Sunday, 16 September 2018

ವಿಶ್ವ ಓಜೋನ್ ದಿನ – ಸಪ್ಟೆಂಬರ್ 16

ಏನಿದು ಓಜೋನ್ ಪದರ?
ಓಜೋನ್ ಎನ್ನುವುದು ನೀಲಿಬಣ್ಣದ ನೈಸರ್ಗಿಕ ಅನಿಲ ಎಂದು ಸಾಬೀತಾಗಿ ಶತಮಾನಗಳೇ ಕಳೆದಿದೆ. ಭೂಮಿಯ ವಾತಾವರಣದ ಮೊದಲೇ ಎರಡು ಪದರಗಳಾದ ಟ್ರೋಪೋಸ್ಪಿಯರ್ ಮತ್ತು ಸ್ಟ್ರಾಟೋಸ್ಪಿಯರ್‍ಗಳಲ್ಲಿ ಓಜೋನ್ ಇರುತ್ತದೆ. ಸುಮಾರÀು ಶೇಕಡಾ 90 ಭಾಗ ಓಜೋನ್ ಸ್ಟ್ರಾಟೋಸ್ಪಿಯರ್ ಪದರದಲ್ಲಿ ಇರುತ್ತದೆ. ಅಲ್ಲದೆ ಓಜೋನ್ ಸ್ಟ್ರಾಟೋಸ್ಪಿಯರ್‍ನಲ್ಲಿದ್ದರೆ ಜೀವರಕ್ಷಕ ಕವಚವಾಗಿರುತ್ತದೆ ಮತ್ತು ಟ್ರೋಪೋಸ್ಪಿಯರ್‍ನಲ್ಲಿದ್ದರೆ ಮಾಲಿನ್ಯಕಾರಕ ಅನಿಲವಾಗಿ ಪರಿವರ್ತನೆಯಾಗುತ್ತದೆ. ಭೂಮಿಯಿಂದ ಮೇಲ್ಮುಖವಾಗಿ 25ರಿಂದ 30 ಕಿ.ಮೀ ದೂರದಲ್ಲಿ ಸ್ಟ್ರಾಟೋಸ್ಪಿಯರ್‍ನಲ್ಲಿ ಓಜೋನ್ ಪದರವಾಗಿ ಸೂರ್ಯ ಕಿರಣಗಳಿಂದ ಹೊರಹೊಮ್ಮುವ ನೆರಳಾತೀತ ಕಿರಣಗಳನ್ನು ಹೀರಿಕೊಂಡು, ಚರ್ಮದ ಕ್ಯಾನ್ಸರ್‍ನಿಂದ ಮನುಕುಲವನ್ನು ರಕ್ಷಿಸುತ್ತದೆ ಎಂದು ನಮಗೆ ತಿಳಿದ ಸತ್ಯ ವಿಚಾರವಾಗಿದೆ. ಸೂರ್ಯನ ನೇರಳಾತೀತ ಕಿರಣಗಳ ಸಮ್ಮುಖದಲ್ಲಿ ಆಮ್ಲಜನಕದ ಒಂದು ಅಣು ಮತ್ತು ಪರಮಾಣು ಸೇರಿದಾಗ ಓಜೋನ್ ಪದರ ಸೃಷ್ಟಿಯಾಗುತ್ತದೆ. ಒಟ್ಟಿನಲ್ಲಿ ಓಜೋನ್ ಪದರದ ಸೃಷ್ಟಿಗೆ ಮುಖ್ಯವಾಗಿ ಬೇಕಾಗಿರುವುದು ಆಮ್ಲಜನಕದ ಅಣು ಮತ್ತು ಪರಮಾಣು ಹಾಗೂ ಸೂರ್ಯನ ನೆರಳಾತೀತ ಕಿರಣಗಳು ಓಜೋನ್ ಪದರ ಸೃಷ್ಟಿಯಾಗುವ ಈ ಪ್ರಕೃತಿಯ ಪ್ರಕ್ರಿಯೆಯಲ್ಲಿ ಆಮ್ಲಜನಕದ ಅಣು ಮತ್ತು ಪರಮಾಣುಗಳು ನೆರಳಾತೀತ ಕಿರಣಗಳನ್ನು ಹೀರಿ ಭೂಮಂಡಲದ ಜೀವರಾಶಿಗಳಿಗೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಹೀಗೆ ಓಜೋನ್ ಪದರ ಸೃಷ್ಟಿಯಾಗುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅದರ ಜೊತೆಗೆ ನೈಸರ್ಗಿಕವಾಗಿ ಹಾಗೂ ಮನುಷ್ಯನ ನಿಸರ್ಗ ವಿರೋಧಿ ಪ್ರಕ್ರಿಯೆಗಳಿಂದಾಗಿ ಓಜೋನ್ ಪದರ ಅನೈಸರ್ಗಿಕವಾಗಿ ಕ್ಷೀಣವಾಗುತ್ತಲೇ ಬರುತ್ತಿದೆ. ಹೀಗೆ ಓಜೋನ್ ಸೃಷ್ಟಿಯಾಗುವ ಪ್ರಕ್ರಿಯೆಗಿಂತ ಕ್ಷಿಣಿಸುವ ಪ್ರಕ್ರಿಯೆ ಹೆಚ್ಚಾದಂತೆ ಓಜೋನ್ ಪದರ ತೆಳುವಾಗುತ್ತಲೇ ಬರುತ್ತದೆ. ಒಟ್ಟಿನಲ್ಲಿ ತೆಳುವಾದ ಒಜೋನ್ ಪದರ ಸೂರ್ಯನ ನೆರಳಾತೀತ ಕಿರಣಗಳನ್ನು ತಡೆಯಲರದೇ, ಭೂಮಿಗೆ ನೇರವಾಗಿ ಸೇರಿಕೊಂಡು ಜೀವರಾಶಿಗಳ ಮೇಲೆ, ಮನುಕುಲದ ಮೇಲೆ ಮಾರಕವಾದ ದಾಳಿ ನಡೆಸುತ್ತದೆ.
OZONE LAYER
ಓಜೋನ್ ಪದರ ಕರಗಲು ಕಾರಣಗಳು ಏನು?
ಓಜೋನ್ ಪದರ ಕರಗಲು ಮುಖ್ಯ ಕಾರಣಗಳು ಬೆಳೆಯುತ್ತಿರುವ ಕೈಗಾರಿಕೀಕರಣ ಎಂದರೂ ತಪ್ಪಲ್ಲ. ಕಾಡು ಕಡಿದು ಕಾಂಕ್ರೀಟ್ ಜಂಗಲ್ ಮಾಡಿಕೊಂಡು ಆಧುನೀಕತೆಯ ನೆಪದಲ್ಲಿ ಪರಿಸರ ವಿರೋಧಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವುದೇ ಬಹಳ ದೊಡ್ಡ ದುರಂತ ಎಂದರೂ ತಪ್ಪಲ್ಲ. ಕಾರ್ಖಾನೆಗಳಿಂದ ಹೊರಹೊಮ್ಮುವ ವಿಷಕಾರಕ ಅನಿಲಗಳು, ವಾಹನಗಳಿಂದ ಹೊರಸೂಸುವ ಹೊಗೆ, ಧೂಮಪಾನ, ಹವಾನಿಯಂತ್ರಕ ಯಂತ್ರಗಳಿಂದ ಹೊರಸೂಸುವ ವಿಷಾನಿಲಗಳು, ಶಿಥಿಲೀಕರಣ ಯಂತ್ರದಿಂದ ಹೊರಹೊಮ್ಮುವ ಅನಿಲಗಳು ಖಂಡಿತವಾಗಿಯೂ ಓಜೋನ್ ಪದರಕ್ಕೆ ಮಾರಕವಾಗಬಲ್ಲದು. ಮಥೇನ್, ಕಾರ್ಬನ್ ಮೋನೋಕ್ಸೈಡ್, ಕ್ಲೋರೋಪ್ಲೋರೋ ಕಾರ್ಬನ್, ಕ್ಲೋರಿನ್ ಬ್ರೋಮಿನ್, ಮಿಥೈಲ್ ಬ್ರೋಮೈಡ್, ಹೈಡ್ರೋ ಪ್ಲೋರೋಕಾರ್ಬನ್ ಮುಂತಾದ ಅನಿಲಗಳು ಓಜೋನ್ ಪದರವನ್ನು ತೆಳುವಾಗಿಸುವಲ್ಲಿ ಪ್ರಮುಖ ಭೂಮಿಕೆ ವಹಿಸುತ್ತದೆ.
ಓಜೋನ್ ಪದರ ತೆಳುವಾದಲ್ಲಿ ಉಂಟಾಗುವ ಅನಾಹುತಗಳು
ಆಕ್ಸ್‍ಪರ್ಡ್ ವಿಶ್ವ ವಿದ್ಯಾಲಯದ ಹಿರಿಯ ವಿಜ್ಞಾನಿ ಡಾಬ್ಸನ್ ಎಂಬಾತ ಓಜೋನ್ ಅನಿಲದ ಪ್ರಮಾಣವನ್ನು ಸಂಶೋಧನಾತ್ಮಕವಾಗಿ ಮೊದಲಿಗೆ ದಾಖಲಿಸಿದರು. ಅವರ ನೆನಪಲ್ಲಿ ಓಜೋನ್ ಪದರದ ಅಳತೆಗೆ ಡಾಬ್ಸನ್ ಯುನಿಟ್ ಎಂದೇ ನಾಮಕರಣ ಮಾಡಲಾಯಿತು. ಈ ಪದರ 290 ರಿಂದ 310ರ ವರೆಗಿದ್ದಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ 290ಕ್ಕಿಂತ ಕಡಿಮೆಯಾದಲ್ಲಿ ಮನುಕುಲ ಮತ್ತು ಜೀವ ಸಂಕುಲಕ್ಕೆ ಖಂಡಿತವಾಗಿಯೂ ಮಾರಕವಾಗುತ್ತದೆ ಎಂದು ತಿಳಿದು ಬಂದಿದೆ. ಓಜೋನ್ ಪದರ ತೂತಾಗಿದೆ ಎಂದು ಆಡು ಮಾತಲ್ಲಿ ಹೇಳುವುದು ಇದರ ನಿಜವಾದ ಅರ್ಥ, ಓಜೋನ್ ಪದರ 290 ಡಾಬ್ಸನ್ ಯುನಿಟ್‍ಗಿಂತಲೂ ತೆಳುವಾಗಿ ತನ್ನ ಜೀವ ರಕ್ಷಕ ಸಾಮಥ್ರ್ಯವನ್ನು ಕಳಕೊಂಡಿದೆ ಎಂಬುದಾಗಿರುತ್ತದೆ. ಓಜೋನ್ ಪದರ ತೆಳುವಾದಲ್ಲಿ ಮನುಷ್ಯನ ಆರೋೀಗ್ಯದಲ್ಲಿ ಏರುಪೇರಾಗಿ ಚರ್ಮದ ಕ್ಯಾನ್ಸರ್ ಬರಬಹುದು. ಭೂಮಂಡಲದ ಇತರ ಜೀವ ಸಂಕುಲಗಳು ನಾಶವಾಗಿ ಪರಿಸರದ ಸಮತೋಲನ ತಪ್ಪಬಹುದು. ಭೂಮಿಯ ಫಲವತ್ತತೆ ಕಡಿಮೆಯಾಗಿ ಬರಡು ಭೂಮಿಯಾಗಲೂ ಬಹುದು. ಶುದ್ಧ ನೀರಿನ ಕೊರತೆಯೂ ಕಾಡಬಹುದು. ಒಟ್ಟಿನಲ್ಲಿ ಭೂಮಂಡಲ ಜೀವಿಸಲು ಯೋಗ್ಯವಾದ ಸ್ಥಳವಾಗಿ ಖಂಡಿತವಾಗಿಯೂ ಉಳಿಯದು ಎಂಬುದು ಸಾರ್ವಕಾಲಿಕ ಸತ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಗಾಢವಾಗಿ ಯೋಚಿಸಿ ಪರಿಸರಕ್ಕೆ ಮಾರಕವಾಗುವ ಯಾವುದೇ ಕೈಗಾರೀಕೀಕರಣ ಯೋಜನೆಗಳು ಮತ್ತು ಪರಿಸರಕ್ಕೆ ಮಾರಕವಾಗುವ ಅನಿಲಗಳನ್ನು ಹೊರಸೂಸುವ ಯಂತ್ರೋಪಕರಣಗಳ ಬಳಕೆಯನ್ನು ಕಡಿಮೆ ಮಾಡಿ ಭೂಮಂಡಲವನ್ನು ನಮ್ಮ ನಂತರದ ಪೀಳಿಗೆಗೆ ವಾಸಕ್ಕೆ ಯೋಗ್ಯವಾದ ಸ್ಥಳವಾಗಿ ಉಳಿಸಿಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.
ನಮ್ಮ ಜೀವನಶೈಲಿ, ಬದುಕಿನಪದ್ಧತಿ, ಆಹಾರ ಪದ್ಧತಿಯನ್ನು ಪರಿಸರಕ್ಕೆ ಪೂರಕವಾಗಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಇಲ್ಲವಾದಲ್ಲಿ ಇನ್ನೊಂದು ಶತಮಾನ ಕಳೆಯುವ ಹೊತ್ತಿಗೆ ನಮ್ಮ ಫಲವತ್ತ್ತಾದ ಭೂಮಂಡಲ ಬಂಜರು ಭೂಮಿಯಾಗಿ ಮರುಳುಗಾಡಾಗಿ ಪರಿವರ್ತತೆಯಾಗಲೂ ಬಹುದು.
ವಿಶ್ವ ಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಗತ್ತಿನಲ್ಲಿ ಅತೀ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಚೀನಾಕ್ಕೆ ದೊರಕಿದೆ ಅದೇ ರೀತಿ ಅತೀ ಕಡಿಮೆ ಇಂಗಾಲ ಹೊರಸೂಸುವ ರಾಷ್ಟ್ರವಾಗಿ ಇಥಯೋಪಿಯಾ ಹೊರಹೊಮ್ಮಿದೆ. ನಮ್ಮ ಭಾರತ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಇಂಗಾಲ ಹೊರಸೂಸುವ ದೇಶವಾಗಿದೆ. ಬೆಳವಣಿಗೆಯ ಧಾವಂತದಲ್ಲಿ ಕೈಗಾರೀಕರಣದ ಅನಿವಾರ್ಯತೆಯಲ್ಲಿ ಆರ್ಥಿಕತೆಯನ್ನು ಸದೃಢಗೊಳಿಸುವ ಪ್ರಕ್ರಿಯೆಯಲ್ಲಿ ಇಂತಹ ಬೆಳವಣಿಗೆಗಳು ನಡೆಯುವುದು ಸಹಜ. ಆದರೆ ಪರಿಸರ ಮತ್ತು ಆಧುನೀಕರಣ ಇವುಗಳ ನಡುವಿನ ಹೊಂದಾಣಿಕೆಯನ್ನು ತೂಗಿಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ. ಜಗತ್ತಿನ ಇತರ ರಾಷ್ಟ್ರಗಳ ಜತೆಗಿನ ಪೈಪೋಟಿಯಲ್ಲಿ, ಕೈಗಾರೀಕೀಕರಣದ ಮತ್ತು ಔದ್ಯೋಗೀಕರಣದ ನೆಪದಲ್ಲಿ ಹೆಚ್ಚು ಹೆಚ್ಚು ಹಸಿರುಮನೆ ಅನಿಲಗಳನ್ನು ಅಂದರೆ ಕಾರ್ಬನ್ ಡೈ ಆಕ್ಸೈಡ್, ಮಿಥೆನ್, ನೈಟ್ರನ್ ಆಕ್ಸೈಡ್ ಗಳನ್ನು ಪರಿಸರಕ್ಕೆ ಸೇರಿಸಿದಲ್ಲಿ ನಮ್ಮ ನಂತರದ ಪೀಳಿಗೆಯ ಜನಾಂಗ ಬದುಕಲು, ಉಸಿರಾಡಲು ಪರದಾಡಬೇಕಾದ ಕಾಲಬಂದರೂ ಬರಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಚಿಂತಿಸಿ ಮುಂದುವರಿಯಬೇಕಾದ ಕಾಲ ಬಂದೊದಗಿದೆ ಎಂದರೂ ತಪ್ಪಲ್ಲ. ಒಟ್ಟಿನಲ್ಲಿ ನಮ್ಮ ಮುಂದಿನ ಜನಾಂಗಕ್ಕೂ ಬದುಕಲು ಪೂರಕವಾದ ವಾತಾವರಣ ಮತ್ತು ಭೂಮಂಡಲದ ಫಲವತ್ತತೆಯನ್ನು ಉಳಿಸಿಕೊಳ್ಳುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ.
JNANASELE

Academy Awards (Oscars) ಆಸ್ಕರ್ ಅವಾರ್ಡ್ಸ್ 2018

ಲಾಸ್ ಏಂಜಲಿಸ್: ಗಿಲ್ಲೆರ್ವೊ ಡೆಲ್ ಟೋರೊ ನಿರ್ದೇಶನದ `ದ ಶೇಪ್ ಆಫ್ ವಾಟರ್’ ಚಿತ್ರ 2018 ನೇ ಸಾಲಿನ ಅತ್ಯುತ್ತಮ ಚಿತ್ರಕ್ಕಾಗಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಚಿತ್ರವೂ 13 ವಿಭಾಗಗಳಲ್ಲಿ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶಕ ಗಿಲ್ಲೆರ್ವೊ ಡೆಲ್ ಟೋರೊಗೆ ಸಿಕ್ಕಿದೆ.


ಅತ್ಯುತ್ತಮ ನಟಿಯಾಗಿ `ಥ್ರೀ ಬಿಲ್‍ಬೋರ್ಡ್ಸ್ ಔಟ್‍ಸೈಡ್ ಎಬ್ಬಿಂಗ್’ ಚಿತ್ರದ ನಟಿ ಫ್ರಾನ್ಸಿಸ್ ಮೆಕ್ಡೋರ್ಮಂಡ್ ಅವರಿಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ನಟನಾಗಿ `ಡಾರ್ಕೆಸ್ಟ್ ಅವರ್’  ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಗ್ಯಾರಿ ಓಲ್ಡ್ ಮ್ಯಾನ್ ಅವರಿಗೆ ಲಭಿಸಿದೆ.

ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮೂರು ಕುದುರೆಗಳ ಓಟ ಎಂಬಂತೆ ಫ್ರಾನ್ಸಿಸ್ `ಥ್ರೀ ಬಿಲ್‍ಬೋರ್ಡ್ಸ್ ಓಟ್‍ಸೈಡ್ ಎಬ್ಬಿಂಗ್ ಚಿತ್ರಕ್ಕೆ, `ಮಿಸ್ಸೌರಿ’ ಚಿತ್ರದ ನಟ ಸ್ಯಾಮ್ ರೋಕ್‍ವೆಲ್, `ದ ಫ್ಲೋರಿಡಾ ಪ್ರೋಜೆಕ್ಟ್ಸ್’ ಚಿತ್ರಕ್ಕೆ ವಿಲ್ಲೆಮ್ ಡಾಫೂ ಮತ್ತು `ಆಲ್ ದ ಮನಿ ಇನ್ ದ ವರ್ಲ್ದ್’ ಚಿತ್ರದ ನಟ ಕ್ರಿಸ್ಟೊಫರ್ ಪ್ಲಂಮ್ಮರ್ ನಡುವೆ `ಮಿಸ್ಸೌರಿ’ ಚಿತ್ರದ ನಟ ಸ್ಯಾಮ್ ರೋಕ್‍ವೆಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇವರ ಜೊತೆ ಅದೇ ಚಿತ್ರದ ನಟ ವುಡ್ಡಿ ಹಾರೆಲ್‍ ಸನ್ ಅವರಿಗೂ ಪ್ರಶಸ್ತಿ ಲಭಿಸಿದೆ.

ಕ್ರಿಸ್ಟೊಫರ್ ನೋಲಾನ್ ಅವರ `ಡಂಕಿರ್ಕ್’ ಚಿತ್ರವೂ ಅತ್ಯುತ್ತಮ ಸೌಂಡ್ ಮತ್ತು ಫಿಲ್ಮ್ ಎಡಿಟಿಂಗ್ ಗೆ ಮೂರು ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. `ಡಾರ್ಕೆಸ್ಟ್ ಅವರ್’ ಚಿತ್ರ ತಂಡವೂ ಗ್ಯಾರಿ ಓಲ್ಡ್ ಮ್ಯಾನ್ ಅವರನ್ನ ವಿನ್ಸೆಂಟ್ ಚರ್ಚಿಲ್ ಆಗಿ ಅದ್ಭುತವಾಗಿ ರೂಪಾಂತರ ಮಾಡಿರುವುದಕ್ಕೆ ಅತ್ಯುತ್ತಮ ಮೇಕಪ್‍ಗೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಪಾತ್ರಕ್ಕಾಗಿ ಗ್ಯಾರಿ ಓಲ್ಡ್ ಮ್ಯಾನ್ ಅವರಿಗೆ ಸತತ ನಾಲ್ಕು ಗಂಟೆಗಳ ಕಾಲ ಮೇಕಪ್ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.

`ಕಾಲ್ ಮಿ ಬೈ ಯುವರ್ ನೇಮ್’, `ಫ್ಯಾಂಟಮ್ ತ್ರೆಡ್’ ಮತ್ತು `ಗೆಟ್ ಔಟ್’ ಚಿತ್ರದ ಆಫ್ರಿಕ್-ಅಮೇರಿಕನ್ ನಿರ್ದೇಶಕ ಮತ್ತು ಬರಹಗಾರ ಜೊರ್ಡ್‍ನ್ ಪೀಲೆ ತನ್ನ ಅತ್ಯುತ್ತಮ ಮೂಲ ಚಿತ್ರಕಥೆಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಜಿಮ್ಮಿ ಕಿಮ್ಮೆಲ್ ಸತತ ಎರಡನೇ ಬಾರಿ ಕಾರ್ಯಕ್ರಮದ ನಿರೂಪಕರಾಗಿದ್ದು, ಕಳೆದ ಬಾರಿ ಅತ್ಯುತ್ತಮ ಪ್ರಶಸ್ತಿಯನ್ನು ಪ್ರಸ್ತುತಪಡಿಸಿದ್ದ ವಾರೆನ್ ಬಿಯಟ್ಟಿ ಮತ್ತು ಫಾಯೆ ಡನವೇ ಈ ಸಲದ ಪ್ರಶಸ್ತಿಯನ್ನ ಪ್ರಸ್ತುತಪಡಿಸಿದರು.

ಅತ್ಯುತ್ತಮ ಚಿತ್ರ: ದ ಶೇಪ್ ಆಫ್ ವಾಟರ್

ಅತ್ಯುತ್ತಮ ನಿರ್ದೇಶಕ: ಗಿಲ್ಲೆರ್ವೊ ಡೆಲ್ ಟೋರೊ

ಅತ್ಯುತ್ತಮ ನಟಿ: ಫ್ರಾನ್ಸಿಸ್ ಮೆಕ್ಡೋರ್ಮಂಡ್, `ಥ್ರೀ ಬಿಲ್‍ಬೋರ್ಡ್ಸ್ ಔಟ್‍ಸೈಡ್ ಎಬ್ಬಿಂಗ್’

ಅತ್ಯುತ್ತಮ ನಟ: ಗ್ಯಾರಿ ಓಲ್ಡ್ ಮ್ಯಾನ್, `ಡಾರ್ಕೆಸ್ಟ್ ಅವರ್’

ಅತ್ಯುತ್ತಮ ಪೋಷಕ ನಟ: ಸ್ಯಾಮ್ ರೋಕ್‍ವೆಲ್, `ಮಿಸ್ಸೌರಿ’

ಅತ್ಯುತ್ತಮ ಪೋಷಕ ನಟಿ: ಆಲಿಸನ್ ಜೆನ್ನಿ ಐ, ತೋನ್ಯ

ಅತ್ಯುತ್ತಮ ಮೂಲ ಚಿತ್ರಕಥೆ: ಗೆಟ್ ಔಟ್

ಅತ್ಯುತ್ತಮ ವಿದೇಶಿ ಭಾಷಾ ಚಿತ್ರ: ಎ ಫೆಂಟ್ಯಾಸ್ಟಿಕ್ ವುಮೆನ್

ಅತ್ಯುತ್ತಮ ಮೂಲ ಸ್ಕೋರ್: ದ ಶೇಪ್ ಆಫ್ ವಾಟರ್

ಅತ್ಯುತ್ತಮ ಮೂಲ ಗೀತೆ: ರಿಮೆಂಬರ್ ಮೀ, ಕೊಕೊ

ಅತ್ಯುತ್ತಮ ಡಾಕ್ಯುಮೆಂಟರಿ ಚಿತ್ರ: ಇಕರಸ್



https://gkjnanasele.blogspot.com/
Academy Awards (Oscars)

Academy Awards (Oscars)
The 90th Academy Awards commonly referred to as Oscars was held at the Dolby Theatre in Hollywood, Los Angeles, California (US). The award presented in 24 categories by Academy of Motion Picture Arts and Sciences (AMPAS), honouring best films of year 2017.

The Shape of Water won the most number of awards totaling to four at the ceremony after it was nominated into highest 13 categories. It was followed by Dunkirk, nominated for eight categories and Three Billboards Outside Ebbing, Missouri, nominated for seven categories.
Winners are

Best Picture: The Shape of Water.

Best Actress: Frances McDormand (Three Billboards Outside Ebbing, Missouri as Mildred Hayes).

Best Actor: Gary Oldman (Darkest Hour as Winston Churchill)

Best Director: Guillermo del Toro (The Shape of Water).

Best Supporting Actress: Allison Janney – I (Tonya)

Best Supporting Actor: Sam Rockwell (Three Billboards Outside Ebbing, Missouri)

Best Original Screenplay: Get Out – Written by Jordan Peele.

Best Adapted Screenplay: Call Me by Your Name – James Ivory based on the novel by André Aciman.

Best Cinematography: Blade Runner 2049 – Roger A. Deakins

Best Original Score: The Shape of Water – Alexandre Desplat.

Best Original Song: “Remember Me” from Coco.

Best Sound Editing: Dunkirk – Richard King and Alex Gibson.

Best Foreign Language Film: A Fantastic Woman (Chile) in Spanish.

Best Film Editing: Dunkirk

Best Visual Effects: Blade Runner 2049.

Best Production Design: The Shape of Water.

Best Sound Mixing: Dunkirk

Best Documentary-Feature: Icarus.

Best Animated Feature Film: Coco.

Best Animated Short Film: Dear Basketball.

Best Documentary-Short Subject: Heaven Is a Traffic Jam on the 405

Best Live Action Short Film: The Silent Child.

Best Make-Up and Hairstyling: Darkest Hour

Best Costume Design: Phantom Thread


Academy Awards, famously known as “Oscars” is a group of 24 artistic and technical honours that recognizes excellence in cinematic achievements in US film industry. It is given annually by the Academy of Motion Picture Arts and Sciences (AMPAS). The award was first presented in 1929. The winners are awarded a copy of a statuette officially called the Academy Award of Merit (famously referred as Oscar Award).

Monday, 19 February 2018

ಪ್ರಚಲಿತ ಘಟನೆಗಳ ಕ್ವಿಜ್ 31/01/2018

1) ಭಾರತವು ಯಾವ ದೇಶದೊಂದಿಗೆ 'ವಿನ್ಬಾಕ್ಸ್'  ('VINBAX')ಎಂಬ ಸಮರಾಭ್ಯಾಸವನ್ನು ನಡೆಸುತ್ತಿದೆ?
a) ಜಪಾನ್
b) ವಿಯೆಟ್ನಾಂ✔✔
c) ಇರಾಕ್
d) ಭೂತಾನ್
📓📓📓📓📓📓📓📓📓📓📓📓📓
2) ಕೆಳಗಿನ ಯಾವ  ಬಾಲಿವುಡ್ ಹಿನ್ನೆಲೆ ಗಾಯಕನಿಗೆ ಯಾಶ್ ಚೋಪ್ರಾ ಸ್ಮಾರಕ ಪ್ರಶಸ್ತಿ ನೀಡಲಾಗುವುದು?
a) ಸೋನು ನಿಗಮ್
b) ಲತಾ ಮಂಗೇಶ್ಕರ್
c) ಆಶಾ ಭೋಂಸ್ಲೆ✔✔
d) A.R. ರೆಹಮಾನ್
📓📓📓📓📓📓📓📓📓📓📓📓📓
3)  ಮೂರು ದಿನಗಳ ಅಂತರಾಷ್ಟ್ರೀಯ ಪಕ್ಷಿ ಉತ್ಸವವನ್ನು ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಲಾಗುವುದು?
a) ರಣಥಂಬೋರ್ ರಾಷ್ಟ್ರೀಯ ಉದ್ಯಾನವನ
b) ದುಧ್ವಾ ರಾಷ್ಟ್ರೀಯ ಉದ್ಯಾನವನ✔✔
c) ಬಂಡೀಪುರ ರಾಷ್ಟ್ರೀಯ ಉದ್ಯಾನವನ
d) ಬಾಂದವ್ಗಡ್ ರಾಷ್ಟ್ರೀಯ ಉದ್ಯಾನವನ
📓📓📓📓📓📓📓📓📓📓📓📓📓
4) ಭಾರತೀಯ ಸಂಸದೀಯ ಸಮೂಹವು ಎಷ್ಟು ಸಂಸತ್ ಸದಸ್ಯರನ್ನು 'ಅತ್ಯುತ್ತಮ ಸಂಸದೀಯ' ಪ್ರಶಸ್ತಿಗಳಿಗೆ ಆಯ್ಕೆ ಮಾಡಿದೆ ಎಂದು ಘೋಷಿಸಿತು.
a) 6
b) 4
c) 5✔✔
d) 9
📓📓📓📓📓📓📓📓📓📓📓📓📓
5) ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್ನರ್ಶಿಪ್ ಫೋರಮ್ ನ  ಉಪಾಧ್ಯಕ್ಷರಾಗಿ ಯಾರು ಆಯ್ಕೆಯಾದರು ?
a) ಸತ್ಯ ನಾಡೆಲ್ಲ
b) ಜೆಫ್ ಬೆಜೊಸ್
c) ಟ್ರಾವಿಸ್ ಕಲಾನಿಕ್
d) ಶಂತನು ನಾರಾಯಣ್✔✔
📓📓📓📓📓📓📓📓📓📓📓📓📓
6) ಇತ್ತೀಚೆಗೆ ಅತೀ ಹಿಂದುಳಿದ ವರ್ಗಗಳಿಗೆ 1% ಮೀಸಲಾತಿಯನ್ನು ನೀಡಲು ಯಾವ ರಾಜ್ಯ ಆದೇಶ ನೀಡಿದೆ?
a) ಗುಜರಾತ್
b) ರಾಜಸ್ಥಾನ ✔✔
c) ಸಿಕ್ಕಿಂ
d) ಹರ್ಯಾಣಾ
📓📓📓📓📓📓📓📓📓📓📓📓📓
7) 'ಅಂತರಾಷ್ಟ್ರೀಯ ಕೋಲ್ಕತಾ ಪುಸ್ತಕೋತ್ಸವ 2018' ರ 42 ನೇ ಆವೃತ್ತಿಯನ್ನು ಯಾವ ದೇಶದ ಪಾಲುದಾರಿಕೆಯಲ್ಲಿ ನಡೆಸಲಾಗುತ್ತಿದೆ?
a) ಜರ್ಮನಿ
b) ರಷ್ಯಾ
c) ಫ್ರಾನ್ಸ್ ✔✔
d) ಮಲೆಷ್ಯಾ
📓📓📓📓📓📓📓📓📓📓📓📓📓
8) ಇತ್ತೀಚೆಗೆ ವಿಜ್ಞಾನಿಗಳು ಉದ್ದನೆಯ ಕುತ್ತಿಗೆ, ನಾಲ್ಕು ಕಾಲಿನ, ಶಾಲಾ ಬಸ್ ಗಾತ್ರದ ಡೈನೋಸಾರ್ ನ ಪಳೆಯುಳಿಕೆಗಳನ್ನು ಎಲ್ಲಿ ಪತ್ತೆ ಮಾಡಿದ್ದಾರೆ?
a) ಭಾರತೀಯ ಉಪಖಂಡ
b) ಥಾರ್ ಮರಭೂಮಿ
c) ಅಂಟಾರ್ಟಿಕಾ
d) ಸಹಾರಾ ಮರುಭೂಮಿ✔✔
📓📓📓📓📓📓📓📓📓📓📓📓📓
9) ಯಾವ ಬ್ಯಾಂಕ್ ರೈತರಿಗೆ ಕ್ರೆಡಿಟ್ ಕಾರ್ಡ್ಗಳನ್ನು ನೀಡಲು ಮುಂದಾಗಿದೆ?
a) ಎಸ್.ಬಿ.ಆಯ್.✔✔
b) ಐಸಿಐಸಿಐ
c) ಡಿಬಿಎಸ್
d) ಕೆನರಾ
📓📓📓📓📓📓📓📓📓📓📓📓📓
10) ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮಂಜೂರು ಮಾಡಿದ ಮಸೂದೆಯ ಪ್ರಕಾರ ಮುಖ್ಯ ನ್ಯಾಯಮೂರ್ತಿ ಈಗ ತಿಂಗಳಿಗೆ ಎಷ್ಟು ಸಂಬಳ ಪಡೆಯುತ್ತಾರೆ?
a) ರೂ. 2.6  ಲಕ್ಷ
b) ರೂ. 2.8 ಲಕ್ಷ✔✔
c) ರೂ. 2 ಲಕ್ಷ
d) ರೂ. 2.5 ಲಕ್ಷ
📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 30/01/2018

1) ಆರ್ಥಿಕ ಸಮೀಕ್ಷೆ 2017-18 ನ್ನು ಸಂಸತ್ತಿನಲ್ಲಿ ಮಂಡಿಸಿದ್ದು , ಆರ್ಥಿಕ ಬೆಳವಣಿಗೆಯ ಮಧ್ಯೆ ಲಿಂಗ ಸಮಸ್ಯೆಗಳನ್ನು ಹೈಲೈಟ್ ಮಾಡಲು ಯಾವ ಬಣ್ಣದಲ್ಲಿ ಅದನ್ನು ಮುದ್ರಿಸಲಾಗಿತ್ತು?
a) ಹಸಿರು
b) ಕೆಂಪು
c) ಗುಲಾಬಿ ✔✔
d) ಕಪ್ಪು
📓📓📓📓📓📓📓📓📓📓📓📓📓📓

2) ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವಾದ 'ಮೈತ್ರೈಯಿ ಯಾತ್ರಾ' ಎಲ್ಲಿ  ನಡೆಯಿತು?
a) ಶ್ರೀನಗರ
b) ಮುಂಬೈ
c) ಲೆಹ್
d) ನವದೆಹಲಿ ✔✔
📓📓📓📓📓📓📓📓📓📓📓📓📓📓
3) "ಮಹಾತ್ಮ ಗಾಂಧಿ ಸರಬಾತ್ ವಿಕಾಸ್ ಯೋಜನೆ" ಯ ಅಡಿಯಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿ ಇತ್ತೀಚೆಗೆ ಪ್ರಯೋಜನಗಳನ್ನು ಬಿಡುಗಡೆ ಮಾಡಿದರು ?
a) ಹರ್ಯಾಣಾ
b) ಪಂಜಾಬ್ ✔✔
c) ಜಮ್ಮು ಮತ್ತು ಕಾಶ್ಮೀರ
d) ಝಾರ್ಖಂಡ್
📓📓📓📓📓📓📓📓📓📓📓📓📓📓
4) ಪುರುಷರ ಆಸ್ಟ್ರೇಲಿಯನ್ ಓಪನ್ 2018 ಗೆದ್ದವರು ಯಾರು?
a) ರೋಜರ್ ಫೆಡರರ್✔✔
b) ರಾಫೆಲ್ ನಡಾಲ್
c) ಫ್ಯಾಬಿಯೊ ಫಾಗ್ನಿನಿ
d) ನೊವಾಕ್ ಜೊಕೊವಿಕ್
📓📓📓📓📓📓📓📓📓📓📓📓📓📓
5) ಇತ್ತೀಚೆಗೆ ನಿಧನರಾದ ಮೊರ್ಟ್ ವಾಕರ್ ಒಬ್ಬ  ಪ್ರಸಿದ್ಧ ________.
a) ಬರಹಗಾರ
b) ಪತ್ರಕರ್ತ
c) ಕಾರ್ಟೂನಿಸ್ಟ್✔✔
d) ನಟ
📓📓📓📓📓📓📓📓📓📓📓📓📓📓
6) ಕೆಳಗಿನ ಅಣೆಕಟ್ಟುಗಳಲ್ಲಿ ಯಾವ ಅಣೆಕಟ್ಟಲ್ಲಿ ಕೇರಳದ ಇತಿಹಾಸವನ್ನು ತೋರಿಸುವ ಲೇಸರ್ ಪ್ರದರ್ಶನವನ್ನು ಪ್ರದರ್ಶಿಸಲು ಯೋಜಿಸಲಾಗುತ್ತಿದೆ?
a) ಮುಲ್ಲಪೆರಿಯಾರ್ ಅಣೆಕಟ್ಟು
b) ಪರಂಬಿಕುಲಂ ಅಣೆಕಟ್ಟು
c) ನೆಯ್ಯರ್ ಅಣೆಕಟ್ಟು
d) ಇಡುಕ್ಕಿ ಅಣೆಕಟ್ಟು✔✔
📓📓📓📓📓📓📓📓📓📓📓📓📓📓
7) ಇತ್ತೀಚೆಗೆ ಇಂಡೋನೇಷ್ಯಾ ಮಾಸ್ಟರ್ಸ್ 2018 ಗೆದ್ದವರು ಯಾರು?
a) ಸೈನಾ ನೆಹ್ವಾಲ್
b) ಪಿ.ವಿ. ಸಿಂಧು
c) ಸಯಾಲಿ ಗೋಖಲೆ
d) ತೈ ಝು ಯಿಂಗ್✔✔
📓📓📓📓📓📓📓📓📓📓📓📓📓📓
8) ಆರ್ಥಿಕ ಸಮೀಕ್ಷೆ 2017-18 ಪ್ರಕಾರ  ಎಷ್ಟು ರಾಜ್ಯಗಳು ಮೊದಲ ಬಾರಿಗೆ ಭಾರತದ ರಫ್ತುಗಳಲ್ಲಿ 70% ರಷ್ಟು ಪಾಲನ್ನು ಪಡೆದಿವೆ?
a) ಆರು
b) ಮೂರು
c) ಐದು✔✔
d) ಏಳು
📓📓📓📓📓📓📓📓📓📓📓📓📓📓
9) ಯು.ಎಸ್. ಅಧ್ಯಕ್ಷ ಡೊನಾಲ್ಡ್ ಟ್ರಮ್ಪ್ ಅವರ ಭೇಟಿಗೆ ವಿರುದ್ಧವಾಗಿ "ಬ್ರಿಟಿಷ್ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರತಿಭಟನೆ"ಯನ್ನು ಎಲ್ಲಿ ಆಯೋಜಿಸಲಾಗುತ್ತದೆ?
a) ಎಡಿನ್ಬರ್ಗ್
b) ಲಂಡನ್✔✔
c) ಮ್ಯಾಂಚೆಸ್ಟರ್
d) ಲಿವರ್ಪೂಲ್
📓📓📓📓📓📓📓📓📓📓📓📓📓📓
10) ನ್ಯಾಯಾಂಗ ಪ್ರಕ್ರಿಯೆಯಲ್ಲಿ ಆಗಾಗ್ಗೆ ಆಗುತ್ತಿರುವ ವಿಳಂಬವನ್ನು ಎತ್ತಿ ತೋರಿಸುವುದಕ್ಕಾಗಿ ಯಾವ ನಟನ ಸಂಭಾಷಣೆಯನ್ನು ಆರ್ಥಿಕ ಸಮೀಕ್ಷೆ 2017-18ರಲ್ಲಿ ಉಲ್ಲೇಖಿಸಲಾಗಿದೆ?
a) ಶಾರುಖ್ ಖಾನ್
b) ಅಮಿತಾಭ್ ಬಚ್ಚನ್
c) ಸನ್ನಿ ಡಿಯೋಲ್✔✔
d) ಸಂಜಯ್ ದತ್
📓📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 29/01/2018

1) ಆಸ್ಟ್ರೇಲಿಯನ್ ಓಪನ್ 2018 ಮಹಿಳಾ ಸಿಂಗಲ್ಸ್ ಗೆದ್ದವರು ಯಾರು?
a) ಸೆರೆನಾ ವಿಲಿಯಮ್ಸ್
b) ಸಿಮೋನಾ ಹಾಲೆಪ್
c) ಕ್ಯಾರೋಲಿನ್ ವೊಜ್ನಿಯಾಕಿ✔✔
d) ಅನಾ ಐವನೊವಿಕ್
📓📓📓📓📓📓📓📓📓📓📓📓📓📓
2) ಕೆಳಗಿನ ದೇಶಗಳಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಾವ ದೇಶವು ಅಗ್ರ ಶ್ರೇಯಾಂಕದ ಟಿ 20 ತಂಡವಾಗಿದೆ?
a) ಪಾಕಿಸ್ತಾನ ✔✔
b) ಭಾರತ
c) ಆಸ್ಟ್ರೇಲಿಯಾ
d) ನ್ಯೂಜಿಲೆಂಡ್
📓📓📓📓📓📓📓📓📓📓📓📓📓📓
3) ಇತ್ತೀಚೆಗೆ ಇ-ವಾಣಿಜ್ಯ ಪ್ರಮುಖ ಅಮೆಜಾನ್ ಭಾರತದಲ್ಲಿನ ತನ್ನ  ಮಾರಾಟ ಸೇವೆಗಳಿಗೆ ಎಷ್ಟು  ಕೋಟಿ ಹೂಡಿಕೆ ಮಾಡಿತು?
a) ರೂ 1850 ಕೋಟಿ
b) ರೂ 1950 ಕೋಟಿ ✔✔
c) ರೂ 1650 ಕೋಟಿ
d) ರೂ 1500 ಕೋಟಿ
📓📓📓📓📓📓📓📓📓📓📓📓📓📓
4) ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 31 ನೇ ಸ್ಥಾನದಿಂದ ________ ಸ್ಥಾನಕ್ಕೆ ತೆರಳಿದ್ದಾರೆ.
a) 28 ನೇ
b) 25 ನೇ
c) 27 ನೇ
d) 26 ನೇ✔✔
📓📓📓📓📓📓📓📓📓📓📓📓📓📓
5) ಇತ್ತೀಚೆಗೆ ನಿಧನರಾದ ಇಂಗಾರ್ ಕಂಪಾಡ್ ಯಾವ ಪ್ರಸಿದ್ಧ ಪೀಠೋಪಕರಣ ಕಂಪೆನಿಯ ಸ್ಥಾಪಕರಾಗಿದ್ದಾರೆ?
a) ಕ್ರೇಟ್ & ಬ್ಯಾರೆಲ್
b) ಆಶ್ಲೆ ಪೀಠೋಪಕರಣಗಳು
c) IKEA✔✔
d) ಫಿಲಿಪ್ಸ್
📓📓📓📓📓📓📓📓📓📓📓📓📓📓
6) ಕಾರ್ಟೂನ್ ನೆಟ್ವರ್ಕ್ ವೇವ್ ಎಂಬ ಹೆಸರಿನ ವರ್ಣರಂಜಿತ ಕ್ರೂಸ್ ಹಡಗನ್ನು  ಕಾರ್ಟೂನ್ ನೆಟ್ವರ್ಕ್‌ ಬಿಡುಗಡೆ ಮಾಡಿತು, ಇದು 2018 ರ ಕೊನೆಯಲ್ಲಿ ಎಲ್ಲಿಂದ ನೌಕಾಯಾನ ಮಾಡಲಿದೆ?
a) ಸಿಂಗಾಪುರ್ ✔✔
b) ಚೀನಾ
c) ಮಲೆಷ್ಯಾ
d) ಥೈಲ್ಯಾಂಡ್
📓📓📓📓📓📓📓📓📓📓📓📓📓📓
7) 60 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ಸ್ನಲ್ಲಿ ಆಲ್ಬಮ್ ಆಫ್‌ ದಿ ಯಿಯರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
a) ಟೇಲರ್ ಸ್ವಿಫ್ಟ್
b) ಕೆಂಡ್ರಿಕ್ ಲ್ಯಾಮರ್
c) ಬ್ರೂನೋ ಮಾರ್ಸ್✔✔
d) ಲಾರ್ಡ್ ಬ್ರೂಕಸ್
📓📓📓📓📓📓📓📓📓📓📓📓📓📓
8) 36 ವರ್ಷಗಳಲ್ಲಿ ಕಂಡುಬರದ ಒಂದು ಅಪರೂಪದ ಕಾಸ್ಮಿಕ್ ಘಟನೆ  "ಸೂಪರ್ ರಕ್ತ ನೀಲಿ ಚಂದ್ರ" ________ ರಂದು ಗೋಚರಿಸುತ್ತದೆ?
a) 3 ನೇ ಫೆಬ್ರವರಿ
b) 31 ನೇ ಜನವರಿ✔✔
c) 30 ನೇ ಜನವರಿ
d) 2 ನೇ ಫೆಬ್ರವರಿ
📓📓📓📓📓📓📓📓📓📓📓📓📓📓
9) ಕೆಳಗಿನ ದ್ವೀಪಗಳಲ್ಲಿ, ವಿಸ್ತಾರವಾದ ಸಂವೇದಕ ವ್ಯವಸ್ಥೆಯಾದ ದಿ ಇಂಡಿಯನ್ ಸುನಾಮಿ ಅರ್ಲಿ ವಾರ್ನಿಂಗ್ ಸಿಸ್ಟಮ್ ಎಲ್ಲಿ  ಸ್ಥಾಪಿಸಲ್ಪಡುತ್ತದೆ?
a) ದಿವಾರ್ ದ್ವೀಪ
b) ಲಕ್ಷದ್ವೀಪ ದ್ವೀಪ
c) ಮಜುಲಿ ದ್ವೀಪ
d) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು✔✔
📓📓📓📓📓📓📓📓📓📓📓📓📓📓
10) ಎರಡು ವರ್ಷಗಳ ಕಾಲ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡರು?
a) ಎಸ್ ಜೈಶಂಕರ್
b) ವಿಜಯ್ ಕೇಶವ ಗೋಖಲೆ✔✔
c) ಗೌತಮ್ ಬಾಂನವಾಲೆ
d) ಸುಬ್ರಹ್ಮಣ್ಯಂ ಜೈಶಂಕರ್
📓📓📓📓📓📓📓📓📓📓📓📓📓📓

Thursday, 15 February 2018

ಪ್ರಚಲಿತ ಘಟನೆಗಳ ಕ್ವಿಜ್ 28/01/2018

1) ಇತ್ತೀಚೆಗೆ ಭದ್ರತೆ, ಸಂಪರ್ಕ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು  ಭಾರತ ಯಾವ ದೇಶದೊಂದಿಗೆ 4 ಒಪ್ಪಂದಗಳಿಗೆ ಸಹಿ ಮಾಡಿದೆ.
a) ಕಾಂಬೋಡಿಯಾ ✔✔
b) ವಿಯೆಟ್ನಾಮ್
c) ಮಾಲ್ಡೀವ್ಸ್
d) ಭೂತಾನ್
📓📓📓📓📓📓📓📓📓📓📓📓📓📓
2) ಆಕ್ಸ್ಫರ್ಡ್ ನಿಘಂಟು  ______ ಅನ್ನು 'ಹಿಂದಿ ಪದ 2017' ಎಂದು ಆಯ್ಕೆ ಮಾಡಿದೆ.
a) ಪೆಹಚಾನ್
b) ಆಧಾರ್✔✔
c) ಖಿಚಡಿ
d) ಯಾವುದೂ ಅಲ್ಲ
📓📓📓📓📓📓📓📓📓📓📓📓📓📓
3) ಭಾರತ "ಗೆಸ್ಟ್ ಆಫ್‌ ಹಾನರ್" ಆಗಿರುವ 6 ನೇ ವಿಶ್ವ ಸರ್ಕಾರದ ಶೃಂಗಸಭೆ ಎಲ್ಲಿ ನಡೆಯುತ್ತಿದೆ?
a) ಜಪಾನ್
b) ಕುವೈತ್
c) ದುಬೈ ✔✔
d) ನೇಪಾಳ
📓📓📓📓📓📓📓📓📓📓📓📓📓📓
4) ಇತ್ತೀಚೆಗೆ ನಿಧನರಾದ ಪಂಜಾಬ್ ನ ಹಸಿರು ಕ್ರಾಂತಿಯ ಹರಿಕಾರನಾರು?
a) ಎಂ.ಎಸ್. ಸ್ವಾಮಿನಾಥನ್
b) ರಾಬರ್ಟ್ ಬೇಕ್ವೆಲ್
c) ನಾರ್ಮನ್ ಬೊರ್ಲಾಗ್
d) ಗುರ್ರಾನ್ ಸಿಂಗ್ ಕಲ್ಕತ್✔✔
📓📓📓📓📓📓📓📓📓📓📓📓📓📓
5) ಪಲ್ಸ್ ಪೋಲಿಯೊ ಪ್ರೋಗ್ರಾಂ 2018ರ ಯೋಜನೆಯಲ್ಲಿ ಎಷ್ಟು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರ ಕಾರ್ಯನಿರ್ವಹಿಸುತ್ತಿದೆ ?
a) 15 ಕೋಟಿಗೂ ಅಧಿಕ
b) 16 ಕೋಟಿಗೂ ಅಧಿಕ
c) 17 ಕೋಟಿಗೂ ಅಧಿಕ✔✔
d) 18 ಕೋಟಿಗೂ ಅಧಿಕ
📓📓📓📓📓📓📓📓📓📓📓📓📓📓
6) ಆಸ್ಟ್ರೇಲಿಯನ್ ಓಪನ್ ಅನ್ನು ಯಾರು ಗೆದ್ದಿದ್ದಾರೆ?
a) ಸಿಮೋನಾ ಹಾಲೆಪ್
b) ಕ್ಯಾರೋಲಿನ್ ವೊಜ್ನಿಯಾಕಿ✔✔
c) ಸೆರೆನಾ ವಿಲಿಯಮ್ಸ್
d) ಮರಿಯಾ ಶರಾಪೋವಾ
📓📓📓📓📓📓📓📓📓📓📓📓📓📓
7) ಯಾವ ಸಚಿವಾಲಯವು ಜಿಲ್ಲೆಗಳಲ್ಲಿನ ಸುದ್ದಿಗಳ ಬಗ್ಗೆ ತೀಳಿದುಕೊಳ್ಳಲು ಸಾಮಾಜಿಕ ಮಾಧ್ಯಮ ಸಂವಹನ ಕೇಂದ್ರವನ್ನು ಸ್ಥಾಪಿಸಲು ಯೋಜಿಸಿದೆ ?
a) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
b) ಮಾಹಿತಿ ಮತ್ತು ಪ್ರಸಾರ ಸಚಿವಾಲಯ✔✔
c) a) ಮಾತ್ರ
d) a) & b) ಎರಡು
📓📓📓📓📓📓📓📓📓📓📓📓📓📓
8) ಯಾವ ದಿನವನ್ನು ಅಂತಾರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನವನ್ನಾಗಿ  ಆಚರಿಸಲಾಗುತ್ತದೆ?
a) 24 ಜನವರಿ
b) 25 ಜನವರಿ
c) 26 ಜನವರಿ
d) 27 ಜನವರಿ✔✔
📓📓📓📓📓📓📓📓📓📓📓📓📓📓
9) ಚೆಕ್ ಗಣರಾಜ್ಯದ ಈಗಿನ ಅಧ್ಯಕ್ಷರು ಯಾರು?
a) ಸೈಫ್ ಅಲ್ ಉಸ್ಲಾಂ
b) ಮಿಲೋಸ್ ಝೆಮನ್✔✔
c) ರೌಲ್ ಕ್ಯಾಸ್ಟ್ರೋ
d) ಯಾರೂ ಅಲ್ಲ
📓📓📓📓📓📓📓📓📓📓📓📓📓📓
10) "ದಿಲ್ಲಿ ಮೆರಿ ದಿಲ್ಲಿ: ಬಿಫೋರ್ ಎಂಡ್ ಆಪ್ಟರ್ 1998" ಎಂಬ ಶೀರ್ಷಿಕೆಯ ಪುಸ್ತಕದ ಲೇಖಕರು ಯಾರು?
a) ಶೀಲಾ ದೀಕ್ಷಿತ್✔✔
b) ಆನಂದಬಿಬೆನ್ ಪಟೇಲ್
c) ನರೇಂದ್ರ ಮೋದಿ
d) ಮಮತಾ ಬ್ಯಾನರ್ಜಿ
📓📓📓📓📓📓📓📓📓📓📓📓📓📓

ಪ್ರಚಲಿತ ಘಟನೆಗಳ ಕ್ವಿಜ್ 27/01/2018

1) ಪ್ರಪ್ರಥಮ  ಜಾಗತಿಕ ಹೂಡಿಕೆದಾರರ ಶೃಂಗಸಭೆ ಎಲ್ಲಿ ನಡೆಯಲಿದೆ?
a) ಹರ್ಯಾಣಾ 
b) ಅಸ್ಸಾಂ ✔✔
c) ಮಣಿಪುರ 
d) ಝಾರ್ಖಂಡ್ 
📓📓📓📓📓📓📓📓📓📓📓📓📓📓
2) ಕೇಂದ್ರ ಸರ್ಕಾರವು ಇನ್ನು ಮುಂದೆ ಸ್ವಲೀನತೆ, ಮಾನಸಿಕ ಅಸ್ವಸ್ಥತೆಗಳು, ಬೌದ್ಧಿಕ ಅಸಾಮರ್ಥ್ಯ ಮತ್ತು ಆಸಿಡ್ ದಾಳಿಗೆ ಬಲಿಯಾದವರಿಗೆ ತನ್ನ  ಉದ್ಯೋಗಗಳಲ್ಲಿ ಎಷ್ಟು ಪ್ರತಿಶತ ಹುದ್ದೆಗಳನ್ನು ಕಾಯ್ದಿರಿಸಲಿದೆ?
a) 3
b) 5
c) 4✔✔
d) 6
📓📓📓📓📓📓📓📓📓📓📓📓📓📓
3) ಈ ಕೆಳಗಿನ ಯಾವ ಸ್ಥಳಗಳಿಗೆ ಭೇಟಿ ನೀಡಿದ  ಮೊದಲ ಭಾರತೀಯ ಪ್ರಧಾನಿ ಮೋದಿಯಾಗಿದ್ದಾರೆ?
a) ಇಸ್ರೇಲ್
b) ಅಲ್ಜೀರಿಯ 
c) ಪ್ಯಾಲೆಸ್ಟೈನ್✔✔
d) ಅಲಬಾಮಾ 
📓📓📓📓📓📓📓📓📓📓📓📓📓📓
4) ಇತ್ತೀಚೆಗೆ ಸುದ್ದಿಯಲ್ಲಿರುವ ರಾಜಕುಮಾರ ಅಲ್ವಾಲೆದ್ ಬಿನ್ ತಲಾಲ್ ಯಾವ ದೇಶಕ್ಕೆ ಸೇರಿದವರಾಗಿದ್ದಾರೆ ?
a) ಇರಾಕ್
b) ಸೌದಿ✔✔
c) ಕುವೈತ್ 
d) ಕತಾರ್ 
📓📓📓📓📓📓📓📓📓📓📓📓📓📓
5) ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕಿದ ನೇಪಾಳದ ಮೊದಲ ಕ್ರಿಕೆಟಿಗನ ಹೆಸರೇನು?
a) ಸಂದೀಪ್ ಲಮಿಚ್ಚಾನೆ✔✔
b) ಸಂದೀಪ್ ಖುಲರತ್ನ
c) ದಿನೇಶ್ ಚಂಡಿಮಲ್
d) ಯಾರೂ ಅಲ್ಲ
📓📓📓📓📓📓📓📓📓📓📓📓📓📓
6) ಇತ್ತೀಚೆಗೆ ಮಿಲಿಟರಿ ತರಬೇತಿಯ ಅಧಿಕೃತ ಅನುಮೋದಿತ ಔಟ್ಲೈನ್ ​​ಅನ್ನು ಪ್ರಕಟಿಸಿದ ರಾಷ್ಟ್ರ ಯಾವುದು?
a) ಜಪಾನ್ 
b) ಅಮೇರಿಕ 
c) ಚೀನಾ ✔✔
d) ಕೊರಿಯಾ 
📓📓📓📓📓📓📓📓📓📓📓📓📓📓
7) ರೈಲ್ವೆ ಪ್ರಥಮಗಳಲ್ಲಿ ಒಂದಾದ ಟಚ್-ಸ್ಕ್ರೀನ್ ಎಂಕ್ವೈರಿ ಸಿಸ್ಟಮ್‌ ನ್ನು ಭಾರತೀಯ ರೈಲ್ವೆ ಎಲ್ಲಿ ಆರಂಭಿಸಿದೆ?
a) ನವದೆಹಲಿ ರೈಲ್ವೆ ಸ್ಟೇಷನ್ ✔✔
b) ಮುಂಬೈ ರೈಲ್ವೆ ಸ್ಟೇಷನ್
c) ವಡೊದರ ರೈಲ್ವೆ ಸ್ಟೇಷನ್
d) ಗಾಂಧಿನಗರ ರೈಲ್ವೆ ಸ್ಟೇಷನ್
📓📓📓📓📓📓📓📓📓📓📓📓📓📓
8) ಗ್ಲೊಬಲ್ ಸೆಂಟರ್ ಫಾರ್ ಸೈಬರ್ ಸೆಕ್ಯುರಿಟಿಯ ಕೇಂದ್ರ ಕಛೇರಿ ಎಲ್ಲಿ ಕಾರ್ಯಾರಂಭ ಮಾಡಲಿದೆ?
a) ಹೇಗ್
b) ಪ್ಯಾರಿಸ್ 
c) ಜಿನಿವಾ ✔✔
d) ನ್ಯುಯಾರ್ಕ್ 
📓📓📓📓📓📓📓📓📓📓📓📓📓📓
9) ಈಶಾನ್ಯ ಭಾರತದ ಬುಡಕಟ್ಟು ಜನರ ಕೃಷಿ ಆದಾಯ ಮತ್ತು ಆಹಾರ ಭದ್ರತೆಯನ್ನು ಹೆಚ್ಚಿಸಲು ಭಾರತ ಯುನೈಟೆಡ್ ನೇಶನ್ಸ್  ಜೊತೆ ಎಷ್ಟು ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ?
a) 168 ಮಿಲಿಯನ್ ಡಾಲರ್✔✔
b) 164 ಮಿಲಿಯನ್ ಡಾಲರ್
c) 165 ಮಿಲಿಯನ್ ಡಾಲರ್
d) 166 ಮಿಲಿಯನ್ ಡಾಲರ್
📓📓📓📓📓📓📓📓📓📓📓📓📓📓
10) ಈ ವರ್ಷ ಮಾರ್ಚ್ ನಲ್ಲಿ ಅನೌಪಚಾರಿಕ ವಿಶ್ವ ವ್ಯಾಪಾರ ಸಂಸ್ಥೆಯ ಮಂತ್ರಿಮಂಡಲ ಸಭೆ  ಎಲ್ಲಿ ನಡೆಯಲಿದೆ ?
a) ಅಮೇರಿಕ 
b) ಭಾರತ ✔✔
c) ಚೀನಾ 
d) ರಷ್ಯಾ 
📓📓📓📓📓📓📓📓📓📓📓📓📓📓

Monday, 12 February 2018

ದಿನಾಂಕ 11-02-2018 ರಂದು ನಡೆದ SDA ಪರೀಕ್ಷೆಯ ಸಾಮಾನ್ಯ ಕನ್ನಡ ಪತ್ರಿಕೆಯ - ಸರಿ ಉತ್ತರಗಳು

೧. ಪ್ರಚ್ಛನ್ನ = ಗುಪ್ತ
೨. ನಿಲ್ ಮನೆ = ಉಳಿದುಕೊಳ್ಳುವ ಮನೆ
೩.  ಖೇಚರ= ಗಂಧರ್ವರು
೪.  ಜರ= ಮುಪ್ಪು
೫.  ಕೆಪಿಗ= ಬೀಗ
೬. ಕಿಂದರ ಜೋಗಿ
೭. ಜಸ್ತ್ವ ಸಂಧಿ
೮. ಜನ್ನ
೯. ಗ್ರಹ
೧೦. ಹೆಮ್ಮರ
೧೧. ಗೋಪಾಲಕೃಷ್ಣ ಅಡಿಗ
೧೨. ಚಿನ್ನ
೧೩. ಬಾಗಿಲು
೧೪. ಕೆಲಸ
೧೫  ಗಾಲಿ
೧೬. ಹೆಗಲು ಕೊಡು = ಸಹಾಯ ಮಾಡು
೧೭. ಭೂಮಿಗೆ ಭಾರ = ನಿಷ್ಪ್ರಯೋಜಕ
೧೮. ಬಿಳಿಯಾನೆ = ನಿರುಪಯುಕ್ತ ಭಾರಿ...
೧೯. ಕಣ್ತೆರೆಯುವುದು = ಜ್ಞಾನೋದಯ
೨೦. ಸಾತ್ವಿಕ × ತಾಮಸ
೨೧. ವಿಜೇತ × ಪರಾಜಿತ
೨೨. ಶೀತಲ × ದಗ್ದ
೨೩. ಮೂಲೋತ್ಪಾಟನ ×ಪ್ರತಿಷ್ಠಾಪನ
೨೪. ಕ್ಷುಧೆ × ಸಂತೃಪ್ತಿ
೨೫. ಯಾಚಕ × ದಾನಿ
೨೬. ಆಜ್ಯ = ತುಪ್ಪ
೨೭. ದ್ರುಮ =ಮರ
೨೮. ಜೊನ್ನ= ಬೆಳದಿಂಗಳು
೨೯. ಸಹಸ್ರಾಕ್ಷ = ಇಂದ್ರ
೩೦. ತತಿ = ಸಮೂಹ,ಸಮಯ
೩೧. ಮೆಲ್ನುಡಿ = ಮೆಲ್ಲಿತು + ನುಡಿ
೩೨. ನೂರ್ + ಸಾಸಿರ್
೩೩. ಮನೆಯ + ಒಳಗು
೩೪. ಅಭ್ಯಂಜನ
೩೫. ಅಚಾತುರ್ಯ
೩೬. ನಿಷೇಧಾರ್ಥಕ
೩೭. ಪೆರೆದಲೆಯ
೩೮. ಮನೋವೈಜ್ಞಾನಿಕ
೩೯. ಸಮ್ಮೇಳನ
೪೦. ರಾಷ್ಟ್ರೀಯ ಹೆದ್ದಾರಿ= ಸುಧಾರಣೆ ಬೇಕಿಲ್ಲ
೪೧. ಶುಭಾಶಯ
೪೨. ಉತ್ಸಾಹ
೪೩. ದಿಗ್ವಾಚಕ
೪೪. ಶ್ಚುತ್ವ ಸಂಧಿ
೪೫.  ಅವಧಾರಣಾರ್ಥಕಾವ್ಯಯ
೪೬. ಕಾಡು
೪೭. ಕಾಫಿಗೆ = ಕಾಫಿಯನ್ನು
೪೮. ಅರಳಿತು= ಅರಳಿದವು
೪೯. ಧುರಂತ = ದುರಂತ
೫೦. ಒಗೆಯಿಂದಾಗಿ = ಹೊಗೆಯಿಂದಾಗಿ
೫೧. ಅರಕೆ ಒಪ್ಪಿಸಿ = ಹರಕೆ ಒಪ್ಪಿಸಿ
೫೨. ಗೋವಿಂದ ಪೈ
೫೩. ಕಾರಂತರ ಬಾಲಪ್ರಪಂಚ
೫೪. ಪೂರ್ಣಚಂದ್ರ ತೇಜಸ್ವಿ
೫೫. ಮನು ಬಳಿಗಾರ್
೫೬. ಚಂದ್ರಶೇಖರ ಪಾಟೀಲ
೫೭. ಅಕ್ಷರ ಉಚ್ಚಾರಣೆಯ ಕಾಲ
೫೮. ೨೦೦೮
೫೯. ದ್ವಿರುಕ್ತಿ
೬೦. ಜನಪದ ಸಾಹಿತ್ಯ
೬೧. ಶ್ರದ್ಧೆಯ ಅಭಾವ..RQPS
೬೨. ಗಮನವೇ...QSPR
೬೩. ಸಲುಗೆಯಾಗಿ....SPRQ
೬೪. ಎನ್ನುವುದು...RQSP
೬೫. ಹೊಟ್ಟೆಕಿಚ್ಚೆಂಬ.... QRPS.
೬೬. ಅಮೆರಿಕಾ ದೇಶದ...RPSQ
೬೭. ಇನ್ನು ನನ್ನ ಬಳಿ....RPQS
೬೮. ಈ ವೇಗದಿಂದ...SRQP
೬೯. ನಿಮ್ಮ ಆರ್ಥಿಕ....RPQS
೭೦. ಈ ಆತ್ಮಕಥನವು...SQPR
೭೧. ಆರು ಕಾಸು
೭೨. ಇರ್ಕಣ್ಣಿನಿಂದ ನಡೆಯಬೇಕು
೭೩. ಮೊಂಡವೇ
೭೪. ಹಲಸು
೭೫. ಆಲಿಕಲ್ಲು
೭೬. ಮೊಳಕೆಕಾಳು
೭೭. ಕನಕದಾಸರು
೭೮. ಇಜ್ಜೋಡು = ವಿ.ಕೃ.ಗೋಕಾಕ
೭೯. ಬಂಜೆ = ವಂದ್ಯಾ
೮೦. ಇಷ್ಠಿಕಾ = ಇಟ್ಟಿಗೆ
೮೧. ಕಂಚು = ಕಾಂಸ್ಯ
೮೨. ಸೊಗ = ಸುಖ
೮೩. ಚಂದ್ರಮುಖಿ = ರೂಪಕ
೮೪. ರಾಮಧಾನ್ಯ ಚರಿತೆ = ರಾಗಿ- ಭತ್ತ
೮೫. ಕೂಳ್
೮೬. ಅನುನಾಸಿಕಗಳು
೮೭. ರಾಷ್ಟ್ರ ಕವಿಗಳು = ಮೂರು
೮೮. ರಾಯಚೂರು
೮೯. ಜಾನಪದ ಲೋಕ
೯೦. ಸರ್ವನಾಮಗಳು
೯೧. 63,366 ಮಿಲಿಯನ್ ಡಾಲರ್
೯೨. ಆರ್ಥಿಕ ಅಸ್ಥಿರತೆ
೯೩. ವಿಶ್ವದ ಆರ್ಥಿಕತೆ
೯೪. ದಕ್ಷಿಣ ಏಷ್ಯಾ ರಾಷ್ಟ್ರಗಳು
೯೫. ವಿದೇಶೀ ನೇರ ಹೂಡಿಕೆ ಮತ್ತು ಸಾಂಸ್ಥಿಕ ಹೂಡಿಕೆ
೯೬. ಏಳೆ
೯೭. ಪ್ಲುತ್
೯೮. ಅಪಾದಾನ
೯೯. ಬೆಮರ್ಗಳ್
೧೦೦. ಪ್ರತಿ ಪಾದದ ಪ್ರಾಸಾಕ್ಷರ ಹಿಂದಿನ ಅಕ್ಷರ ಹ್ರಸ್ವವಾಗುವುದು.

ತಪ್ಪುಗಳು ಕಂಡುಬಂದಲ್ಲಿ ದಯವಿಟ್ಟು ಕಮೆಂಟ್ ಮಾಡಿ.

Thursday, 8 February 2018

ಪ್ರಚಲಿತ ಘಟನೆಗಳ ಕ್ವಿಜ್ 26/01/2018

1) ಕೆಳಗಿನ ಯಾವ ಸಂಸ್ಥೆಯ ಇಂಜಿನಿಯರ್ಗಳು ಕೃಷಿ ಉತ್ಪನ್ನಗಳಿಗಾಗಿ ಸೌರ-ಆಧಾರಿತ ಶೀತಲ ಸಂಗ್ರಹವನ್ನು ಸೃಷ್ಟಿಸಿದ್ದಾರೆ?
a) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ✔✔
b) ಭಾರತೀಯ ಜೈವಿಕ ತಂತ್ರಜ್ಞಾನದ ಸಂಸ್ಥೆ
c) ಇಂಡಿಯನ್ ಫುಡ್ ಪ್ರೊಸೆಸಿಂಗ್ ಟೆಕ್ನಾಲಜಿ
d) ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ
📓📓📓📓📓📓📓📓📓📓📓📓📓📓
2) ಆದಾಯ ತೆರಿಗೆ ಇಲಾಖೆಯ ವರದಿಯ ಪ್ರಕಾರ ಎಷ್ಟು ಪ್ರತಿಶತ ಭಾರತೀಯರು 2015-16 ರಲ್ಲಿ ಆದಾಯ ತೆರಿಗೆಯನ್ನು ಪಾವತಿಸಿದ್ದಾರೆ?
a) 1.5%
b) 1.6%
c) 1.7%✔✔
d) 1.8%
📓📓📓📓📓📓📓📓📓📓📓📓📓📓
3) ಟೀಸ್ತಾ ರಂಗಿತ್ ಪ್ರವಾಸೋದ್ಯಮ ಉತ್ಸವ 2017 ಎಲ್ಲಿ ಪ್ರಾರಂಭವಾಗುತ್ತದೆ?
a) ಶಿಮ್ಲಾ
b) ಡಾರ್ಜಿಲಿಂಗ್✔✔
c) ಮಸ್ಸೂರಿ
d) ಲೇಹ್
📓📓📓📓📓📓📓📓📓📓📓📓📓📓
4) ಕಿಸಾನ್ ಉದಯ್ ಯೋಜನೆಯನ್ನು ಯಾವ ರಾಜ್ಯವು ಪ್ರಾರಂಭಿಸಿದೆ?
a) ಪಂಜಾಬ್
b) ಬಿಹಾರ
c) ಉತ್ತರ ಪ್ರದೇಶ✔✔
d) ಮಧ್ಯ ಪ್ರದೇಶ
📓📓📓📓📓📓📓📓📓📓📓📓📓📓
5) ಸಿಬಿಎಸ್ಇ ತನ್ನ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವನ್ನು ನೀಡಲು ಕೆಳಗಿನ  ಯಾವುದರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
a) ಸ್ವಾಮಿನಾರಾಯಣ ಸಂಪ್ರದಾಯ
b) ಅಖಿಲ್ ಭಾರತೀಯ ಹಿಂದೂ ಮಹಾಸಭಾ
c) ವಲ್ಲಭ ಯುವಕರ ಸಂಸ್ಥೆ
d) ರಾಮಕೃಷ್ಣ ಮಿಷನ್✔✔
📓📓📓📓📓📓📓📓📓📓📓📓📓📓
6) ವಿಶ್ವದ ಅತಿ ದೊಡ್ಡ ಉಭಯಚರ ವಿಮಾನ, ಎಜಿ-600 ವನ್ನು ಯಾವ ದೇಶ ನಿರ್ಮಿಸಿದೆ?
a) ಅಮೇರಿಕ
b) ಚೀನಾ ✔✔
c) ರಷ್ಯಾ
d) ಕೆನಡಾ
📓📓📓📓📓📓📓📓📓📓📓📓📓📓
7) ಯೋಗ ಇನ್ಸ್ಟಿಟ್ಯೂಟ್ ಯಾವ ನಗರದಲ್ಲಿದೆ?
a) ಬೆಂಗಳೂರು
b) ದೆಹಲಿ
c) ಮುಂಬೈ ✔✔
d) ಚೆನ್ನೈ
📓📓📓📓📓📓📓📓📓📓📓📓📓📓
8) ಅಗಾಟ್ಟಿ ವಿಮಾನ ನಿಲ್ದಾಣವು ಯಾವ ರಾಜ್ಯ /ಕೇಂದ್ರಾಡಳಿತ ಪ್ರದೇಶದಲ್ಲಿದೆ?
a) ಅಂಡಮಾನ್ ನಿಕೊಬಾರ್
b) ದಮನ್ ದಿಯು
c) ಹರ್ಯಾಣಾ
d) ಲಕ್ಷದ್ವೀಪ ✔✔
📓📓📓📓📓📓📓📓📓📓📓📓📓📓
9) ವಿಶ್ವದ ಅತಿ ಉದ್ದದ ಗಾಜಿನ ಸೇತುವೆ  ಎಲ್ಲಿ ಆರಂಭವಾಯಿತು ?
a) ನೇಪಾಳ
b) ಚೀನಾ ✔✔
c) ಅಮೇರಿಕ
d) ಬ್ರೆಜಿಲ್
📓📓📓📓📓📓📓📓📓📓📓📓📓📓
10) ವಿಜಯ್ ರುಪನಿ ಯಾವ ರಾಜ್ಯದ  ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು?
a) ರಾಜಸ್ಥಾನ
b) ಹರ್ಯಾಣಾ
c) ಗುಜರಾತ್ ✔✔
d) ಪಂಜಾಬ್
📓📓📓📓📓📓📓📓📓📓📓📓📓📓