Pages

Wednesday, 30 December 2015

◘ ಕ್ವಿಜ್‌ ◘

 
1) ಕೇಂದ್ರ ಸರ್ಕಾರ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತು. ಈ ಅಂಚೆ ಚೀಟಿ ಅನಾವರಣಗೊಂಡ ಹಿನ್ನೆಲೆ ಏನು?
a) 125ನೇ ಜನ್ಮ ದಿನಾಚರಣೆ ಅಂಗವಾಗಿ
b) ಭಾರತ ರತ್ನ ಪುರಸ್ಕಾರ ನೀಡಿದ ಸವಿನೆನಪಿಗೆ
c)  ಅಂಬೇಡ್ಕರ್‌ ವರ್ಷಾಚರಣೆಗಾಗಿ 
d)  ಸಂವಿಧಾನ ರಚನೆಗಾಗಿ
2) ಕಳೆದ ಸೆಪ್ಟೆಂಬರ್‌ 10 ರಂದು ಯಾವ ದೇಶದ ಧ್ವಜವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಹಾರಿಸಲಾಯಿತು?
a) ಇಸ್ರೇಲ್‌  
b) ಪ್ಯಾಲೆಸ್ಟೈನ್‌
c) ಸಿರಿಯಾ  
d) ಈಜಿಪ್ಟ್‌
3) ಇತ್ತೀಚೆಗೆ ಭಾರತದೊಂದಿಗೆ ನಾಲ್ಕು ಅಂಶಗಳ ಶಾಂತಿ ಒಪ್ಪಂದಕ್ಕೆ ಕರೆ ನೀಡಿದ ದೇಶ ಯಾವುದು?
a) ಚೀನಾ          
b) ಶ್ರೀಲಂಕಾ
c) ಪಾಕಿಸ್ತಾನ      
d) ನೇಪಾಳ
4) 2015 ಅಕ್ಟೋಬರ್‌ ತಿಂಗಳನ್ನು ಯಾವ ಅಂತರರಾಷ್ಟ್ರೀಯ ಮಾಸ ಎಂದು ಆಚರಣೆ ಮಾಡಲಾಗುತ್ತಿದೆ?
a) ವಿಶ್ವ ಮಾಂಸಾಹಾರ ತಿಂಗಳು
b) ವಿಶ್ವ ಆರೋಗ್ಯ ಮಾಸ
c) ವಿಶ್ವ ಕುರುಕಲು ತಿಂಡಿಗಳ ಮಾಸ
d) ವಿಶ್ವ ಸಸ್ಯಹಾರ ತಿಂಗಳು
5) ಜಮೈಕಾದ ಲೇಖಕ ಮರ್ಲೊನ್‌ ಜೇಮ್ಸ್‌ ಅವರ ಯಾವ ಕಾದಂಬರಿಗೆ 2015ನೇ ಸಾಲಿನ ಮ್ಯಾನ್‌ ಬುಕರ್‌ ಪುರಸ್ಕಾರ ಸಂದಿದೆ?
a) ಬ್ರೀಫ್‌ ಹಿಸ್ಟರಿ ಆಫ್‌ ಸೆವೆನ್‌ ಕಿಲ್ಲಿಂಗ್ಸ್‌
b) ಇಯರ್‌ ಆಫ್‌ ರನ್‌ ಅವೇಸ್‌’
c)  ಸ್ಯಾಟಿನ್‌ ಐಲೆಂಡ್‌
d) ಲಿಟಲ್‌ ಲೈಫ್‌
6) ಜೋರ್ಡನ್‌ ದೇಶದ ರಾಜಧಾನಿ ಅಮ್ಮಾನ್‌ ನಗರದ ರಸ್ತೆಯೊಂದಕ್ಕೆ ಮಹಾತ್ಮ ಗಾಂಧಿ ಅವರ ಹೆಸರನ್ನು ಯಾರು ಇತ್ತೀಚೆಗೆ ನಾಮಕರಣ ಮಾಡಿದರು?
a) ನರೇಂದ್ರ ಮೋದಿ    
b) ಪ್ರಣವ್‌ ಮುಖರ್ಜಿ
c) ಸುಷ್ಮಾ ಸ್ವರಾಜ್‌
d) ಹಮೀದ್‌ ಅನ್ಸಾರಿ
7)  2015ನೇ ಸಾಲಿನ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕಿ ಹಾಗೂ ಪತ್ರಕರ್ತೆ ಸ್ವೆಟ್ಲಾನಾ ಅಲೆಕ್ಸಿಯೆವಿಚ್‌ ಅವರು ಮೂಲತಹ ಯಾವ ದೇಶದವರು?
a)  ಉಕ್ರೆನ್‌  
b) ರಷ್ಯಾ
c) ಬೆಲಾರಸ್‌
d) ಜರ್ಮನಿ
8) ಖ್ಯಾತ ನಿರ್ಮಾಪಕ . ನಾಗೇಶ್ವರ ರಾವ್‌ ಇತ್ತೀಚೆಗೆ ನಿಧನರಾದರು. ಅವರು ನಿರ್ಮಾಣ ಮಾಡಿದ ಜನಪ್ರಿಯ ತೆಲುಗು ಚಿತ್ರಗಳಲ್ಲಿ ಇದು ಸೇರಿಲ್ಲ?
a) ಶಂಕರಾಭರಣಂ 
b) ಸ್ವಾತಿಮುತ್ಯಂ
c) ಸಾಗರಸಂಗಮ  
d) ಮನಂ
9) ಭಾರತದ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a)ಶೇಖರ್‌ ಬಸು
b) ಅರವಿಂದ್‌ ಛಬ್ರಿಯಾ
c) ವಸುಮತಿ ಉಡುಪ  
d) ನಾರಾಯಣ್‌ ಶಿಂಧೆ
10)  ಜಾಗತಿಕವಾಗಿ ವಿಶ್ವ ಮೊಟ್ಟೆ ದಿನವನ್ನು ಕೆಳಕಂಡ ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
a) 8 ಅಕ್ಟೋಬರ್‌
b) 9 ಅಕ್ಟೋಬರ್‌
c) 10 ಅಕ್ಟೋಬರ್‌
d) 11 ಅಕ್ಟೋಬರ್‌
ಉತ್ತರಗಳು.... 1–a, 2–b, 3–c, 4–d, 5–a, 6–b, 7–c, 8–d, 9–a, 10–b.

No comments:

Post a Comment

Note: only a member of this blog may post a comment.