Pages

Wednesday, 30 December 2015

ಸಾಮಾನ್ಯ ಜ್ಞಾನ ಕ್ವಿಜ್‌

1)ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಕೋಳಿ ಸಾಕಾಣಿಕೆಯನ್ನು ಮಾಡಲಾಗುತ್ತದೆ?
a) ಆಂಧ್ರಪ್ರದೇಶ
b) ಕರ್ನಾಟಕ
c) ಬಿಹಾರ 
d) ಉತ್ತರ ಪ್ರದೇಶ

2) ಭಾರತದ ಪ್ರಸಿದ್ಧ ಸಾಂಬಾರ ಪರ್ದಾಥವೊಂದು ಗ್ವಾಟೆಮಾಲ ದೇಶದ ಮುಖ್ಯ ಬೆಳೆಯಾಗಿದೆ. ಸಾಂಬಾರ ಪರ್ದಾಥ ಯಾವುದು?
a) ಲವಂಗ 
b) ಏಲಕ್ಕಿ
c) ಕಾಳು ಮೆಣಸು
d) ಕೊತ್ತಂಬರಿ ಬೀಜ (ಧನಿಯಾ)

3) ದೇಶದಲ್ಲಿ 80 ದಶಕದಲ್ಲಿ ಹಸಿರು ಕ್ರಾಂತಿಯಂತೆ ಸುವರ್ಣ ಕ್ರಾಂತಿಯನ್ನು ನಡೆಸಲಾಯಿತು. ಇದು ಯಾವುದಕ್ಕೆ ಸಂಬಂಧಿಸಿದೆ?
a) ಕೋಳಿಮೊಟ್ಟೆ ಉತ್ಪತ್ತಿ
b) ಗೊಬ್ಬರ ಉತ್ಪಾದನೆ
c) ಹಣ್ಣು ಉತ್ಪಾದನೆ
d) ಹಾಲು ಉತ್ಪಾದನೆ

4)ಭಾರತದಲ್ಲಿ ಬೆಳೆಗಳನ್ನು ಬೆಳೆಯುವ ಕಾಲವನ್ನು ಖಾರಿಫ್‌ ಮತ್ತು ರಾಬಿ ಎಂದು ವಿಂಗಡಿಸಲಾಗಿದೆ. ಖಾರಿಫ್‌ ಮತ್ತು ರಾಬಿಯನ್ನು ಕ್ರಮವಾಗಿ ಹೀಗೂ ಕರೆಯಬಹುದು?
a) ಹಿಂಗಾರು-ಮುಂಗಾರು
b) ಮುಂಗಾರು-ಜೈದ್
c) ಮುಂಗಾರು-ಮಧ್ಯಮ ಹಿಂಗಾರು
d) ಮುಂಗಾರು-ಹಿಂಗಾರು

5)ರೈಸ್ ಬೌಲ್ ಆಫ್ ಇಂಡಿಯಾ ಎಂದು ಯಾವ ನದಿಗಳ ಮುಖಜಭೂಮಿಯನ್ನು ಕರೆಯಲಾಗುತ್ತದೆ?
a) ಕೃಷ್ಣಾ-ಗೋದಾವರಿ
b) ತುಂಗಾ-ಭದ್ರಾ
c) ಗಂಗಾ-ಯಮುನಾ
d) ಕಾವೇರಿ-ಹೇಮಾವತಿ

6)ಸ್ಪೈಸ್ (ಸಾಂಬಾರ) ಗಾರ್ಡನ್ ಆಫ್ ಇಂಡಿಯಾ ಎಂದು ಯಾವ ರಾಜ್ಯವನ್ನು ಕರೆಯಲಾಗುವುದು?
a) ತಮಿಳುನಾಡು
b) ಕೇರಳ
c) ಗೋವಾ 
d) ಕರ್ನಾಟಕ

7)ದೇಶದಲ್ಲಿ ಕೇಂದ್ರೀಯ ಕುರಿ ಅಭಿವೃದ್ಧಿ(ಬೆಳೆಸುವ) ಸಂಸ್ಥೆಗಳನ್ನು ಐದು ಕಡೆ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಅದು ಎಲ್ಲಿದೆ?
a) ಬನ್ನೂರು
b) ಹಿರಿಯೂರು
c) ಚಳ್ಳಕೆರೆ 
d) ಬಾಗೇಪಲ್ಲಿ

8)ದೇಶದಲ್ಲೇ ಮೀನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
a) ಮಹಾರಾಷ್ಟ್ರ
b) ಕೇರಳ
c) ಗುಜರಾತ್
d)ಪಶ್ಚಿಮ ಬಂಗಾಳ

9)ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮಲ್ಬರಿ ತಳಿಯನ್ನು ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತದೆ?
a) ಕರ್ನಾಟಕ
b) ಮಧ್ಯಪ್ರದೇಶ
c) ಬಿಹಾರ
d) ಆಸ್ಸಾಂ

10)ಹಾಲಿನ ಕ್ರಾಂತಿಗಾಗಿ ಕೇಂದ್ರ ಸರ್ಕಾರ 1970ರಲ್ಲಿ ಮೊದಲ ಹಂತದ ಆಪರೇಷನ್ ಫ್ಲಡ್ ಪ್ರಾಜೆಕ್ಟ್-1 ಅನ್ನು ಆರಂಭಿಸಿತು. ಇದು ಯಾವ ವರ್ಷ ಮುಕ್ತಾಯವಾಯಿತು?
1) 1980
b) 1981 
c) 1982
d) 1983

#ಉತ್ತರಗಳು: 1- a, 2- b, 3-c, 4-d, 5-a, 6-b, 7-c, 8-d, 9-a, 10-b

No comments:

Post a Comment

Note: only a member of this blog may post a comment.