Tuesday, 28 January 2025

2025ರ ಆಸ್ಟ್ರೇಲಿಯನ್ ಓಪನ್ ಗೆದ್ದ ಸಿನ್ನರ್ ಮತ್ತು ಕೀಸ್

ಪ್ರತಿ ವರ್ಷವೂ ಆಯೋಜಿತವಾಗುವ ನಾಲ್ಕು ಗ್ರ್ಯಾಂಡ್‌ ಸ್ಲ್ಯಾಮ್‌ ಟೆನ್ನಿಸ್‌ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯನ್‌ ಓಪನ್‌ ಮೊದಲನೆಯದಾಗಿದೆ.

ಪ್ರತಿ ವರ್ಷ ಜನವರಿ ತಿಂಗಳಲ್ಲಿ, ಈ ಪಂದ್ಯಾವಳಿಯು ಆಸ್ಟ್ರೇಲಿಯಾದ ಮೆಲ್ಬೊರ್ನ್‌ ನಗರದ ಮೆಲ್ಬೊರ್ನ್‌ ಪಾರ್ಕ್‌ನಲ್ಲಿ ನಡೆಯುತ್ತದೆ. ಈ ಪಂದ್ಯಾವಳಿಯು ಮೊದಲ ಬಾರಿಗೆ 1905ರಲ್ಲಿ ನಡೆಯಿತು. ಹುಲ್ಲಿನ ಅಂಕಣದಲ್ಲಿ ಕೊನೆಯ ಬಾರಿಗೆ 1987ರಲ್ಲಿ ನಡೆಯಿತು. 1988ರಿಂದ ಈ ಪಂದ್ಯಾವಳಿಯು ಮೆಲ್ಬೊರ್ನ್‌ ಪಾರ್ಕ್‌ನ ಹಾರ್ಡ್‌ ಕೋರ್ಟ್‌ಗಳಲ್ಲಿ ನಡೆಯುತ್ತಿದೆ.

ಪುರುಷರ ಸಿಂಗಲ್ಸ್:

ವಿಶ್ವದ ಅಗ್ರಮಾನ್ಯ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಅವರು ಭಾನುವಾರ (26/01/2025) ದಂದು ನಡೆದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ನೇರ ಸೆಟ್‌ಗಳಿಂದ ಜಯಗಳಿಸಿ, ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರು.

ಸಿನ್ನರ್

ರಾಡ್ ಲೇವರ್ ಅರೇನಾದಲ್ಲಿ ನಡೆದ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ಸಿನ್ನರ್ 6-3, 7-6 (7/4), 6-3ರಿಂದ ಎರಡನೇ ಶ್ರೇಯಾಂಕದ ಜ್ವರೇವ್‌ ಅವರನ್ನು ಮಣಿಸಿ, ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದರು. ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿದ್ದ 27 ವರ್ಷ ವಯಸ್ಸಿನ ಜರ್ಮನಿಯ ಆಟಗಾರನಿಗೆ ಮತ್ತೆ ನಿರಾಸೆಯಾಯಿತು.

'ಸಿನ್ನರ್ ವಿಶ್ವದ ಅತ್ಯುತ್ತಮ ಆಟಗಾರ. ಈ ಪ್ರಶಸ್ತಿಗೆ ಅವರು ನಿಜವಾಗಲೂ ಅರ್ಹರು' ಎಂದು ರನ್ನರ್ ಅಪ್ ಜ್ವರೇವ್ ಹೇಳಿದರು.

₹30,17ಕೋಟಿ- ಯಾನಿಕ್ ಸಿನ್ನ‌ರ್ ಗೆದ್ದ ಬಹುಮಾನದ ಮೊತ್ತ.

₹16.37ಕೋಟಿ- ಅಲೆಕ್ಸಾಂಡರ್ ಜ್ವರೇವ್‌ ಪಡೆದ ಬಹುಮಾನ ಮೊತ್ತ.

ಕಳೆದ ವರ್ಷ ಫೈನಲ್‌ನ ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ರಷ್ಯಾದ ಡೇನಿಯಲ್ ಮೆಡೈಡೇವ್ ಅವರನ್ನು ಸಿನ್ನರ್‌ ಮಣಿಸಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. 

ಮಹಿಳೆಯರ ಸಿಂಗಲ್ಸ್:

ಮ್ಯಾಡಿಸನ್‌ ಕೀಸ್‌

ಮೆರಿಕದ ಮ್ಯಾಡಿಸನ್‌ ಕೀಸ್‌ 2025ನೇ ಆವೃತ್ತಿಯ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ನೂತನ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ರಾಡ್‌ ಲೇವರ್‌ ಅಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ 19ನೇ ಶ್ರೇಯಾಂಕಿತೆ ಮ್ಯಾಡಿಸನ್‌, 6-3, 2-6, 7-5 ನೇರ ಸೆಟ್‌ ಗಳಿಂದ ವಿಶ್ವದ ನಂ.1 ಆಟಗಾರ್ತಿ ಅರಿನಾ ಸಬಲೆಂಕಾ ವಿರುದ್ಧ ಗೆದ್ದು ತಮ್ಮ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಕಿರೀಟಕ್ಕೆ ಸಿಹಿಮುತ್ತು ನೀಡಿದರು. ಜತೆಗೆ, 19 ಕೋಟಿ ರೂ. ಮೊತ್ತದ ಬಹುಮಾನ ತಮ್ಮದಾಗಿಸಿಕೊಂಡರು.


No comments:

Post a Comment

Note: only a member of this blog may post a comment.