Pages

Tuesday 7 November 2017

2017ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ

ಅಮೆರಿಕಾ ಲೇಖಕ ಜಾರ್ಜ್ ಸೌಂಡರ್ ಗೆ 2017ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ
Gkforkpsc Praveen
ಜಾರ್ಜ್ ಸೌಂಡರ್ಸ್

Gkforkpsc Praveen


ಲಂಡನ್: ಇಂಗ್ಲೆಂಡ್ ನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಈ ವರ್ಷ ಅಮೆರಿಕಾದ ಲೇಖಕ ಜಾರ್ಜ್ ಸೌಂಡರ್ಸ್ ಅವರಿಗೆ ಸಂದಿದೆ. ಇವರ ಲಿಂಕನ್ ಇನ್ ಬಾರ್ಡೊ ಕಾದಂಬರಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಎರಡನೇ ಅಮೆರಿಕಾದ ಲೇಖಕರು ಜಾರ್ಜ್ ಸೌಂಡರ್ ಆಗಿದ್ದಾರೆ.
ಅಬ್ರಹಾಂ ಲಿಂಕನ್ ನ 11 ವರ್ಷದ ಮಗ ವಿಲ್ಲೈಯ ಸಾವಿನ ಕುರಿತ ಚರಿತ್ರೆಯನ್ನು ಪುಸ್ತಕ ಹೊಂದಿದ್ದು ಸಂಪೂರ್ಣ ಮೂಲ ರೂಪದಲ್ಲಿದೆ ಎಂದು ಪ್ರಶಸ್ತಿಯ ತೀರ್ಪುಗಾರರು ಹೇಳಿದ್ದಾರೆ.
ಈ ಮೂಲ ಕಾದಂಬರಿಯ ರಚನೆ ಮತ್ತು ಶೈಲಿ ಲೇಖಕನ ಬುದ್ಧಿವಂತಿಕೆಯ ಆಳ ನಿರೂಪಣೆಯನ್ನು ಹೊಂದಿದೆ ಎಂದು ತೀರ್ಪುಗಾರರ ತಂಡದ ಮುಖ್ಯಸ್ಥ ಲೋಲಾ ಯಂಗ್ ಹೇಳಿದ್ದಾರೆ. 
ಈ ಪ್ರಶಸ್ತಿ ನನಗೆ ಸಂದ ಅತಿದೊಡ್ಡ ಗೌರವವಾಗಿದೆ ಎಂದು 58 ವರ್ಷದ ಜಾರ್ಜ್ ಸೌಂಡರ್ಸ್ ಹೇಳಿದ್ದಾರೆ.

No comments:

Post a Comment

Note: only a member of this blog may post a comment.