಶವನ್ನು ಜನವರಿ 28 ರ ಮಂಗಳವಾರ ಪ್ರಕಟಿಸಿದೆ.

No comments:

Post a Comment

Note: only a member of this blog may post a comment.