Pages

Friday 1 January 2016

ವಿವಿಯಾಗಿ ಮಂಡ್ಯ ಕಾಲೇಜು, ಕೇಂದ್ರ ಸರ್ಕಾರದ ಅನುಮೋದನೆ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
ವಿವಿಯಾಗಿ ಮಂಡ್ಯ ಕಾಲೇಜು, ಕೇಂದ್ರ ಸರ್ಕಾರದ ಅನುಮೋದನೆ
 ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ 
BY ವಿಜಯವಾಣಿ ನ್ಯೂಸ್ · 
ಬೆಂಗಳೂರು: ಮಂಡ್ಯ ಪ್ರಥಮ ದರ್ಜೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದ್ದು, 55 ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ ಎಂದು ರಾಜ್ಯ ಕಾನೂನು, ಸಂಸದೀಯ ವ್ಯವಹಾರ ಹಾಗೂ ಉನ್ನತ ಶಿಕ್ಷಣ ಸಚಿವ ಸಚಿವ ಟಿ.ಬಿ. ಜಯಚಂದ್ರ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಬೆಂಗಳೂರಿನ ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಮಾರ್ಪಡಿಸಲೂ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು ಅದಕ್ಕೂ 55 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿದೆ. ಇವುಗಳಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ಅವರು ನುಡಿದರು.
ರಾಜ್ಯಾದ್ಯಂತ ಜನವರಿ 12ರಿಂದ 19ರವರೆಗೆ ಎಲ್ಲಾ ಪದವಿ ಹಾಗೂ ಪಿ.ಯು. ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಆಚರಿಸಲಾಗುವುದು. ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಏಕರೂಪ ಪಠ್ಯ, ಏಕರೂಪ ವೇಳಾಪಟ್ಟಿ, ಏಕರೂಪ ಪರೀಕ್ಷೆ ಜಾರಿಗೆ ತರುವ ಸಲುವಾಗಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

No comments:

Post a Comment

Note: only a member of this blog may post a comment.