Pages

Wednesday 28 October 2015

ವಾತಾವರಣ ಬದಲಾವಣೆ, ಎಚ್ಚರ ತಪ್ಪಿದರೆ ಎಡವಟ್ಟು


jnanasele

ಬೆಂಗಳೂರು: ಮಳೆಗಾಲ ಮುಗಿದಿದ್ದು ಇನ್ನೇನಿದ್ದರೂ ಚಳಿಗಾಲ ಪರ್ವ. ಋತುಗಳು ಬದಲಾದಂತೆ ವಾತಾವರಣದಲ್ಲಿ ತಾಪಮಾನ ಏರಿಳಿತವೂ ಕಂಡು ಬರುತ್ತದೆ. ಚಳಿಗಾಲ ಆರಂಭದ ದಿನಗಳಲ್ಲಿ ಮಧ್ಯಾಹ್ನ ಬಿಸಿಲು ಸ್ವಲ್ಪ ಚುರುಕು ಮುಟ್ಟಿಸಿದರೆ, ಹೊತ್ತು ಇಳಿಯುತ್ತಲೇ ಚಳಿ ಶುರುವಾಗುತ್ತದೆ.

ಮಳೆಯಲ್ಲಿ ನೆನೆದು, ಕೆಸರಲ್ಲಿ ಓಡಾಡಿ, ನೆಗಡಿ-ಶೀತದಿಂದ ನರಳಿದವರಿಗೆ ಚಳಿಗಾಲದ ಆರಂಭದ ದಿನಗಳು ತುಸು ಮನಸ್ಸಿಗೆ ಮುದ ನೀಡುತ್ತವೆ. ಹೃದಯಕ್ಕೆ ಹಿತವೆನ್ನಿಸುತ್ತವೆ. ಆದರೆ, ಕಾಲದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾರೋಗ್ಯ ಹೆಗಲೇರುತ್ತದೆ. ಚಳಿಗಾಲದಲ್ಲಿ ವೈರಾಣು ಮತ್ತು ಸೋಂಕಿನಿಂದ ಬರುವ ಕಾಯಿಲೆಗಳೇ ಹೆಚ್ಚು. ನೆಗಡಿ,ಶೀತ, ಕೆಮ್ಮು, ಗಂಟಲು ಕೆರೆತ, ಅಸ್ತಮಾ, ಅಲರ್ಜಿ, ಅರ್ಥರೈಟಿಸ್, ಚರ್ಮ, ಹೃದಯ ಸಂಬಂಧಿ ಕಾಯಿಲೆಗಳು ಕಾಲದಲ್ಲಿ ಬಿಗಡಾಯಿಸುತ್ತವೆ. ಚಳಿ ಕಾರಣಕ್ಕೆ ವಯಸ್ಸಾದವರ ಚಟುವಟಿಕೆಗಳು ಕ್ಷೀಣವಾಗುತ್ತವೆ. ದೇಹ ದಣಿವಿನಿಂದ ದುರ್ಬಲವೆನ್ನಿಸುತ್ತದೆ. ಈಗಾಗಲೇ ಇರುವ ಕಾಯಿಲೆಗಳು ಉಲ್ಬಣಗೊಳ್ಳಲಿವೆ.

ವೈರಾಣುವಿನಿಂದ ಹೈರಾಣು: ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು ಚಳಿಗಾಲದಲ್ಲೂ ಸಾಮಾನ್ಯ. ಆದರೆ, ನ್ಯೂಮೋನಿಯಾ ಚಳಿಗಾಲ ಸ್ನೇಹಿ ಕಾಯಿಲೆ. ಸೀನು, ಕೆಮ್ಮು, ಜ್ವರ, ಗಂಟಲು ಸೋಂಕುಗಳು ಕಾಲದಲ್ಲಿ ಹೆಚ್ಚು ಕಾಡುತ್ತವೆ. ಗಂಟಲು ಸೋಂಕು ಸಾಮಾನ್ಯ ಸಾಂಕ್ರಾಮಿಕ ರೋಗವಾಗಿ ಕಂಡು ಬರುತ್ತದೆ. ಚಳಿಗಾಲದ ಕಾಯಿಲೆಗಳು ಸಾಮಾನ್ಯವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ರೋಗಗಳಾಗಿದ್ದು, ವೈರಾಣು ಮೂಲಕ ಜನರನ್ನು ಹೈರಾಣು ಮಾಡುತ್ತವೆ. ಚರ್ಮ, ತುಟಿ ಹಾಗೂ ಹಿಮ್ಮಡಿ ಬಿರಿತವಂತೂ ಸರ್ವೆ ಸಾಮಾನ್ಯ.

ಹೃದಯಾಘಾತ ಹೆಚ್ಚು: ರಾತ್ರಿ ವೇಳೆ ತಾಪಮಾನ ಕಡಿಮೆಯಾಗುವುದರಿಂದ ಅಪಧಮನಿಗಳು ಪೆಡುಸಾಗುತ್ತವೆ. ವೇಳೆ ರಕ್ತ ಸಂಚಾರಕ್ಕೆ ತಡೆ ಉಂಟಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರಕದೆ ಹೃದಯಾ ಘಾತವಾಗುವ ಸಾಧ್ಯತೆಗಳಿವೆ. ಹೃದಯ ಸಂಬಂಧಿ ತೊಂದರೆಗಳಿರುವವರಲ್ಲಿ ಅಪಾಯದ ಪ್ರಮಾಣ ಹೆಚ್ಚು.

ಹಿಂಗಾರು ಆರಂಭ

ಬೆಂಗಳೂರು: ರಾಜ್ಯಾದ್ಯಂತ ಕೆಲವೆಡೆ ಮಂಗಳವಾರ ರಾತ್ರಿಯೇ ಹಿಂಗಾರು ಪ್ರಾರಂಭವಾಗಿದೆ. ವಾತಾವರಣದಲ್ಲಿ ಬದಲಾವಣೆಯಾಗಿ ಚಳಿಯೂ ಹೆಚ್ಚಾಗಲಿದೆ. ಪೂರ್ವ ಕರಾವಳಿ ಭಾಗವಾದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಬಂಗಾಳಕೊಲ್ಲಿ ದಿಕ್ಕಿನಿಂದ ವಾಯವ್ಯ ಮಾರುತಗಳು ಬೀಸುತ್ತಿವೆ. ಅಲ್ಲದೆ, ಶ್ರೀಲಂಕಾ, ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

ಇನ್ನೂ 2 ದಿನ ಇದೇ ವಾತಾವರಣ ಮುಂದು ವರಿಯಲಿದೆ ಎಂದು ಸಹಾಯಕ ಹವಾಮಾನ ತಜ್ಞ ರಾಜರಮೇಶ್ ವಿಜಯವಾಣಿ’ಗೆ ತಿಳಿಸಿದರು.

.30ರಿಂದ ಮಳೆ: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶದಲ್ಲಿ .30ರಿಂದ .1ರವರೆಗೆ ಚದುರಿದ ಮಳೆಯಾಗುವ ಸಾಧ್ಯತೆ ಇದೆ. ಬಾರಿ ಹಿಂಗಾರಿನಲ್ಲಿ ಸರಾಸರಿಗೂ ಅಧಿಕ ಮಳೆಯಾಗಲಿದೆ ಎಂದು ಇತ್ತೀಚೆಗೆ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಷ್ಣಾಂಶದಲ್ಲೂ ಇಳಿಕೆ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗೊಂಡಿದ್ದು, ರಾಜ್ಯದಲ್ಲಿ ಉಷ್ಣಾಂಶ ಇಳಿಕೆಯಾಗಿದೆ. ಮಂಗಳವಾರ ಕಲುಬುರಗಿಯಲ್ಲಿ ಗರಿಷ್ಠ 34.3 ಡಿ.ಸೆ. ದಾಖಲಾದರೆ, ಬೆಂಗಳೂರಿನಲ್ಲಿ ಗರಿಷ್ಠ 29.6 ಡಿ.ಸೆ. ಉಷ್ಣಾಂಶ ಇತ್ತು. ಹಿಂಗಾರು ಆರಂಭವಾದ

ನಂತರ ಸರಾಸರಿಗಿಂತ 2-3 ಡಿ.ಸೆ. ಉಷ್ಣಾಂಶ ಇಳಿಕೆಯಾಗಲಿದೆ ಎಂಬುದು ತಜ್ಞರ ಅಭಿಪ್ರಾಯ.

ಮುನ್ನೆಚ್ಚರಿಕೆ ಕ್ರಮಗಳು

ಬಿಗಿ, ಬೆಚ್ಚಗಿರುವ ಉಡುಪು, ಪಾದರಕ್ಷೆ ಧರಿಸಿ ಗಂಟಲು ನೋವು ಬಂದಾಗ ಉಪ್ಪು ಮಿಶ್ರಿತ ಬಿಸಿ ನೀರನ್ನು ಮುಕ್ಕಳಿಸಿ ಜೀವರಕ್ಷಕ ದ್ರವ, ಉಸಿರು ಸರಿಪಡಿಸಿಕೊಳ್ಳಲು ಇನ್​ಹೇಲರ್ ಬಳಸಿ ಸಾಕಷ್ಟು ನೀರು, ದ್ರವ ರೂಪದ ಆಹಾರ ಸೇವಿಸಿ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದು ಒಳ್ಳೆಯದು ಚಳಿ ಇದ್ದರೂ ವ್ಯಾಯಾಮ ಮಾಡಬೇಕು

No comments:

Post a Comment

Note: only a member of this blog may post a comment.