JNANASELE |
ಬೀಜಿಂಗ್: ವಿಶ್ವದ ಅತ್ಯಂತ ಶಕ್ತಿಶಾಲಿ ಪಾರ್ಟಿಕಲ್ ಕಲೈಡರ್ ಅಭಿವೃದ್ಧಿ ಪಡಿಸುವಲ್ಲಿ ಚೀನಾ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. 50-100 ಕಿ.ಮೀ. ಜ್ಯಾಮಿತಿ ಸಾಮರ್ಥ್ಯದ, ಭೂಮಿಯಲ್ಲಿರುವ ಯಾವುದೇ ವೇಗವರ್ಧಕ ಕಣಗಳಿಂತ ದೊಡ್ಡದಾದ, ಬ್ರಹ್ಮಾಂಡವನ್ನು ಹೆಚ್ಚು ಉತ್ತಮವಾಗಿ ಅರ್ಥೈಸಬಹುದಾದ ಕಣ ಇದಾಗಿದೆ ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸ್ಸ್ ಹೇಳಿಕೊಂಡಿದೆ.
ಈಗಾಗಲೇ ಪ್ರಾಥಮಿಕ ವಿನ್ಯಾಸ ಕಾರ್ಯ ಪೂರ್ಣಗೊಳಿಸಿದ್ದು, 2016ರ ವೇಳೆಗೆ ಅಂತಿಮಗೊಳ್ಳಲಿದೆ. 2028ರ ವೇಳೆಗೆ ಪಾರ್ಟಿಕಲ್ ಕಲೈಡರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ವಿಶ್ವದ ಅತಿದೊಡ್ಡ 52 ಕಿ.ಮೀ. ಸುರಂಗದೊಳಗೆ ಇಲೆಕ್ಟ್ರಾನ್ ಮತ್ತು ಪಾಸಿಟ್ರಾನ್ಗಳನ್ನು ಡಿಕ್ಕಿ ಹೊಡೆಸಲಿದ್ದೇವೆ ಎಂದು ಅಕಾಡೆಮಿ ಹೇಳಿದೆ.
No comments:
Post a Comment
Note: only a member of this blog may post a comment.