Pages

Thursday 12 November 2015

ಮಕ್ಕಳ ಶೌರ್ಯ ಪ್ರಶಸ್ತಿ ಪ್ರಕಟ


ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE

ಮಕ್ಕಳ ದಿನಾಚರಣೆ ಅಂಗವಾಗಿ ಎರಡು ದಿನಗಳ ಮಕ್ಕಳ ಹಬ್ಬದ ಕಾರ್ಯಕ್ರಮ
ಬೆಂಗಳೂರುಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೇ ಮೊದಲ ಬಾರಿಗೆ ನ.14ರಿಂದ ಎರಡು ದಿನಗಳ ಮಕ್ಕಳ ಹಬ್ಬದ ಕಾರ್ಯಕ್ರಮ ಏರ್ಪಡಿಸಿದೆ.

ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ 13 ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ನಗರದ ಕಬ್ಬನ್ ಪಾರ್ಕ್‍ನಲ್ಲಿ ನ.14 ಮತ್ತು ನ.15ರಂದು ನಡೆಯಲಿದೆ. ಈ ವಿನೂತನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಸುಮಾರು ರೂ.60 ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಈ ಹಬ್ಬದಲ್ಲಿ 10,000 ಮಕ್ಕಳು ಭಾಗವಹಿಸಲಿದ್ದಾರೆ. ಇದರಲ್ಲಿ ಅನೇಕ ಜಾನಪದ ನೃತ್ಯ ಮತ್ತು ಕಲಾ ಪ್ರದರ್ಶನ ನಡೆಯಲಿದೆ. ಹಾಗೆಯೇ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು, ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಕೂಡ ನಡೆಯಲಿದೆ.

ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದಂತೆ ಇದೇ ರೀತಿ ಬೇರೆ ಜಿಲ್ಲೆಗಳಲ್ಲೂ ಮಕ್ಕಳ ಹಬ್ಬ ನಡೆಸಲಾಗುತ್ತದೆ. ನವೆಂಬರ್ ಅಂತ್ಯದ ಸಮಯದಲ್ಲಿ ವಿವಿಧೆಡೆ ಮಕ್ಕಳ ಗ್ರಾಮಸಭೆಗಳನ್ನೂ ನಡೆಸಲಾಗುತ್ತದೆ ಎಂದು ಉಮಾಶ್ರೀ ಹೇಳಿದರು. ಮಕ್ಕಳ ಶೌರ್ಯ ಪ್ರಶಸ್ತಿ ಪ್ರಕಟ: ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ ನೀಡಲಾಗುವ ಹೊಯ್ಸಳ ಪ್ರಶಸ್ತಿಗೆ ದಾವಣಗೆರೆಯ ಮಾಸ್ಟರ್ ಸಿದ್ದೇಶ್ ಆಯ್ಕೆ ಮಾಡಲಾಗಿದೆ.

ಬಾಲಕಿಯರಿಗೆ ನೀಡಲಾಗುವ ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ಕುಮಾರಿ ಸಿಯಾವಾಮನಸಾ ಖೋಡೆ ಅವರನ್ನು ಆರಿಸಲಾಗಿದೆ. ರೂ10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡ ಈ ಗೌರವವನ್ನು ನ.14ರಂದು ನಡೆಯುವ ಸಮಾರಂಭದಲ್ಲಿ ವಿತರಣೆ ಮಾಡಲಾಗುವುದು ಎಂದು ಸಚಿವೆ ಉಮಾಶ್ರೀ ಹೇಳಿದರು.

ಮಕ್ಕಳ ಕಲ್ಯಾಣ ಪ್ರಶಸ್ತಿಗಳ ವಿವರ

ಸಂಘ- ಸಂಸ್ಥೆಗಳು: ಬೆಂಗಳೂರಿನ ರಂಗ ಕಹಳೆ, ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿ, ಬೀದರ್‍ ನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್, ಮಂಗಳೂರಿನ ಸ್ನೇಹ ಸದನ.

ವೈಯಕ್ತಿಕ ವಿಭಾಗ: ಕೆ. ಪ್ರಭಾನಾರಾ ಋಯಣಗೌಡ (ಚಿಕ್ಕಬಳ್ಳಾಪುರ), ಪಾರಂಪಳ್ಳಿ ನರಸಿಂಹ ಐತಾಳ್ (ಉಡುಪಿ), ಇಸ್ಮಾಯಿಲ್
ಮಾಲಸಾಬಾ ಉಕ್ಕಲಿ (ವಿಜಯಪುರ), ಮೆಹಬೂಬ ಎಲ್. ಕಿಲ್ಲೇದಾರ್ (ಕೊಪ್ಪಳ).

ಕಲೆ: ಪ್ರನೀಲ್ ಬಿ. ಸತಾರೆ (ಶಿವಮೊಗ್ಗ), ದೀಕ್ಷಾ ಮೂಲ್ಯ (ಉಡುಪಿ), ಎಸ್.ಆರ್. ಅಪ್ರಮೇಯ (ಮೈಸೂರು). ಸಾಂಸ್ಕೃತಿಕ: ಪ್ರಗತಿ ನಟವರ್ ಭಟ್ಟದ್ (ಬೆಂಗಳೂರು), ಲಿಖಿತ್ (ಬೆಂಗಳೂರು), ಭೂಮಿಕಾ (ಬಳ್ಳಾರಿ), ಸಹನಾ (ಬಳ್ಳಾರಿ), ಪಂಚಮಿ (ದಕ್ಷಿಣ ಕನ್ನಡ). ಸಂಗೀತ: .ವಿ. ಅಲೋಕ್ ಪೆರ್ಲ (ದಾವಣಗೆರೆ), ಸುರಕ್ಷೀತ್ ಗೌಡ (ಕೋಲಾರ), ಧನುಷ್
(ಮೈಸೂರು), ಗಗನ್ ಜಿ. ಗಾಂವ್ಕರ್ (ಉಡುಪಿ).

ತಾರ್ಕಿಕ: ಎಸ್.ಎಂ. ಗೌತಮ್ (ಮಡಿಕೇರಿ), ಮೊಹಮ್ಮದ್ ಸುಹೇಲ್ (ಮಂಡ್ಯ), ರಾಹುಲ್ ಆರ್ (ಬಾಗಲಕೋಟೆ), ಮೊಹಮ್ಮದ್ ಮಸಿಉದ್ದೀನ್ (ರಾಯಚೂರು).

ಕ್ರೀಡೆ: ಗಾನಶ್ರೀ (ದೊಡ್ಡಬಳ್ಳಾಪುರ), ನಿಹಾಲ್ ಜೆ (ತುಮಕೂರು), ಎಂ.ಬಿ. ಮೇಘನ (ಚಿತ್ರದುರ್ಗ), ಅಮೃತ್ ನಾಗೇಶ್ (ಧಾರವಾಡ), ರಿಯಾ ಎಲೆಜೆಬೆತ್ ಅಚ್ಚಯ್ಯ (ಮೈಸೂರು).

ನಾವೀನ್ಯತೆ: ಕೆ.ಜಿ. ಅನನ್ಯ (ಹಾಸನ), ಧೃತಿ ಮುಂಡೋಡಿ (ದಕ್ಷಿಣ ಕನ್ನಡ). ಸಮಾಜ ಸೇವೆ: ಯಶಸ್ವಿ ಅಜಿತ್ ಕುಮಾರ್ ಬಾಗಮಾರ (ಗದಗ). ಇತರೆ: ಅಭಿಗ್ಯ ಆನಂದ್ (ಮೈಸೂರು), ಅಂತಃಕರಣ (ಶಿವಮೊಗ್ಗ)

No comments:

Post a Comment

Note: only a member of this blog may post a comment.