Pages

Tuesday 7 November 2017

ಮಾರುತಗಳು - ಸಾಮಾನ್ಯ ಜ್ಞಾನ

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ #ಮಾರುತ' ವೆಂದು ಕರೆಯಲಾಗುವುದು.

🔗 
ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.


🔗 
ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.


🔗 
ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.


🔗 
ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:

('ಪವನ ದಿಕ್ಸೂಚಿ' (Wind Vane))

🔗 
ಗಾಳಿಯ ವೇಗವನ್ನು ಅಳೆಯುವ ಮಾನ:

('ನಾಟ್' (Knot) ಅಥವ ಕಿ.ಮೀ )

🔗 
ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)


🔗 
ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.


 
ಒಂದು ನಾಟಿಕಲ್ ಮೈಲ್ಸ್ ಎಂದರೆ - 6080ಅಡಿಗಳು \ 1.85 km.


🔗
 ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು. ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.


🔗
ಭೂ ಮೇಲ್ಮೈಗೆ ಸಮಾಂತರವಾಗಿ ಚಲಿಸುವ ವಾಯುವಿಗೆ ಹೀಗೆನ್ನುವರು - ಗಾಳಿ \ ಮಾರುತ.


️ 🔗 
ಊಧ್ವ೯ಮುಖವಾಗಿ ಚಲಿಸುವ ವಾಯುವಿಗಿರುವ ಹೆಸರು - ವಾಯುಪ್ರವಾಹ.


🔗️ 
ಮಾರುತಗಳ ದಿಕ್ಕು ಮತ್ತು ವೇಗವನ್ನು ಅಳೆಯುವ ಮಾಪಕ - ಎನಿಮೋಮೀಟರ್ \ ಪವನ ಮಾಪಕ.


🔗"️ ಮಾರುತಗಳು ದೈನಂದಿನ ಚಲನೆಯ ಪ್ರಭಾವದಿಂದ ತಮ್ಮ ಪಥವನ್ನು ಬದಲಾಯಿಸುತ್ತವೆ" ಎಂದು ತಿಳಿಸಿದ ವಿಜ್ಞಾನಿ - ಕೋರಿಯಾಲಿಸ್ (1835).

🔗️ 
"ಉತ್ತರ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಬಲಕ್ಕೆ ದಕ್ಷಿಣ ಗೋಳಾಧ೯ದಲ್ಲಿ ಬೀಸುವ ಗಾಳಿಗಳು ತಮ್ಮ ಎಡ ದಿಕ್ಕಿಗೆ ಬಾಗಿ ಚಲಿಸುತ್ತದೆ" ಎಂದು ಸೂಚಿಸಿದ ವಿಜ್ಞಾನಿ - ಡಬ್ಲ್ಯು. ಫೆರಲ್ಸ್.


🔗️ 
ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುವ ಗಾಳಿಗಳು - ನಿರಂತರ ಮಾರುತಗಳು.


🔗 
ಉತ್ತರ ಗೋಳಾಧ೯ದಲ್ಲಿ ಈಶಾನ್ಯ ನೈರುತ್ಯ ಕಡೆಗೆ , ದಕ್ಷಿಣ ಗೋಳಾಧ೯ದಲ್ಲಿ ಆಗ್ನೇಯ - ವಾಯುವ್ಯ ಕಡೆಗೆ ಬೀಸುವ ಮಾರುತಗಳು - ವಾಣಿಜ್ಯ ಮಾರುತಗಳು.


🔗 
40°-60° ಅಕ್ಷಾಂಶಗಳ ನಡುವೆ ವೇಗವಾಗಿ ಬೀಸುವ ಮಾರುತಗಳು - ಪ್ರತಿವಾಣಿಜ್ಯ ಮಾರುತ.


🔗️ 
ಪ್ರತಿವಾಣಿಜ್ಯ ಮಾರುತಗಳು ಬೀಸುವ ಪ್ರದೇಶದಲ್ಲಿ ಕಂಡುಬರುವ ಇತರೆ ಮಾರುತಗಳು - ಆವತ೯ ಮತ್ತು ಪ್ರತ್ಯಾವತ೯ ಮಾರುತಗಳು.


🔗️ 
ಒಂದು ಪ್ರದೇಶದಲ್ಲಿ ಸದಾಕಾಲ ಒಂದೇ ದಿಕ್ಕಿನಿಂದ ಬೀಸುವ ಮಾರುತ - ಪ್ರಚಲಿತ ಮಾರುತ.



🔗️ ನಿಯತಕಾಲಿಕ ಮಾರುತಗಳಿಗೆ ಉದಾ - ಮಾನ್ಸೂನ್ ಮಾರುತಗಳು.

🔗
ಹೆಚ್ಚು ಒತ್ತಡವಿರುವ ಕಣಿವೆಗಳಿಂದ ಪವ೯ತಗಳ ತುದಿಯ ಕಡೆಗೆ ಬೀಸುವ ಗಾಳಿಗೆಳು - ಕಣಿವೆ ಮಾರುತಗಳು.


️ 🔗
ತಂಪಾದ ಉತ್ತಮ ಹವಮಾನವನ್ನು ನಿಮಿ೯ಸಬಲ್ಲ ಮಾರುತಗಳು - ಪ್ರತ್ಯಾವತ೯ ಮಾರುತ.


🔗 
ಪ್ರಮುಖ ಸ್ಥಳಿಯ ಮಾರುತಗಳೆಂದರೆ - ನೆಲ ,ಜಲ , ಪವ೯ತ ಮತ್ತು ಕಣಿವೆ ಮಾರುತಗಳು.


🔗 
ಶಾಶ್ವತ ಮಾರುತಗಳಿಗೆ ಉದಾ - ವ್ಯಾಪಾರಿ ಮಾರುತಗಳು , ಧೃವೀಯ ಮಾರುತಗಳು.

No comments:

Post a Comment

Note: only a member of this blog may post a comment.