THE ULTIMATE GK BLOG FOR CET PREPARATION WITH EDUCATIONAL UPDATES, GENERAL KNOWLEDGE, CURRENT AFFAIRS, GOVT.NOTIFICATIONS,NEWS UPDATES and MUCH MORE..!
ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020-2021ನೇ ಸಾಲಿನ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿರುವ ಪ್ರಮುಖ ಅಂಶಗಳು:
ಕೃಷಿ:
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನ.
ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ
ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 FPO ರಚನೆ, FPO ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು.
ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ.
ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ.
ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.
ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆʼ ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ.ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ.
ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು ʼಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್ʼ ಪ್ರಾರಂಭ.
ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ.
ಹಾಪ್‍ಕಾಮ್ಸ್ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದು
ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ನೀಡಲು ಹೊಸ ನೀತಿ ರಚನೆ.
ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಕುರಿತು ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಾಕಿ ಕಾಮಗಾರಿ ಪೂರ್ಣಗೊಳಿಸುವುದು
ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಶೀತಲ ಗೃಹಗಳ ನಿರ್ಮಾಣ.
ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ. ನೆರವು.
ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ʼಕೃಷಿ ರೈಲ್ʼ ಯೋಜನೆಯ ಸೌಲಭ್ಯದ ಬಳಕೆ.
ನೀರಾವರಿ
ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂ. ಅನುದಾನ.
ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ.
ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ʼಕಿಂಡಿ ಅಣೆಕಟ್ಟು ಯೋಜನೆ”ಗಳ (Vented Dams) ವ್ಯಾಪಕ ಅನುಷ್ಠಾನ
ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ.
ಅಟಲ್ ಭೂ-ಜಲ ಯೋಜನೆಯಡಿ 1202 ಕೋಟಿ ರೂ.ಗಳನ್ನು ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸುವುದು
ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸುವುದು
ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ
‘ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಅನುದಾನ; ಮೊದಲನೆಯ ಹಂತದ Lift component ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸುವುದು
ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ
ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ
ಮೀನುಗಾರಿಕೆ
ʼಮಹಿಳಾ ಮೀನುಗಾರರ ಸಬಲೀಕರಣʼ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.
ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.
ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.
ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.
ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ.
ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ.
ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ.
ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ.
ಶಿಕ್ಷಣ
ನೆರೆಯಿಂದ ಹಾನಿಗೊಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6569 ಕೊಠಡಿಗಳ ಕಾಮಗಾರಿಗೆ 758 ಕೋಟಿ
ತಿಂಗಳಿನ ಶನಿವಾರಗಳು ಬ್ಯಾಗ್ ರಹಿತ ʼಸಂಭ್ರಮ ಶನಿವಾರʼಗಳೆಂದು ಘೋಷಣೆ
400 ಉರ್ದು ಮಾಧ್ಯಮ ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಇಂಗ್ಲೀಷ್ ಮಾಧ್ಯಮ ಆರಂಭಿಸಲು ಒಂದು ಕೋಟಿ ಅನುದಾನ
ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐಐಟಿ ಮಾದರಿ ಸ್ವಾಯತ್ತಗೊಳಿಸಲು ಹತ್ತು ಕೋಟಿ ಅನುದಾನ
ಆರೋಗ್ಯ
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಸೇವರ ವಿಸ್ತರಿಸಲು 19 ಕೋಟಿ ರೂ.
ಶಿರಸಿಯ ಸರ್ಕಾರಿ ಆಸ್ಪತ್ರೆಯನ್ನು 200 ಹಾಸಿಗೆಗಳ ಆಸ್ಪತ್ರಯಾಗಿ ಮೇಲ್ದರ್ಜೆಗೇರಿಸಲು ಕ್ರಮ
ʼಶ್ರವಣ ದೋಷ ಮುಕ್ತʼ ರಾಜ್ಯವಾಗಿಸಲು 28 ಕೋಟಿ ರೂ. ಅನುದಾನ
ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಸ್ಥಾಪನೆ ಉದ್ದೇಶ. ಪ್ರಸಕ್ತ ಸಾಲಿನಲ್ಲಿ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭ
ಹಾವೇರಿಯಲ್ಲಿ 20 ಹಾಸಿಗೆಗಳ ಆಯುಷ್ ಆಸ್ಪತ್ರೆ 20 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ. ಪ್ರಸಕ್ತ ಸಾಲಿನಲ್ಲಿ ಐದು ಕೋಟಿ ರೂ ಬಿಡುಗಡೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ಸಿಮ್ಯುಲೇಷನ್ ಲ್ಯಾಬ್ ಹಾಗೂ 30 ಲಕ್ಷ ವೆಚ್ಚದಲ್ಲಿ ಮಾಲಿಕ್ಯುಲಾರ್ ಬಯಾಲಜಿ ಲ್ಯಾಬ್ ನಿರ್ಮಾಣ
ರಾಮನಗರ
* ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆ
* ಹಾರೋಹಳ್ಳಿಯಲ್ಲಿ ಎಲೆಕ್ಟ್ರಿಕಲ್ ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್– ₹10 ಕೋಟಿ
* ರಣಹದ್ದು ಧಾಮದಲ್ಲಿ ಸಂತಾನೋತ್ಪತ್ತಿ ಕೇಂದ್ರ– ₹2 ಕೋಟಿ ಬೆಂಗಳೂರು ಗ್ರಾಮಾಂತರ
* ಹರಳೂರು–ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಎಕ್ಯುಪ್‌ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ದಕ್ಷಿಣಕನ್ನಡ
* ಮೂಲ್ಕಿಯಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ– ₹2 ಕೋಟಿ
* ಕುಳಾಯಿಯಲ್ಲಿ ಮೀನು ರಫ್ತು ಸ್ಥಾವರ ನಿರ್ಮಾಣ– ₹12.50 ಕೋಟಿ ಉಡುಪಿ
* ಹೆಜಮಾಡಿಯಲ್ಲಿ ಮೀನುಗಾರಿಕಾ ಬಂದರು– ₹181 ಕೋಟಿ
* ಹಂಗಾರಕಟ್ಟೆ ಬಂದರು ಅಭಿವೃದ್ಧಿ– ₹130 ಕೋಟಿ
* ಕಾರ್ಕಳದಲ್ಲಿ ಜವಳಿ ಪಾರ್ಕ್ ಉತ್ತರ ಕನ್ನಡ ಜಿಲ್ಲೆ
* ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತಲು– ₹85 ಕೋಟಿ
* ಕೊಡೇರಿ ಬಂದರು ಅಭಿವೃದ್ಧಿ– ₹2 ಕೋಟಿ
* ಶಿರಸಿ ಸರ್ಕಾರಿ ಆಸ್ಪತ್ರೆ 200 ಹಾಸಿಗೆಗೆ ಹೆಚ್ಚಿಸಿ ಮೇಲ್ದರ್ಜೆಗೆ
* ಸಿದ್ಧಾಪುರದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ
* ಖಾಸಗಿ ಸಹಭಾಗಿತ್ವದಲ್ಲಿ ₹2,500 ಕೋಟಿ ವೆಚ್ಚದಲ್ಲಿ ಪಾವಿನಕುರ್ವೆ/ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್ ಆಹ್ವಾನ
* ಕಡಲಧಾಮ ಸ್ಥಾಪನೆ– ₹1 ಕೋಟಿ
* ಕಾರವಾರ ಬಂದರಿಗೆ ಶಾಶ್ವತ ಅಗ್ನಿಶಾಮಕ ಉಪಕರಣ– ₹19 ಕೋಟಿ ಹಾವೇರಿ
* 20 ಹಾಸಿಗೆಗೆಳ ಆಯುಷ್ ಸಂಯುಕ್ತ ಆಸ್ಪತ್ರೆ ₹20 ಕೋಟಿಯಲ್ಲಿ ಆರಂಭ. ಪ್ರಸಕ್ತ ವರ್ಷ ₹5 ಕೋಟಿ
* ಶಿಗ್ಗಾವಿಯಲ್ಲಿ ಜವಳಿ ಪಾರ್ಕ್
* ಸಂತ ಶಿಶುನಾಳ ಶರೀಫರ ಗ್ರಾಮ ಅಭಿವೃದ್ಧಿ– ₹5 ಕೋಟಿ
* ಹಿರೇಕೆರೂರಿನಲ್ಲಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗೆ ಪ್ರೋತ್ಸಾಹ ಕಲಬುರ್ಗಿ
ಬ್ರೈಲ್ ಕಂ ಟಾಕಿಂಗ್ ಲೈಬ್ರರಿ ಮೈಸೂರು
* ಸರ್ಕಾರಿ ಬ್ರೈಲ್ ಮುದ್ರಣಾಲಯ–₹80 ಲಕ್ಷ
ವಿಜಯಪುರ
* ‘ಜಲಧಾರೆ’ ಯೋಜನೆಯ ಮೊದಲ ಹಂತ ಮಂಡ್ಯ
‘ಜಲಧಾರೆ’ ಯೋಜನೆಯ ಮೊದಲ ಹಂತ ಬೆಂಗಳೂರು
* ಸೆಂಟರ್ ಫಾರ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆ ಸ್ಥಾಪನೆ– ₹5 ಕೋಟಿ
* ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ಟ್ರಾನ್ಸ್‌ಲೇಷನ್ ಪಾರ್ಕ್ – 3 ವರ್ಷಗಳಲ್ಲಿ ₹60 ಕೋಟಿ ಅನುದಾನ
* ಕೃಷಿ ನಾವೀನ್ಯತಾ ಕೇಂದ್ರ – ₹20 ಕೋಟಿ
* ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಸೇವಾ ಕೇಂದ್ರಗಳ ಸಾಮರ್ಥ್ಯ ಉನ್ನತೀಕರಣ– ₹20 ಕೋಟಿ
* ವಿವೇಕಾನಂದ ಯುವ ಕೇಂದ್ರ ಸ್ಥಾಪನೆ– ₹2 ಕೋಟಿ
* ನಾಲ್ಕೂ ದಿಕ್ಕಿನಲ್ಲಿ ಕಲಾಕ್ಷೇತ್ರ– ₹60 ಕೋಟಿ
* ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂಪೇಗೌಡರ ಕಂಚಿನ ಪ್ರತಿಮೆ– ₹60 ಕೋಟಿ
* ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಸಂತೆ– ₹1 ಕೋಟಿ
* ಖಾಸಗಿ ಸಹಭಾಗಿತ್ವದಲ್ಲಿ ‘ಫಿಲಂ ಸಿಟಿ’ ಸ್ಥಾಪನೆ– ₹500 ಕೋಟಿ
* ಐಐಟಿ ಮಾದರಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಅಭಿವೃದ್ಧಿಗೆ ₹10 ಕೋಟಿ ತುಮಕೂರು
* ತಿಪಟೂರಿನಲ್ಲಿ ತೆಂಗು ಆಧಾರಿತ ಕೈಗಾರಿಕಾ ಪಾರ್ಕ್ ಬಾಗಲಕೋಟೆ
* ಬಸವಕಲ್ಯಾಣದಲ್ಲಿ ‘ಅನುಭವ ಮಂಟಪ’ಕ್ಕೆ ₹100 ಕೋಟಿ
* ಬಾದಾಮಿ ಅಭಿವೃದ್ಧಿ – ₹25 ಕೋಟಿ ಚಿತ್ರದುರ್ಗ
* ಮುರುಘಾ ಮಠದ ಆವರಣದಲ್ಲಿ ಬಸವೇಶ್ವರರ ಕಂಚಿನ ಪುತ್ಥಳಿ– ₹20 ಕೋಟಿ
* ಎಸ್. ನಿಜಲಿಂಗಪ್ಪ ವಾಸವಿದ್ದ ಮನೆ ಸಂರಕ್ಷಣೆ– ₹5 ಕೋಟಿ
* ವೀರಮದಕರಿ ನಾಯಕ, ಒನಕೆ ಓಬವ್ವ ತಾಣ ಅಭಿವೃದ್ಧಿ ಧಾರವಾಡ
* ಕಾನೂನು ವಿವಿಯಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ– ₹1 ಕೋಟಿ ಹಾಸನ
* ಎಸ್.ಎಲ್. ಭೈರಪ್ಪ ಹುಟ್ಟೂರು ಸಂತೆಶಿವರ ಗ್ರಾಮ ಅಭಿವೃದ್ಧಿ– ₹5 ಕೋಟಿ ರಾಯಚೂರು
* ಮಂತ್ರಾಲಯದಲ್ಲಿ ಅತಿಥಿಗೃಹ ಕೊಪ್ಪಳ
* ಗಂಗಾವತಿಯಲ್ಲಿ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನ ಅಭಿವೃದ್ಧಿ– ₹20 ಕೋಟಿ ಶಿವಮೊಗ್ಗ
* ಸಾಗರ ತಾಲ್ಲೂಕಿನ ಜೋಗ ಜಲಪಾತ ಅಭಿವೃದ್ಧಿ
* ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಮಿನಿ ಮೃಗಾಲಯ ಉನ್ನತೀಕರಣ– ₹5 ಕೋಟಿ
ರಾಜ್ಯಬಜೆಟ್ 2020: ಇದೇ ಮೊದಲ ಸಲ ಮಕ್ಕಳಿಗಾಗಿಯೇ ಮುಂಗಡಪತ್ರ ಮಂಡಿಸಿದ ಸಿಎಂ ಬಿಎಸ್ವೈ.
ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಇಂದು ಮಂಡಿಸಿದ ಬಜೆಟ್ ನ ಸಂಪೂರ್ಣ ಮಾಹಿತಿ ಈ ಕೆಳಗಿನ ಲಿಂಕ್ ನಲ್ಲಿ ಲಭ್ಯ
World Wildlife Day, also known as WWD, is celebrated annually across the world. Wildlife refers to the huge variety of flora and fauna living on earth in wilds. Every year on the 3rd of March, this day is marked.
An essential part of our ecosystem, many of these wildlife species are on the verge of extinction today due to human life activities. Carelessness combined with greed has resulted in a sharp decline of these species.
The World Wildlife Day aims to raise awareness towards the current scenario of flora and fauna.
World Wildlife Day: Importance, Significance & Theme
An increase in wildlife crimes (illegal poaching, killing and selling of precious body parts of animals, etc.) led to a series of serious discussion in the UN under UNGA (United Nations General Assembly). Finally, in its 68th session, on the 20th of December, 2003, it was decided that the world will celebrate ‘World Wildlife Day’ every year on the 3rd of March.
The theme for World Wildlife Day 2020 will be “Sustaining All Life on Earth".
The aim of World Wildlife Day is to acknowledge the importance of wildlife species in maintaining the ecological balance on earth. It also aims to create awareness among humans about the importance of wildlife and tries to curb the various dangers directed towards the flora and fauna.
Every year, the UN celebrates the wildlife species and assign a theme to raise awareness about that particular topic.
Marine life is an integral part of any civilization. It is said that around 3 billion people depend on marine life in a way or another.
They offer humans a number of resources including food, source of livelihood, craft, etc. The aim behind this year’s theme is to create awareness and protect the underwater wildlife from the ongoing assault.
“Prejudice and discrimination based on our differences is an unfortunate fact of life."
-B Hammer
What is Zero Discrimination Day?
Globally observed on March 1 every year, Zero Discrimination Day is a reminder to celebrate diversity and reject all kinds of discrimination. India is a country that vividly reflects the many facades of violence and prejudices, rooting from differences based on caste, gender identity, age, sexual orientation and disability.
Zero Discrimination Day calls out for people to not only embrace their individuality but also encourage others to learn the art of acceptance. Symbolizing the day to its true meaning, a butterfly is widely used to share stories and photographs as a way to end discrimination, signifying their transformation and journey towards a peaceful society.
This day was first celebrated by the UN on March 1, 2014, after UNAIDS, a UN programme on human immunodeficiency virus (HIV) and acquired immune deficiency syndrome (AIDS), launched its Zero Discrimination Campaign on World Aids Day in December 2013.
SOS India and its three pillars: Equality, Enable, Empower
SOS Children’s Villages of India has been tirelessly working towards providing once parentless and abandoned children with a family to call their own and a loving environment to grow up in. Giving them a second chance at a fulfilling and secure childhood, SOS India ensures equal opportunities for all. With over 7000 children spread across 32 children’s villages in 22 states in India, all efforts are directed towards helping children realize their full potential.
While every child at SOS India is unique and significant, some are beyond just that; they are special!
SOS Children’s Village Khajuri Kalan
SOS Children’s Village Khajuri Kalan is home to over 80 differently abled children since 2004. As children with varied disabilities, including both mental and physical, are brought home to the village, SOS India ensures that long-term care and rehabilitation services are rendered to all. With the primary goal to integrate these children in the mainstream of life, special training and coaching given to those who exemplify great potential in various fields. Additionally, extra measures are also taken to help children overcome their traumas and fears with the help of counselling and other interactive sessions.
Jnanasele
SOS India strongly believes that everyone, irrespective of his or her disability, should live with dignity. Differently abled children are given equal opportunities and are encouraged to make it big in life! They are not subject to any kind of discrimination and are fully supported to turn their dreams into reality. Upholding this spirit, children from SOS Village Khajuri Kalan have been participating in the Special Olympics for the last two years. Ensuring the best training facilities and opportunities for these champions, SOS India stands true to its claim of zero tolerance against discrimination.
In 2015, three athletes named Dolly, Shruti and Vijay participated and made us proud by winning a Gold, Silver and a Bronze medal in Cycling and Football at the Special Olympics World Summer Games in Los Angeles. In 2017, four specially abled girls Kiran, Vidushi, Diksha and Dulfisha from SOS CV Khajuri Kalan participated in the Special Olympics World Winter Games, held in Austria. While Kiran, Diksha and Dulfisha won a Bronze medal in Team Floor Hockey, Vidushi was adjudged as the best player of Floor Ball during the entire event.
Today, SOS India is proud, yet again, to announce that two of our specially abled girls named Shruti and Manimeghlai will be presenting Team India at the Special Olympics World Summer Games 2019 in Abu Dhabi.
1. ಸಮಾಜ ಸುಧಾರಣೆಗೆ ಹೆಸರಾದ ಶಾಹು ಮಹರಾಜರು ಯಾವ ಸಂಸ್ಥಾನದ ಅಧಿಪತಿಗಳಾಗಿದ್ದರು?
A) ಸಾಂಗ್ಲಿ
B) ಜತ್
C) ಕೊಲ್ಲಾಪುರ ✔✔
D) ಔಧ್
📗📙📗📙📗📙📗📙📗📙
2. ವಾಹನಗಳ ಎಂಜಿನ್ ಅನ್ನು ತಂಪುಗೊಳಿಸುವ ಭಾಗ ಯಾವುದು?
A)ರೇಡಿಯೇಟರ್ ✔✔
B) ಕ್ಲಚ್
C) ಬ್ಯಾಟರಿ
D) ಸ್ಪಾರ್ಕ್ ಪ್ಲಗ್
📗📙📗📙📗📙📗📙📗📙
3. ಸಂತೋಷಕುಮಾರ್ ಗುಲ್ವಾಡಿ ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದರು?
A) ಕ್ರೀಡೆ
B) ಪತ್ರಿಕೋದ್ಯಮ✔✔
C) ರಂಗಭೂಮಿ
D) ಚಲನಚಿತ್ರ
📗📙📗📙📗📙📗📙📗📙
4. ಅರ್ಥೈಟ್ರಿಸ್ ಎಂಬ ಸಮಸ್ಯೆ ದೇಹದ ಯಾವ ಭಾಗಕ್ಕೆ ಸಂಬಂಧಿಸಿದ್ದು?
A) ಗಂಟಲು
B) ಹೃದಯ
C) ಕೀಲುಗಳು ✔✔
D) ಮೂತ್ರಪಿಂಡ
📗📙📗📙📗📙📗📙📗📙
5. ವೇಗನ್ ಆಹಾರ ಪದ್ಧತಿಯನ್ನು ಆಚರಿಸುವವರು ಯಾವ ವಸ್ತುಗಳನ್ನು ಬಳಸುವುದಿಲ್ಲ?
A) ಗೆಡ್ಡೆಗೆಣಸು
B) ಪ್ರಾಣಿಜನ್ಯ ವಸ್ತುಗಳು✔✔
C) ಕರಿದ ತಿಂಡಿ
D) ಮಸಾಲೆ ಪದಾರ್ಥ
📗📙📗📙📗📙📗📙📗📙
6. ‘ನಂ 221ಬಿ, ಬೇಕರ್ ಸ್ಟ್ರೀಟ್, ಲಂಡನ್’-ಇದು ಯಾವ ಪ್ರಸಿದ್ಧ ಕಾಲ್ಪನಿಕ ಪತ್ತೇದಾರನ ವಿಳಾಸ?
A) ಜೇಮ್ಸ್ ಬಾಂಡ್
B) ಡಾ. ವಾಟ್ಸನ್
C) ಹರ್ಕುಲೆ ಪೊಯ್ರಾಟ್
D) ಷರ್ಲಾಕ್ ಹೋಮ್ಸ್✔✔
📗📙📗📙📗📙📗📙📗📙
7. ಮಹಾಭಾರತದಲ್ಲಿ ಯಾರನ್ನು ಸೂತಪುತ್ರ ಎಂದು ಕರೆಯಲಾಗುತ್ತಿತ್ತು?
A) ಶಕುನಿ
B) ಕರ್ಣ✔✔
C)ಭೀಷ್ಮ
D)ವಿರಾಟ
📗📙📗📙📗📙📗📙📗📙
8.‘ಇನ್ಸ್ಟಾಗ್ರಾಮ್’ ಎಂಬ ಸಾಮಾಜಿಕ ಜಾಲತಾಣದ ಮಾಲಿಕ ಸಂಸ್ಥೆಯ ಹೆಸರೇನು?
A) ಫೇಸ್ ಬುಕ್ ✔✔
B) ಆಪಲ್
C) ಇನ್ಫೋಸಿಸ್
D) ಮೈಂಡ್ ಟ್ರೀ
📗📙📗📙📗📙📗📙📗📙
9. ಬ್ರಹ್ಮಪುತ್ರಾ ನದಿ ಏನೆಂದು ಪ್ರಸಿದ್ಧವಾಗಿದೆ?
A)ಹೆಣ್ಣು ನದಿ
B) ಗಂಡು ನದಿ✔✔
C) ಮಾಯದ ನದಿ
D) ದುಃಖದ ನದಿ
📗📙📗📙📗📙📗📙📗📙
10. ದೀಪಕ್ ಪುನಿಯಾ ಯಾವ ಕ್ರೀಡೆಯ ಕ್ರೀಡಾ ಪಟು?
A) ಕುಸ್ತಿ ✔✔
B) ಕತ್ತಿವರಸೆ
C) ಭಾರ ಎತ್ತುವಿಕೆ
D) ಈಜು
📗📙📗📙📗📙📗📙📗📙