Pages

Wednesday 30 December 2015

☼ ಸಾಮಾನ್ಯ ಜ್ಞಾನ ಕ್ವಿಜ್‌ ☼


1)ಪ್ರಸಕ್ತ ವರ್ಷದಲ್ಲಿ (2015) ನಡೆದ ರಾಷ್ಟ್ರೀಯ ಜೀವವೈವಿಧ್ಯ ಸಮಾವೇಶ ಕೆಳಕಂಡ ಯಾವ ರಾಜ್ಯದಲ್ಲಿ ನಡೆಯಿತು?
a)ಕರ್ನಾಟಕ 
b) ತಮಿಳುನಾಡು
c) ಕೇರಳ     
d) ಮಹಾರಾಷ್ಟ್ರ

2)‘ಧನುರ್ಧಾರಿ’ ಪತ್ರಿಕೆಯನ್ನು ಆರಂಭಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಯಾರು?
a) ಆಲೂರು ವೆಂಕಟರಾವ್‌
b) ಎಸ್‌. ನಿಜಲಿಂಗಪ್ಪ
c) ಹರ್ಡೆಕರ್‌ ಮಂಜಪ್ಪ
d) ಕಡಿದಾಳು ಶಾಮಣ್ಣ

3)ವಿಶ್ವದಲ್ಲೇ ಮೊದಲ ಬಾರಿಗೆ ಕುಟುಂಬ ಯೋಜನೆ (ಫ್ಯಾಮಿಲಿ ಪ್ಲಾನಿಂಗ್‌) ಯೋಜನೆಯನ್ನು ಜಾರಿಗೆ ತಂದ ದೇಶ ಯಾವುದು?
a) ಭಾರತ        
b) ಪಾಕಿಸ್ತಾನ
c) ಚೀನಾ        
d) ಜಪಾನ್‌

4)ಜಯದೇವಿ ತಾಯಿ ಲಿಗಾಡೆ ಅವರು ಯಾವ ಸಮ್ಮೇಳನದ ಮೊದಲ ಅಧ್ಯಕ್ಷರಾಗಿದ್ದರು?
a)  ಕನ್ನಡ ಸಾಹಿತ್ಯ ಸಮ್ಮೇಳನ
b) ಜಾನಪದ ಸಾಹಿತ್ಯ ಸಮ್ಮೇಳನ
c) ಗಡಿನಾಡು ಸಾಹಿತ್ಯ ಸಮ್ಮೇಳನ
d) ಹೊರನಾಡು ಕನ್ನಡ ಸಾಹಿತ್ಯ ಸಮ್ಮೇಳನ

5) ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯತ್ವವನ್ನು ಪಡೆಯದಿದ್ದರೂ ಸದನದ ಚರ್ಚೆಯಲ್ಲಿ ಯಾರು ಭಾಗವಹಿಸಬಹುದು?
a) ರಾಷ್ಟ್ರಪತಿಗಳು
b) ಅಟಾರ್ನಿ ಜನರಲ್‌
c) ಉಪರಾಷ್ಟ್ರಪತಿ
d) ರಾಜ್ಯಪಾಲರು

6) ಕರ್ನಾಟಕ ಸರ್ಕಾರ ದೇವದಾಸಿ ಪದ್ಧತಿ ನಿಷೇಧ ಕಾನೂನನ್ನು ಕೆಳಕಂಡ ಯಾವ ವರ್ಷದಲ್ಲಿ ಜಾರಿಗೆ ತಂದಿತು?
a) 1981    
b) 1982
c) 1983     
d) 1984

7) ಭೌಗೋಳಿಕವಾಗಿ ಯಾವ ರಾಜ್ಯ ಅತಿ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿದೆ?
a) ಪಶ್ಚಿಮ ಬಂಗಾಳ 
b) ಒಡಿಶಾ
c) ಕೇರಳ 
d) ಗುಜರಾತ್‌

8) ಭಾರತದ ನೀತಿ ಆಯೋಗಕ್ಕೆ ಉಪಾಧ್ಯಕ್ಷರಾಗಿರುವ ಖ್ಯಾತ ಅರ್ಥಶಾಸ್ತ್ರಜ್ಞರನ್ನು ಕೆಳಕಂಡವರಲ್ಲಿ ಗುರುತಿಸಿ?
a) ಅಮರ್ತ್ಯಸೇನ್‌
b) ರಾಜೀವ್‌ ಸರ್‌ದೇಸಾಯಿ
c) ಮನಮೋಹನ್‌ ಸಿಂಗ್‌
d) ಅರವಿಂದ್‌ ಪನಗರಿಯಾ

9)1974ರಲ್ಲಿ ಕಾಂಗೋ ದೇಶದಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ಕಾಯಿಲೆ ಯಾವುದು? ಇದು ವೈರಸ್‌ನಿಂದ ಬರುತ್ತದೆ.
a) ಎಬೋಲಾ
b) ಎಚ್‌ಐವಿ
c) ಕ್ಷಯ  
d)  ಪ್ಲೆಗ್‌

10) 2014 ಮಕ್ಕಳ ಮರಣ ಪ್ರಮಾಣ ವರದಿ ಪ್ರಕಾರ ಯಾವ ದೇಶದಲ್ಲಿ ಅತಿ ಹೆಚ್ಚು ಮಕ್ಕಳು ಹಸಿವಿನಿಂದ ಮರಣ ಹೊಂದುತ್ತಿದ್ದಾರೆ?
a) ಭಾರತ                    
b) ಉತ್ತರ ಮತ್ತು ದಕ್ಷಿಣ ಸೂಡಾನ್‌
c) ಉಗಾಂಡ                   
d) ಕಾಂಬೋಡಿಯಾ

ಉತ್ತರಗಳು.... 1–c, 2–c, 3–a, 4–a, 5–b, 6–b, 7–d, 8–d, 9–a, 10–a

No comments:

Post a Comment

Note: only a member of this blog may post a comment.