Pages

Friday 27 March 2020

ಫೆಬ್ರುವರಿ 2020 ರ ಪ್ರಚಲಿತ ಘಟನೆಗಳು FDA,SDA ಗೆ ಉಪಯುಕ್ತ

➡️ಕೆನರಾ ಬ್ಯಾಂಕ್‌ನ ಹೊಸ ಸಿಇಒ ಆಗಿ ಎಲ್‌.ವಿ. ಪ್ರಭಾಕರ್ ಅವರು ಫೆಬ್ರುವರಿ 1 ರ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.
L V PRABHAKAR
➡️ಜಾಗತಿಕ ತಂತ್ರಜ್ಞಾನ ಕಂಪನಿ ಆಲ್ಟೇರ್‌ 2019ರ ಗ್ರ್ಯಾಂಡ್‌ ಚಾಲೆಂಜ್‌ನ ಸ್ಟಾರ್ಟ್‌ಅಪ್‌ ವಿಜೇತರನ್ನು ಘೋಷಿಸಿದೆ. ಬೆಂಗಳೂರಿನ ಸ್ಟಾರ್ಯ ಮೊಬಿಲಿಟಿ ಮೊದಲ ಸ್ಥಾನ ಪಡೆದುಕೊಂಡಿದ್ದು, ರೂ 1.75 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದೆ.
➡️ಅಮೆರಿಕದ ಮಾಹಿತಿ ತಂತ್ರಜ್ಷಾನ ಸಂಸ್ಥೆ ಐಬಿಎಂಗೆ ನೂತನ ಸಿಇಓ ಆಗಿ ಭಾರತೀಯ ಮೂಲದ ಅರವಿಂದ್ ಕೃಷ್ಣ ಆಯ್ಕೆಯಾಗಿದ್ದಾರೆ.
ಅಮೆರಿಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ‘ಐಬಿಎಂ’ ಸ್ಥಾಪನೆಯಾದ ವರ್ಷ: ಜೂನ್ 16, 1911.
➡️ಪೊರ್ಚುಗಲ್ ಪುಟ್ ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ  ಅವರನ್ನು ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 20 ಕೋಟಿ 41 ಲಕ್ಷ ಜನರು ಹಿಂಬಾಲಿಸುತ್ತಿದ್ದು, ಇಷ್ಟು ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಮೊದಲಿಗ ಎಂಬ ಖ್ಯಾತಿ ಅವರದ್ದಾಗಿದೆ.
Cristiano Ronaldo
➡️ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪರ (ಶಾಟ್ ಪುಟ್ ವಿಭಾಗದಲ್ಲಿ) ಪದಕ ಗೆದ್ದ ಏಕೈಕ ಮಹಿಳೆ ದೀಪಾ ಮಲಿಕ್ ಅವರು ಭಾರತ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
➡️2020 ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಅಮೆರಿಕಾದ ಸೋಪಿಯಾ ಕೆನಿನ್ ಜಯಿಸಿದ್ದಾರೆ.
➡️ಫೆಬ್ರುವರಿ 2 ರ ಭಾನುವಾರ ಮುಕ್ತಾಯವಾದ ಆಸ್ಟ್ರೇಲಿಯಾ ಓಪನ್‌ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌  6–4, 4–6, 2–6, 6–3, 6–4ರಲ್ಲಿ ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಅವರನ್ನು ಪರಾಭವಗೊಳಿಸುವ ಮೂಲಕ ಕಿರೀಟ ಮುಡಿಗೇರಿಸಿಕೊಂಡರು.
➡️ಪಂಜಾಬ್ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದ ಬೆಳೆಹಾನಿಗೆ ಕಾರಣವಾಗಿರುವ ಮರಭೂಮಿ ಮಿಡತೆಗಳನ್ನು ನಾಶಪಡಿಸುವ ಸಲುವಾಗಿ ಪಾಕಿಸ್ತಾನದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.
➡️ಫೆಬ್ರುವರಿ 2 ರ ಭಾನುವಾರ ಬಿಡುಗಡೆಯಾದ ಐಸಿಸಿ ಟಿ20 ಬ್ಯಾಟ್ಸ್ ಮನ್ ಗಳ  ರ‍್ಯಾಂಕಿಂಗ್‌ ನಲ್ಲಿ  ಭಾರತದ ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಎರಡನೇ ಸ್ಥಾನಕ್ಕೆ ಏರಿದ್ದಾರೆ.
K L RAHUL
➡️ಫೆಬ್ರುವರಿ 2 ರ ಭಾನುವಾರ  ಐಸಿಸಿ ಟಿ20 ಬೌಲರ್ ಗಳ  ರ‍್ಯಾಂಕಿಂಗ್‌ ನಲ್ಲಿ  ಮೊದಲ ಸ್ಥಾನವನ್ನು ಅಫ್ಘಾನಿಸ್ತಾನದ ಬೌಲರ್ ಬ್ಯಾಟ್ಸ್  ರಶೀದ್ ಖಾನ್ (749 ಅಂಕ) ಪಡೆದಿರುವರು.
➡️ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ 2019 ನೇ ಸಾಲಿನ  ‘ಪಂಪ ಪ್ರಶಸ್ತಿ’ಗೆ ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.
Dr. Siddhalingaiah
➡️ಬೀದರ್ ಜಿಲ್ಲೆಯಲ್ಲಿರುವ ಲಿಂಗಾಯತ ಮಹಾಮಠದ ಬಸವ ಸೇವಾ ಪ್ರತಿಷ್ಠಾನ ನೀಡುವ 2020ನೇ ಸಾಲಿನ ‘ಗುರುಬಸವ ಪುರಸ್ಕಾರ’ಕ್ಕೆ ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್ ಆಯ್ಕೆಯಾಗಿದ್ದಾರೆ.
➡️ಫೆಬ್ರುವರಿ 3 ರ ಸೋಮವಾರ ಪ್ರಕಟವಾದ ಡಬ್ಲ್ಯುಟಿಎ((ವುಮೆನ್ಸ್ ಟೆನಿಸ್ ಅಸೋಸಿಯೇಷನ್) ಕ್ರಮಾಂಕಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಒಟ್ಟು 8367 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನವನ್ನು ಪಡೆದಿರುವರು.
➡️ಅಪಾರ ಭ್ರಷ್ಟಾಚಾರದ ಆರೋಪಗಳಿಗೆ ಕುಖ್ಯಾತಿ ಪಡೆದಿದ್ದ ಕೀನ್ಯಾದ ಮಾಜಿ ಅಧ್ಯಕ್ಷ ಡೇನಿಯಲ್‌ ಅರಾಪ್‌ ಮೊಯಿ (95) ಫೆಬ್ರುವರಿ 4 ರ ಮಂಗಳವಾರ ನಿಧನರಾಗಿದ್ದಾರೆ.
➡️ಖ್ಯಾತ ರಂಗಭೂಮಿ ಕಲಾವಿದೆ ಸಂಜನಾ ಕಪೂರ್ ಅವರು ರಂಗಭೂಮಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರತಿಷ್ಠಿತ ಫ್ರೆಂಚ್ ಗೌರವಕ್ಕೆ ಪಾತ್ರವಾಗಿದ್ದಾರೆ. ಫ್ರಾನ್ಸ್ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾಗಿರುವ "ನೈಟ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್" ಪ್ರಶಸ್ತಿ ಒಲಿದು ಬಂದಿದೆ.
➡️ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು, ಮಂಗಳೂರಿನ ಗೋಕುಲ್‌ದಾಸ್ ಪ್ರಭು (ಸಾಹಿತ್ಯ), ಕುಂದಾಪುರದ ಆರ್ಗೋಡು ಮೋಹನ್‌ದಾಸ್ ಶೆಣೈ(ಕಲೆ) ಹಾಗೂ ಕಾರವಾರದ ಕಿನ್ನರಗ್ರಾಮದ ವಿಷ್ಣು ಶಾಬುರಾಣೆ (ಜಾನಪದ) ಗೌರವಕ್ಕೆ ಪಾತ್ರರಾಗಿದ್ದಾರೆ.
➡️ಇತ್ತೀಚೆಗೆ ಬಂಗಾಳ ಕ್ರಿಕೆಟ್ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಅಭಿಷೇಕ್ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾದರು. ಫೆಬ್ರುವರಿ 5 ರ ಬುಧವಾರ ನಡೆದ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ  38 ವರ್ಷದ ಅಭಿಷೇಕ್ ಅವರನ್ನು ನೇಮಕ ಮಾಡಲಾಯಿತು. ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ನಂತರ ಈ ಸ್ಥಾನ ತೆರವಾಗಿತ್ತು.
➡️ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ ಅನ್ನು ರಚಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಫೆಬ್ರುವರಿ 5 ರ ಬುಧವಾರ ಪ್ರಕಟಿಸಿದರು.
➡️ಉತ್ತರಪ್ರದೇಶದ ಲಕ್ನೋದಲ್ಲಿ 11ನೇ ಆವೃತ್ತಿಯ ರಕ್ಷಣಾ ಸಾಮಗ್ರಿಗಳ ಪ್ರದರ್ಶನಕ್ಕೆ ( ಡಿಫೆನ್ಸ್‌ ಎಕ್ಸ್‌ಪೋಗೆ)  ಫೆಬ್ರುವರಿ 5 ರ ಬುಧವಾರ ಚಾಲನೆ ನೀಡಿ ಮಾತನಾಡಿದ  ಪ್ರಧಾನಿ ಮೋದಿಯವರು  ಅವರು, ದೇಶದಲ್ಲಿ ರಕ್ಷಣಾ ಸಾಮಗ್ರಿ ಉತ್ಪಾದನೆ ಘಟಕಗಳನ್ನು ತೆರೆದು, ಹೂಡಿಕೆ ಮಾಡುವಂತೆ ವಿದೇಶಿ ರಕ್ಷಣಾ ಉತ್ಪನ್ನ ತಯಾರಕರಿಗೆ ಆಹ್ವಾನ ನೀಡಿದರು.
DEFEXPO 2020
➡️ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ)ಗೆ "ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆ" ಎಂಬ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ರಾಯಚೂರು ಸೇರಿದಂತೆ ಸೂರತ್, ಭೂಪಾಲ್, ಭಾಗಲ್ಪುರ, ಅಗರ್ತಲದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಐಐಐಟಿಗಳಿಗೆ "ರಾಷ್ಟ್ರೀಯ ಮಹತ್ವದ ಶಿಕ್ಷಣ ಸಂಸ್ಥೆ" ಸ್ಥಾನಮಾನ ನೀಡಲು ಫೆಬ್ರುವರಿ 5 ರ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
➡️ಭಾರತ–ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಕರ್ನಾಟಕದ ತುಮಕೂರಿನಲ್ಲಿ ತಯಾರಿಸಲಾಗುತ್ತಿರುವ ‘ಕಮೋವ್‌’ ಹೆಲಿಕಾಪ್ಟರ್‌ಗಳು, 2025ರ ವೇಳೆಗೆ ಸೇನೆಗೆ ಸೇರ್ಪಡೆಯಾಗಲಿವೆ. 
Kamov
➡️ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದೇ ಫೆಬ್ರುವರಿ 6 ರ ಗುರುವಾರ ನಡೆದ ಕನ್ನಡ ಸಾಹಿತ್ಯ  ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
➡️ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾದ ಕಾರಣ ಅಮೆರಿಕಾದ ಟೆನಿಸ್ ಆಟಗಾರ್ತಿ ಅಬಿಗೈಲ್ ಸ್ಪೀಯರ್ಸ್ ಮೇಲೆ 22 ತಿಂಗಳು ನಿಷೇದ ಹೇರಲಾಗಿದೆ ಅಂತರಾಷ್ಟ್ರೀಯ ಟೆನಿಸ್ ಫೆಡರೇಷನ್ ತಿಳಿಸಿದೆ.
➡️ಭಾರತೀಯ ಸೇನೆಯು ವಿಶ್ವದಲ್ಲೇ ಮೊದಲ ಬಾರಿಗೆ ಎಕೆ-47 ಬುಲೆಟ್ ನಿಂದ ತಲೆಯನ್ನು ರಕ್ಷಿಸಿಕೊಳ್ಳಬಹುದಾದ ಹೆಲ್ಮೆಟ್ ಅಭಿವೃದ್ಧಿಪಡಿಸಿದೆ. ಈ ಬುಲೆಟ್ ಪ್ರೂಫ್ ಹೆಲ್ಮೆಟ್ 10 ಮೀ ದೂರದಿಂದ ಹಾರಿಬರುವ ಗುಂಡಿನಿಂದ ತಲೆಗೆ ರಕ್ಷಣೆ ನೀಡುತ್ತದೆ.
➡️ಹಿಂದಿ ಭಾಷೆಯ ಲೇಖಕ ಹಾಗೂ ಕಾದಂಬರಿಕಾರ  ಗಿರಿರಾಜ್ ಕಿಶೋರ್ ಅವರು ಭಾನುವಾರ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ಫೆಬ್ರುವರಿ 9 ರ ಭಾನುವಾರ ನಿಧನರಾದರು.
➡️ಭಾರತೀಯ ಹಿಂದಿ ಭಾಷೆಯ ಲೇಖಕಿಯಾದ ನಾಸಿರಾ ಶರ್ಮಾ ಅವರ "ಕಾಗಜ್ ಕಿ ನಾವ್" ಕಾದಂಬರಿಗೆ  2019 ರ ವ್ಯಾಸ ಸಮ್ಮಾನ್ ಪ್ರಶಸ್ತಿ ಲಭಿಸಿದೆ.
➡️ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪಿ.ಗೋಪಿಚಂದ್ 2019 ನೇ ಸಾಲಿನ ಪ್ರತಿಷ್ಠಿತ ಐಒಸಿ ಕೋಚ್ ಜೀವಮಾನ ಸಾಧನೆ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ.
ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಪಿ.ಗೋಪಿಚಂದ್ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
➡️ಮಧ್ಯಪ್ರದೇಶ ಸರ್ಕಾರ ನೀಡುವ 2018 -19 ನೇ ಸಾಲಿನ "ರಾಷ್ಟ್ರೀಯ ಕಿಶೋರ್ ಸಮ್ಮಾನ್ ಪ್ರಶಸ್ತಿ"ಯನ್ನು  ಮಲಯಾಳಂ ಮತ್ತು ಹಿಂದಿ ಚಲನಚಿತ್ರ ನಿರ್ಮಾಪಕ ಪ್ರಿಯದರ್ಶನ್ ಅವರಿಗೆ ನೀಡಿ ಗೌರವಿಸಿದೆ.
Priyadarshan
➡️ನೌಕಾಪಡೆಯ ಮಕ್ಕಳ ಶಾಲೆಯ (ಎನ್‌ಸಿಎಸ್) ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯಾ ಕಾರ್ತಿಕೇಯನ್, ದಕ್ಷಿಣ ಅಮೆರಿಕದ ಅತಿ ಎತ್ತರದ ಅಕನ್‌ಕಾಗ್ವಾ ಪರ್ವತದ ತುದಿ ತಲುಪಿದ್ದು, ಈ ಗಮ್ಯ ತಲುಪಿದ ವಿಶ್ವದ ಅತಿ ಕಿರಿಯ ವಿದ್ಯಾರ್ಥಿನಿ ಎನ್ನುವ ಕೀರ್ತಿಗೆ ಪಾತ್ರವಾಗಿದ್ದಾಳೆ.
Kamya Karthikeyan
➡️ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ "ಸ್ಮಾರ್ಟ್ ಸಿಟಿ" ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ದೇಶದ ಟಾಪ್ 20 ನಗರಗಳ ಪೈಕಿ ಅಹಮದಾಬಾದ್‌ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ನಾಗ್ಪುರ, ತಿರುಪ್ಪುರ, ರಾಂಚಿ, ಭೋಪಾಲ್‌, ಸೂರತ್‌, ಕಾನ್ಪುರ, ಇಂದೋರ್‌, ವಿಶಾಖಪಟ್ಟಣ, ವೆಲ್ಲೂರು, ವಡೋದರ, ನಾಸಿಕ್, ಆಗ್ರಾ, ವಾರಾಣಸಿ, ದಾವಣಗೆರೆ, ಕೋಟ, ಪುಣೆ, ಉದಯಪುರ, ಡೆಹರಾಡೂನ್‌, ಅಮರಾವತಿ. ಮುಂತಾದ ನಗರಗಳು ಇವೆ.
➡️ದೇಶದ ಪಶುವೈದ್ಯಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಏಳೂವರೆ ವರ್ಷದ ಕಾಕರ್‌ ಸ್ಪೇನಿಯಲ್ ಜಾತಿಯ ಶ್ವಾನಕ್ಕೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ
‘ಪೇಸ್‌ಮೇಕರ್‌’ (ಹೃದಯ ಬಡಿತ ನಿಯಂತ್ರಿಸುವ ಉಪಕರಣ) ಉಪಕರಣ ಅಳವಡಿಸಲಾಗಿದೆ.
➡️ಸ್ಟೀವ್ ಸ್ಮಿತ್ ಅವರನ್ನು ಏಕೈಕ ಮತದಿಂದ ಹಿಂದಿಕ್ಕಿ ಡೇವಿಡ್ ವಾರ್ನರ್ ಫೆಬ್ರುವರಿ 10 ರ ಸೋಮವಾರ ಆಸ್ಟ್ರೇಲಿಯಾದ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೆದ್ದುಕೊಂಡರು.
David Warner
➡️‘ಕಲ್ಯಾಣ ಕರ್ನಾಟಕ ಮಾನವ ಸಂಪ‍ನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ವನ್ನು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ತಂದಿದ್ದು, ಅಧ್ಯಕ್ಷರಾಗಿ ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರನ್ನು ನೇಮಿಸಿದೆ. ಸೇಡಂ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ.
➡️ದಕ್ಷಿಣ ಕೊರಿಯಾ ಸಿನಿಮಾ ‘ಪ್ಯಾರಸೈಟ್’ ಅತ್ಯುತ್ತಮ ಸಿನಿಮಾ ಆಸ್ಕರ್‌ ಪ್ರಶಸ್ತಿ ಗೆದ್ದುಕೊಂಡಿದೆ. 2020ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ಫೆಬ್ರುವರಿ 10 ರ ಭಾನುವಾರ ರಾತ್ರಿ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ಘೋಷಣೆಯಾಗಿದೆ.
➡️2020ನೇ ಸಾಲಿನ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್)ಯು ಫೆಬ್ರುವರಿ 10 ರ ಭಾನುವಾರ ರಾತ್ರಿ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ದಕ್ಷಿಣ ಕೊರಿಯಾ ಸಿನಿಮಾ ‘ಪ್ಯಾರಸೈಟ್’ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದೆ.
ನಾಲ್ಕು ವಿಭಾಗಗಳು ಯಾವುವೆಂದರೆ
1) ಅತ್ಯುತ್ತಮ ಸಿನಿಮಾ
2)ಅತ್ಯುತ್ತಮ ನಿರ್ದೇಶಕ 3) ಅತ್ಯುತ್ತಮ ಚಿತ್ರಕಥೆ 4) ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ
➡️ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ‘ಪರಿವಾರ’, ‘ತಳವಾರ’ ಮತ್ತು ‘ಸಿದ್ದಿ’ ಸಮುದಾಯದ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆಗೆ ಫೆಬ್ರುವರಿ 11 ರ ಮಂಗಳವಾರ ಲೋಕಸಭೆಯ ಅಂಗೀಕಾರ ದೊರೆಯಿತು.
➡️ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೊಸಿಸ್‌, ಅಮೆರಿಕದ ಸಿಂಪ್ಲಸ್ ಕಂಪನಿಯನ್ನು ರೂ 1,750 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ.
➡️ಭಾರತದ ಕ್ರಿಕೆಟಿಗ ರಾಬಿನ್ ಸಿಂಗ್ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ ಕ್ರಿಕೆಟ್ ತಂಡಕ್ಕೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
➡️ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಹಣಕಾಸು ಸಂಸ್ಥೆ ಮುತ್ತೂಟ್ ಫಿನ್‌ ಕಾರ್ಪ್ ಜೊತೆ ಮೂರು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದೆ.
➡️ ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್‌) ನೂತನ ಅಧ್ಯಕ್ಷರಾಗಿ ಅಜಯ್ ಪಟೇಲ್ ಮತ್ತು ಕಾರ್ಯದರ್ಶಿಯಾಗಿ ಭರತ್‌ಸಿಂಗ್ ಚೌಹಾಣ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
➡️ಮಹಾರಾಷ್ಟ್ರದ ಸರ್ಕಾರಿ ಉದ್ಯೋಗಿಗಳಿಗೆ ಇನ್ನುಮುಂದೆ ವಾರಾಂತ್ಯದ ರಜೆ ದೊರಕಲಿದೆ. ‘ಸರ್ಕಾರಿ ಉದ್ಯೋಗಿಗಳು ವಾರದಲ್ಲಿ ಐದು ದಿನ ಮಾತ್ರ ಕರ್ತವ್ಯ ನಿರ್ವಹಿಸಬೇಕು’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಫೆಬ್ರುವರಿ 12 ರ ಬುಧವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
➡️ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟವು ಉದ್ದ ಕೊಕ್ಕಿನ ರಣಹದ್ದುಗಳ ಆವಾಸ ಸ್ಥಾನವಾಗಿದೆ. ಆ ಬೆಟ್ಟದ ಸುತ್ತಲಿನ 856 ಎಕರೆ ಪ್ರದೇಶವನ್ನು ಸರ್ಕಾರ 2012ರಲ್ಲಿ ದೇಶದ ಮೊದಲ ರಣಹದ್ದು ಸಂರಕ್ಷಣಾ ಧಾಮವನ್ನಾಗಿ ಘೋಷಣೆ ಮಾಡಿದೆ.
➡️ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಎಫ್‌ಐಎಚ್‌ ವರ್ಷದ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಆಟಗಾರನಾಗಿದ್ದಾರೆ.
Manpreet Singh
➡️ಇಸ್ರೇಲ್‌ನ ಪ್ರತಿಷ್ಠಿತ 2020 ನೇ ಸಾಲಿನ ಡ್ಯಾನ್‌ ಡೇವಿಡ್‌ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ) ಪ್ರಾಧ್ಯಾಪಕಿ ಪ್ರೊ.ಗೀತಾ ಸೇನ್ ಅವರು ಆಯ್ಕೆಯಾಗಿದ್ದಾರೆ.
➡️ ಹಿರಿಯ ಅಧಿಕಾರಿ ರಾಜೀವ್‌ ಬನ್ಸಲ್‌ ಅವರನ್ನು ಏರ್‌ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
Rajiv Bansal
➡️ಇನ್ಫೊಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌ (39) ಅವರನ್ನು ಬ್ರಿಟನ್‌ನ ಹಣಕಾಸು ಸಚಿವರನ್ನಾಗಿ ಫೆಬ್ರುವರಿ 13 ರ ಗುರುವಾರ ನೇಮಿಸಲಾಗಿದೆ.
➡️ರಷ್ಯಾದ ದತ್ತಾಂಶ ಕಾನೂನುಗಳನ್ನು ಕಾಪಾಡಲು ವಿಫಲವಾಗಿದ್ದಕ್ಕೆ ಅಲ್ಲಿನ ನ್ಯಾಯಾಲಯ ಫೇಸ್‌ಬುಕ್‌ಗೆ 63 ಸಾವಿರ ಡಾಲರ್‌ (ರೂ 44.89 ಲಕ್ಷ) ದಂಡ ವಿಧಿಸಿದೆ.
➡️ ಗಲ್ಲು ಶಿಕ್ಷೆ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್‌ ತೀರ್ಪು ನೀಡಿದ ದಿನದಿಂದ ಆರು ತಿಂಗಳ ಗಡುವನ್ನು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದೆ.
➡️ ‘ವಿಡಂಬಾರಿ’ ಕಾವ್ಯನಾಮದಲ್ಲಿ ಗುರುತಿಸಿಕೊಂಡಿದ್ದ ಚುಟುಕು ಕವಿ ವಿಷ್ಣು ಜಿ.ಭಂಡಾರಿ (84) ಕಡತೋಕಾದ ತಮ್ಮ ಮಗಳ ಮನೆಯಲ್ಲಿ ಫೆಬ್ರುವರಿ 13 ರ ಗುರುವಾರ ರಾತ್ರಿ ನಿಧನರಾದರು.
➡️ಕವಿ, ಸಂಸ್ಕೃತಿ ಚಿಂತಕ ಲಕ್ಷ್ಮೀಪತಿ ಕೋಲಾರ ಅವರು ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಿದ್ಧಾರ್ಥ ಸಂಸ್ಥೆಯ ಕಾರ್ಯದರ್ಶಿ ಡಾ.ಜಿ. ಪರಮೇಶ್ವರ ಅವರು ತಮ್ಮ ತಂದೆ ಎಚ್. ಎಂ. ಗಂಗಾಧರಯ್ಯ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಯು 1 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
➡️ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಭಾರತದ ಅಮಿತ್‌ ಪಂಘಲ್‌ (52 ಕೆಜಿ ವಿಭಾಗ) ನೂತನ “ಐಒಸಿ ಬಾಕ್ಸಿಂಗ್‌ ಟಾಸ್ಕ್ ಫೋರ್ಸ್‌’ ರ್ಯಾಂಕಿಂಗಿನಲ್ಲಿ ವಿಶ್ವದ ನಂ.1 ಬಾಕ್ಸರ್‌ ಗೌರವಕ್ಕೆ ಪಾತ್ರರಾಗಿದ್ದಾರೆ.
Amit Panghal
➡️ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಯುನೆಸ್ಕೋ ಪ್ರತಿವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೋ ದಿನವನ್ನು ಆಚರಿಸುತ್ತದೆ.
Radio and diversity(ರೇಡಿಯೋ ಮತ್ತು ವೈವಿಧ್ಯ) ಎಂಬ ಧ್ಯೇಯವಾಕ್ಯ ( theme) ಇರಿಸಿಕೊಂಡು (2020 ರ ಫೆಬ್ರುವರಿ 13 ರಂದು) ಈ  ಬಾರಿ ವಿಶ್ವ ರೇಡಿಯೋ ದಿನವನ್ನು ಆಚರಿಸಲಾಯಿತು.
➡️ಭಾರತದ  ಅಥ್ಲೀಟ್‌ ಭಾವನಾ ಜಾಟ್‌ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ನಡೆಯುವ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಿಟ್ಟಿಸಿದ್ದಾರೆ.
➡️ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ರಷ್ಯಾದ ಬೈಅಥ್ಲೀಟ್‌ ಯುಜೆನಿ ಯುಸ್ತಿಗೊವ್‌ ಅವರನ್ನು ಅಂತರರಾಷ್ಟ್ರೀಯ ಬೈಥ್ಲಾನ್‌ ಒಕ್ಕೂಟ (ಐಬಿಯು) ಅಮಾನತುಗೊಳಿಸಿದೆ. ಇದರಿಂದಾಗಿ ಅವರು 2014ರಲ್ಲಿ ಸೋಚಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಗಳಿಸಿದ ಚಿನ್ನದ ಪದಕವನ್ನು ಕಳೆದುಕೊಳ್ಳಲಿದ್ದಾರೆ.
➡️ಫೆಬ್ರುವರಿ 15 ರ ಶನಿವಾರ ನಡೆದ 65 ನೇ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ "ಅತ್ಯುತ್ತಮ ಚಿತ್ರ ಪ್ರಶಸ್ತಿ"ಯನ್ನು ಝೋಯಾ ಅಖ್ತರ್ ನಿರ್ದೇಶನದ "ಗಲ್ಲಿಬಾಯ್" ಸಿನಿಮಾ ಪಡೆದಿದೆ.
Gully Boy
➡️ಉಗಾಂಡಾದ ಓಟಗಾರ ಜೋಷುವಾ ಚೆಪ್ಟೆಗಿ, 5 ಕಿಲೋ ಮೀಟರ್‌ ಓಟದ ಸ್ಪರ್ಧೆಯಲ್ಲಿ ಫೆಬ್ರುವರಿ 16 ರ ಭಾನುವಾರ ವಿಶ್ವ ದಾಖಲೆ ಸ್ಥಾಪಿಸಿದರು.
➡️ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠ ನೀಡುವ 2020ನೇ ಸಾಲಿನ 5ನೇ ವಿಜ್ಞಾತಂ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ವಿಜ್ಞಾನಿ, ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮಹಾನಿರ್ದೇಶಕ ಡಾ.ವಿ.ಕೆ.ಅತ್ರೆ ಆಯ್ಕೆಯಾಗಿದ್ದಾರೆ.
Dr. V K Atre
➡️ ಭಾರತದ ಹೊರಗಡೆ ಮೊದಲ ಯೋಗ ವಿಶ್ವವಿದ್ಯಾಲಯವು ಅಮೆರಿಕದಲ್ಲಿ ಈ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. ಭಾರತೀಯ ಪುರಾತನ ಯೋಗಾಭ್ಯಾಸ ಕುರಿತಾದ ಸಂಶೋಧನೆ ಇಲ್ಲಿ ನಡೆಯಲಿದೆ.
ವಿವೇಕಾನಂದ ಯೋಗ ವಿಶ್ವವಿದ್ಯಾಲಯದ (ಯುಎವೈಯು) ಕ್ಯಾಂಪಸ್ ಲಾಸ್ ಎಂಜಲಿಸ್ ನಲ್ಲಿ ರೂ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಕೇಸ್ ವೆಸ್ಟರ್ನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀ ಶ್ರೀನಾಥ ಅವರನ್ನು ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರನ್ನಾಗಿ, ಭಾರತದ ಯೋಗಗುರು ಎಚ್. ಆರ್. ನಾಗೇಂದ್ರ ಅವರನ್ನು ಚೇರ್ಮನ್ ಆಗಿ ನೇಮಿಸಲಾಗಿದೆ.
➡️ಪ್ರತಿಷ್ಠಿತ ಲಾರೆಯಸ್ ಅತ್ಯುತ್ತಮ ಕ್ರೀಡಾ ಕ್ಷಣ ಪ್ರಶಸ್ತಿ(ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ 2000-2020)ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ.
➡️ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನ ಪುರುಷರ ಗ್ರಿಕೊ ರೋಮನ್ ವಿಭಾಗದ 55 ಕೆ.ಜಿ. ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಕರ್ನಾಟಕ ರಾಜ್ಯದ ಬಾಗಲಕೋಟೆ ತಾಲ್ಲೂಕಿನ ಬೇವಿನಮಟ್ಟಿಯ  ಅರ್ಜುನ್‌ ಹಲಕುರ್ಕಿ ಅವರು ಕಂಚಿನ ಪದಕ ಗೆದ್ದರು. ಸೀನಿಯರ್ ವಿಭಾಗದಲ್ಲಿ ಅವರು ಜಯಿಸಿದ ಮೊದಲ ಪದಕ ಇದಾಗಿದೆ.
➡️ಹಿರಿಯ ನಟಿ ಕಿಶೋರಿ ಬಲ್ಲಾಳ್ (82) ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ  ಫೆಬ್ರುವರಿ 18 ರ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಸೊಸೆ ಅಹಲ್ಯಾ ಬಲ್ಲಾಳ್ ಇದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆ ಇತ್ತು ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
Kishori Ballal
➡️ಅಮೆರಿಕದ ಸುಪ್ರೀಂಕೋರ್ಟ್ ನಂತರ ಪ್ರಬಲ ನ್ಯಾಯಾಲಯವೆಂದೇ ಪರಿಗಣಿಸಲ್ಪಟ್ಟಿರುವ  ಫೆಡರಲ್ ಸರ್ಕಿಟ್ ಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ಭಾರತ ಮೂಲದ ವ್ಯಕ್ತಿ ಶ್ರೀನಿವಾಸನ್ ನೇಮಕಗೊಂಡಿದ್ದಾರೆ.
➡️ಭಾರತ ಸೇರಿ ವಿಶ್ವದ ಬೇರೆ ದೇಶಗಳಲ್ಲಿನ ಪ್ರತಿಭಾವಂತ ಉದ್ಯೋಗಿಗಳನ್ನು ಆಯ್ಕೆ ಮಾಡುವ ದೃಷ್ಟಿಯಿಂದ ಬ್ರಿಟನ್ ನಲ್ಲಿ ಅಂಕಗಳ ಆಧಾರಿತ ವೀಸಾ ನೀಡುವ ಸೌಲಭ್ಯವನ್ನು  ಫೆಬ್ರುವರಿ  19 ರ ಬುಧವಾರ ಘೋಷಿಸಲಾಯಿತು.
➡️ ರಾಷ್ಟ್ರಪತಿ ಅವರ ಕಾರ್ಯದರ್ಶಿ ಸಂಜಯ್ ಕೊಠಾರಿ ಅವರನ್ನು ಕೇಂದ್ರ ಜಾಗೃತ ದಳದ
ಮುಖ್ಯ ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ.
Sanjay Kothari
➡️ ಭಾರತವು 2022ರ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ನೆರವಾಗುವ ದೃಷ್ಟಿಯಿಂದ ಟೂರ್ನಿ ಆಯೋಜಿಸಲು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಮುಂದಾಗಿದೆ.
➡️ ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್‍ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು 2019ರ ಸಾಲಿನ ಪ್ರತಿಷ್ಠಿತ ಅರ್ನ್ಸ್ಟ್‌ ಆ್ಯಂಡ್‌ ಯಂಗ್ (ಇವೈ) ವರ್ಷದ ಉದ್ಯಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ERNST & YOUNG

➡️ಕೈಗಾರಿಕೆ ಸ್ಥಾಪನೆ ಉದ್ದೇಶದ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ ಈಗ ಮೂರನೇ ಸ್ಥಾನಕ್ಕೆ ಇಳಿದಿದೆ.
➡️ವಿಶ್ವ ಬ್ಯಾಡ್ಮಿಂ ಟನ್‌ ಚಾಂಪಿಯನ್‌ ಪಿ.ವಿ.ಸಿಂಧು, ಇಎಸ್‌ಪಿಎನ್‌ನ 2019 ರ ‘ವರ್ಷದ ಮಹಿಳಾ ಕ್ರೀಡಾಪಟು’ ಗೌರವವನ್ನು ಸತತ ಮೂರನೇ ವರ್ಷ ಗೆದ್ದುಕೊಂಡಿದ್ದಾರೆ.
Sportsperson of the year
➡️ಇಎಸ್‌ಪಿಎನ್‌ನ 2019 ರ ‘ಜೀವಮಾನ ಸಾಧನೆ’ ಪುರಸ್ಕಾರಕ್ಕೆ ಹಾಕಿ ಹಿರಿಯ ಒಲಿಂಪಿಯನ್‌ ಬಲಬೀರ್‌ ಸಿಂಗ್ ಸೀನಿಯರ್‌ ಪಾತ್ರರಾಗಿದ್ದಾರೆ. ಅವರು  1948 (ಲಂಡನ್‌),  1952  (ಹೆಲ್ಸಿಂಕಿ) ಮತ್ತು 1956 (ಮೆಲ್ಬರ್ನ್‌) ಒಲಿಂಪಿಕ್ಸ್‌ಗಳಲ್ಲಿ ಆಡಿದ್ದರು. 1971ರ ಮೊದಲ ವಿಶ್ವಕಪ್‌ನಲ್ಲಿ ಆಡಿದ್ದ ತಂಡಕ್ಕೆ ಕೋಚ್‌ ಆಗಿದ್ದರು.
➡️ನೆದರ್ಲೆಂಡ್ ನ ವಿಜ್ಞಾನಿಗಳು ಹೊಸ ಪ್ರಭೇದದ ಬಸವನ ಹುಳುಗಳನ್ನು ಪತ್ತೆ ಮಾಡಿದ್ದಾರೆ. ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುತ್ತಿರುವ ಸ್ವೀಡನ್ ನ ಪರಿಸರ ಕಾರ್ಯಕರ್ತೆ  ಗ್ರೇತಾ ಥುನ್ ಬರ್ಗ್ ಗೌರವಾರ್ಥ ಈ ಪ್ರಭೇದದ ಹುಳುಗಳಿಗೆ "ಕ್ಯಾಸ್ಪೆಡೊ ಟ್ರೋಪಿಸ್ ಗ್ರೇತಾ ಥುನ್ ಬರ್ಗ್" ಎಂದು ನಾಮಕರಣ ಮಾಡಿದ್ದಾರೆ.
➡️ ಇಥಿಯೋಪಿಯಾದ ಅಬಾಬೆಲ್‌ ಯಶನೇ ಅವರು ಯುಎಇಯಲ್ಲಿ ಫೆಬ್ರುವರಿ 21 ರ ಶುಕ್ರವಾರ ನಡೆದ ವಿಶ್ವ ಅಥ್ಲೆಟಿಕ್ಸ್‌ ಗೋಲ್ಡ್‌ ಲೇಬಲ್ ರೋಡ್‌ ರೇಸ್‌ನ ಮಹಿಳೆಯರ ಹಾಫ್‌ ಮ್ಯಾರಥಾನ್‌ ಓಟದಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು.
➡️ಮಹಾರಾಷ್ಟ್ರ ಸರ್ಕಾರದ ‘ದಾದಾಸಾಹೇಬ್‌ ಫಾಲ್ಕೆ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ –2020’ ಪ್ರಶಸ್ತಿಗೆ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್‌ ಭಾಜನರಾಗಿದ್ದಾರೆ.ಹನ್ನೊಂದು ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆಯಾಗಿದ್ದು, ಸುದೀಪ್ ಅವರು ‘ಮೋಸ್ಟ್ ಪ್ರಾಮಿಸಿಂಗ್‌ ಆಕ್ಟರ್‌’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Most Promising Actor
➡️ಫೆಬ್ರುವರಿ 21 ರ ಶುಕ್ರವಾರ ನಡೆದ  ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ  ಭಾರತದ ಮಹಿಳಾ ಕುಸ್ತಿ ಪಟುಗಳಾದ  ವಿನೇಶಾ ಪೋಗಟ್‌ ಹಾಗೂ ಅನ್ಷು ಮಲಿಕ್‌  ಅವರು ಕ್ರಮವಾಗಿ ಕಂಚಿನ ಪದಕಗಳನ್ನು ಗೆದ್ದಿರುವರು.
➡️ಹಿರಿಯ ಫುಟ್‌ಬಾಲ್ ಆಟಗಾರ ಅಶೋಕ್ ಚಟರ್ಜಿ (78) ಅವರು ಫೆಬ್ರುವರಿ 22 ರ ಶನಿವಾರ ನಿಧನರಾದರು. ಅವರು ಪತ್ನಿ ಮತ್ತು ಪುತ್ರ, ಸಂಗೀತಗಾರ ಸಂದೀಪ್ ಅವರನ್ನು ಅಗಲಿದ್ದಾರೆ.
➡️ಉತ್ತರಖಾಂಡದ ಹಲ್ದಾಣಿಯಲ್ಲಿ  ಫೆಬ್ರುವರಿ 22 ರ ಶನಿವಾರ ನಡೆದ 16ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಕರ್ನಾಟಕ ತಂಡದವರು ಸಮಗ್ರ ಪ್ರಶಸ್ತಿ ಜಯಿಸಿದ್ದಾರೆ.
➡️ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ 'ಕಟ್‌, ಕಾಪಿ, ಪೇಸ್ಟ್‌’ ಎಂಬ ಪರಿಕಲ್ಪನೆಯನ್ನು ಕಂಪ್ಯೂಟರ್‌ ಜಗತ್ತಿಗೆ ಪರಿಚಯಿಸಿದ ಅಮೆರಿಕದ ಕಂಪ್ಯೂಟರ್‌ ವಿಜ್ಞಾನಿ ಲ್ಯಾರಿ ಟೆಸ್ಲರ್‌(74 ವರ್ಷ) ಅವರು ಫೆಬ್ರುವರಿ 16 ರ ಭಾನುವಾರ ನಿಧನರಾಗಿದ್ದಾರೆ.
Lawrence Gordon Tesler 
➡️ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಮತ್ತು ಕಾಯಿಲೆ ಮುಂತಾದ ಅಸೌಖ್ಯತೆಯಿಂದ ಅವರು ಹೊರಬರಲು ಸಹಾಯವಾಗುವಂಥ ನಿರ್ಮಲ ಪರಿಸರವನ್ನು ಕಲ್ಪಿಸಿರುವ ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಆದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶವಿರುವಂಥ  ದೇಶಗಳ ಪಟ್ಟಿಯಲ್ಲಿ ಭಾರತ 131 ಸ್ಥಾನ ಗಳಿಸಿದೆ.
➡️ ಐಟಿಟಿಎಫ್‌ ವಿಶ್ವ ಟೂರ್‌ ಹಂಗರಿಯನ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ನಲ್ಲಿ ಭಾರತದ ಅಚಂತಾ ಶರತ್‌ ಕಮಲ್‌ ಮತ್ತು ಜ್ಞಾನಶೇಖರನ್‌ ಸತ್ಯನ್‌ ಜೋಡಿ ಬೆಳ್ಳಿಯ ಪದಕವನ್ನು ಗೆದ್ದಿರುವರು.
➡️ವೆಸ್ಟ್‌ ಇಂಡೀಸ್‌ ಕ್ರಿಕೆಟಿನ ಆಲ್‌ರೌಂಡರ್‌ ಡ್ಯಾರೆನ್‌ ಸ್ಯಾಮಿ, ಪಾಕಿಸ್ತಾನದ ಗೌರವ ಪೌರತ್ವ “ನಿಶಾನ್‌ ಎ ಪಾಕಿಸ್ತಾನ್‌’ಗೆ ಪಾತ್ರರಾಗಿದ್ದಾರೆ.
Darren Sammy
➡️ಕರ್ನಾಟಕದ ಮಂಗಳೂರಿನ ಅಡ್ಲಿನ್ ಕ್ಯಾಸ್ಟೆಲಿನೊ ಅವರು ಲಿವಾ ಮಿಸ್ ದಿವಾ ಯೂನಿವರ್ಸ್ 2020 ರ ಸೌಂದರ್ಯ ಸ್ಪರ್ಧೆಯನ್ನು ಗೆದ್ದುಕೊಂಡಿದ್ದಾರೆ. ಆ ಮೂಲಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
➡️ಮಲೇಷ್ಯಾ ಪ್ರಧಾನಿ ಮಹತಿರ್ ಮೊಹಮದ್ ಫೆಬ್ರುವರಿ 24 ರ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ.
➡️ವಿದ್ಯಾರ್ಥಿಗಳ ಇಂಗ್ಲಿಷ್‌ ಭಾಷಾ ಪ್ರಾವೀಣ್ಯತೆ ಹೆಚ್ಚಿಸುವ ಉದ್ದೇಶದಿಂದ ಕೇರಳ ಶೈಕ್ಷಣಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ (ಕೆಐಟಿಇ) ಸಂಸ್ಥೆಯು ಶಾಲೆಗಳಲ್ಲಿ ಇ3 ಯೋಜನೆಯನ್ನು ಜಾರಿಗೊಳಿಸಿದೆ.
➡️ನ್ಯಾಯಮೂರ್ತಿ ಬಿ.ಪಿ. (ಭೂಷಣ್ ಪ್ರದ್ಯುಮ್ನ) ಧರ್ಮಾಧಿಕಾರಿ ಅವರನ್ನು ಬಾಂಬೆ ಹೈಕೋರ್ಟ್‌ನ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.
➡️ಸುಮಾರು  30 ವರ್ಷಗಳ ಕಾಲ ಈಜಿಪ್ಟ್‌ನ ಅಧ್ಯಕ್ಷರಾಗಿದ್ದು  2011ರ ಕ್ರಾಂತಿಯ ಬಳಿಕ ಅಧ್ಯಕ್ಷ ಸ್ಥಾನ ತ್ಯಜಿಸಿದ್ದ ಈಜಿಪ್ಟ್‌ನ ಮಾಜಿ ಅಧ್ಯಕ್ಷ  ಹೊಸ್ನಿ ಮುಬಾರಕ್ ಅವರು ಫೆಬ್ರುವರಿ 25 ರ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
Hosni Mubarak
➡️2020 ರ ಏಪ್ರೀಲ್ ನಲ್ಲಿ ತೆರವಾಗಲಿರುವ ರಾಜ್ಯಸಭೆಯ 55 ಸ್ಥಾನಗಳಿಗೆ ಮಾರ್ಚ್ 26 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಫೆಬ್ರುವರಿ 25 ರ ಮಂಗಳವಾರ ತಿಳಿಸಿದೆ.
➡️ಇಂಗ್ಲಿಷ್‌ಗೆ ಭಾಷಾಂತರವಾಗಿರುವ, ಸಾಹಿತಿ ದೇವನೂರ ಮಹಾದೇವ ಅವರ ಕೃತಿ ‘ಕುಸುಮಬಾಲೆ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಭಾಷಾಂತರ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಸುಸಾನ್‌ ಡೇನಿಯೆಲ್‌ ಅವರು ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಕುಸುಮ ಬಾಲೆ
➡️ ಅಮೆರಿಕದ ಒಹಾಯೊದಲ್ಲಿರುವ ಕೊಲಂಬಸ್ ಮೃಗಾಲಯದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಐವಿಎಫ್ ತಂತ್ರಜ್ಞಾನದ ಮೂಲಕ ಎರಡು ಚೀತಾ ಮರಿಗಳು ಜನಿಸಿವೆ.
➡️ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿರುವ, ಭಾರತದ್ದೇ ಸ್ವಂತ ಪಥದರ್ಶಕ ವ್ಯವಸ್ಥೆ ‘ನಾವಿಕ್’ ಅನ್ನು ತನ್ನ ರೆಡ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸುವುದಾಗಿ ಚೀನಾದ ಶಿಯೋಮಿ ಕಂಪನಿ ಹೇಳಿದೆ.
➡️ವಿಶ್ವದ ಹಿರಿಯ ಪುರುಷ ಎಂದು ಈ ವರ್ಷದ 2020 ರ ಫೆಬ್ರುವರಿ 12 ರಂದು ಗಿನ್ನಿಸ್ ದಾಖಲೆ ಪುಸ್ತಕ ಸೇರಿದ್ದ ಜಪಾನ್ ನ ನಿವಾಸಿ "ಚಿತೆತ್ಸು ವತನಬೆ" ಅವರು ಫೆಬ್ರುವರಿ 23 ರ ಭಾನುವಾರ ನಿಧನರಾದರು. ಅವರಿಗೆ ಐವರು ಪುತ್ರರು, 12 ಮೊಮ್ಮಕ್ಕಳು, 16 ಮರಿ ಮಕ್ಕಳು ಇದ್ದಾರೆ.
➡️ರಾಜ್ಯಸಭೆ ಆಯ್ಕೆ ಸಮಿತಿ ಮಾಡಿದ್ದ ಪ್ರಮುಖ ಶಿಫಾರಸುಗಳನ್ನು ಅಳವಡಿಸಿದ ನಂತರ, ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಫೆಬ್ರುವರಿ 26 ರ ಬುಧವಾರ ಅನುಮೋದನೆ ನೀಡಿದೆ.
➡️ಲೇಖಕಿ, ಪತ್ರಕರ್ತೆ ವಿಜಯಮ್ಮ (ಡಾ.ವಿಜಯಾ) ಅವರ ಆತ್ಮಕತೆ ‘ಕುದಿ ಎಸರು’ಗೆ  2019 ನೇ ಸಾಲಿನ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ದೊರೆತಿದೆ. ಚಂದ್ರಶೇಖರ ಕಂಬಾರ ಅವರು ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

➡️ಟೆನಿಸ್ ಲೋಕದ ‘ಬೆಡಗಿನ ತಾರೆ’ ರಷ್ಯಾದ ಮರಿಯಾ ಶರಪೋವಾ ತಮ್ಮ 32ನೇ ವಯಸ್ಸಿನಲ್ಲಿ ವೃತ್ತಿಪರ ಟೆನಿಸ್‌ಗೆ  ಫೆಬ್ರುವರಿ 26 ರ  ಬುಧವಾರ ವಿದಾಯ ಘೋಷಿಸಿದ್ದಾರೆ.
Maria Sharapova
➡️ಕಡಲಾಚೆಗೆ ಗಸ್ತು ತಿರುಗಿ ರಕ್ಷಣೆ ಒದಗಿಸುವ ‘ವಜ್ರ’ ನೌಕೆಗೆ ಕೇಂದ್ರ ಬಂದರು ಸಚಿವ ಮನ್ಸುಖ್ ಮಾಂಡವೀಯ ಅವರು ತಮಿಳುನಾಡಿನ ಚೆನ್ನೈನಲ್ಲಿ ಫೆಬ್ರುವರಿ 27 ರ ಗುರುವಾರ ಚಾಲನೆ ನೀಡಿದರು.
➡️ಕರ್ನಾಟಕ, ಗೋವಾ ಮತ್ತು ಮಹಾರಾಷ್ಜ್ಟ್ರಗಳಿಗೆ ಮಹದಾಯಿ ನೀರನ್ನು ಹಂಚಿಕೆ ಮಾಡಿ ಜಲವಿವಾದ ನ್ಯಾಯಮಂಡಳಿಯು 2018 ರ ಆಗಸ್ಟ್ 14 ರಂದು ನೀಡಿದ್ದ ಐತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರ ಫೆಬ್ರುವರಿ 27 ರ ಗುರುವಾರ ಅಧಿಚೂಚನೆ ಹೊರಡಿಸಿದೆ.
➡️ಸರಕು ಮತ್ತು ಸೇವೆಗಳ ಖರೀದಿಗೆ ನಗದುರಹಿತ (ಡಿಜಿಟಲ್‌) ಪಾವತಿ ವಿಷಯದಲ್ಲಿ ಬೆಂಗಳೂರು ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು,  ಕರ್ನಾಟಕ ರಾಜ್ಯವು ಮಹಾರಾಷ್ಟ್ರ ನಂತರದ ಎರಡನೇ ಸ್ಥಾನದಲ್ಲಿ ಇದೆ.
➡️ಭಾರತದ ಕಡಲಾಚೆಯ ರಕ್ಷಣೆಗಾಗಿ ನಿರ್ಮಿಸಿರುವ ಗಸ್ತು ನೌಕೆ "ವರದ್" ಫೆಬ್ರುವರಿ 28 ರ ಶುಕ್ರವಾರ ಲೋಕಾರ್ಪಣೆಗೊಂಡಿದೆ.ಲಾರ್ಸನ್ ಅಂಡ್ ಟುಬ್ರೊ ಸಂಸ್ಥೆ ಇದನ್ನು ನಿರ್ಮಿಸಿದೆ.

➡️➡️➡️➡️➡️➡️➡️➡️➡️➡️

No comments:

Post a Comment

Note: only a member of this blog may post a comment.