Pages

Monday, 29 February 2016

ಕೇಂದ್ರ ಬಜೆಟ್ 2016-2017ರ ಮುಖ್ಯಾಂಶಗಳು

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
೨೦೨೦ರ ವೇಳೆ ವಿದ್ಯುತ್ ಸಮಸ್ಯೆ ಇಲ್ಲದಂತೆ, ವಿದ್ಯುತ್ ಸೌಲಭ್ಯವಿಲ್ಲದ ೨೦ ಸಾವಿರ ಹಳ್ಳಿಗಳಿಗೆ ವಿದ್ಯುತ್ ಹಾಗೂ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಅಲ್ಲದೆ, ಹಣದುಬ್ಬರವನ್ನು ಶೇ.೬ಕ್ಕಿಂತ ಕಡಿಮೆ ಮಾಡುವುದು ನಮ್ಮ ಸರ್ಕಾರದ ಗುರಿ ಎಂದು ಜೇಟ್ಲಿ ತಿಳಿಸಿದರು.
ಕೇಂದ್ರ ಬಜೆಟ್ ಮುಖ್ಯಾಂಶಗಳು ▬ ಸರ್ಕಾರದ ಗುರಿ
1. ಮೇಕ್ ಇನ್ ಇಂಡಿಯಾದಿಂದ ಉದ್ಯೋಗ ಸೃಷ್ಟಿ
2. ಸಣ್ಣ ನೀರಾವರಿ ಯೋಜನೆಗೆ ೫,೩೦೦ ಕೋಟಿ
3. ಗ್ರಾಮೀಣಾಭಿವೃದ್ಧಿ ನಿಧಿಗೆ ೨೫ ಸಾವಿರ ಕೋಟಿ ಮೀಸಲು
4. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಭೀಮಾ ಯೋಜನೆ.
5. ಮನ್ ರೇಗಾ ಯೋಜನೆಗೆ ೩೪,೧೦೦ ಕೋಟಿ ರೂಪಾಯಿ
6. ದೇಶಾದ್ಯಂತ ೮೦ ಸಾವಿರ ಪ್ರೌಢಶಾಲೆಗಳು ಮೇಲ್ದರ್ಜೆಗೆ
7. ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ೧೫೮೦ ಕೋಟಿ ರು
8. ಅಂಚೆ ಕಚೇರಿಗಳ ಮೂಲಕ ಜನ ಧನ ಯೋಜನೆ ಜಾರಿ
9. ಬಿಪಿಎಲ್ ಕಾರ್ಡ್ ವಯೋವೃದ್ಧರಿಗೆ ಸರ್ಕಾರದಿಂದ ಸಂಪೂರ್ಣ ಚಿಕಿತ್ಸಾ ವೆಚ್ಚ.
10. ಪ್ರತಿ ೫ ಕಿ.ಮೀ.ಗೆ ೧ ಶಾಲೆ ನಿರ್ಮಾಣ - ೭೫ ಸಾವಿರ ಪ್ರಾಥಮಿಕ ಶಾಲೆಗಳ ನಿರ್ಮಾಣ - ಪ್ರೌಢಶಾಲೆಗಳ ಸಂಖ್ಯೆ ಹೆಚ್ಚಳ
11. ಈಗಾಗಲೇ ೫೦ ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ, ೬ ಕೋಟಿ ಶೌಚಾಲಯ ನಿರ್ಮಾಣ ನಮ್ಮ ಗುರಿ
12. ಗೋಲ್ಡ್ ಮಾನಿಟರಿಂಗ್ ಸ್ಕೀಮ್ ಮೂಲಕ ಗೋಲ್ಡ್ ಅಕೌಂಟ್ ತೆರೆಯಲಾಗುವುದು.
13. ನಿರ್ಭಯಾ ಫಂಡ್ ಗೆ ೧೦೦೦ ಕೋಟಿ ರೂಪಾಯಿ ಹೆಚ್ಚುವರಿ ನೀಡಿಕೆ.
14. ದೇಶದ ಬಡ ಜನರಿಗಾಗಿ ಅಟಲ್ ಪೆನ್ಶನ್ ಯೋಜನೆ. ಮಕ್ಕಳ ಸುರಕ್ಷತಾ ಯೋಜನೆಗಾಗಿ ೧,೫೦೦ ಕೋಟಿ ರೂ. ಮೀಸಲು.
15. 'ಸೆಟು' ಹೆಸರಿನಲ್ಲಿ ಐ.ಟಿ. ವಲಯಕ್ಕೆ ನೂತನ ಯೋಜನೆ.
16. ಸಂಶೋಧನೆ ಮತ್ತು ಅಭಿವೃದ್ದಿಗೆ ೧೫೦ ಕೋಟಿ.
17. ೧೫೦ ದೇಶಗಳಿಗೆ ವೀಸಾ ಆನ್ ಅರೈವಲ್ ಸೌಲಭ್ಯ
18. ವಾರ್ಷಿಕ ೧ಕೋಟಿಗಿಂತ ಅಧಿಕ ಆದಾಯ ಹೊಂದಿರುವವರಿಗೆ ೨% ಸರ್‌ಛಾರ್ಜ್‌.
19. ಸೇವಾ ತೆರಿಗೆ ಶೇ.೧೪ಕ್ಕೆ ಏರಿಕೆ. ಸೇವಾ ತೆರಿಗೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ.
20. ಸ್ಥಳೀಯ ಚರ್ಮೋದ್ಯಮಕ್ಕೆ ಪ್ರೋತ್ಸಾಹ. ದೇಶೀಯ ಚರ್ಮೋದ್ಯಮಕ್ಕೆ ಶೇ.೬ ರಷ್ಟು ಸುಂಕ ಕಡಿತ
21. ೨೨ ವಸ್ತುಗಳ ಸಾಂಪ್ರದಾಯಿಕ ತೆರಿಗೆ ಕಡಿತಗೊಳಿಸಲಾಗುವುದು.
22. ಕಪ್ಪು ಹಣ ಹೊಂದಿರುವವರಿಗೆ ೧೦ ವರ್ಷ ಜೈಲು, ಜಾಮೀನು ಇಲ್ಲ.
23. ೨.೫ ಲಕ್ಷದವರೆಗೆ ಟ್ಯಾಕ್ಸ್ ಇಲ್ಲ. ೨.೫ರಿಂದ ೫ ಲಕ್ಷದವರೆಗೆ ಶೇ.೧೦ರಷ್ಟು, ೫ರಿಂದ ೧೦ಲಕ್ಷದವರೆಗೆ ಶೇ.೨೦ರಷ್ಟು, ೧೦ ಲಕ್ಷಕ್ಕೆ ಮೇಲ್ಪಟ್ಟು ಶೇ.೩೦ರಷ್ಟು ತೆರಿಗೆ.
24. ತೆರಿಗೆ ಕಳ್ಳರಿಗೆ ೧೦ ವರ್ಷಗಳ ಕಾಲ ಜೈಲುಶಿಕ್ಷೆ. ಐಟಿ ರಿಟರ್ನ್ಸ್ ಮಾಡದಿದ್ದರೆ ಏಳು ವರ್ಷ ಶಿಕ್ಷೆ
25. ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ವಿಶೇಷ ನೆರವು.
26. ಕಪ್ಪು ಹಣ ನಿಯಂತ್ರಣಕ್ಕೆ ಹೊಸ ಮಸೂದೆ
27. ಕಾರ್ಪೋರೆಟ್ ತೆರಿಗೆ ಶೇ.೩೦ರಿಂದ ಶೇ.೨೫ಕ್ಕೆ ಇಳಿಕೆ. ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೆಟ್ ತೆರಿಗೆ ಇಳಿಕೆ.
◘ದರ ಏರಿಕೆ◘
• ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಆಹಾರ ದರ ಏರಿಕೆ
• ಕಂಪ್ಯೂಟರ್ ಉಪಕರಣಗಳ ಆಮದು ಸುಂಕ ಏರಿಕೆ.
• ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ದರ ಏರಿಕೆ
• ಸಿಗರೇಟು, ಪಾನ್ ಮಸಾಲ ದರ ಏರಿಕೆ.
• ಸಿಗರೇಟಿನ ಮೇಲಿನ ಅಬಕಾರಿ ಸುಂಕ ಶೇ 72 ಯಥಾಸ್ಥಿತಿ ಮುಂದುವರಿಕೆ
• ಬ್ಯೂಟಿ ಪಾರ್ಲರ್, ಸೌಂದರ್ಯ ವರ್ಧಕಗಳ ದರ ಇಳಿಕೆ
• ಕ್ಲಬ್ ಗಳಲ್ಲಿ ಊಟ, ನೋಟ, ಆಟ ಎಲ್ಲವೂ ಕೈ ಕಚ್ಚಲಿದೆ.
• ಕ್ಲಬ್, ಜಿಮ್ ಗಳಲ್ಲಿ ಸದಸ್ಯತ್ವ ದರ ಏರಿಕೆ.
• ಕೋರಿಯರ್ ಸೇವೆ ದುಬಾರಿ
• ವಿಡಿಯೋ ಕೆಮೆರಾ, ಬಿಡಿ ಭಾಗಗಳು.
• ಏರ್ ಟಿಕೆಟ್ ಬುಕ್ಕಿಂಗ್, ಆನ್ ಲೈನ್ ಸೇವೆಗಳು.
• ಸಿಮೆಂಟ್, ಉಕ್ಕು ದರ ಏರಿಕೆ ನಿರೀಕ್ಷೆ
• ರೇಡಿಯೋ ಟ್ಯಾಕ್ಸಿ ಮೇಲೆ ಸೇವಾ ತೆರಿಗೆ ಹೇರಿಕೆ
• ಬಾಕ್ಸೈಟ್ ರಫ್ತು ತೆರಿಗೆ ಶೇ.20 ಯಥಾಸ್ಥಿತಿ.
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
◘ದರ ಇಳಿಕೆ◘
• ಹಣ್ಣು ತರಕಾರಿಗಳಿಗೆ ಸೇವಾ ತೆರಿಗೆ ಇಲ್ಲ
• ಎಲ್ ಸಿಡಿ ಟಿವಿ ಸುಂಕ ವಿನಾಯಿತಿ.
• ಸೋಪು ಹಾಗೂ ತೈಲ ಉತ್ಪನ್ನಗಳ ದರ ಇಳಿಕೆ
• ಪಾದರಕ್ಷೆಗಳ ಮೇಲಿನ ಅಬಕಾರಿ ಸುಂಕ ಶೇ 12 ರಿಂದ ಶೇ 6ಕ್ಕೆ ಇಳಿಕೆ, 1000 ರೂ.ಮೇಲ್ಪಟ್ಟ ಚರ್ಮದ ಪಾದರಕ್ಷೆಗೆ
• ಎಲ್ ಇಡಿ ಪ್ಯಾನೆಲ್ ಮೇಲಿನ ಕಸ್ಟಮ್ ಸುಂಕ ಇಲ್ಲ (19 ಇಂಚಿನ ತನಕ), ಎಲ್ಇಡಿ, ಎಲ್ ಸಿಡಿ ಬೆಲೆ ಇಳಿಕೆ
• ಕ್ರೀಡಾ ಉತ್ಪನ್ನಗಳ ಮೇಲಿನ ಸುಂಕ ಇಳಿಕೆ
• ವಜ್ರ ಮತ್ತು ಅತ್ಯಮೂಲ್ಯ ಹರಳುಗಳ ದರ ಇಳಿಕೆ
• ರೆಡಿಮೇಡ್ ಹಾಗೂ ಬ್ರಾಂಡೆಡ್ ಬಟ್ಟೆಗಳ ದರ ಇಳಿಕೆ
• ಸೌರಶಕ್ತಿ ಉತ್ಪನ್ನಗಳ ಯೂನಿಟ್ ದರ ಇಳಿಕೆ.
• ಮುದ್ರಣ ಮಾಧ್ಯಮಕ್ಕೆ ಯಾವುದೇ ಸೇವಾ ತೆರಿಗೆ ಇಲ್ಲ
• ಉಕ್ಕಿನ ಉತ್ಪನ್ನಗಳ ದರ ಇಳಿಕೆ.
• ಪ್ಯಾಕೇಜಿಂಗ್ ಯಂತ್ರೋಪಕರಣಗಳ ಮೇಲಿನ ಅಬಕಾರಿ ಸುಂಕ ಶೇ 6 ರಷ್ಟು ಇಳಿಕೆ.
• ಮೀಥೈಲ್ ಆಲ್ಕೋಹಾಲ್ ಮೇಲಿನ ಕಸ್ಟಮ್ ಸುಂಕ ಶೇ 5ರಷ್ಟು ಇಳಿಕೆ.
◄ಬಜೆಟ್`ನ ಗಾತ್ರ 2015-16 ಮತ್ತು 2014-15 ರಲ್ಲಿ►
• 1.ಯೋಜನೇತರ ವೆಚ್ಚ =13.12ಲಕ್ಷ ಕೋಟಿ ರೂ.(12.20 ಲಕ್ಷ ಕೋಟಿ ರೂ.)
• 2.ಯೋಜನಾ ವೆಚ್ಚ =4.65 ,, (5.75 ಲಕ್ಷ ಕೋಟಿ ರೂ.)
• 3.ಒಟ್ಟು ವೆಚ್ಚ =17.77 ,, (17.95 ಲಕ್ಷ ಕೋಟಿ ರೂ.)
ವರಮಾನ
• 1.ತೆರಿಗೆಯೇತರ ವರಮಾನ 14.49 ಲಕ್ಷ ಕೋಟಿ ರೂ.(13.64ಲಕ್ಷ ಕೋಟಿ ರೂ).
• 2.ರಾಜ್ಯಗಳ ಪಾಲು 5.24 ಲಕ್ಷ ಕೋಟಿ ರೂ. (3.87 ಲಕ್ಷ ಕೋಟಿ ರೂ.)
• 3.ಕೇಂದ್ರದ ಪಾಲು 9.20 ಲಕ್ಷ ಕೋಟಿ ರೂ. (9.77 ಲಕ್ಷ ಕೋಟಿ ರೂ.)
• 4.ನಿವ್ವಳ ಸಾಲದ ಮಿತಿ 4.56 ಲಕ್ಷ ಕೋಟಿ ರೂ. (4.53 ಲಕ್ಷ ಕೋಟಿ ರೂ)
ಇತರೆ
• ವಿತ್ತೀಯ ಕೊರತೆ ಜಿಡಿಪಿಯ ಶೇ. ರೂ.3.9 -ಸಾದ್ಯತೆ ಶೇ.4.1
• ವರಮಾಹ ಕೊರತೆ ಜಿಡಿಪಿಯ ಶೇ.2.8 -/ಶೇ.2.9.
• ಸೇವಾ ತೆರಿಗೆ ಸಂಗ್ರಹ ಶೇ.14.00 (ಶೇ.12.36.
(ಆವರಣದಲ್ಲಿ 2014-15 ರ ಅಂಕಿ ಅಂಶಗಳು ಇವೆ)
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ಸರ್ಕಾರಿ ಉದ್ಯೋಗಿಗಳಿಗೆ ಕೆಲವು ಸೌಲತ್ತಗಳು►
2004 ರಿಂದ ನೇಮಕವಾದ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ (ಪಿಂಚಣಿಯನ್ನು ರದ್ದುಮಾಡಲಾಗಿದೆ ಅವರಿಗೆ ಪಿಂಚಣಿ ಬರುವುದಿಲ್ಲ (ಎನ್.ಡಿಎಯೋಜನೆ). ಅದಕ್ಕಾಗಿ ಸರ್ಕಾರ ‘ನೌಕರರ ಭವಿಷ್ಯ ನಿಧಿ’ಯೋಜನೆಯಲ್ಲಿ ನೌಕರರು ತಮ್ಮ ಅಪರ ವಯಸ್ಸಿನಲ್ಲಿ ಬದುಕಲು ‘ನೌಕರರ ಭವಿಷ್ಯ ನಿಧಿ’ಯಲ್ಲಿ ವೇತನದ 12% (10%)ಹಣ ತೊಡಗಿಸಿರಬೇಕು. ಸರ್ಕಾರವೂ ಅಷ್ಟೇ ಹಣ ಅದಕ್ಕೆ ಸೇರಿಸಿಕೊಡುವುದು. ಆದರೆ ಸರ್ಕಾರ ಕೊಡುವ ಹಣವನ್ನು ಸೆfಕಾರವು ಕಂಪನಿಗಳ ಷೇರುಗಳಲ್ಲಿ ಇಡುವುದು. ಅದು ನಿವೃತ್ತರಿಗೆ ಸಿಗದು(?); ಅದರಿಂದ ಮಾಸಿಕ ವರಮಾನವೂ ಬರವುದಿಲ್ಲ. ಅದಕ್ಕಾಗಿ ಈ ಬಜೆಟ್ಟಿನಲ್ಲಿ ಕೆಲವು ಆಯ್ಕೆ ನೀಡಿದೆ.
ನೌಕರರಿಗೆ ಕೆಲವು ಆಯ್ಕೆ
ಉದ್ಯೋಗಿಗಳ ಪ್ರತಿ ತಿಂಗಳ ವೇತನದಲ್ಲಿ ಈವರೆಗೂ ‘ನೌಕರರ ಭವಿಷ್ಯ ನಿಧಿ’ಗೆ (ಇಪಿಎಫ್‌ಗೆ) ನಿಗದಿತ ಮೊತ್ತ ಮೂಲದಲ್ಲೇ ಕಡಿತ­ವಾಗುತ್ತಿತ್ತು. ಇನ್ನು ಮುಂದೆ ‘ಇಪಿಎಫ್‌’ನಲ್ಲೇ ಹಣ ತೊಡಗಿಸಬೇಕು ಎಂದೇನಿಲ್ಲ. ನೂತನ ಪಿಂಚಣಿ ಯೋಜನೆ­ಯಲ್ಲಿಯೂ (ಎನ್‌ಪಿಎಸ್‌) ಹಣ ತೊಡಗಿಸಲು ಅವಕಾಶವಿದೆ ಎಂದು ಕೇಂದ್ರ ಬಜೆಟ್‌ನಲ್ಲಿ ಹೇಳಲಾಗಿದೆ.
ನಿಗದಿಪಡಿಸಿದ್ದಕ್ಕಿಂತ ಕಡಿಮೆ ಮಾಸಿಕ ವೇತನ ಪಡೆಯುತ್ತಿರುವವರು ನೌಕರರ ಭವಿಷ್ಯ ನಿಧಿಗೆ ಹಣ ತೊಡಗಿಸುವುದು ಅವರ ಆಯ್ಕೆಗೆ ಬಿಟ್ಟಿದ್ದು. ಆದರೆ ಉದ್ಯೋಗದಾತ ಸಂಸ್ಥೆಯು ತನ್ನ ಉದ್ಯೋಗಿಯ ಇಪಿಎಫ್‌ಗೆ ನೀಡುತ್ತಿರುವ ಪಾಲಿನ ಮೊತ್ತ ಯಥಾರೀತಿ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಆದರೆ, ನೌಕರರ ಮಾಸಿಕ ವೇತನದ ಪ್ರಮಾಣ ಎಷ್ಟು? ಎಂಬ ಬಗ್ಗೆ ಅವರು ಬಜೆಟ್‌ನಲ್ಲಿ ಸ್ಪಷ್ಟ ವಿವರಣೆ ನೀಡಿಲ್ಲ.
ಸದ್ಯ, ಪ್ರತಿ ನೌಕರರು ತಮ್ಮ ಮೂಲ ವೇತನದಲ್ಲಿ ಶೇ 12ರಷ್ಟನ್ನು ಭವಿಷ್ಯ­ನಿಧಿಗೆ ನೀಡುವುದು ಕಡ್ಡಾಯವಾಗಿದೆ. ಇನ್ನು ಮುಂದೆ, ನೌಕರರು ತಮಗೆ ಇಷ್ಟವಾದರೆ ಮಾತ್ರ ಭವಿಷ್ಯ ನಿಧಿಗೆ ವಂತಿಗೆ ನೀಡಬಹುದು.
ಇದೇ ವೇಳೆ, ಖಾಸಗಿ ಭವಿಷ್ಯನಿಧಿ ಸಂಘಟನೆಗಳ ಸದಸ್ಯರು ನಿರ್ದಿಷ್ಟ ಅವಧಿಗೂ ಮುಂಚೆಯೇ ಪಿಎಫ್ ಪಡೆದರೆ, ಅದಕ್ಕೆ ತೆರಿಗೆ ಪಾವತಿಸಬೇಕಿಲ್ಲ ಎಂದೂ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಎನ್‌ಪಿಎಸ್‌ನಲ್ಲಿ ಅವಕಾಶ
ನೌಕರರು ಭವಿಷ್ಯ ನಿಧಿಯಲ್ಲಿ ಮಾತ್ರವೇ ಹಣ ತೊಡಗಿಸಬೇಕು ಎಂದೇನೂ ಇಲ್ಲ. ಹೊಸ ಪಿಂಚಣಿ ಯೋಜನೆಯಲ್ಲೂ (ಎನ್‌ಪಿಎಸ್‌) ಹಣ ತೊಡಗಿಸಬಹುದು ಎಂದು ಜೇಟ್ಲಿ ಹೇಳಿದ್ದಾರೆ.
ಅಲ್ಲದೆ, ಆರೋಗ್ಯ ವಿಮೆ ಮತ್ತು ನೌಕರರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಆರೋಗ್ಯ ಯೋಜನೆಗಳಲ್ಲಿಯೂ ಹಣ ತೊಡಗಿಸಬಹುದಾಗಿದೆ.
2004ನೇ ಜನವರಿ 1ರಿಂದ ಸೇವೆಯಲ್ಲಿರುವ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಮತ್ತು ಕೇಂದ್ರದ ಸ್ವಾಯತ್ತ ಸಂಸ್ಥೆಗಳಲ್ಲಿರುವ ನೌಕರರಿಗೆ ಎನ್‌ಪಿಎಸ್‌ ಅನ್ವಯಿಸಲಿದೆ (ಅವರಿಗೆ ಪಿಂಚಣಿಬರುವುದಿಲ್ಲ).
(ಆದರೆ ಈ ಉಳಿತಾಯದ ಬಡ್ಡಿಯಿಂದ ಇನ್ನು 20ವರ್ಷಗಳ ನಂತರ ವೃದ್ಧಾಪ್ಯ ಜೀವನ ಸಾಗಿಸಲು ಕಷ್ಟ; ಸಾಧ್ಯವೇ?)
ಕೆಲವು ವಿಶೇಷ ಯೋಜನೆಗಳು :
ಉನ್ನತ ಶಿಕ್ಷಣಕ್ಕೆ ಬಂಪರ್‌ ಕೊಡುಗೆ

1.ರೂ. 68,968 ಕೋಟಿ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡ¬ಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪ¬ನೆಗೆ ಆದ್ಯತೆ ನೀಡಲಾಗಿದೆ.
2. ಆರು ಅಖಿಲಭಾರತವೈದ್ಯಕೀಯ ಸಂಸ್ಥೆ (ಏಮ್ಸ) ಸ್ಥಾಪನೆ. ಕರ್ನಾಟಕದಲ್ಲಿ ಒಂದು ಭಾರತೀಯ ತಣತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆ. ಇದರಿಂದ ದೇಶದ ಐಐಎಂಗಳ ಸಂಖ್ಯೆ 20ಕ್ಕೂ , ಐಐಟಿಗಳ ಸಂಖ್ಯ 23 ಕ್ಕೂ ಏರುವುದು.
3.ವಿದ್ಯಾಲಕ್ಷ್ಮಿ ಯೋಜನೆ : ಹಣದ ಕೊರತೆಯಿಂದ ಬಡ ವಿದ್ಯಾರ್ಥಿಗಳು ಉನ್ನತ ಶಕ್ಷಣದಿಂದ ವಂಚಿತರಾಗಬಾರದು ಎಂದು ,”ಪ್ರಧನ ಮಂತ್ರಿ ವಿದ್ಯಾಲಕ್ಷ್ಮಿಯೋಜನೆ”ಯಡಿ ತಂತ್ರಜ್ಞಾನ ಆಧಾರಿತ ಉನ್ನತ ಶಿಕ್ಷಣಕ್ಕೆ ಹಣಕಾಸು ಸೌಲಭ್ಯ , ಸಾಲ, ವಿದ್ಯಾರ್ಥಿ ವೇತನಘೋಷಿಸಲಾಗಿದೆ. ಸೌಲಭ್ಯ ಪಡೆಯಲು ಸಮಗ್ರ ಮಾಹಿತಿ ಇನ್ನೂ ನೀಡಬೇಕಾಗಿದೆ.
4.ಆಸಕ್ತಿ ಹೊಂದಿದ ರಾಜ್ಯದ ರಾಜ್ಯದ 2.5 ಲಕ್ಷ ಗ್ರಾಮಗಳಿಗೆ ಆಪ್ಟಿಕಲ್ ಫೈಬರ್ ಸೌಲಭ್ಯದ ದೂರ ಸಂಪರ್ಕ ಒದಗಿಸುವ ಯೋಜನೆ.
5.ತಂತ್ರಜ್ಞಾನ ವಲಯದಲ್ಲಿ ಸ್ಟಾರ್ಟ್ಅಪ್‌ (ಸಣ್ಣ ಉದ್ದಿಮೆ) ಸ್ಥಾಪನೆಗೆ ಮತ್ತು ಉದ್ದಿಮೆದಾರರಿಗೆ ಉತ್ತೇಜನ ನೀಡಲು ರೂ. 1,000 ಕೋಟಿ ನಿಧಿ ಸ್ಥಾಪಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ವಲಯದಲ್ಲಿ ಸಣ್ಣ ಉದ್ದಿಮೆ ಸ್ಥಾಪನೆಗೆ ಹೆಚ್ಚಿನ ಆಸಕ್ತಿ ಕಂಡು­ಬರುತ್ತಿದೆ. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಿ, ಅವು ಬಲವಾಗಿ ನೆಲೆಯೂರುವಂತೆ ಮಾಡಲು ತಂತ್ರಜ್ಞಾನ ಸಂಸ್ಥೆ ಮತ್ತು ಉದ್ಯಮದಾರರ ನಿಧಿ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಕಟಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನೇತರ ವಲಯದ ವರಮಾನ 2014–15ರಲ್ಲಿ ರೂ. 73.35 ಲಕ್ಷ ಕೋಟಿಗಳಷ್ಟಾಗಿದೆ. ಈ ಉದ್ಯಮ ಕ್ಷೇತ್ರ ನೇರವಾಗಿ 40 ಲಕ್ಷ ಮಂದಿಗೆ ಉದ್ಯೋಗ ನೀಡಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಯುವಪೀಳಿಗೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಬೇಕು, ದೇಶದಲ್ಲಿ ಉದ್ಯಮ ವ್ಯವಹಾರ ಚಟುವಟಿಕೆ ನಡೆಸುವುದನ್ನು ಸುಲಭವಾಗಿಸಬೇಕು ಎಂದಿದ್ದಾರೆ.
ತಂತ್ರಜ್ಞಾನ ವಲಯದಲ್ಲಿ ಹೊಸ ಉದ್ಯಮ ಸ್ಥಾಪನೆ ಮತ್ತು ಸ್ವ–ಉದ್ಯೋಗ ಕಾರ್ಯಕ್ರಮ ಉತ್ತೇಜಿಸಲು ‘ಸ್ವ–ಉದ್ಯೋಗ ಮತ್ತು ಕೌಶಲ ಸದ್ಬಳಕೆ’ (ಎಸ್‌ಇಟಿಯು) ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ ಎಂದಿದ್ದಾರೆ. 
ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
◄2015-2016 ರ ಬಜೆಟ್`ನಲ್ಲಿ ಕರ್ನಾಟಕಕ್ಕೆ ಕೊಡುಗೆ►
೧.ಕರ್ನಾಟಕಕ್ಕೆ ಕೊನೆಗೂ ‘ಭಾರತೀಯ ತಂತ್ರಜ್ಞಾನ ಸಂಸ್ಥೆ’ (ಐಐಟಿ) ದೊರೆತಿದೆ. ಕನ್ನಡಿಗರ ಬಹು ದಿನಗಳ ನಿರೀಕ್ಷೆ ಕೈಗೂಡಿದೆ.
೨.‘ವಿಶ್ವ ಪರಂಪರೆ ಪಟ್ಟಿ’ಯಲ್ಲಿ ಸೇರಿರುವ ವಿಶ್ವವಿಖ್ಯಾತ ಹಂಪಿಯನ್ನು ಮೂಲಸೌಲಭ್ಯಗಳ ಅಭಿವೃದ್ಧಿಗೆ ಗುರುತಿಸಲಾಗಿದೆ.
೩.ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲಿನ ಪ್ರಮಾಣ ಏರಿಕೆ ಆಗಿರುವು­ದರಿಂದ ಪ್ರಸಕ್ತ ಹಣಕಾಸು ವರ್ಷ ಕರ್ನಾಟಕಕ್ಕೆ ರೂ. 8,200 ಕೋಟಿ ಹೆಚ್ಚುವರಿ ಹಣ ದೊರೆತಿದೆ.
೪.ಮೆಟ್ರೋಗೆ ಕೊಡಿಗೆ,
೧.ಐಐಟಿ
ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಲೋಕಸಭೆಯಲ್ಲಿ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕದಲ್ಲಿ ಐಐಟಿ ಸ್ಥಾಪಿಸಲು ಉದ್ದೇಶಿಸಿ­ರುವು­ದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಐಐಟಿಗೆ ಅಗತ್ಯವಿರುವ ಜಮೀನು ಗುರುತಿಸಿ, ಮಂಜೂರು ಮಾಡಬೇಕು. ಕೇಂದ್ರ ಸರ್ಕಾರದ ತಜ್ಞರು ಅದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವರು. ಕರ್ನಾಟಕ ಸರ್ಕಾರ ಎಷ್ಟು ಬೇಗನೆ ತೀರ್ಮಾನ ಮಾಡಲಿದೆಯೊ ಅಷ್ಟು ತ್ವರಿತವಾಗಿ ಐಐಟಿ ಬರಲಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಸದ್ಯದ ನಿಯಮದ ಪ್ರಕಾರ ಐಐಟಿ ಸ್ಥಾಪನೆಗೆ 500ಎಕರೆ ಭೂಮಿ ಅಗತ್ಯವಿದೆ. ಆದರೆ, ಕಡಿಮೆ ಜಮೀನಿನಲ್ಲಿ ಸಂಸ್ಥೆ ಕಟ್ಟುವ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರ ಈಗಾಗಲೇ ತಜ್ಞರ ಸಮಿತಿ ರಚಿಸಿದೆ. ಈ ಸಮಿತಿ ಸಂಸ್ಥೆಯ ವಿನ್ಯಾಸದ ಮಾದರಿಗಳನ್ನು ಸಿದ್ಧಪಡಿಸುತ್ತಿದ್ದು ಶೀಘ್ರವೇ ವರದಿ ನೀಡಲಿದೆ.
ಯುಪಿಎ ಸರ್ಕಾರವೇ ರಾಜ್ಯಕ್ಕೆ ಐಐಟಿ ಮಂಜೂರು ಮಾಡಲು ಉದ್ದೇಶಿಸಿತ್ತು. 2006­ರಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಅರ್ಜುನ್‌ ಸಿಂಗ್‌ ಕೆಲವು ರಾಜ್ಯಗಳ ಜತೆ ಕರ್ನಾ­ಟಕಕ್ಕೂ ಐಐಟಿ ನೀಡಲು ಅಪೇಕ್ಷಿಸಿದ್ದರು. ಸ್ಥಳ ಪರಿಶೀಲನೆಗೆ ಕೇಂದ್ರ ಸರ್ಕಾರ ತಜ್ಞರ ಸಮಿತಿ­ಯನ್ನು ರಚಿಸಿತ್ತು. ಖ್ಯಾತ ವಿಜ್ಞಾನಿ ಹಾಗೂ ಪ್ರಧಾನಿ ಅವರ ವೈಜ್ಞಾನಿಕ ಸಲಹೆಗಾರರಾಗಿದ್ದ ಡಾ. ಸಿ.ಎನ್‌.ಆರ್‌. ರಾವ್‌ ಅವರು ಮೈಸೂರನ್ನು ಐಐಟಿಗೆ ಶಿಫಾರಸು ಮಾಡಿದ್ದರು.
ಮರು ವರ್ಷ ಐಐಟಿ, ಅವಿಭಜಿತ ಆಂಧ್ರ ಪ್ರದೇ­ಶದ ಮೆಡಕ್‌ ಜಿಲ್ಲೆಗೆ ಸ್ಥಳಾಂತರಗೊಂಡಿತು. 8 ವರ್ಷದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಜ್ಯದ ಜನರ ಕನಸನ್ನು ಸಾಕಾರಗೊಳಿಸಿದೆ.
೨.ಹಂಪಿ ವಿಶ್ವವಿಖ್ಯಾತ ಪ್ರವಾಸಿ ತಾಣ
ಕೇಂದ್ರ ಹಣ­ಕಾಸು ಸಚಿವರು ಮೂಲಸೌಲಭ್ಯ ಅಭಿವೃದ್ಧಿಪಡಿ­ಸಲು ಗುರುತಿಸಿರುವ ವಿಶ್ವವಿಖ್ಯಾತ 25 ಪ್ರವಾಸಿ ತಾಣಗಳಲ್ಲಿ ಹಂಪಿಯೂ ಸೇರಿದೆ.
ಅರುಣ್‌ ಜೇಟ್ಲಿ ಮಾಡಿದ ಬಜೆಟ್‌ ಭಾಷಣ­ದಲ್ಲಿ, ಹಂಪಿ ಪ್ರದೇಶದ ಸೌಂದ­ರ್ಯೀಕರಣ, ಸೂಚನಾ ಫಲಕಗಳ ಅಳವಡಿಕೆ, ಮಾಹಿತಿ ಕೇಂದ್ರ, ದೀಪಾ­ಲಂಕಾರ, ವಾಹನ ನಿಲುಗಡೆ, ಪ್ರವಾ­ಸಿ­ಗರ ಸುರಕ್ಷತೆ, ಶೌಚಾಲಯ, ಕುಡಿ­ಯುವ ನೀರು ಹಾಗೂ ಅಂಗವಿಕಲರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಅಭಿ­ವೃದ್ಧಿಪ­­ಡಿಸಲಾಗುವುದು ಎಂದು ಹೇಳಿದ್ದಾರೆ.
ಹಂಪಿ 1986ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ. 1999ರಲ್ಲಿ ಇದನ್ನು ಅವನತಿ ಅಂಚಿನ­ಲ್ಲಿ­ರುವ ಸ್ಮಾರಕ ಎಂದು ಘೋಷಿಸಲಾಗಿದೆ. ಅನಂತರ ವಿಶ್ವವಿಖ್ಯಾತ ಸ್ಮಾರಕದ ಜಾಗ ಅತಿಕ್ರಮಣ ತೆರವುಗೊಳಿಸಲಾಗಿದೆ.
ಹಂಪಿಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಮೂಲ ಸೌಲಭ್ಯಗಳ ಕೊರತೆ ಇದೆ. ಸ್ಮಾರಕದ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರಾಧಿಕಾರ ರಚಿಸಿದೆ. ಮೂಲ­ಸೌಲ­ಭ್ಯಕ್ಕೆ ಸಂಬಂಧಿಸಿದ ಸಮಗ್ರ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಬೇಕಿದೆ. ಅದಕ್ಕೆ ಅಗತ್ಯವಿ­ರುವ ಹಣವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.
೩.ರೂ. 8,200 ಕೋಟಿ ಹೆಚ್ಚುವರಿ ಹಣ
ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳ ಪಾಲಿನ ಪ್ರಮಾಣ ಏರಿಕೆ ಆಗಿರುವು­ದರಿಂದ ಪ್ರಸಕ್ತ ಹಣಕಾಸು ವರ್ಷ ಕರ್ನಾಟಕಕ್ಕೆ ರೂ. 8,200 ಕೋಟಿ ಹೆಚ್ಚುವರಿ ಹಣ ದೊರೆತಿದೆ.
2014–15ನೇ ಸಾಲಿನಲ್ಲಿ ರೂ. 16,589 ಕೋಟಿ ಹಂಚಿಕೆ ಮಾಡಲಾಗಿತ್ತು. 2015–16ನೇ ಸಾಲಿನಲ್ಲಿ ರೂ. 24,790 ಕೋಟಿ ನಿಗದಿಪಡಿಸಲಾಗಿದೆ.
ಹದಿನಾಲ್ಕನೇ ಹಣಕಾಸು ಆಯೋಗ ಕೇಂದ್ರದ ತೆರಿಗೆಗಳಲ್ಲಿ ರಾಜ್ಯಗಳಿಗೆ ಹಂಚಿಕೆ ಮಾಡುವ ಪಾಲನ್ನು ಶೇ32ರಿಂದ 42ಕ್ಕೆ ಏರಿಕೆ ಮಾಡುವಂತೆ ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ಹಣ ದೊರೆತಿದೆ.
೪.ಮೆಟ್ರೋಗೆ 947ಕೋಟಿ ರೂ.
ಬೆಂಗಳೂರು ಮೆಟ್ರೋಗೆ 2015-16 ರ ಮುಂಗಡ ಪತ್ರದಲ್ಲಿ 994 ಕೋಟಿ ರೂ. ನೀಡಿದ್ದಾರೆ. 2014-15ರಲ್ಲಿ 947ಕೋಟಿ ರೂ. ನೀಡಲಾಗಿತ್ತು.

No comments:

Post a Comment

Note: only a member of this blog may post a comment.