Pages

Wednesday 4 November 2015

18ರ ಹರೆಯದಲ್ಲೇ ಚಾರ್ಟೆಡ್ ಅಕೌಂಟೆಂಟ್!


GK4KPSC
JNANASELE

ಚಾರ್ಟೆಡ್ ಅಕೌಂಟೆನ್ಸಿ ಕೋರ್ಸ್ ಎಂದರೆ ಕಬ್ಬಿಣದ ಕಡಲೆ ಅಂದುಕೊಳ್ಳುವವರೇ ಹೆಚ್ಚು. ಅದರಲ್ಲೂ ಸಿಎ ಮಾಡಲು ಹೊರಟ ಹಲವರು ಎಲ್ಲ ಪೇಪರುಗಳನ್ನು ಕಂಪ್ಲೀಟ್ ಮಾಡಲಾಗದೆ ಅರ್ಧಕ್ಕೇ ಕೈಬಿಟ್ಟಿರುತ್ತಾರೆ. ಇನ್ನೂ ಕೆಲವರು ಸತತ ಪ್ರಯತ್ನದಿಂದ ಹಲವು ವರ್ಷಗಳ ಶ್ರಮದಿಂದ ಸಿಎ ಪದವಿಯನ್ನು ಪಡೆದುಕೊಂಡಿರುತ್ತಾರೆ. ಹೀಗಾಗಿಯೇ ಸಿಎ ಪದವಿ ಪೂರ್ಣಗೊಂಡಿರುವವರ ವಯಸ್ಸು 30 ಸಮೀಪದಲ್ಲಿರುತ್ತದೆ. ಆದರೆ ಭಾರತೀಯ ಮೂಲದ ರಾಮ್ುಮಾರ್ ರಮಣ್ ಇದಕ್ಕೆ ತದ್ವಿರುದ್ಧ. ತನ್ನ 18ನೇ ವಯಸ್ಸಿನಲ್ಲೇ ಸಿಎ ಪದವಿ ಪಡೆದುಕೊಂಡು ವಿಶ್ವದ ಅತಿ ಕಿರಿಯ ಚಾರ್ಟೆಡ್ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದುಬೈನಲ್ಲಿರುವ ಇಂಡಿಯನ್ ಹೈಸ್ಕೂಲ್​ನಲ್ಲಿ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿರುವ ರಮಣ್​ನನ್ನು ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್ ಗುರುತಿಸಿದೆ. ಇದರಲ್ಲಿ ಹೆಸರು ನೋದಾಯಿಸಿಕೊಂಡಿರುವ ಚಾರ್ಟೆಡ್ ಅಕೌಂಟೆಂಟ್ಸ್​ಗಳಲ್ಲೇ ರಮಣ್ ಅತಿ ಕಿರಿಯನಾಗಿದ್ದಾನೆ.

***

ಒಂದೇ ಪ್ರಯತ್ನದಲ್ಲೇ 14 ಪೇಪರ್ ಪಾಸ್

ಚಾರ್ಟೆಡ್ ಅಕೌಂಟೆಂಟ್ ಕಲಿಯುತ್ತಿರುವವರಲ್ಲಿ ಒಂದೇ ಪ್ರಯತ್ನದಲ್ಲಿ ಪೇಪರ್ ಕ್ಲಿಯರ್ ಮಾಡಿರುವವರ ಸಂಖ್ಯೆ ತೀರಾವಿರಳ. ಆದರೆ ರಮಣ್ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ. 2012 ಸೆಪ್ಟೆಂಬರ್​ನಿಂದ ಸಿಎ ಪರೀಕ್ಷೆಗೆ ಕೋಚಿಂಗ್ ಪಡೆದುಕೊಳ್ಳಲು ಆರಂಭಿಸಿದ ರಮಣ್ 2015 ಜೂನ್​ನಲ್ಲಿ 14ನೇ ಪೇಪರನ್ನೂ ಕಂಪ್ಲೀಟ್ ಮಾಡಿದ್ದಾನೆ. ಪರೀಕ್ಷೆ ಬರೆದಾಗ ಅಷ್ಟೊಂದು ಚೆನ್ನಾಗಿ ಬರೆದಿರಬಹುದೆಂಬ ನಂಬಿಕೆ ನನ್ನಲ್ಲೇ ಇರಲಿಲ್ಲ. ಆದರೆ 10 ಗ್ರೇಡ್​ನಲ್ಲಿ 8.6 ಸಿಜಿಪಿಎಯಷ್ಟು ಅಂಕಗಳಿಸಿದ್ದೆ ಎಂದು ರಮಣ್ ಸಂತಸ ವ್ಯಕ್ತಪಡಿಸಿದ್ದಾನೆ.

***

ರಮಣ್ ದಿನಚರಿ ಹೇಗಿತ್ತು?

ಪ್ರತಿನಿತ್ಯ ಓದುವುದು, ಓದಿನ ನಡುವೆ ಕೊಂಚ ವಿರಾಮ ಇದರ ಪಾಲನೆಯಿಂದ ಉತ್ತಮ ಅಭ್ಯಾಸ ನಡೆಸಲು ಸಾಧ್ಯವಾಯಿತೆಂದು ರಮಣ್ ಅಭಿಪ್ರಾಯಪಟ್ಟಿದ್ದಾನೆ. ಬೆಳಗ್ಗೆ 6 ಗಂಟೆಗೆ ಎದ್ದು ಓದಲು ಕುಳಿತುಕೊಳ್ಳುತ್ತಿದ್ದ ರಮಣ್ ಮಧ್ಯಾಹ್ನದ ಊಟದ ಬಳಿಕ ಸಂಜೆ 4 ಗಂಟೆವರೆಗೆ ನಿದ್ದೆ ಮಾಡುತ್ತಿದ್ದನಂತೆ. ನಂತರ 4.30ಕ್ಕೆ ಮತ್ತೆ ಓದಲು ಕುಳಿತುಕೊಳ್ಳುತ್ತಿದ್ದ ರಮಣ್ ರಾತ್ರಿ 8.15ರವರೆಗೆ ಓದುತ್ತಿದ್ದ. ನಂತರ ರಾತ್ರಿ ಊಟ ಮುಗಿಸಿ 9 ಗಂಟೆಗೆ ಓದಲು ಕುಳಿತರೆ ಮಧ್ಯರಾತ್ರಿ 12 ಗಂಟೆವರೆಗೂ ಓದುತ್ತಿದ್ದನಂತೆ. ದಿನಚರಿಯಿಂದ ಬಳಲಿಕೆ ಇಲ್ಲದೆಯೇ ಓದುವ ಹಾಗಾಯ್ತು. ಯಾವತ್ತೂ ಓದು ಎನ್ನುವುದು ಸುಸ್ತು ಎನಿಸಲಿಲ್ಲ ಎಂದು ರಮಣ್ ಹೇಳಿದ್ದಾನೆ.

***

ಮೂಢನಂಬಿಕೆಯೋ.. ಸತ್ಯವೋ..

ರಮಣ್ ಹೇಳುವಂತೆ ಪರೀಕ್ಷೆಗೂ ಮೊದಲು ಆತ ಕೆಲ ಮೂಢನಂಬಿಕೆಗಳನ್ನು ಇರಿಸಿಕೊಂಡಿದ್ದನಂತೆ. ರಮಣ್ 14 ಪೇಪರ್​ಗಳ ಪರೀಕ್ಷೆಗೆ ತೆರಳುವಾಗಲೂ ಒಂದೇ ಪ್ಯಾಂಟ್, ಶರ್ಟ್, ಸಾಕ್ಸ್, ಶೂಸ್ ಮತ್ತು ಒಂದೇ ಬಗೆಯ ಅಡುಗೆಯನ್ನೂ ಸೇವಿಸಿ ತೆರಳುತ್ತಿದ್ದನಂತೆ. ಇದರಿಂದ ಏನು ಸಹಾಯವಾಗುತ್ತಿತ್ತೋ ತಿಳಿದಿಲ್ಲ. ಆದರೆ ಕಾನ್ಪಿಡೆನ್ಸ್ ಮಾತ್ರ ಹೆಚ್ಚಾಗುತ್ತಿತ್ತು ಎಂದು ರಮಣ್ ಹೇಳಿಕೊಂಡಿದ್ದಾನೆ.

***

ಚಾರ್ಟೆಡ್ ಅಕೌಂಟೆಂಟ್ ಫ್ಯಾಮಿಲಿಯವನು

ರಮಣ್​ಗೆ ಚಾರ್ಟೆಡ್ ಅಕೌಂಟೆನ್ಸಿಯ ನಂಟು ಚಿಕ್ಕಂದಿನಿಂದಲೇ ಇತ್ತು. ರಮಣ್​ನ ಕುಟುಂಬಸ್ಥರು ಚೆನ್ನೈ ಮೂಲದವರಾಗಿದ್ದು, ಅವರ ಕುಟುಂಬದಲ್ಲಿ ಅಕೌಂಟೆಂಟ್​ಗಳೇ ಹೆಚ್ಚಾಗಿದ್ದರು. ಹೀಗಾಗಿ ಚಿಕ್ಕಂದಿನಿಂದಲೇ ರಮಣ್​ಗೆ ಸಿಎ ಬಗ್ಗೆ ಆಸಕ್ತಿ ಹುಟ್ಟಿತ್ತಂತೆ. ಸಿಎ ಕೋರ್ಸ್ ಆರಂಭದಲ್ಲಿ ಒಂದೇ ಪ್ರಯತ್ನದಲ್ಲೇ ಸಿಎ ಪದವಿ ಪಡೆಯಬೇಕೆಂಬ ಆಸೆಯಿರಲಿಲ್ಲ. ನಂಬಿಕೆಯೂ ಇರಲಿಲ್ಲ. ಆದರೆ ಅಕೌಂಟಿಂಗ್ ಮತ್ತು ಫೈನಾನ್ಸಿಂಗ್ ಕ್ಷೇತ್ರದ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿಕೊಳ್ಳುವ ಆಸೆಯಿತ್ತು. ಆದರೆ ಬೆಳಕಿನ ವೇಗದಲ್ಲಿ ಕೋರ್ಸ್ ಮುಗಿದೇ ಹೋಯ್ತು ಎಂದು ರಮಣ್ ಹೇಳಿಕೊಂಡಿದ್ದಾನೆ.

***

ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್​ನಲ್ಲಿ ಆಸಕ್ತಿ

ರಮಣ್ ಕುಮಾರ್ ತನ್ನ ವಿದ್ಯಾಭ್ಯಾಸವನ್ನು ಇನ್ನೂ ಮುಂದುವರಿಸಲು ಬಯಸಿದ್ದು, ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್ ಕ್ಷೇತ್ರವನ್ನು ವೃತ್ತಿಯಾಗಿ ಆಯ್ದುಕೊಳ್ಳಬೇಕೆಂಬುದು ಆತನ ಬಯಕೆಯಂತೆ. ಹೀಗಾಗಿ ಅಮೆರಿಕದ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಡಿಗ್ರಿಪಡೆದುಕೊಳ್ಳುವ ಉದ್ದೇಶವಿದೆ ಎಂದು ರಮಣ್ ತಿಳಿಸಿದ್ದಾನೆ.

No comments:

Post a Comment

Note: only a member of this blog may post a comment.