Pages

Monday 29 January 2018

India’s first ‘Home-Made’ aircraft from Mumbai

Amol Yadav
Mumbai-based pilot Amol Yadav developed an indigenous aircraft. This is the first aircraft manufactured in India. It is a six-seater aircraft and named as VT-NMD, where NM stands for Narendra Modi and D for Devendra Fadnavis.

The government was hosting a Make in India show, an initiative aimed at making the country a global manufacturing hub – in Mumbai and the aircraft was kept in that show.

ಟೆರೇಸ್ ಮೇಲೆ ನಿರ್ಮಿಸಿದ ಕನಸಿನ ವಿಮಾನಕ್ಕೆ ಆತ ಇಟ್ಟ ಹೆಸರು ಮೋದಿ

ಮುಂಬೈ, ನವೆಂಬರ್ 22: ಆತನಿಗೆ ಸ್ವಂತ ವಿಮಾನ ಕಟ್ಟುವ ಕನಸು. ಮನೆ ಮಾರಿ ಟೆರೇಸ್ ಮೇಲೆ ತನ್ನ ಕನಸಿನ ವಿಮಾನ ನಿರ್ಮಿಸಿಯೇ ಬಿಟ್ಟ. ಕೊನೆಗೆ ಹಾರಾಟ ಮಾಡಲು ಡಿಡಿಸಿಎ ಲೈಸನ್ಸ್ ಬೇಕಾಗಿತ್ತು. ಅದನ್ನು ಮೋದಿ ತೆಗಿಸಿಕೊಟ್ಟರು. ಕೊನೆಗೆ ಆ ವಿಮಾನಕ್ಕೆ ಆತ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೆಸರಿಟ್ಟ.

ಇದು ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಪೈಲಟ್ ಆಗಿರುವ ಮುಂಬೈನ ಕ್ಯಾಪ್ಟನ್ ಅಮೋಲ್ ಯಾದವ್ ರ ಅಚ್ಚರಿಯ, ಎಂಥವರಿಗೂ ಸ್ಪೂರ್ಥಿ ತುಂಬುವ ಕಥೆ.

ಈ ಕಥೆ 2011ರದ್ದು. ಇದ್ದ ಮನೆಯನ್ನೂ ಮಾರಿ, ಸತತ ಆರು ವರ್ಷ ಪರಿಶ್ರಮಪಟ್ಟು ಸ್ವಂತ ವಿಮಾನ ತಯಾರಿಸಿದ್ದರು ಅಮೋಲ್ ಯಾದವ್. ಅದೊಂದು ಆರು ಸೀಟಿನ, ಮನೆಯ ಟೆರೇಸ್ ಮೇಲೆ ನಿರ್ಮಾಣವಾದ ವಿಮಾನ.

ವಿಮಾನಕ್ಕೆ ಸಿಗದ ಹಾರಾಟ ಪರವಾನಿಗೆ

ಹೀಗೊಂದು ವಿಮಾನವನ್ನು ಅಮೋಲ್ ತಯಾರಿಸಿದರೂ ಅದರ ಹಾರಾಟಕ್ಕೆ ಬೇಕಾದ ಲೈಸನ್ಸ್ ಅವರಿಗೆ ಸಿಕ್ಕಿರಲಿಲ್ಲ. 2011ರಿಂದ ತನ್ನ ವಿಮಾನದ ಹಾರಾಟಕ್ಕೆ ವಿಮಾನಯಾನ ಸಚಿವಾಲಯವನ್ನು ಸಂಪರ್ಕಿಸುತ್ತಲೇ ಬಂದಿದ್ದರು ಅಮೋಲ್.

ಮೋದಿ ಕಣ್ಣಿಗೆ ಬಿದ್ದ ವಿಮಾನ

'ಮೇಕ್ ಇನ್ ಇಂಡಿಯಾ' ಅಂತ ಭಾಷಣ ಮಾಡುತ್ತಾ ದೇಶದ ಜನರನ್ನು ಹುರಿದುಂಬಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣಿಗೆ ಈ ಅಮೋಲ್ ಯಾದವ್ ವಿಮಾನ ಬಿತ್ತು.

ಮೋದಿ ಕೊಡಿಸಿದ ಲೈಸನ್ಸ್
2016ರಲ್ಲಿ ಮೇಕ್ ಇನ್ ಇಂಡಿಯಾದಲ್ಲಿ ತಮ್ಮ ವಿಮಾನವನ್ನು ಪ್ರದರ್ಶನಕ್ಕಿಟ್ಟರು ಅಮೋಲ್ ಯಾದವ್. ಈ ವಿಮಾನವನ್ನು ನೋಡಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಖುಷಿಪಟ್ಟರು. ಆಗ ಲೈಸನ್ಸ್ ಸಿಗದ ತಮ್ಮ ಕಷ್ಟ ಹೇಳಿಕೊಂಡರು ಅಮೋಲ್.

ಅಮೋಲ್ ಕಷ್ಟಕ್ಕೆ ಸ್ಪಂದಿಸಿದ ಫಡ್ನವೀಸ್ ಮೋದಿಗೆ ಈ ಬಗ್ಗೆ ತಿಳಿಸಿ ಲೈಸನ್ಸ್ ಸಿಗಲು ಏರ್ಪಾಟು ಮಾಡಿದರು.

ಕೈಗೆ ಬಂತು ಲೈಸನ್ಸ್

ಪೈಲಟ್ ಅಮೋಲ್ ಯಾದವ್ ಗೆ ಡಿಜಿಸಿಎ ನೋಂದಣಿ ಪ್ರಮಾಣ ಪತ್ರ ನೀಡಿದೆ. ಕೆಲವೇ ದಿನಗಳ ಹಿಂದಷ್ಟೇ ಈ ಪ್ರಮಾಣ ಪತ್ರ ಅಮೋಲ್ ಕೈ ಸೇರಿದೆ. ಇದೇ ಖುಷಿಯಲ್ಲಿ ಅಮೋಲ್ ದೇವೇಂದ್ರ ಫಡ್ನವೀಸ್ ರನ್ನು ಭೇಟಿಯಾಗಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಫಡ್ನವೀಸ್, "ಪ್ರಯತ್ನವನ್ನು ಬೆಂಬಲಿಸುತ್ತೇನೆ. ಮೇಕ್ ಇನ್ ಇಂಡಿಯಾಗೆ ದೊಡ್ಡ ಉದಾಹರಣೆ ಇದು," ಎಂದು ಹೇಳಿದ್ದಾರೆ.

'ವಿಕ್ಟರ್‌ ಟ್ಯಾಂಗೋ ನರೇಂದ್ರ ಮೋದಿ ದೇವೇಂದ್ರ'

ವಿಮಾನಕ್ಕೆ ಮೋದಿ, ಫಡ್ನವೀಸ್ ಹೆಸರು

ಪ್ರಧಾನಿ ಮೋದಿ ಮಧ್ಯಸ್ಥಿಕೆಯಿಂದ ಲೈಸನ್ಸ್ ಸಿಕ್ಕಿದ ಹಿನ್ನಲೆಯಲ್ಲಿ ಅಮೋಲ್‌ ತಮ್ಮ ವಿಮಾನಕ್ಕೆ ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಸಿಎಂ ಫಡ್ನವೀಸ್‌ ಅವರ ಹೆಸರನ್ನೇ ನಾಮಕರಣ ಮಾಡಿದ್ದಾರೆ.
ವಿಮಾನಕ್ಕೆ 'ವಿಕ್ಟರ್‌ ಟ್ಯಾಂಗೋ ನರೇಂದ್ರ ಮೋದಿ ದೇವೇಂದ್ರ' ಎಂದು ಹೆಸರಿಟ್ಟಿದ್ದಾರೆ.

19 ಸೀಟಿನ ವಿಮಾನದ ಕನಸು

ಇದೀಗ ಅಮೋಲ್ ಮತ್ತವರ ತಂಡ 19 ಸೀಟಿನ ವಿಮಾನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಹಳೆಯ ವಿಮಾನ ನಿರ್ಮಿಸಿದ ಅದೇ ಟೆರೇಸ್ ಮೇಲೆ ಈ ವಿಮಾನನ್ನೂ ನಿರ್ಮಿಸಲಿದ್ದಾರೆ. ಮುಂದಿನ 4-5 ತಿಂಗಳಲ್ಲಿ ಈ ವಿಮಾನ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.

ವಿಮಾನ ಕಂಪನಿ ಸ್ಥಾಪಿಸುವ ಆಸೆ

ಭಾರತದಲ್ಲಿ ತಮ್ಮದೇ ವಿಮಾನ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುವುದು ಅಮೋಲ್ ಯಾದವ್ ಕನಸಾಗಿದೆ. ಆದಷ್ಟು ಬೇಗ ಆ ಕನಸು ನೆರವೇರಲಿ.

No comments:

Post a Comment

Note: only a member of this blog may post a comment.