Pages

Saturday, 14 November 2015

ಗ್ರಾಮ ವಿಕಾಸದಡಿ ಪ್ರತಿಹಳ್ಳಿಗೆ -ರೂ.75 ಲಕ್ಷ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ
JNANASELE

ಬೆಂಗಳೂರು: ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದ ಸುವರ್ಣ ಗ್ರಾಮೋದಯ ಯೋಜನೆಗೆ ಕೊಕ್ ನೀಡಿರುವ ರಾಜ್ಯ ಸರ್ಕಾರ, ಪರ್ಯಾಯವಾಗಿ ಸಮಗ್ರ ಗ್ರಾಮಾಭಿವೃದ್ಧಿಯ ಜತೆಗೆ ಗ್ರಾಮದ ಯುವಜನತೆಗೆ ಕೌಶಲ ತರಬೇತಿಯ ಮೂಲಕ ಅವರ ಜೀವನಮಟ್ಟ ಸುಧಾರಿಸುವ ಹೊಸ ‘ಗ್ರಾಮ ವಿಕಾಸ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಾರಿಗೊಳಿಸಲಿರುವ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ 3 ವರ್ಷಗಳ ಕಾಲಮಿತಿ ಹಾಕಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರತಿ ಗ್ರಾಮಕ್ಕೆ 75 ಲಕ್ಷ ರೂ.ನಂತೆ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 3.75 ಕೋಟಿ ರೂ.ಗಳನ್ನು ಯೋಜನೆಯಡಿ ವೆಚ್ಚ ಮಾಡಲಾಗುತ್ತದೆ.
ಅನುದಾನವನ್ನು ಬಳಕೆ ಮಾಡಿಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲಾಗಿದೆ. ಯಾವ ಯೋಜನೆಗಳಿಗೆ ಈ ಹಣ ಖರ್ಚು ಮಾಡಬೇಕು ಮತ್ತು ಯಾವುದಕ್ಕೆ ಖರ್ಚು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಅನುದಾನವನ್ನು ಜಿಪಂಗಳ ಮೂಲಕ ಗ್ರಾಪಂಗಳ ಖಾತೆಗೆ ನೇರವಾಗಿ ಸಂದಾಯ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರಗತಿಯನ್ನು ಪ್ರತಿ 2 ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.
ನಿರá-ದ್ಯೋಗಿಗಳಿಗೆ ತರಬೇತಿ: ಗ್ರಾಮೀಣ ಭಾಗದ ಜನ ಕೃಷಿಯನ್ನಷ್ಟೇ ನೆಚ್ಚಿಕೊಳ್ಳಬಾರದೆಂಬ ಕಾರಣಕ್ಕೆ ಗ್ರಾಮ ವಿಕಾಸ ಯೋಜನೆಯಲ್ಲಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗá-ವುದು. ತರಬೇತಿ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು, ಸ್ವಸಹಾಯ ಗುಂಪುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಂಘಗಳ ಒಕ್ಕೂಟ ಸ್ಥಾಪಿಸá-ವ ಅವಕಾಶ ಕಲ್ಪಿಸಲಾಗಿದೆ.
ಸುವರ್ಣ ಗ್ರಾಮೋದಯ ಸಮಾಪ್ತಿ ಏಕೆ?
ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರ ಸುವರ್ಣ ಗ್ರಾಮೋದಯ ಯೋಜನೆ ಜಾರಿಗೊಳಿಸಿತ್ತು. ಒಂದು ಗ್ರಾಮದ ಸಮಗ್ರ ಅಭಿವೃದ್ಧಿಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಲಾಗುತ್ತಿತ್ತು. ಆದರೆ ನಂತರದ ಹಂತಗಳಲ್ಲಿ 1 ಕೋಟಿ ರೂಪಾಯಿಗಳನ್ನು 2 ಅಥವಾ 3 ಗ್ರಾಮಗಳಿಗೆ ಹಂಚಿಕೆ ಮಾಡಲಾಯಿತು. ಅಭಿವೃದ್ಧಿಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಲಿಲ್ಲ. ಮಹಾಲೇಖಪಾಲರು ಈ ರೀತಿಯ ಅನುದಾನ ಹಂಚಿಕೆಯ ಕುರಿತು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮ ವಿಕಾಸ ಯೋಜನೆ ಜಾರಿಗೊಳಿಸಲಾಗಿದೆ.
ಗ್ರಾಮ ವಿಕಾಸದ ಮೂಲಕ ಚೆಲುವ ಕನ್ನಡ ನಾಡು ಕಟ್ಟುವುದೇ ನಮ್ಮ ಉದ್ದೇಶ. 3 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಸುಸ್ಥಿರ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಗ್ರಾಮದ ಜನ ಕೃಷಿ ಮಾತ್ರವಲ್ಲ ಕೃಷಿಯೇತರ ಮೂಲದಿಂದಲೂ ಆದಾಯ ಗಳಿಸುವಂತಾಗಬೇಕು. ಅದು ನಮ್ಮ ಸರ್ಕಾರದ ಗುರಿ.
| ಎಚ್.ಕೆ.ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ
ಅನುದಾನ ಹಂಚಿಕೆ ವಿವರ
***ರಸ್ತೆ, ಚರಂಡಿ ನಿರ್ವಣಕ್ಕೆ ಶೇ.50
***ಗ್ರಂಥಾಲಯ, ಸಭಾಭವನ, ರಂಗಮಂದಿರ ನಿರ್ವಣಕ್ಕೆ ಶೇ.12
***ಗರಡಿಮನೆ, ಜಿಮ್ ಫ್ಲಡ್ಲೈಟ್ ಆಟದ ಮೈದಾನ ನಿರ್ವಣ, ದೇಸಿ ಕ್ರೀಡಾ ಚಟುವಟಿಕೆಗಳಿಗಾಗಿ ಶೇ.12
***ಸೌರ ಬೆಳಕು ದೀಪಗಳ ಅಳವಡಿಕೆ ಶೇ.3
***ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣ ಶೇ.10
***ಗ್ರಾಪಂ ನಡಾವಳಿ ನೇರ ಪ್ರಸಾರದ ಮೂಲ ಸೌಕರ್ಯಕ್ಕೆ ಶೇ.2
***ದೇವಸ್ಥಾನ, ಚರ್ಚ್, ಮಸೀದಿ ನಿರ್ಮಾಣ ಅಥವಾ ಪುನರುಜ್ಜೀವನಕ್ಕಾಗಿ ಶೇ.6
***ಫ್ಲೆಕ್ಸಿ ಫಂಡ್ ಶೇ.5
ಯಾವುದಕ್ಕೆ ಖರ್ಚು ಮಾಡಬಾರದು?
*ವೈಯಕ್ತಿಕ ಸಾಲ
*ಕಚೇರಿ ವೆಚ್ಚ ಮತ್ತು ಸಿಬ್ಬಂದಿ ವೇತನ
*ಕಚೇರಿಗೆ ಸಲಕರಣೆ ಖರೀದಿ
*ವಾಹನ ಖರೀದಿ, ದುರಸ್ತಿ, ಇಂಧನ ವೆಚ್ಚ, ಬಾಡಿಗೆ ವಾಹನ
*ಪ್ರವಾಸ ಮತ್ತು ಅಧ್ಯಯನ ಪ್ರವಾಸ
*ಪಂಚಾಯಿತಿ ಸಭೆ, ಸಮಾರಂಭಗಳು
ಗ್ರಾಪಂ ಸಂಖ್ಯೆ 6,189 ಏರಿಕೆ
ನಂಜಯ್ಯನಮಠ ನೇತೃತ್ವದ ಗ್ರಾಮ ಪಂಚಾಯಿತಿ ಪುನರ್ವಿಂಗಡಣಾ ರಚನಾ ಸಮಿತಿ 439 ಗ್ರಾಪಂಗಳ ರಚನೆಗೆ ಶಿಫಾರಸು ಮಾಡಿತ್ತು. ಬಳಿಕ ಸಿಎಂ ಶಿಫಾರಸಿನ ಮೇರೆಗೆ 15 ಗ್ರಾಪಂಗಳು ಸೇರಿಕೊಂಡಿದ್ದರಿಂದ ಗ್ರಾಪಂಗಳ ಸಂಖ್ಯೆ 454ಕ್ಕೆ ಏರಿಕೆ ಆಗಿತ್ತು. ಚುನಾವಣೆ ಬಳಿಕ ಇನ್ನೂ 6 ಗ್ರಾಪಂಗಳ ರಚನೆಗೆ ಆದೇಶ ಹೊರಬಿದ್ದಿದೆ. ಆದ್ದರಿಂದ ಈಗ ಹೊಸ ಪಂಚಾಯಿತಿಗಳ ಸಂಖ್ಯೆ 460ಕ್ಕೆ ಏರಿದೆ. ರಾಜ್ಯದಲ್ಲಿ ಈಗಾಗಲೇ 5,629 ಗ್ರಾಪಂಗಳು ಅಸ್ತಿತ್ವದಲ್ಲಿದ್ದು, ಒಟ್ಟು ಪಂಚಾಯಿತಿಗಳ ಸಂಖ್ಯೆ 6,189ಕ್ಕೆ ಏರಿಕೆ ಆದಂತಾಗಿದೆ.
ಹೊಸ ಕಟ್ಟಡಕ್ಕೆ ನೆರವು
ಹೊಸ ಗ್ರಾಪಂ ಕೇಂದ್ರದಲ್ಲಿ ಕಟ್ಟಡ ನಿರ್ವಣಕ್ಕೆ 20 ಲಕ್ಷ ರೂ. ನೆರವು ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಆದರೆ 20 ಲಕ್ಷ ರೂ. ನೆರವು ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ದೊರೆತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ 16 ಲಕ್ಷ ರೂ. ಅನುದಾನವನ್ನು ಕಟ್ಟಡಕ್ಕೆ ಬಳಸಿಕೊಳ್ಳುವಂತೆ ಗ್ರಾಮೀಣಾ ಭಿವೃದ್ಧಿ ಇಲಾಖೆ 460 ಗ್ರಾಪಂಗಳಿಗೂ ಸೂಚನೆ ನೀಡಿದೆ.
6 ಹೊಸ ಪಂಚಾಯಿತಿ
ಚುನಾವಣೆ ಹೊತ್ತಿಗೆ 454 ಹೊಸ ಗ್ರಾಪಂಗಳಿಗೆ ಅಧಿಸೂಚನೆ ಹೊರಡಿಸಿದ್ದರಿಂದ ಈ ಪಂಚಾಯಿತಿಗಳು ಒಟ್ಟಿಗೆ ಅಸ್ತಿತ್ವಕ್ಕೆ ಬಂದಿವೆ. ಚುನಾವಣೆ ಬಳಿಕವೂ 6 ಗ್ರಾಪಂಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

No comments:

Post a Comment

Note: only a member of this blog may post a comment.