Pages

Sunday, 8 November 2015

ಗುಂಡಿ ತನ್ನಿಂತಾನೆ ರೆಡಿ!


 
GK4KPSC
JNANASELE
ಲಂಡನ್: ಹೊಂಡಗಳಿಂದ ಕೂಡಿರುವ, ಬಿರುಕು ಬಿಟ್ಟಿರುವ ರಸ್ತೆಗಳು ತನ್ನಿಂತಾನೆ ದುರಸ್ತಿ ಆಗುವಂತಿದ್ದರೆ? ಕನಸು ಕಾಣುವುದಕ್ಕೂ ಒಂದು ಮಿತಿ ಇರಬೇಕು ಅಂತೀರಾ? ಇದು ಕನಸಲ್ಲ. ಬ್ರಿಟನ್​ನಲ್ಲಿ ಇಂಥದ್ದೊಂದು ಹೊಸ ತಂತ್ರಜ್ಞಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಸದ್ಯದಲ್ಲೇ ಬ್ರಿಟನ್ ಮಾರುಕಟ್ಟೆಗೆ ಬರಲಿರುವ ಸ್ವಯಂಚಾಲಿತ ದುರಸ್ತಿ ಕಾಂಕ್ರೀಟ್ ಪೂರ್ಣವಾಗಿ ಯಶಸ್ವಿಯಾದಲ್ಲಿ ಗುಂಡಿ ಮುಕ್ತ ಬೆಂಗಳೂರನ್ನು ಕಾಣುವ ದಿನವೂ ದೂರದಲ್ಲಿಲ್ಲ.

ಕಾಂಕ್ರೀಟ್ ಕ್ರಾಂತಿ: ಜ್ವಾಲಾಮುಖಿ ಸ್ಪೋಟಗೊಂಡ, ಸೋಡಾಯುಕ್ತ ನೀರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಂಡುಬರುವ ಅಮೂಮನ್ ಎಂಬ ಬ್ಯಾಕ್ಟೀರಿಯಾವೇ ಹೊಸ ತಂತ್ರಜ್ಞಾನದ ಜೀವಾಳ. ಇದನ್ನು ಬಳಸಿಕೊಂಡು ಹೊಸ ಕಾಂಕ್ರೀಟ್ ಅಭಿವೃದ್ಧಿಪಡಿಸಲಾಗಿದೆ.

ಹೀಗೆ ಮಾಡುತ್ತೆ ಕೆಲಸ: ಹೊಸ ಕಾಂಕ್ರೀಟ್​ನಿಂದ ತಯಾರಿಸಿದ ರಸ್ತೆ ಬಿರುಕು ಬಿಡುವ ಲಕ್ಷಣಗಳು ಕಂಡು ಬರುತ್ತಿದ್ದಂತೆ ಭಾಗಕ್ಕೆ ದ್ರವಾಕಾರದ ರಾಸಾಯನಿಕವೊಂದನ್ನು ಸ್ಪ್ರೇ (ಬ್ಯಾಕ್ಟೀರಿಯಾ ಸ್ಪ್ರೇ) ಮಾಡಬೇಕಾಗುತ್ತದೆ. ರಾಸಾಯನಿಕದ ಸಂಪರ್ಕಕ್ಕೆ ಬರುತ್ತಿದ್ದಂತೆ ಕಾಂಕ್ರೀಟ್​ನಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ರಿಯಗೊಂಡು ಅದರಲ್ಲಿರುವ ಕ್ಯಾಲ್ಸಿಯಂ ಲೈಕ್ಟೆಟ್ ಅನ್ನು ಸೇವಿಸಲಾರಂಭಿಸುತ್ತವೆ. ವೇಳೆ ನಡೆಯುವ ರಾಸಾಯನಿಕ ಕ್ರಿಯೆಯ ಪರಿಣಾಮ ಬಿರುಕು ಮೂಡಿರುವ

ಜಾಗದಲ್ಲಿ ತನ್ನಿಂತಾನೇ ಕಾಂಕ್ರೀಟ್ ತುಂಬಿಕೊಳ್ಳಲಿದೆ. ಇದರಿಂದ ರಸ್ತೆ ದುರಸ್ತಿಯಾಗುತ್ತದೆ.

2016ರಲ್ಲಿ ಮಾರುಕಟ್ಟೆಗೆ?: ಹೊಸ ಕಾಂಕ್ರೀಟನ್ನು ಲಂಡನ್​ನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಬಳಸಲಾಗಿದೆ. ನೂತನ ಕಾಂಕ್ರೀಟ್ ಮತ್ತು ಬ್ಯಾಕ್ಟೀರಿಯಾ ಸ್ಪ್ರೇ 2016ರಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಬ್ರಿಟನ್​ನಲ್ಲಿ ಮಾರುಕಟ್ಟೆಗೆ ಬಂದು ಯಶಸ್ವಿಯಾದಲ್ಲಿ ಭಾರತಕ್ಕೂ ಕಾಲಿಡುವ ದಿನಗಳು ದೂರವಿಲ್ಲ. ಮನೆಗಳ ಕಿಟಿಕಿ ಸಂದಿಯಲ್ಲಿ ಮತ್ತು ಗೋಡೆಗಳಲ್ಲಿ ಮೂಡುವ ಬಿರುಕು ನಿವಾರಿಸಲೂ ಕಾಂಕ್ರೀಟ್ ನೆರವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

No comments:

Post a Comment

Note: only a member of this blog may post a comment.