Pages

Sunday 8 November 2015

ವಿದ್ಯಾರ್ಥಿನಿಯರಿಗೆ ಚೂಡಿದಾರ್ ಭಾಗ್ಯ



GK4KPSC
JNANASELE
 
ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಹೆಣ್ಣು ಮಕ್ಕಳಿಗೆ ಸಮವಸ್ತ್ರ
ಬದಲಾಯಿಸುವ ಮಹತ್ವದ
ಪ್ರಸ್ತಾವನೆಯೊಂದನ್ನು ಶಿಕ್ಷಣ ಇಲಾಖೆ
ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ರಾಜ್ಯ
ಸರ್ಕಾರ ಅನುಮೋದನೆ ನೀಡಿದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿನಿಯರಿಗೆ
ಸ್ಕರ್ಟ್ ಬದಲು ಚೂಡಿದಾರ ಸಮವಸ್ತ್ರ ಜಾರಿಗೆ
ಬರಲಿದೆ.

ಸದ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಒಂದರಿಂದ 10ನೇ ತರಗತಿ ಹೆಣ್ಣು ಮಕ್ಕಳಿಗೆ
ಶರ್ಟ್ (ಮೇಲಂಗಿ) ಮತ್ತು ಸ್ಕರ್ಟ್ (ಲಂಗ) ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹಿರಿಯ ಪ್ರಾಥಮಿಕ ಮತ್ತು
ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಶರ್ಟ್, ಸ್ಕರ್ಟ್
ಬದಲಿಗೆ ಚೂಡಿದಾರ್ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಿದೆ. ಆದರೆ, ಸರ್ಕಾರ ಇನ್ನು ಸಂಬಂಧ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.

ಶೈಕ್ಷಣಿಕ ವರ್ಷದ ಅಂತ್ಯದೊಳಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಪರಿಶೀಲಿಸಿ ಸಮ್ಮತಿಸಿದರೆ, 2016-17ನೇ ಸಾಲಿನಿಂದ 6
ರಿಂದ 10ನೇ ತರಗತಿಯ 25 ಲಕ್ಷ
ವಿದ್ಯಾರ್ಥಿನಿಯರಿಗೆ ಬಿಸಿಯೂಟ, ಸೈಕಲ್-ಕ್ಷೀರ-
ಶೂ-ಸಾಕ್ಸ್ ಭಾಗ್ಯದ ಜತೆಗೆ ಚೂಡಿದಾರ್
ಭಾಗ್ಯವೂ ಲಭಿಸಲಿದೆ. ಆದರೆ, ಪ್ರಾಥಮಿಕ ಶಾಲೆಯ ಹೆಣ್ಣುಮಕ್ಕಳ ಸಮವಸ್ತ್ರದಲ್ಲಿ ಬದಲಾವಣೆ ಇರದು.

ಚೂಡಿದಾರ್ ಭಾಗ್ಯದಿಂದ
ಸರ್ಕಾರಕ್ಕೆ 85 ಕೋಟಿ ರೂ. ಹೆಚ್ಚುವರಿ ಹೊರೆಯಾಗುವ ನಿರೀಕ್ಷೆಯಿದೆ. ಬಹುತೇಕ ಶಾಲೆ
ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ 6
ರಿಂದ 10ನೇ ತರಗತಿಯ ಹೆಣ್ಣು ಮಕ್ಕಳಿಗೆ ಸಮವಸ್ತ್ರದಲ್ಲಿ ಚೂಡಿದಾರ್
ಕಡ್ಡಾಯವಾಗಿರುತ್ತದೆ. ಹೀಗಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹೆಣ್ಣು
ಮಕ್ಕಳಿಗೆ ಸಮವಸ್ತ್ರ ನೀಡುವಾಗ ಚೂಡಿದಾರ್ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ
ಸಲ್ಲಿಸಿದ್ದೇವೆಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ.ಆನಂದ್ ವಿಜಯವಾಣಿಗೆ ಮಾಹಿತಿ
ನೀಡಿದರು. ಇಲಾಖೆ ಪ್ರಸ್ತಾವನೆಗೆ ಸರ್ಕಾರ ಉತ್ತರಿಸಿಲ್ಲ. ವಿದ್ಯಾರ್ಥಿನಿಯರ ಸುರಕ್ಷೆ
ವಿಚಾರದಲ್ಲೂ ಚೂಡಿದಾರ್ ಅತ್ಯಂತ ಸೂಕ್ತ.

ಶಿಕ್ಷಣ ತಜ್ಞರು ಹಾಗೂ ಅಧಿಕಾರಿಗಳ ಜತೆ ರ್ಚಚಿಸಿ ಹೆಣ್ಣು ಮಕ್ಕಳ ಸುರಕ್ಷೆ ದೃಷ್ಟಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.

ಸಚಿವ ಕಿಮ್ಮನೆ ರತ್ನಾಕರ ಸಿಎಂ ಜತೆ ರ್ಚಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕಿದೆ
ಎಂದು ಹೇಳಿದರು.
ಮನಸ್ಥಿತಿ ಬದಲಾಗದೆ ಪರಿವರ್ತನೆ ಅಸಾಧ್ಯ.
ಬಗ್ಗೆ ಮಕ್ಕಳ, ಪಾಲಕರ ಅಭಿಪ್ರಾಯಕ್ಕೆ
ಮನ್ನಣೆ ಅಗತ್ಯ. ಮಕ್ಕಳ ಮೇಲೆ ಎಲ್ಲವನ್ನೂ
ಪ್ರಯೋಗಿಸುವುದು ಸರಿಯಲ್ಲ. ಚೂಡಿದಾರ್
ಹಾಕಲು ಅನೇಕರಿಗೆ ಇಷ್ಟ ಇಲ್ಲದಿರಬಹುದು.
ಅಂಥವರಿಗೆ ಪರ್ಯಾಯ ವ್ಯವಸ್ಥೆ
ಕಲ್ಪಿಸುವಂತಾಗಬೇಕು ಎಂದು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
***
ಚೂಡಿದಾರ್ ನೀಡುವ ಸಂಬಂಧ ಪ್ರಾಥಮಿಕ
ಶಿಕ್ಷಣ ವಿಭಾಗದಿಂದ ಸರ್ಕಾರಕ್ಕೆ ಪ್ರಸ್ತಾವನೆ
ಹೋಗಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
| ಕೆ.ಎಸ್.ಸತ್ಯಮೂರ್ತಿ ಆಯುಕ್ತ, ಸಾರ್ವಜನಿಕ
ಶಿಕ್ಷಣ ಇಲಾಖೆ

vijayavani news

No comments:

Post a Comment

Note: only a member of this blog may post a comment.