Pages

Wednesday 28 October 2015

‘ಭಾರತವಿಲ್ಲದೆ ವಿಶ್ವಸಂಪರ್ಕ ಅಸಾಧ್ಯ’


 
GK4KPSC
JNANASELE
ನವದೆಹಲಿ: ‘ಭಾರತ ಇಲ್ಲದೆ ಜಗತ್ತನ್ನು ಪರಸ್ಪರ ಸಂರ್ಪಸಲು ಸಾಧ್ಯವೇ ಇಲ್ಲ’ ಎಂದು ಫೇಸ್​ಬುಕ್ ಸಂಸ್ಥಾಪಕ ಹಾಗೂ ಸಿಇಒ ಮಾರ್ಕ್ ಜುಕೆರ್ ಬರ್ಗ್ ಬುಧವಾರ ನವದೆಹಲಿಯಲ್ಲಿ ಹೇಳಿದರು.

ಭಾರತದ ಜನರನ್ನು ಪರಸ್ಪರ ಸಂರ್ಪಸುವಂತೆ ಮಾಡುವುದು ಅತ್ಯಂತ ಮಹತ್ವದ ಕಾರ್ಯ’ ಎಂದು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ನುಡಿದರು.

ಭಾರತ ಮಹತ್ವದ ರಾಷ್ಟ್ರಗಳಲ್ಲಿ ಒಂದು. ಅದಿಲ್ಲದೇ ಇದ್ದರೆ ಜಗತ್ತನ್ನು ಪರಸ್ಪರ ಸಂರ್ಪಸಲು ಸಾಧ್ಯವೇ ಇಲ್ಲ’ ಎಂದು ಅವರು ಹೇಳಿದರು.

ಇಲ್ಲಿ ಇರಲು ಅತ್ಯಂತ ಸಂತಸವಾಗುತ್ತಿದೆ. ಇಲ್ಲಿನ ಶಕ್ತಿ ಅದ್ಭುತ’ ಎಂದು ಅವರು ನುಡಿದರು.

ಜನತೆಗೆ ಉಚಿತವಾಗಿ ಇಂಟರ್​ನೆಟ್ ಸಂಪರ್ಕ ಕಲ್ಪಿಸುವ ಫೇಸ್​ಬುಕ್ ಕಾರ್ಯಕ್ರಮ ತೀವ್ರ ಟೀಕೆಗೆ ಗುರಿಯಾಗುತ್ತಿದ್ದರೂ ಮುಕ್ತ ಇಂಟರ್​ನೆಟ್’ಗಾಗಿ ಲಾಬಿ ಮುಂದುವರೆಸಲಾಗುವುದು ಎಂದು ಜುಕೆರ್​ಬರ್ಗ್ ಹೇಳಿದರು.

ಮುಕ್ತ ಇಂಟರ್​ನೆಟ್​ಗೆ ನಮಗೆ ಅಪಾರ ಬೆಂಬಲ ಸಿಗುತ್ತಿದೆ. ಇದಕ್ಕಾಗಿ ಮುಕ್ತ ಚೌಕಟ್ಟನ್ನು ನಾವು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಜುಕೆರ್ ನುಡಿದರು.

No comments:

Post a Comment

Note: only a member of this blog may post a comment.